• Talk To Astrologers
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

ಕುಂಭ ರಾಶಿ ಭವಿಷ್ಯ 2021 - Aquarius Horoscope 2021 in Kannada

Author: -- | Last Updated: Tue 28 Apr 2020 12:14:54 PM

kumbha rashi bhavishya 2021, kumbha jaataka 2021, kumbha rashiphala 2021

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಕುಂಭ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ಸಾಕಷ್ಟದ್ದನ್ನು ತರಲಿದೆ. ಕೆಲಸದ ಸ್ಥಳದಿಂದ ನಿಮಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ವಿಶೇಷವಾಗಿ ಉದ್ಯೋಗದಲ್ಲಿರುವ ಸ್ಥಳೀಯರಿಗೆ ವರ್ಷದ ಆರಂಭವು ಎಷ್ಟು ಚೆನ್ನಾಗಿರುತ್ತದೋ ವರ್ಷದ ಅಂತ್ಯವು ಸಹ ಅಷ್ಟೇ ಅನುಕೂಲಕರವಾಗಿರಲಿದೆ. ಆದಾಗ್ಯೂ ವರ್ಷದ ಮಧ್ಯದಲ್ಲಿ ಶತ್ರುಗಳಿಂದ ಸ್ವಲ್ಪ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಉದ್ಯಮಿಗಳಿಗೆ ಈ ವರ್ಷ ಪ್ರಗತಿ ತರಲಿದೆ. ನೀವು ವ್ಯಾಪಾರದಲ್ಲಿ ಯಶಸ್ಸಿವಿಯಾಗುತ್ತೀರಿ ಮತ್ತು ಪ್ರಯಾಣಗಳ ಅನೇಕ ಅವಕಾಶಗಳನ್ನು ಸಹ ಪಡೆಯುತ್ತೀರಿ, ಇದರಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ . ಈ ವರ್ಷ ಕುಂಭ ರಾಶಿಚಕ್ರದ ಸ್ಥಳೀಯರ ಆರ್ಥಿಕ ಪರಿಸ್ಥಿತಿ ಸ್ವಲ್ಪ ಪ್ರತಿಕೂಲವಾಗಿರಲಿದೆ ಏಕೆಂದರೆ ಗ್ರಹಗಳ ದೃಷ್ಟಿಯು ಹಣಕಾಸಿನ ಜೊತೆಯೊಂದಿಗೆ ನಿಮ್ಮ ವೆಚ್ಚಗಳನ್ನು ಹೆಚ್ಚಿಸುವ ಕೆಲಸ ಕೂಡ ಮಾಡುತ್ತವೆ. ಇದರಿಂದ ನಿಮಗೆ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಸರಿಯಾದ ತಂತ್ರದ ಪ್ರಕಾರ ಮಾತ್ರ ಖರ್ಚಿಸುವ ಅಗತ್ಯವಿದೆ. ಕುಟುಂಬ ಜೀವನವು ಹೆಚ್ಚು ಅನುಕೂಲಕರವಾಗಿ ಕಂಡುಬರುತ್ತಿಲ್ಲ. ಎಕೆದಂರೆ ನೀವು ಮನೆಯಿಂದ ದೂರ ಹೋಗಬೇಕಾಗುತ್ತದೆ ಅದೇ ಸಮಯದಲ್ಲಿ ಮತ್ತೊಂದೆಡೆ ನಿಮ್ಮ ತಂದೆಯ ಅರೋಗ್ಯ ಕುಸಿಯಬಹುದು. ಅಂತ ಸಂದರ್ಭದಲ್ಲಿ ನೀವು ತಾಳ್ಮೆಯಂದಿದ್ದು ಕುಟುಂಬಕ್ಕೆ ಸಮಯ ನೀಡುವ ಅವಶ್ಯಕತೆ ಇದೆ ಇಲ್ಲದಿದ್ದರೆ ತೊಂದರೆಕ್ಕೊಳಗಾಗಬಹುದು.

