Author: -- | Last Updated: Fri 27 Aug 2021 10:40:08 AM
ಕಳೆದ ವರ್ಷ ಮತ್ತು ಹೊಸ ವರ್ಷದ ನಡುವೆ ಸ್ವಲ್ಪ ಸಮಯ ಉಳಿದಿದೆ. ಅದರಲ್ಲಿ ಭರವಸೆ ಇದೆ. ಮುಂಬರುವ ವರ್ಷ ಉತ್ತಮವಾಗಿರುತ್ತದೆ ಎಂಬ ಭರವಸೆ. ಆದಾಗ್ಯೂ, ಸಮಯ ಯಾವಾಗಲೂ ಒಂದಾಗಿಯೇ ಇರುವುದಿಲ್ಲ, ಆದರೂ ಸಮಯಕ್ಕಿಂತ ಮುಂಚಿತವಾಗಿ ಘಟನೆಗಳನ್ನು ತಿಳಿದುಕೊಳ್ಳುವುದು, ಖಂಡಿತವಾಗಿಯೂ ಆ ಸಮಸ್ಯೆಯ ವಿರುದ್ಧ ಹೊರಡುವ ಸಾಮರ್ಥ್ಯವನ್ನು ನಮ್ಮಲ್ಲಿ ಬೆಳೆಸುತ್ತದೆ. ವರ್ಷ 2022 ರಲ್ಲಿ ಕರ್ಕ ರಾಶಿಚಕ್ರದ ಜನರ ಪ್ರೀತಿಯ ಜೀವನ ಹೇಗಿರುತ್ತದೆ ಎಂದು ನಿಮ್ಮಲ್ಲಿ ಅನೇಕ ಜನರು ಉತ್ಸುಕರಾಗಿರುತ್ತಾರೆ. ಮತ್ತೊಂದೆಡೆ ಕೆಲವರು ವರ್ಷ 2022 ರಲ್ಲಿ ಕರ್ಕ ರಾಶಿಚಕ್ರದ ಜನರ ವೃತ್ತಿ ಜೀವನ ಹೇಗಿರಲಿದೆ ಎಂದು ತಿಳಿಯಲು ಬಯಸುತ್ತಾರೆ. ಅಂತಹ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಈ ವಾರ್ಷಿಕ ರಾಶಿ ಭವಿಷ್ಯ ಸಿದ್ಧವಾಗಿದೆ.
ವರ್ಷ 2022, ಕರ್ಕ ರಾಶಿಚಕ್ರದ ಜನರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸಬಹುದು. ವರ್ಷದ ಆರಂಭದಲ್ಲೇ ಮಗಳ ಗ್ರಹವು ನಿಮ್ಮ ರಾಶಿಚಕ್ರದ ಆರನೇ ಮನೆಗೆ ಗೋಚರಿಸುತ್ತದೆ. ಇದು ಕರ್ಕ ರಾಶಿಚಕ್ರದ ಸ್ಥಳೀಯರ ಮನೋಬಲವನ್ನು ಹೆಚ್ಚಿಸುತ್ತದೆ. 27 ಏಪ್ರಿಲ್ ನಂತರ ರಾಶಿ ಭವಿಷ್ಯ 2022 ರ ಪ್ರಕಾರ, ಶನಿ ದೇವ ಮತ್ತು ಗುರು ದೇವರು ನಿಮ್ಮ ಅದೃಷ್ಟದ ಸ್ಥಳದಲ್ಲಿ ಬದಲಾವಣೆಯಾಗುತ್ತಾರೆ. ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನ, ಆರ್ಥಿಕ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ಮತ್ತೊಂದೆಡೆ, ಈ ವರ್ಷ ನಿಮ್ಮ ಪ್ರೀತಿಯ ಜೀವನದಲ್ಲಿ ನಿಮ್ಮ ಸಂಗಾತಿಯಿಂದ ನೀವು ಉತ್ತಮ ಬೆಂಬಲವನ್ನು ಪಡೆಯಬಹುದು. ಹೊಸ ಸಂಬಂಧಗಳಿಗಾಗಿ ಮತ್ತು ಪ್ರೀತಿಯ ಮದುವೆಗಾಗಿ ಯೋಗಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ, ವೈವಾಹಿಕ ಜೀವನದಲ್ಲಿ ಏರಿಳಿತಗಳನ್ನು ಕಾಣಬಹುದು. ಆದರೆ ವರ್ಷದ ಅಂತ್ಯದ ವರೆಗೆ ದಾಂಪತ್ಯ ಸಂಬಂಧದಲ್ಲಿ ಮಾಧುರ್ಯ ಉಂಟಾಗಬಹುದು. ಕುಟುಂಬ ಮತ್ತು ಜೀವನ ಸಂಗಾತಿಯೊಂದಿಗೆ ಪ್ರಯಾಣದ ಸಾಧ್ಯತೆಯೂ ಇದೆ.
