Author: -- | Last Updated: Fri 27 Aug 2021 10:24:44 AM
ಹೊಸ ವರ್ಷದ ಆರಂಭದಲ್ಲಿ ಜನರ ಮನಸ್ಸಿನಲ್ಲಿ ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಸಾಕಷ್ಟು ಕುತೂಹಲವಿರುತ್ತದೆ. ಈ ಸಮಯದಲ್ಲಿ ವರ್ಷ 2022 ರ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಸವಾಲುಗಳ ಗಂಟು ರೂಪುಗೊಳ್ಳುತ್ತವೆ. ಮೇಷ ರಾಶಿಚಕ್ರದ ಸ್ಥಳೀಯರಿಗೂ ಅದೇ ಸ್ಥಿತಿ ಇರುತ್ತದೆ. ನಿಮ್ಮಲ್ಲಿ ಅನೇಕರ ಮನಸ್ಸಿನಲ್ಲಿ 2022 ರ ಸ್ಥಿತಿಯನ್ನು ನೋಡಿದರೆ, ಮೇಷ ರಾಶಿಚಕ್ರದ ಸ್ಥಳೀಯರಿಗೆ 2022 ವರ್ಷ ಹೇಗೆ ಇರುತ್ತದೆ ಎಂಬ ಪ್ರಶ್ನೆಯೂ ಇರಬಹುದು. ಮೇಷ ರಾಶಿಚಕ್ರದ ಸ್ಥಳೀಯರ ಆರೋಗ್ಯದ ದೃಷ್ಟಿಯಿಂದ ವರ್ಷ 2022 ಹೇಗಿರುತ್ತದೆ? ಅಂತೆಯೇ, ಮೇಷ ರಾಶಿಚಕ್ರದ ಜನರ ಪ್ರೀತಿಯ ಜೀವನವು 2022 ರಲ್ಲಿ ಹೇಗೆ ಇರಲಿದೆ? ಅಥವಾ ಮೇಷ ರಾಶಿಚಕ್ರದ ಸ್ಥಳೀಯರ ವಿವಾಹ ಜೀವನವು ಹೇಗಿರಲಿದೆ? ಅಂತಹ ಎಲ್ಲಾ ಪ್ರಶ್ನೆಗಳಿಗೆ ನೀವು ಈ ಲೇಖನದಲ್ಲಿ ಉತ್ತರಗಳನ್ನು ಕಾಣಬಹುದು.
ಮೇಷ ರಾಶಿಚಕ್ರದ ಸ್ಥಳೀಯರ 2022 ವರ್ಷ ಹೇಗಿರುತ್ತದೆ? ಈ ಪ್ರಶ್ನೆಯ ನೇರ ಉತ್ತರವೆಂದರೆ 2022 ವರ್ಷವೂ ಮೇಷ ರಾಶಿಚಕ್ರದ ಸ್ಥಳೀಯರಿಗೆ ಫಲಿತಾಂಶಗಳನ್ನು ಅಥವಾ ಅನುಭವಗಳನ್ನು ನೀಡುವ ಸಾಧ್ಯತೆ ಇದೆ. ವರ್ಷವಿಡೀ ಅರೋಗ್ಯ, ವೃತ್ತಿ ಮತ್ತು ವೈವಾಹಿಕ ಜೀವನದಲ್ಲಿ ಕ್ಷೇತ್ರದಲ್ಲಿ ಏರಿಳಿತಗಳ ಸ್ಥಿತಿ ಇರಬಹುದು.
ಮೇಷ ರಾಶಿಚಕ್ರಕ್ಕೆ ಸಂಬಂಧಿಸಿದ ಜನರು ಆರೋಗ್ಯದ ವಿಷಯದಲ್ಲಿ ಈ ವರ್ಷ ಜಾಗರೂಕರಾಗಿರಬೇಕು. ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗಬಹುದು. ಆರೋಗ್ಯದ ಹಣಕಾಸು ಖರ್ಚು ಮಾಡಬೇಕಾಗಬಹುದು. ಈ ಕಾರಣದಿಂದಾಗಿ ಮಾನಸಿಕ ಒತ್ತಡದ ಪರಿಸ್ಥಿತಿ ಕೂಡ ಉಂಟಾಗಬಹುದು.