ವರ್ಷ 2021 ರ ನಿಮ್ಮ ವೈಯಕ್ತಿಕ ಜಾತಕವನ್ನು ಪಡೆಯಿರಿ - ವಾರ್ಷಿಕ ಜಾತಕ 2021

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮವೆಂದು ಸಾಬೀತುಪಡಿಸುತ್ತದೆ ಮತ್ತು ಈ ಸಮಯದಲ್ಲಿ ಅವರು ತಮ್ಮ ಪರಿಶ್ರಮದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಇದಕ್ಕಾಗಿ ನೀವು ನಿಮ್ಮ ಪರಿಶ್ರಮಕ್ಕೆ ನಿರಂತರವಾದ ವೇಗವನ್ನು ನೀಡುತ್ತಾ ಪ್ರಯತ್ನಿಸುವ ಅಗತ್ಯವಿದೆ. ಅಧ್ಯನದಲ್ಲಿ ನಿಮ್ಮ ಮನಸ್ಸು ಹೊಂದಿರುತ್ತದೆ, ಆದರೆ ನಿಮ್ಮ ಸ್ನೇಹಿತರು ನಿಮ್ಮ ಗಮನವನ್ನು ಗೊಂದಲಗೊಳಿಸುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮನ್ನು ಕೇಂದ್ರೀಕರಿಸುವ ಅಗತ್ಯವಿದೆ. ವೈವಾಹಿಕ ಸ್ಥಳೀಯರಿಗೆ ವರ್ಷದ ಆರಂಭವು ಚೆನ್ನಾಗಿರುತ್ತದೆ. ನೀವು ನಿಮ್ಮ ಜೀವನ ಸಂಗಾತಿಯ ಸಹಾಯದಿಂದ ಯಾವುದೇ ಉತ್ತಮ ಲಾಭವನ್ನು ಪಡೆಯಬಹುದು. ಇದರೊಂದಿಗೆ ಅವರ ಮೂಲಕ ನಿಮ್ಮ ಗೌರವ ಹೆಚ್ಚಾಗುತ್ತದೆ. ಆದಾಗ್ಯೂ ವರ್ಷದ ಮಧ್ಯೆ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಮಕ್ಕಳು ಅದೃಷ್ಟದ ಬೆಂಬಲವನ್ನು ಪಡೆಯಲಿದ್ದಾರೆ ಮತ್ತು ಅವರ ಪ್ರಗತಿಯಾಗುತ್ತದೆ. ಇದರಿಂದ ನೀವು ಸಹ ಸಂತೋಷಪಡುವಿರಿ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ಪ್ರೀತಿ ಜೀವನಕ್ಕೆ ಈ ಸಮಯ ಅದ್ಭುತವಾಗಿರಲಿದೆ. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ನಡುವಿನ ಪ್ರೀತಿ ಹೆಚ್ಚಾಗುತ್ತದೆ, ಇಅದರಿಂದ ನಿಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳಲಿದೆ. ಪ್ರೀತಿ ಮದುವೆಯ ಬಗ್ಗೆ ಯೋಚಿಸುತ್ತಿರುವ ಪ್ರೇಮಿಗಳು ಈ ವರ್ಷ ಯಾವುದೇ ಸಂತೋಷದ ಸುದ್ಧಿಯನ್ನು ಪಡೆಯಬಹುದು. ಆದರೆ ಆರೋಗ್ಯದ ದೃಷ್ಟಿಯಿಂದ ಈ ವರ್ಷ ಉತ್ತಮವಾಗಿಲ್ಲ. ಏಕೆಂದರೆ ಒಂದೆಡೆ ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಮತ್ತೊಂದೆಡೆ ಕೀಲು ನೋವು ನಿಮ್ಮ ಒತ್ತಡವನ್ನು ಹೆಚ್ಚಿಸುವ ಕೆಲಸ ಮಾಡಲಿದೆ. ಅಂತಹ ಸಂದರ್ಭದಲ್ಲಿ ಇದರ ಕಡೆ ಮೊದಲಿನಿಂದಲೇ ಹೆಚ್ಚು ಗಮನ ಹಾರಿಸುತ್ತ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರುವ ಅವಶ್ಯಕತೆ ಇದೆ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Aquarius future 2021

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಕುಂಭ ರಾಶಿಚಕ್ರದ ಸ್ಥಳೀಯರ ವೃತ್ತಿ ಜೀವನಕ್ಕೆ ಈ ವರ್ಷ ಸ್ವಲ್ಪ ಏರಿಳಿತದಿಂದ ತುಂಬಿರುತ್ತದೆ. ಏಕೆಂದರೆ ವರ್ಷದ ಆರಂಭದಲ್ಲಿ ಅದೃಷ್ಟ ನಿಮ್ಮನ್ನು ಎಷ್ಟು ಬೆಂಬಲಿಸುತ್ತದೋ, ಪರಿಸ್ಥಿತಿಗಳು ನಿಧಾನವಾಗಿ ಅಷ್ಟೇ ಬದಲಾಗುತ್ತವೆ.