ಕರ್ಕ ರಾಶಿಚಕ್ರದ ಸ್ಥಳೀಯರು ಈ ವರ್ಷ ಆರೋಗ್ಯದ ದೃಷ್ಟಿಕೋನದಿಂದ ಜಾಗರೂಕರಾಗಿರಬೇಕು. ಆದಾಗ್ಯೂ, ಸೆಪ್ಟೆಂಬರ್ ತಿಂಗಳಲ್ಲಿ ಆರೋಗ್ಯದಲ್ಲಿ ವಿಶ್ರಾಂತಿ ಪಡೆಯಬಹುದು. ಆದರೆ ಸಣ್ಣ ಸಮಸ್ಯೆಗಳು ವರ್ಷದುದ್ದಕ್ಕೂ ಉಳಿದಿರುತ್ತವೆ. ಕರ್ಕ ರಾಶಿಚಕ್ರದ ಸ್ಥಳೀಯರು ಈ ವರ್ಷ ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸದಿರಲು ಪ್ರಯತ್ನಿಸಿ.
ಕರ್ಕ ರಾಶಿ ಭವಿಷ್ಯ 2022 ಪ್ರಕಾರ, ಕರ್ಕ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022 ರ ಆರಂಭವನ್ನು ಬಿಟ್ಟರೆ, ಈ ವರ್ಷ ಆರ್ಥಿಕ ದೃಷ್ಟಿಕೋನದಿಂದ ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸಬಹುದು. ವರ್ಷದ ಪ್ರಾರಂಭದಲ್ಲಿ ಏಳನೇ ಮನೆಯಲ್ಲಿ ಶನಿ ದೇವ ಇರಲಿದ್ದಾರೆ, ಈ ಕಾರಣದಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಏಪ್ರಿಲ್ ನಂತರ ಶನಿ ಸಂಚಾರವು ಕುಂಭ ರಾಶಿಯಲ್ಲಿ ಸಂಭವಿಸಲಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಆರ್ಥಿಕ ಜೀವನದಲ್ಲಿ ಉತ್ತಮ ಬದಲಾವಣೆಗಳ ನಿರೀಕ್ಷೆಯಿದೆ. ಈ ಕಾರಣದಿಂದಾಗಿ ಏಪ್ರಿಲ್ ರಿಂದ ಆಗಸ್ಟ್ ವರೆಗಿನ ತಿಂಗಳುಗಳು ನಿಮಗೆ ಅತ್ಯಂತ ಫಲಪ್ರದವಾಗಬಹುದು. ಈ ಅವಧಿಯಲ್ಲಿ ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗಿದೆ. ಹಣಕಾಸು ಸಂಗ್ರಹಿಸುವ ಪ್ರಬಲ ಸಾಧ್ಯತೆ ಇದೆ.
17 ಏಪ್ರಿಲ್ ರಿಂದ ಗುರು ಗ್ರಹವು ನಿಮ್ಮ ರಾಶಿಯಿಂದ ಒಂಬತ್ತನೇ ಮನೆ ಅಂದರೆ ಅದೃಷ್ಟದ ಮನೆಗೆ ಗೋಚರಿಸುತ್ತದೆ. ಈ ಸಂಚಾರವು ನಿಮ್ಮ ಆರ್ಥಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಈ ಸಂಚಾರದ ಸಮಯದಲ್ಲಿ ಆರ್ಥಿಕವಾಗಿ ನೀವು ಸದೃಢವಾಗಿರುವ ಸಾಧ್ಯತೆ ಇದೆ. ಕರ್ಕ ರಾಶಿಚಕ್ರದ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಮಂಗಳ ದೇವ ನಿಮ್ಮ ಹನ್ನೊಂದನೇ ಮನೆ ಅಂದರೆ ಲಾಭದ ಮನೆಗೆ ಗೋಚರಿಸುತ್ತಾರೆ. ಆರ್ಥಿಕ ದೃಷ್ಟಿಯಿಂದ ಈ ಸಂಚಾರವು, ಕರ್ಕ ರಾಶಿಚಕ್ರದ ಸ್ಥಳೀಯರ ಬುದ್ಧಿಶಕ್ತಿಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಈ ಅವಧಿಯಲ್ಲಿ ನೀವು ಶುಭ ಫಲಿತಾಂಶಗಳನ್ನು ಅಪಡೆಯುತ್ತೀರಿ ಮತ್ತು ನಿಮ್ಮ ಆರ್ಥಿಕ ಜೀವನದಲ್ಲಿ . ಗಳಿಕೆಯ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಬಹುದು. ಈ ಸಮಯದಲ್ಲಿ ಅನೇಕ ಮೂಲಗಳಿಂದ ನೀವು ಆರ್ಥಿಕ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.