ವರ್ಷ 2021 ಆರಂಭದಲ್ಲಿ, ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಸಹೋದ್ಯೋಗಿಗಳ ಸಹಕಾರವನ್ನು ಪಡೆಯುತ್ತೀರಿ. ಆ ಸಮಯದಲ್ಲಿ ನೀವು ಎಲ್ಲಾ ಕೆಲಸಗಳನ್ನು ಸಮಯಕ್ಕೆ ಮೊದಲೇ ಪೂರ್ಣಗೊಳಿಸುವಲ್ಲಿ ಯಶ್ವಸಿಯಾಗುತ್ತೀರಿ.

ಉದ್ಯೋಗದಲ್ಲಿ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದವರಿಗೆ, ವಿಶೇಷವಾಗಿ ಜನವರಿ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉದ್ಯೋಗವನ್ನು ಬದಲಾಯಿಸುವಲ್ಲಿ ಯಶಸ್ಸು ಸಿಗಲಿದೆ.

ಇದರ ನಂತರ ವರ್ಷದ ಮಧ್ಯದಲ್ಲಿ ಅಂದರೆ ರಿಂದ ಜೂಲೈ ಮಧ್ಯೆ ನೀವು ಸ್ವಲ್ಪ ಜಾಗರೂಕರಾಗಿ ನಡೆಯಬೇಕು ಏಕೆಂದರೆ ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಕ್ರಿಯರಾಗಿರುವ ಕಾರಣದಿಂದಾಗಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಜೂಲೈ ತಿಂಗಳ ಅಂತ್ಯದ ವಾರದಲ್ಲಿ ಪರಿಸ್ಥಿತಿಗಳಲ್ಲಿ ಸುಧಾರಣೆ ಬರುತ್ತದೆ ಮತ್ತು ಈ ಸಮಯವು ನಿಮ್ಮ ವೃತ್ತಿ ಜೀವನಕ್ಕೆ ಅತ್ಯಂತ ಉತ್ತಮವಾಗಿರುತ್ತದೆ.

ಅಕ್ಟೋಬರ್ ತಿಂಗಳಲ್ಲಿ ವೃತ್ತಿಪರ ಸ್ಥಳೀಯರ ವರ್ಗಾವಣೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ ತಿಂಗಳು ನಿಮ್ಮ ಕೆಲಸದ ಸ್ಥಳದಲ್ಲಿ ಅದ್ಭುತ ಯಶಸ್ಸನ್ನು ತರಲಿದೆ.

ನೀವು ವ್ಯಾಪಾರದಲ್ಲಿ ತೊಡಗಿದ್ದರೆ, ಈ ವರ್ಷ ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ಅನೇಕ ಪ್ರಯಾಣಗಳ ಅವಕಾಶವನ್ನು ಪಡೆಯುತ್ತೀರಿ.

ಉದ್ಯಮಿಗಳು ವಿಶೇಷವಾಗಿ ಜೂಲೈ, ಆಗಸ್ಟ್ ಮತ್ತು ಡಿಸೆಂಬರ್ ತಿಂಗಳಲ್ಲಿ ಅದ್ಭುತ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ. ಆದಾಗ್ಯೂ ಈ ಸಮಯದಲ್ಲಿ ಹೂಡಿಕೆ ಮಾಡುತ್ತಾ ಮೊದಲಿಗಿಂತ ಹೆಚ್ಚು ಜಾಗರೂಕರಾಗಿರುವ ಸಾಧ್ಯತೆ ಇದೆ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according Aquarius future 2021

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ನಿಮ್ಮ ಆರ್ಥಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಕಂಡುಬರುತ್ತಿವೆ. ಏಕೆಂದರೆ ವರ್ಷದುದ್ದಕ್ಕೂ ಶನಿ ದೇವಾ ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿ ಕುಳಿತಿರುವ ಕಾರಣದಿಂದಾಗಿ ನಿಮ್ಮ ವೆಚ್ಚಗಳು ನಿರಂತರವಾಗಿ ಹೆಚ್ಚಾಗುತ್ತವೆ.

ಈ ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಕಷ್ಟು ಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ. ಆದ್ದರಿಂದ ವರ್ಷದ ಆರಂಭದಿಂದಲೇ, ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ, ಹಣವನ್ನು ಸಂಗ್ರಹಿಸಲು ಪ್ರಯತ್ನಿಸುವುದು ನಿಮಗೆ ಉತ್ತಮ.