ಕರ್ಕ ರಾಶಿಚಕ್ರದ ಸ್ಥಳೀಯರಿಗೆ 2022 ವರ್ಷವು, ಅರೋಗ್ಯ ದೃಷ್ಟಿಕೋನದಿಂದ ಜಾಗರೂಕರಾಗಿರುವ ವರ್ಷ. ವರ್ಷದ ಆರಂಭದಲ್ಲಿ ಶನಿ ದೇವ ನಿಮ್ಮ ರಾಶಿಚಕ್ರದ ಪ್ರಕಾರ ಏಳನೇ ಮನೆಯಲ್ಲಿ ಇರಲಿದ್ದಾರೆ, ಈ ಕಾರಣದಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ದೇಹದಲ್ಲಿ ನೀರಿನ ಕೊರತೆಯಾಗದಿರಲು ಪ್ರಯತ್ನಿಸಿ ಮತ್ತು ಸಾಧ್ಯವಾದಷ್ಟು ನೀರು ಕುಡಿಯಿರಿ.
ಆದಾಗ್ಯೂ, ಮತ್ತೊಂದೆಡೆ ಜನವರಿ ತಿಂಗಳಲ್ಲಿ ಮಂಗಳ ಗ್ರಹವು ಧನು ರಾಶಿಗೆ ಪ್ರವೇಶಿಸುತ್ತದೆ. ಈ ಸಂಚಾರದಿಂದ ಆರೋಗ್ಯದ ದೃಷ್ಟಿಕೋನದಿಂದ ನಿಮ್ಮಲ್ಲಿ ಯುದ್ಧಮಾಡುವ ಪ್ರವೃತ್ತಿಯನ್ನು ಸೃಷ್ಠಿಸುವ ಸಾಧ್ಯತೆ ಇದೆ. ಅಂದರೆ ನೀವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಪೂರ್ಣವಾಗಿ ಪ್ರಯತ್ನಿಸುವುದನ್ನು ಕಾಣಲಾಗುತ್ತದೆ.
ಕರ್ಕ ರಾಶಿ ಭವಿಷ್ಯ 2022 ರ ಪ್ರಕಾರ, 17 ಏಪ್ರಿಲ್ ರಿಂದ ಗುರು ಗ್ರಹವು ಮೀನಾ ರಾಶಿ ಅಂದರೆ ಕರ್ಕ ರಾಶಿಯ ಅದೃಷ್ಟದ ಮನೆಯಲ್ಲಿ ಗೋಚರಿಸುತ್ತದೆ. ಈ ಸಂಚಾರದ ಕಾರಣದಿಂದಾಗಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಈ ಸಂಚಾರದ ಪರಿಣಾಮದಿಂದಾಗಿ ಸೆಪ್ಟೆಂಬರ್ ವರೆಗೆ ನೀವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ತೊಡೆದುಹಾಕುವ ಸಾಧ್ಯತೆ ಇದೆ. ಈ ವರ್ಷ ನಿಮ್ಮ ಆಹಾರದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಇದರೊಂದಿಗೆ ನಿಯಮಿತವಾಗಿ ವ್ಯಾಯಾಮ ಮತ್ತು ಯೋಗವನ್ನು ಮಾಡಲು ಪ್ರಯತ್ನಿಸಿ. ನೀವು ಜಿಮ್ ಗೆ ಸೇರಿದರೆ, ಅದು ನಿಮ್ಮ ಆರೋಗ್ಯದ ದೃಷ್ಟಿಕೋನದಿಂದ ಉತ್ತಮ ನಿರ್ಧಾರವಾಗಿರುತ್ತದೆ. ನಿಮ್ಮನ್ನು ಒತ್ತಡರಹಿತವಾಗಿಡಲು ಪ್ರಯತ್ನಿಸಿ. ವರ್ಷದ ಅಂತ್ಯದ ಕೆಲವು ತಿಂದಗ್ಲೂಗಳು ಆರೋಗ್ಯದ ದೃಷ್ಟಿಯಿಂದ ಉತ್ತಮ ಫಲಿತಾಂಶಗಳನ್ನು ನೀಡಬಹುದು.
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022, ವೃತ್ತಿ ಜೀವನದ ದೃಷ್ಟಿಕೋನದಿಂದ ಉತ್ತಮವಾಗಿ ಹಾದುಹೋಗುವ ಸಾಧ್ಯತೆ ಇದೆ. ಏಪ್ರಿಲ್ ತಿಂಗಳಲ್ಲಿ ಗುರುವಿನ ಸಂಚಾರವು ನಿಮ್ಮ ಅದೃಷ್ಟದ ಮನೆಯಲ್ಲಿ ಮತ್ತು ಏಪ್ರಿಲ್ ತಿಂಗಳಲ್ಲಿ ರಾಹುವು ಮೇಷ ರಾಶಿಯಲ್ಲಿ ಸಾಗುತ್ವುದು ನಿಮಗೆ ವೃತ್ತಿ ಜೀವನದ ದೃಷ್ಟಿಯಲ್ಲಿ ಉತ್ತಮ ಸಾಧ್ಯತೆಗಳಿವೆ. ಈ ಸಮಯದಲ್ಲಿ ಹೊಸ ಉದ್ಯೋಗ ಅಥವಾ ಅಪೇಕ್ಷಿತ ಉದ್ಯೋಗವನ್ನು ಹುಡುಕುತ್ತಿರುವವರು, ಈ ಕೆಲಸದಲ್ಲಿ ಉತ್ತಮ ಯಶಸ್ಸು ಪಡೆಯಬಹುದು. ಹೆಚ್ಚಿನ ಕೆಲಸಕ್ಕೆ ಪ್ರತಿಯಾಗಿ ಕಡಿಮೆ ಪ್ರಯೋಜನ ಪಡೆಯುವ ದೂರು ನೀಡುವ ಜನರು ಈ ಸಮಯದಲ್ಲಿ ತಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುವುವ ಸಂಪೂರ್ಣ ಸಾಧ್ಯತೆ ಇದೆ.
ವೃತ್ತಿ ಜೀವನ ತೊಂದರೆಗೀಡಾಗಿದೆಯೇ! ಈಗಲೇ ಆದೇಶಿಸಿ ಕಾಗ್ನಿ ಆಸ್ಟ್ರೋ ರಿಪೋರ್ಟ್
ಏಪ್ರಿಲ್ ಅಂತ್ಯದಲ್ಲಿ ಶನಿ ದೇವ ನಿಮ್ಮ ರಾಶಿಯಿಂದ ಎಂಟನೇ ಮನೆಗೆ ಗೋಚರಿಸುತ್ತಾರೆ. ಈ ಸಂಚಾರವು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತಾಗುತ್ತದೆ. ಈ ಅವಧಿಯಲ್ಲಿ ನೀವು ಪರಿಶ್ರಮಕ್ಕಿಂತ ಹೆಚ್ಚು ಫಲಿತಾಂಶವನ್ನು ಪಡೆಯಬಹುದು. ಈ ಸಮಯದಲ್ಲಿ ಕರ್ಮ ಕ್ಷೇತ್ರದಲ್ಲಿ ಸ್ಥಳ ಬದಲಾವಣೆಯ ಸಾಧ್ಯತೆಯೂ ಇದೆ. ವರ್ಷದ ಅಂತ್ಯದ ಕೆಲವು ತಿಂಗಳುಗಳ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ವೃತ್ತಿಪರ ಜೀವನದಲ್ಲಿ ಹೊಸ ಎತ್ತರವನ್ನು ಮುಟ್ಟಬಹುದು. ಕರ್ಕ ರಾಶಿಚಕ್ರದ ಸ್ಥಳೀಯರು ಈ ವರ್ಷ ವೃತ್ತಿ ಜೀವನದ ಬಗ್ಗೆ ಸೋಮಾರಿತನವನ್ನು ತ್ಯಜಿಸಬೇಕು.
ವರ್ಷ 2022, ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಕುಟುಂಬ ಜೀವನದ ದೃಷ್ಟಿಕೋನದಿಂದ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸಬಹುದು. ವರ್ಷದ ಆರಂಭವು ಅಷ್ಟು ಉತ್ತಮವಾಗಿರುವುದಿಲ್ಲ. ಎಂಟನೇ ಮನೆಯಲ್ಲಿ ಮಂಗಳ ಗ್ರಹದ ಸಾಗಣೆಯಿಂದಾಗಿ, ನಿಮ್ಮ ತಾಯಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ ಮನೆಯಲ್ಲಿ ಉದ್ವಿಗ್ನತೆಯ ವಾತಾವರಣವಿರಬಹುದು. ಏಕೆಂದರೆ ಈ ಸಮಯದಲ್ಲಿ ಅವರು ನಿಮ್ಮ ಕುಟುಂಬದ ಎರಡನೇ ಮನೆಯ ಮೇಲೆ ದೃಷ್ಟಿ ನೀಡುತ್ತಾರೆ.