ಇದರೊಂದಿಗೆ ಗುರು ಗ್ರಹವು ಸಹ ಆರಂಭದಿಂದ ಏಪ್ರಿಲ್ ವೆರೆಗೆ ನಿಮ್ಮ ರಾಶಿಚಕ್ರದಲ್ಲೇ ಕುಳಿತಿರುತ್ತಾರೆ. ಇದರ ನೇರವಾದ ಪರಿಣಾಮವು ನಿಮ್ಮ ಅರ್ಥಿಕ ಜೀವನದ ಮೇಲೆ ಬೀರಬಹುದು.

ಇದರ ನಂತರ 15 ಸೆಪ್ಟೆಂಬರ್ ರಿಂದ 15 ನವೆಂಬರ್ ಮಧ್ಯೆ ಇದ್ದಕ್ಕಿದ್ದಂತೆ ಮತ್ತೆ ನಿಮ್ಮ ನಿಮ್ಮ ವೆಚ್ಚಗಳಲ್ಲಿ ಏರಿಕೆಯನ್ನು ಕಾಣಲಾಗುತ್ತದೆ. ಇದರಿಂದ ಮಾನಸಿಕ ಒತ್ತಡವು ಸಹ ಹೆಚ್ಚಾಗುತ್ತದೆ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಈ ಸಮಯದಲ್ಲಿ ಧಾರ್ಮಿಕ ಚಟುವಟಿಕೆ ಮತ್ತು ಲೋಕೋಪಕಾರದ ಕೆಲಸಗಳಲ್ಲಿ ನಿಮ್ಮ ಮನಸ್ಸು ಹೆಚ್ಚು ಆಸಕ್ತಿ ಹೊಂದಿರುತ್ತದೆ. ಈ ಕಾರಣದಿಂದಾಗಿ ನಿಮ್ಮ ಹೆಚ್ಚು ಹಣಕಾಸು ಖರ್ಚಾಗಬಹುದು.

ಈ ವರ್ಷ ನಿಮ್ಮ ಆದಾಯದಲ್ಲಿನ ಕೊರತೆಯನ್ನು ಸ್ಪಷ್ಟವಾಗಿ ಕಾಣಲಾಗುತ್ತದೆ, ಅಂತಹ ಸಂದರ್ಭದಲ್ಲಿ ನೀವು ಅಸಮಾಧಾನಗೊಳ್ಳದೆ ನಿಮ್ಮನ್ನು ಸಕಾರಾತ್ಮಕವಾಗಿ ಇರಿಸುವ ಅಗತ್ಯವಿದೆ.

ಆದಾಗ್ಯೂ ಜನವರಿ, ಫೆಬ್ರವರಿ, ಏಪ್ರಿಲ್, ಮೇ ತಿಂಗಳ ದ್ವಿತೀಯಾರ್ಧ, ಸೆಪ್ಟೆಂಬರ್ ಮತ್ತು ಡಿಸೆಂಬರ್ ತಿಂಗಳು ಆದಾಯದ ವಿಷಯದಲ್ಲಿ ಸಲ್ಪ ಹೆಚ್ಚು ಉತ್ತಮ ಫಲಿತಾಂಶಗಳನ್ನು ತರುತ್ತವೆ.

ಕುಂಭ ರಾಶಿ ಭವಿಷ್ಯ 2021 ರ ಶಿಕ್ಷಣ ಪ್ರಕಾರ - Education life according Aquarius future 2021

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಕುಂಭ ರಾಶಿಚಕ್ರದ ವಿದ್ಯಾರ್ಥಿಗಳು ಶಿಕ್ಷಣದ ವಿಷಯಗಳಲ್ಲಿ ಸಾಮಾನ್ಯಕ್ಕಿಂತ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ಏಪ್ರಿಲ್ ತಿಂಗಳಲ್ಲಿ ನೀವು ನಿಮ್ಮ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ, ಇದರಿಂದ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ.

ಆದಾಗ್ಯೂ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸಮಯವೂ ಅನುಕೂಲಕರವಾಗರುತ್ತದೆ ಎಂದು ಕಂಡುಬರುತ್ತಿಲ್ಲ. ಏಕೆಂದರೆ ಈ ಸಮಯದಲ್ಲಿ ಅವರು ಉತ್ತಮ ಫಲಿತಾಂಶಗಳನ್ನು ಪಡೆಯಲು ಮೊದಲಿಗಿಂತ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗಬಹುದು

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಜನವರಿ ರಿಂದ ಫೆಬ್ರವರಿ, ಏಪ್ರಿಲ್ ದ್ವಿತೀಯಾರ್ಧದ ತಿಂಗಳು ಮತ್ತು ನಂತರ ಸೆಪ್ಟೆಂಬರ್ ತಿಂಗಳು ಬಹಳಷ್ಟು ಅನುಕೂಲಕರವಾಗಿರಲಿವೆ. ಅಂತಹ ಸಂದರ್ಭದಲ್ಲಿ ನೀವು ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ ಮತ್ತು ನಿಮಗೆ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶಗಳನ್ನು ಪಡೆಯುತ್ತೀರಿ.