ಆದಾಗ್ಯೂ, ಏಪ್ರಿಲ್ ತಿಂಗಳಲ್ಲಿ ಗುರುವು ಒಂಬತ್ತನೇ ಮನೆ ಅಂದರೆ ಅದೃಶದ ಮನೆಯಲ್ಲಿ ಇರುತ್ತಾರೆ. ಗುರುವಿನ ಶುಭ ದೃಷ್ಟಿಯು ನಿಮ್ಮ ರಾಶಿಚಕ್ರದ ಮೇಲೆ ಇರುವುದರಿಂದಾಗಿ ನೀವು ಶುಭ ಫಲಿತಾಂಶಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ಕುಟುಂಬ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಕುಟುಂಬದ ಸದಸ್ಯರು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸುತ್ತಾರೆ ಮತ್ತು ಮನೆಯ ಪರಿಸರವು ಆಹ್ಲಾದಕರಾಗಿರುತ್ತದೆ.
ಏಪ್ರಿಲ್ ತಿಂಗಳಲ್ಲಿ ಮೇಷ ರಾಶಿಯಲ್ಲಿ ರಾಹುವು ಮತ್ತು ನಾಲ್ಕನೇ ಮನೆಯಲ್ಲಿ ಕೇತುವು ಗೋಚರಿಸಲಿದೆ. ಈ ಗೋಚರದ ಕಾರಣದಿಂದಾಗಿ ಸೆಪ್ಟೆಂಬರ್ ವರೆಗಿನ ಸಮಯದಲ್ಲಿ ಕರ್ಕ ರಾಶಿಚಕ್ರದ ಜನರು ಕೆಲಸದ ವಿಷಯದಲ್ಲಿ ತಮ್ಮ ಪೋಷಕರು ಅಥವಾ ಕುಟುಂಬದಿಂದ ದೂರ ಹೋಗಬೇಕಾಗಬಹುದು.
ಅಕ್ಟೋಬರ್ ತಿಂಗಳಿಂದ ವರ್ಷದ ಅಂತ್ಯದ ತಿಂಗಳು ಅಂದರೆ ಡಿಸೆಂಬರ್ ವರೆಗಿನ ಸಮಯದಲ್ಲಿ ನಿಮ್ಮ ಕುಟುಂಬ ಜೀವನವು ಸಂತೋಷವಾಗಿರುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ಮಗುವು ಅಥವಾ ಯಾವುದೇ ಹೊಸ ಸದಸ್ಯರ ಆಗಮನದ ಸಾಧ್ಯತೆ ಇದೆ. ಮನೆಯಲ್ಲಿ ಯಾವುದೇ ಹಬ್ಬದಂತಹ ವಾತಾವರಣ ಇರುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ಮೂರು ಗ್ರಹಾಗೂ ಅಂದರೆ ಸೂರ್ಯ, ಶುಕ್ರ ಮತ್ತು ಸಂಯೋಜನೆಯಾಗುತ್ತದೆ. ಕುತುಮ್ಬದ ಸದಸರಲ್ಲಿ ಐಕ್ಯತೆ ಇರುತ್ತದೆ. ಪರಸ್ಪರರಲ್ಲಿ ಪ್ರೀತಿ ಹೆಚ್ಚಾಗುತ್ತದೆ ಮತ್ತು ಸಂಬಂಧವು ಬಲಗೊಳ್ಳುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲೂ ಈ ಸಮಯದಲ್ಲಿ ನೀವು ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯಬಹುದು. .
ಕರ್ಕ ರಾಶಿ ಭವಿಷ್ಯ 2022 ರ ಪ್ರಕಾರ, ಶಿಕ್ಷಣದ ದೃಷ್ಟಿಕೋನದಿಂದ ವರ್ಷ 2022 ಕರ್ಕ ರಾಶಿಚಕ್ರದ ಜನರಿಗೆ ಉತ್ತಮವಾಗಿರಲಿದೆ. ಈ ವರ್ಷ ಏಪ್ರಿಲ್ ಮಧ್ಯದಿಂದ ಸೆಪ್ಟೆಂಬರ್ ವರೆಗಿನ ಸಮಯದಲ್ಲಿ ಗುರು ದೇವ ನಿಮ್ಮ ಶಿಕ್ಷಣದ ಐದನೇ ಮನೆಯ ಮೇಲೆ ವಿಶೇಷ ಪರಿಣಾಮ ಬೀರಲಿದ್ದಾರೆ. ಈ ಕಾರಣದಿಂದಾಗಿ ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಶಿಕ್ಷಣದ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ವಿದ್ಯಾರ್ಥಿಗಳ ಮನಸ್ಸು ತಮ್ಮ ಶಿಕ್ಷಣದಿಂದ ಸಂತೋಷವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಉನ್ನತ ಶಿಕ್ಷಣಕ್ಕಾಗಿನ ಯೋಗವನ್ನೂ ಮಾಡಲಾಗುತ್ತಿದೆ. ಈ ರಾಶಿಚಕ್ರದ ಜನರು ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.