ತಂತ್ರಜ್ಞಾನದ ಅಧ್ಯಯನ ಮಾಡುತ್ತಿರುವ ಸ್ಥಳೀಯರಿಗೆ ಈ ಸಮಯ ಸಾಮಾನ್ಯ ಫಲಿತಾಂಶಗಳನ್ನು ತರುತ್ತಿದೆ. ಆದ್ದರಿಂದ ಈ ಸಮಯದ ಲಾಭವನ್ನು ನೀವು ನಿಮ್ಮದೇ ಆದ ರೀತಿಯಲ್ಲಿ ಪಡೆದುಕೊಳ್ಳಬೇಕು.

ಸಾಮಾನ್ಯ ಮತ್ತು ಮಾಧ್ಯಮ ಮಾಹಿತಿ, ತಂತ್ರಜ್ಞಾನ ಮತ್ತು ವಾಸ್ತುಶಿಪದ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ವರ್ಷ ಅದ್ಭುತ ಫಲಿತಾಂಶಗಳನ್ನೂ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಕುಟುಂಬ ಜೀವನ - Family life according Aquarius future 2021

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಕುಟುಂಬ ಜೀವನಕ್ಕೆ ಈ ವರ್ಷ ಕೆಲವು ಪ್ರತಿಕೂಲ ಫಲಿತಾಂಶಗಳನ್ನು ತರಲಿದೆ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಇಡೀ ವರ್ಷ ರಾಹು ಗ್ರಹವು ನಿಮ್ಮ ನಾಲ್ಕನೇ ಮನೆಯಲ್ಲಿರುತ್ತದೆ. ಇದರಿಂದ ಕುಟುಂಬ ಸಂತೋಷದಲ್ಲಿ ನೀವು ಕೊರತೆಯನ್ನು ಅನುಭವಿಸುತ್ತೀರಿ.

ಹೆಚ್ಚಿನ ಕೆಲಸ ಮತ್ತು ಅದರ ಕಾರ್ಯನಿರತತೆಯ ಕಾರಣದಿಂದಾಗಿ ನೀವು ನಿಮ್ಮ ಕುಟುಂಬದಿಂದ ದೂರ ಹೋಗಬೇಕಾಗಬಹುದು.

ನೀವು ಇಂದಿನ ವರೆಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ , ನಿಮಗೆ ಕೆಲವು ಉತ್ತಮ ಫಲಿತಾಂಶಗಳು ಸಿಗಬಹುದು. ಇದರಿಂದ ನಿಮಗೆ ನೆಮ್ಮದಿ ಸಿಗುತ್ತದೆ. ಆದರೆ ನಿಮ್ಮ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರೆ ಯಾವುದೇ ಕಾರಣದಿಂದಾಗಿ ಕುಟುಂಬದಿಂದ ದೂರ ಹೋಗುವ ಸಾಧ್ಯತೆ ಇದೆ.

ಈ ವರ್ಷ ನೀವು ನಿಮ್ಮ ಕುಟುಂಬ ಜವಾಬ್ದಾರಿಗಳನ್ನು ನಿಭಾಯಿಸುತ್ತೀರಿ, ಅದರ ಮೇಲೆ ಹಣಕಾಸು ಸಹ ಖರ್ಚಾಗಬಹುದು. ಈ ಕಾರಣದಿಂದಾಗಿ ನಿಮ್ಮ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಒಂದೆಡೆ ಕಿರಿಯ ಸಹೋದರ ಸಹೋದರಿಯರಿಗೆ ಸಮಯ ಅನುಕೂಲಕ್ರವಾಗಿರುವುದಿಲ್ಲ ಏಕೆಂದರೆ ಅವರಿಗೆ ಸಮಸ್ಯೆಗಳಾಗುವ ಸಾಧ್ಯತೆ ಇರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಹಿರಿಯ ಸಹೋದರ ಸಹೋದರಿಯರು ನಿಮ್ಮೊಂದಿಗೆ ಮಾತನಾಡಿ ನಿಮ್ಮಿಂದ ಯಾವುದೇ ರೀತಿಯ ಸಹಾಯವನ್ನು ನಿರೀಕ್ಷಿಸಬಹುದು.

ಈ ವರ್ಷ ನಿಮ್ಮ ತಂದೆಗೆ ಅರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಬಹುದು ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಮಕ್ಕಳು ಮತ್ತು ವೈವಾಹಿಕ ಜೀವನ - Children & Marriage life according Aquarius future 2021

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ವೈವಾಹಿಕ ಜನರು ಈ ವರ್ಷ ಸಾಮಾನ್ಯ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಏಕೆಂದರೆ ಒಂದೆಡೆ, ದಾಂಪತ್ಯ ಜೀವನದ ದೃಷ್ಟಿಯಿಂದ ಎಲ್ಲವು ಸರಿಯಾಗಿರುತ್ತದೆ ಎಂದು ನಿರೀಕ್ಷಿಸಲಾಗಿದ್ದರೆ, ಅದೇ ಸಮಯದಲ್ಲಿ ಮತ್ತೊಂದೆಡೆ ನೀವು ನಿಮ್ಮ ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ

ನಿಮ್ಮ ಜೀವನ ಸಂಗಾತಿ ಉದ್ಯೋಗದಲ್ಲಿದ್ದರೆ, ಅವರು ತಮ್ಮ ಕೆಲಸದ ಸ್ಟಳದಲ್ಲಿ ಅದ್ಭುತ ಯಶಸ್ಸು ಪಡೆಯಲಿದ್ದಾರೆ. ಇದರಿಂದ ಕುಟುಂಬದ ಪರಿಸರವು ಸಹ ಚೆನ್ನಾಗಿರುತ್ತದೆ.

ಸಂಬಂಧದಲ್ಲಿ ಯಾವುದೇ ಸಮಸ್ಯೆ ನಡೆಯುತ್ತಿದ್ದರೆ, ಅದು ಮುಗಿಸಲಾಗುವ ಸಮಯ ಬಂದಿದೆ. ಅದಕ್ಕಾಗಿ ನೀವೇ ಪ್ರಯತ್ನಿಸುತ್ತಾ ಪ್ರತಿಯೊಂದು ವಿವಾದವನ್ನು ನಿವಾರಿಸುವ ಅಗತ್ಯವಿದೆ.

ವಿಶೇಷವಾಗಿ ಜನವರಿ ತಿಂಗಳಲ್ಲಿ ವೈವಾಹಿಕ ಸ್ಥಳೀಯರು ಜೀವನ ಸಂಗಾತಿಯ ಮೂಲಕ ಉತ್ತಮ ಲಾಭವನ್ನು ಪಡೆಯುತ್ತಾರೆ

ಆದಾಗ್ಯೂ ಇದರ ನಂತರ ಏಪ್ರಿಲ್ ರಿಂದ ಮೇ ತಿಂಗಳ ಮಧ್ಯೆ ಜೀವನ ಸಂಗಾತಿಯ ನಡವಳಿಕೆಯಿಂದ ನಿಮ್ಮ ಮಾನಸಿಕ ಒತ್ತಡದಲ್ಲಿ ಹೆಚ್ಚಳವಾಗುತ್ತದೆ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಜೂಲೈ ರಿಂದ ಆಗಸ್ಟ್ ವರೆಗಿನ ಸಮಯವು ಸಹ ಸಾಮಾನ್ಯದಿಂದ ಸ್ವಲ್ಪ ದುರ್ಬಲವಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮನ್ನು ಯಾವುದೇ ರೀತಿಯ ವಾದ - ವಿವಾದದಿಂದ ತಪ್ಪಿಸಬೇಕು.

ನಿಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದರೆ, ಅದಕ್ಕಾಗಿ ಫೆಬ್ರವರಿ ರಿಂದ ಮಾರ್ಚ್ ಮತ್ತು ಏಪ್ರಿಲ್, ಇದರೊಂದಿಗೆ ಜೂನ್ ತಿಂಗಳ ಆರಂಭದಲ್ಲಿ ಸಾಕಷ್ಟು ಉತ್ತಮವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ಮಕ್ಕಳು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ.

ವಿಶೇಷವಾಗಿ ಜೂಲೈ ರಿಂದ ಆಗಸ್ಟ್ ಸಮಯವು ನಿಮ್ಮ ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗುವ ಕೆಲಸ ಮಾಡುತ್ತದೆ ಮತ್ತು ನಂತರ ಇದಲ್ಲದೆ ಸೆಪ್ಟೆಂಬರ್ ತಿಂಗಳಲ್ಲಿ ನೀವು ನಿಮ್ಮ ಜೀವನ ಸಂಗಾತಿ ಮತ್ತು ಮಕ್ಕಳೊಂದಿಗೆ ಎಲ್ಲಾದರೂ ಸುತ್ತಾಡಲು ಹೋಗುವುದಕ್ಕೆ ಯೋಜಿಸುತ್ತಿರಿ. ನಿಮ್ಮ ಹಣಕಾಸು ಖರ್ಚಾಗುತ್ತದೆ ಆದರೆ ನೀವು ನೆಮ್ಮದಿಯನ್ನು ಅನುಭವಿಸುತ್ತೀರಿ.