ವಿಶೇಷ ವಿಷಯವೇನೆಂದರೆ, ಈ ಸಮಯದಲ್ಲಿ ನೀವು ಸ್ವಲ್ಪ ಎಚ್ಚರಿಕೆಯಿಂದಿರುವ ಅಗತ್ಯವಿದೆ. ಏಕೆಂದರೆ ಏಪ್ರಿಲ್ ತಿಂಗಳ ಅಂತ್ಯದ ಹಂತದಲ್ಲಿ ಶನಿ ದೇವ ತನ್ನ ಸ್ಥಾನವನ್ನು ಬದಲಾಯಿಸಲಿದ್ದಾರೆ. ಈ ಕಾರಣದಿಂದಾಗಿ ಶಿಕ್ಷಣದ ಕ್ಷೇತ್ರದಲ್ಲಿ ನೀವು ಸ್ವಲ್ಪ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಕರ್ಕ ರಾಶಿಚಕ್ರದ ಸ್ಥಳೀಯರು ಶಿಕ್ಷಣಕ್ಕಾಗಿ ಸ್ಥಳವನ್ನು ಬದಲಾಯಿಸುವ ಸಾಧ್ಯತೆಗಳೂ ಇವೆ. ಈ ಸ್ಥಳಾಂತರವು ಮಾನಸಿಕವಾಗಿ ನಿಮಗೆ ನೋವನ್ನುಂಟುಮಾಡುತ್ತದೆ. ಈ ಸಮಯದಲ್ಲಿ ನೀವು ಧೈರ್ಯದಿಂದಿರಿ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಮಾಡಿ.
ಆದಾಗ್ಯೂ, ಜೂನ್ ತಿಂಗಳ ಸಮಯದಲ್ಲಿ ಮಂಗಳ ದೇವ ಮೇಷ ರಾಶಿಗೆ ಸಾಗುತ್ತಾರೆ, ಇದು ನಿಮ್ಮ ರಾಶಿಚಕ್ರದ ಹತ್ತನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೂನ್ ರಿಂದ ಜೂಲೈ ತಿಂಗಳ ಸಮಯದಲ್ಲಿ ಅವರು ನಿಮ್ಮ ರಾಶಿಯಿಂದ ಸಾಮಾನ್ಯ ಶಿಕ್ಷಣದ ನಾಲ್ಕನೇ ಮನೆಯ ಮೇಲೆ ದೃಷ್ಟಿ ನೀಡುತ್ತಾರೆ. ಇದರ ಪರಿಣಾಮದಿಂದಾಗಿ ಈ ರಾಶಿಚಕ್ರದ ಶಿಕ್ಷಣದ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಉಂಟಾಗುವ ಸಾಧ್ಯತೆ ಇದೆ.
ವರ್ಷದ ಅಂತ್ಯದ ತಿಂಗಳುಗಳು ಅಂದರೆ ರಿಂದ ಡಿಸೆಂಬರ್ ವರೆಗಿನ ಸಮಯದಲ್ಲಿ ಶಿಕ್ಷಣದ ದೃಷ್ಟಿಕೋನದಿಂದ ನಿಮಗೆ ಹೆಚ್ಚು ಅನುಕೂಲಕರವಾಗಿರುವ ಸಾಧ್ಯತೆ ಇದೆ. ಈ ಸಮಯದಲ್ಲಿ ಸ್ಥಳೀಯರು ಉತ್ತಮ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ.
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022, ವೈವಾಹಿಕ ಜೀವನದಲ್ಲಿ ಸಾಮಾನ್ಯ ಫಲಿತಾಂಶಗಳನ್ನು ನೀಡಲಿದೆ. ವರ್ಷದ ಆರಂಭದಲ್ಲಿ ನಿಮ್ಮ ಸಂಬಂಧಗಳಲ್ಲಿ ಏರಿಳಿತದ ಸಾಧ್ಯತೆಗಳಿವೆ. ಏಪ್ರಿಲ್ ವರೆಗೆ ಶನಿ ದೇವ ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿ ಕುಳಿತಿರುತ್ತಾರೆ. ಈ ಕಾರಣದಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಪರಸ್ಪರ ಸಂಬಂಧಗಳಲ್ಲಿ ಕಠೋರತೆ ಉಂಟಾಗುತ್ತದೆ ಮತ್ತು ಸಂಘರ್ಷದ ಸಾಧ್ಯತೆ ಇರುತ್ತದೆ. ಈ ಕಾರಣದಿಂದಾಗಿ ಮಾನಸಿಕ ಒತ್ತಡ ಉಳಿದಿರಬಹುದು.