ಜೀವನ ಸಂಗಾತಿಯ ಮೂಲಕ ನಿಮ್ಮ ಗೌರವ ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಜನರು ನಿಮ್ಮಿಂದ ಸಲಹೆ ಪಡೆಯುವಂತೆ ಕಂಡುಬರುತ್ತಾರೆ.

ಒಟ್ಟಾರೆಯಾಗಿ ಹೇಳಿದರೆ, ಮಕ್ಕಳ ದೃಷ್ಟಿಯಿಂದ ಈ ವರ್ಷ ಉತ್ತಮವಾಗಿರುವ ಸಂಪೂರ್ಣ ಸಾಧ್ಯತೆ ಇದೆ.

ಆದಾಗ್ಯೂ ಈ ನಡುವೆ ನಿಮ್ಮ ಮಕ್ಕಳ ಆರೋಗ್ಯವು ನಿಮ್ಮನ್ನು ಕಾಡಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಮಕ್ಕಳು ಅಧ್ಯಯನ ಮಾಡುತ್ತಿದ್ದರೆ, ತಮ್ಮ ಶಿಕ್ಷಣದಲ್ಲಿ ಅವರ ಪ್ರದರ್ಶನ ಮೊದಲಿಗಿಂತ ಉತ್ತಮವಾಗಿರುವ ಸಾಧ್ಯತೆ ಇದೆ ಮತ್ತು ಅವರು ಕೆಲಸದಲ್ಲಿ ತೊಡಗಿದ್ದರೆ, ಅವರ ಕೆಲಸದ ಸ್ಟಳದಲ್ಲಿ ಯಾವುದೇ ದೊಡ್ಡ ಬದಲಾವಣೆ ಉಂಟಾಗಬಹುದು.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love life according Aquarius future 2021

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಪ್ರೀತಿಯಲ್ಲಿರುವ ಸ್ಥಳೀಯರಿಗೆ ಈ ವರ್ಷ ಸಾಕಷ್ಟು ಉತ್ತಮವಾಗಿರುತ್ತದೆ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿ ಜೇವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.

ಕೆಲಸ ಹೆಚ್ಚಾಗಿರುತ್ತದೆ ಆದರೆ ನಿಮ್ಮ ಪ್ರೀತಿಪಾತ್ರರು ಈ ವರ್ಷ ತಮ್ಮ ಸಿಹಿ ಮಾತುಗಳ ಮೂಲಕ ನಿಮ್ಮ ಮನಸ್ಸನ್ನು ಸಂತೋಷಪಡಿಸುತ್ತಾರೆ. ಇದರಿಂದ ನಿಮ್ಮ ಸಂಪೂರ್ಣ ಒತ್ತಡ ದೂರವಾಗುತ್ತದೆ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ 2021 ನೀವು ನಿಮ್ಮ ಪ್ರೀತಿಯನ್ನು ಮುಂದುವರಿಸುವ ಬಗ್ಗೆ ಯೋಚಿಸಬಹುದು. ಈ ಕಾರಣದಿಂದಾಗಿ ವರ್ಷದ ದ್ವಿತೀಯಾರ್ಧದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಮದುವೆಯಾಗಲು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ವಿಶೇಷವಾಗಿ ಜನವರಿ - ಫೆಬ್ರವರಿಯಲ್ಲಿ ನಿಮ್ಮ ಪ್ರೀತಿಪಾತ್ರರು ಯಾವುದೇ ಅವಶ್ಯಕ ಕಾರ್ಯದಿಂದ ದೂರ ಹೋಗಬೇಕಾಗಬಹುದು. ಆದರೆ ಇದರ ಹೊರೆತಾಗಿಯೂ ನಿಮ್ಮಿಬ್ಬರ ನಡುವೆ ದೂರ ಉಂಟಾಗುವುದಿಲ್ಲ ಮತ್ತು ಇಬ್ಬರ ನಡುವಿನ ಸಂವಹನ ಉಳಿದಿರುತ್ತದೆ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ - Health life according Aquarius future 2021

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ, ಆರೋಗ್ಯದ ದೃಷ್ಟಿಯಿಂದ ಈ ವರ್ಷ 2021 ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಉತ್ತಮವಾಗಿರುತ್ತದೆ. ಏಕೆಂದರೆ ನಿಮ್ಮ ರಾಶಿಚಕ್ರದ ಅಧಿಪತಿ ಶನಿ ದೇವ ಪೂರ್ತಿ ವರ್ಷದ ಸಮಯದಲ್ಲಿ ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿರಿತ್ತರೆ. ಇದರಿಂದ ನಿಮ್ಮ ಆರೋಗ್ಯವು ದುರ್ಬಲವಾಗಿರುತ್ತದೆ.