17 ಏಪ್ರಿಲ್ ನಂತರ ಗುರುವು ತನ್ನದೇ ಲಗ್ನದ ಮನೆ ಅಂದರೆ ಪ್ರೀತಿಯ ಮನೆಯ ಮೇಲೆ ವಿಶೇಷ ಅನುಗ್ರಹದ ಕಾರಣದಿಂದಾಗಿ ವೈವಾಹಿಕ ಜೀವನದಲ್ಲಿ ಶಾಂತಿ ಉಂಟಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯಿಂದ ಸಂಪೂರ್ಣ ಪ್ರೀತಿಯನ್ನು ಪಡೆಯುವ ಸಾಧ್ಯತೆ ಇದೆ. ನೀವಿಬ್ಬರೂ ಒಂದೇ ಸ್ಥಳದಲ್ಲಿ ಕುಳಿತು ವಿವಾದಗಳನ್ನು ಬಗೆಹರಿಸಿಕೊಳ್ಳಬಹುದು. ಪರಸ್ಪರ ಅರ್ಥಮಾಡಿಕೊಳ್ಳುವಲ್ಲಿ ನಿಮಗೆ ಸಹಾಯ ಸಿಗಬಹುದು. ಈ ಕಾರಣದಿಂದಾಗಿ ಸಂಬಂಧದಲ್ಲಿ ಸಿಹಿ ಉಂಟಾಗುತ್ತದೆ. ದಾಂಪತ್ಯ ಜೀವನದಲ್ಲಿ ಪ್ರಣಯ ಹೆಚ್ಚಾಗುತ್ತದೆ. ಹಳೆಯ ನೆನಪುಗಳು ತಾಜಾವಾಗಿರುತ್ತವೆ.
ಜೂನ್ ತಿಂಗಳಲ್ಲಿ ಮೇಷ ರಾಶಿಯಲ್ಲಿ, ನಿಮ್ಮ ರಾಶಿಚಕ್ರದ ಐದನೇ ಮನೆ ಅಂದರೆ ಪ್ರೀತಿಯ ಮನೆಯ ಅಧಿಪತಿ ಮಂಗಳ ಗ್ರಹವು ಗೋಚರಿಸುತ್ತದೆ. ಇದರ ಪರಿಣಾಮಾಗಿ, ನಿಮ್ಮ ಮತ್ತು ಜೀವನ ಸಂಗಾತಿಯ ನಡುವೆ ನಡೆಯುತ್ತಿದ್ದ, ಎಲ್ಲಾ ರೀತಿಯ ತಪ್ಪು ಗ್ರಹಿಕೆಗಳನ್ನು ಪರಿಹರಿಸುವ ಸಾಧ್ಯತೆ ಉಂಟಾಗುತ್ತದೆ. ನವೆಂಬರ್ ತಿಂಗಳ ನಂತರ ವರ್ಷದ ಅಂತ್ಯದ ವರೆಗಿನ ಸಮಯದಲ್ಲಿ ದಾಂಪತ್ಯ ಜೀವನದ ದೃಷ್ಟಿಕೋನದಿಂದ ಉತ್ತಮವಾಗಿರಬಹುದು. ಈ ಸಮಯದಲ್ಲಿ ನೀವು ಇಬ್ಬರೂ ಉತ್ತಮ ಉತ್ತಮ ಗುಣಮಟ್ಟದ ಸಮಯವನ್ನು ಕಳೆಯಬಹುದು. ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯಬಹುದು ಮತ್ತು ನಿಮ್ಮಿಬ್ಬರ ನಿಕಟತೆ ಹೆಚ್ಚಾಗುತ್ತದೆ.
ನಿಮ್ಮ ಜಾತಕದಲ್ಲಿ ಶುಭ ಯೋಗವಿದೆಯೇ ? ತಿಳಿಯಲು ಈಗಲೇ ಖರೀದಿಸಿ ಬೃಹತ್ ಕುಂಡಲಿ
ಕರ್ಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ನಿಮ್ಮ ಪ್ರೀತಿಯ ಜೀವನದ ದೃಷ್ಟಿಕೋನದಿಂದ ಅನುಕೂಲಕರವಾಗಿರಲಿದೆ. ವರ್ಷದ ಆರಂಭದಲ್ಲಿ ಅಂದರೆ 16 ಜನವರಿ ರಂದು ಮಂಗಳ ಗ್ರಹವು ಧನು ರಾಶಿಯಲ್ಲಿ ಬದಲಾಗಿದೆ. ಕರ್ಕ ರಾಶಿಚಕ್ರದ ಜನರಿಗೆ ಪ್ರೀತಿಯ ವಿಷಯದಲ್ಲಿ ಇದು ಶುಭ ಫಲಿತಾಂಶಗಳನ್ನು ನೀಡಲಿದೆ. ಈ ಸಮಯದಲ್ಲಿ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುವ ಸಾಧ್ಯತೆ ಇದೆ. ನೀವು ಒಬ್ಬರಿಗೊಬ್ಬರು ಹೆಚ್ಚು ಕಾಳಜಿ ವಹಿಸುತ್ತೀರಿ ಮತ್ತು ಪರಸ್ಪರರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು.