ವಿಶೇಷವಾಗಿ ಈ ವರ್ಷ ನಿಮ್ಮ ಕಾಲುಗಳಲ್ಲಿ ನೋವು, ಅನಿಲ ಆಮ್ಲೀವತೆ, ಅಜೀರ್ಣ, ಶೀತದಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಆಹಾರ ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ, ಈ ಸಮಸ್ಯೆಗಳ ಕಾರಣದಿಂದಾಗಿ ನೀವು ಸರಿಯಾಗಿ ಯಾವುದೇ ಕೆಲಸವನ್ನು ಮಾಡಲು ಅಸಾಮರ್ಥ್ಯವನ್ನು ಅನುಭವಿಸುತ್ತೀರಿ.

ಯಾವುದೇ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ ಎಂದು ಈ ವರ್ಷ ನಿಮಗೆ ಸಲಹೆ ನೀಡಲಾಗಿದೆ, ಏಕೆಂದರೆ ಹಾಗೆ ಮಾಡುವುದು ಈ ಸಮಯದಲ್ಲಿ ನಿಮಗೆ ತುಂಬಾ ಹಾನಿಕಾರಕವಾಗಿದೆ.

ವಿಶೇಷವಾಗಿ ನೀವು ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯೆ ನಿಮ್ಮ ಆರೋಗ್ಯದ ಬಗ್ಗೆ ಗಮನಾರ್ಹ ಕಾಳಜಿ ವಹಿಸಬೇಕು. ಇದಕ್ಕಾಗಿ ನೀವು ಸಮಯವನ್ನು ಕಂಡುಕೊಂಡಾಗಲೆಲ್ಲಾ ಯೋಗ ಮತ್ತು ವ್ಯಾಯಾಮ ಮಾಡುತ್ತೀರಿ.

ಕುಂಭ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರ - Astrological remedies according Aquarius future 2021

  • ನಿಮ್ಮ ಅದೃಷ್ಟವನ್ನು ಬಲಪಡಿಸಲು ಶುಕ್ರ ಗ್ರಹದ ರತ್ನ ವಜ್ರ ಅಥವಾ ಓಪಲ್ ರತ್ನವನ್ನು ಧರಿಸುವುದು ನಿಮಗೆ ಉತ್ತಮ, ಇದನ್ನು ನೀವು ಶುಕ್ರವಾರದಂದು ಬೆಳ್ಳಿಯಲ್ಲಿ ತಯಾರಿಸಿ ಅನಾಮಿಕ ಉಂಗುರದಲ್ಲಿ ಧರಿಸಬೇಕು.

  • ಅರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಉನ್ಮತ್ತದ ಮೂಲವನ್ನು ಶನಿವಾರಾಂದು ಕುತ್ತಿಗೆಯಲ್ಲಿ ಅಥವಾ ಬಲಗೈಯಲ್ಲಿ ಧರಿಸಬೇಕು.

  • ನೀವು ನಾಲ್ಕು ಮುಖ ರುದ್ರಾಕ್ಷ ಮತ್ತು ಏಳು ಮುಖ ರುಧ್ರಾಕ್ಷವನ್ನು ಧರಿಸಬಹುದು.

  • ಶನಿವಾರದಂದು ಇರುವೆಗಳಿಗೆ ಹಿಟ್ಟು ಹಾಕುವುದು ಮತ್ತು ಅಂಗವಿಕಲರಿಗೆ ಆಹಾರ ನೀಡುವುದು ಉತ್ತಮವಾಗಿರುತ್ತದೆ.

  • ನಿಯಮಿತವಾಗಿ ಹಸುವಿನ ಸೇವೆ ಮಾಡಿ, ಮಹಿಳೆಯರನ್ನು ಗೌರವಿಸಿ ಮತ್ತು ತಾಯಿ ಲಕ್ಷ್ಮಿಯನ್ನು ಆರಾಧಿಸಿ.

More from the section: Horoscope 2980
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2023
© Copyright 2024 AstroCAMP.com All Rights Reserved