ಈ ವರ್ಷ ಮಧ್ಯ ಏಪ್ರಿಲ್ ತಿಂಗಳ ಸಮಯದಲ್ಲಿ ಗುರು ಗ್ರಹವು ತನ್ನ ಸಂಚಾರದ ಮೂಲಕ ನಿಮ್ಮ ರಾಶಿಯ ಅದೃಷ್ಟದ ಮನೆ ಅಂದರೆ ಒಂಬತ್ತನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಈ ಸಮಯದಲ್ಲಿ ನಿಮ್ಮ ಪ್ರೀತಿಯ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಇದು ಹೊಸ ಪಾಲುದಾರರನ್ನು ಹುಡುಕುತ್ತಿರುವ ಜನರ ಹುಡುಕಾಟವನ್ನು ಕೊನೆಗೊಳಿಸಬಹುದು. ಅಂದರೆ ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಹೊಸ ಸಂಗಾತಿ ಬರಬಹುದು. ಈ ಸಮಯದ ಪ್ರಕಾರ, ಪ್ರೇಮಿಯೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ. ಏಪ್ರಿಲ್ ತಿಂಗಳಲ್ಲಿ ರಾಹುವು ಸಹ ಸ್ಥಾನವನ್ನು ಬದಲಾಸುತ್ತಾರೆ. ರಾಹುವಿನ ಈ ಸಂಚಾರವು ನಿಮ್ಮ ಪ್ರೀತಿಯ ಸಂಬಂಧದಲ್ಲಿ ಇನ್ನಷ್ಟು ಮಾಧುರ್ಯವನ್ನು ತರುತ್ತದೆ. ಪ್ರೀತಿಯ ಜೀವನದಲ್ಲಿನ ನಡೆಯುತ್ತಿದ್ದ ಹಳೆಯ ಸಮಸ್ಯೆಗಳನ್ನು ಸಹ ಈ ಸಮಯದಲ್ಲಿ ತೊಡೆದುಹಾಕಲು ಸಾಧ್ಯವಾಗುತ್ತದೆ. ನಿಮ್ಮ ಪ್ರೀತಿಪಾತ್ರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೀವು ಸಹಾಯ ಪಡೆಯಬಹುದು. ಪ್ರೀತಿಯ ಸಂಬಂಧದ ಬಗ್ಗೆ ನೀವು ಹೆಚ್ಚು ಗಂಭೀರವಾಗಿ ಕಾಣಬಹುದು.
ಸೆಪ್ಟೆಂಬರ್ ನಿಂದ ವರ್ಷದ ಅಂತ್ಯದ ವರೆಗಿನ ಸಮಯವು ನಿಮ್ಮ ಪ್ರೀತಿಯ ಸಂಬಂಧಕ್ಕೆ ಒಂದು ಹೊಸ ತಿರುವನ್ನು ನೀಡುವ ಸಮಯವೆಂದು ಸಾಬೀತುಪಡಿಸಬಹುದು. ಏಕೆಂದರೆ ನಿಮ್ಮ ರಾಶಿಚಕ್ರದ ಹನ್ನೊಂದನೇ ಮನೆಯ ಅಧಿಪತಿ ಮಂಗಳ, ಈ ಅವಧಿಯಲ್ಲಿ ತನ್ನದೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಈ ಸಮಯದಲ್ಲಿ ನೀವು ಪ್ರೀತಿಯ ಮದುವೆಯಾಗಲು ಸಹ ನಿರ್ಧರಿಸಬಹುದು.
ನಿಮ್ಮ ಜಾತಕದ ಆಧಾರದ ಮೇಲೆ ನಿಖರವಾದ ಶನಿ ರಿಪೋರ್ಟ್ ಅನ್ನು ಪಡೆಯಿರಿ
ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ನಮ್ಮ ಈ ಲೇಖನವು ನಿಮಗೆ ಬಹಳ ಸಹಾಯ ಮಾಡಿದೆ ಎಂದು ನಾವು ಭಾವಿಸುತ್ತೇವೆ. ಹಾಗಿದ್ದಲ್ಲಿ, ಅದನ್ನು ನಿಮ್ಮ ಇತರ ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಧನ್ಯವಾದಗಳು!