ವರ್ಷ 2022 ರಲ್ಲಿ ಮೇಷ ರಾಶಿಚಕ್ರದ ಸ್ಥಳೀಯರ ಪ್ರೀತಿಯ ಜೀವನದ ಬಗ್ಗೆ ಮಾತನಾಡಿದರೆ, ವರ್ಷದ ಆರಂಭದ ಕೆಲವು ದಿನಗಳು ತೊಂದರೆಗೊಳಗಾಗಬಹುದು. ಜೀವನ ಸಂಗಾತಿ ಅಥವಾ ಪ್ರೀತಿಪಾತ್ರರೊಂದಿಗಿನ ಸಂಬಂಧದಲ್ಲಿ ಉದ್ವಿಗ್ನತೆ ಉಳಿಯುವ ನೀರಿಕ್ಷೆಯಿದೆ ಮತ್ತು ಅನಗತ್ಯ ತಪ್ಪು ಗ್ರಹಿಕೆಗಳು ಉದ್ಭವಿಸುತ್ತವೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದ ಮನೆಯಲ್ಲಿ ದುರುದ್ವೇಷಪೂರಿತ ಗ್ರಹ ನೆಲೆಗೊಂಡಿರುತ್ತದೆ. ಆದಾಗ್ಯೂ, ವರ್ಷ 2022 ರ ಅಂತ್ಯದ ವೇಳೆಗೆ, ನಿಮ್ಮ ಪ್ರೀತಿಯ ಜೀವನವು ಸುಧಾರಿಸುವುದನ್ನು ಕಾಣಲಾಗುತ್ತದೆ. ಅಂತ್ಯದ ಕೆಲವು ತಿಂಗಳುಗಳಲ್ಲಿ ಪ್ರೇಮಿ ಜೋಡಿಗಳು ತಮ್ಮ ಸಂಬಂಧವನ್ನು ಬಲಗೊಳ್ಳುವುದನ್ನು ಕಾಣುತ್ತಾರೆ ಮತ್ತು ಮನೆಯ ಸದಸ್ಯರ ಬೆಂಬಲವನ್ನು ಸಹ ಪಡೆಯಬಹುದು.
ವರ್ಷ 2022 ರಲ್ಲಿ , ಮೇಷ ರಾಶಿಚಕ್ರದ ಸ್ಥಳೀಯರು ವೃತ್ತಿಪರ ಕ್ಷೇತ್ರದಲ್ಲಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ವರ್ಷ ನಿಮ್ಮ ವೃತ್ತಿ ಜೀವನದಲ್ಲಿ ಏರಿಳಿತಗಳನ್ನು ಹೊಂದಿರುವ ಸಂಪೂರ್ಣ ಸಾಧ್ಯತೆ ಇದೆ. ಈ ಕಾರಣದಿಂದಾಗಿ ನೀವು ಮಾನಸಿಕವಾಗಿ ತೊಂದರೆಗೆ ಒಳಗಾಗಬಹುದು. ವಿಶೇಷವಾಗಿ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಹೆಚ್ಚು ಸಮಸ್ಯೆಗಳನ್ನು ಅನುಭವಿಸಬಹುದು. ಏಕೆಂದರೆ ವರ್ಷದ ಆರಂಭದಲ್ಲಿ ಎರಡು ಶತ್ರು ಗ್ರಹಗಳು ಶನಿ ಮತ್ತು ಸೂರ್ಯ, ನಿಮ್ಮ ವೃತ್ತಿ ಜೀವನದ ಹತ್ತನೇ ಮನೆಯಲ್ಲಿ ಸಂಯೋಜನೆ ಮಾಡುತ್ತಾರೆ. ಆದಾಗ್ಯೂ, ಏಪ್ರಿಲ್ ಮಧ್ಯದಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತದೆ. 13 ಏಪ್ರಿಲ್ ನಂತ್ರ ಗುರುವಿನ ಸಂಚಾರದ ಕಾರಣದಿಂದಾಗಿ ವಿದೇಶ ವ್ಯಾಪಾರದಲ್ಲಿ ತೊಡಗಿರುವ ಜನರು ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ಉದ್ಯೋಗ ಬದಲಾವಣೆಯ ಸಾಧ್ಯತೆಗಳು ಉಂಟಾಗುತ್ತಿವೆ. ಏಪ್ರಿಲ್ ಮಧ್ಯದಲ್ಲಿ ಗುರು ಗ್ರಹವು ಮೀನಾ ರಾಶಿಯಲ್ಲಿ ಸಾಗಿದ ತಕ್ಷಣ ಮೇಷ ರಾಶಿಚಕ್ರದ ಸ್ಥಳೀಯರು ದೀರ್ಘಕಾಲದ ವರೆಗೆ ಸ್ಥಗಿತಗೊಂಡಿರುವ ಕೃತಿಗಳಲ್ಲಿ ಪ್ರಗತಿಯನ್ನು ಕಾಣಬಹುದು. ಆದಾಗ್ಯೂ, ಈ ವರ್ಷವಿಡೀ ವೃತ್ತಿ ಜೀವನದ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಈ ವರ್ಷ ಹೆಚ್ಚು ಕಠಿಣ ಪರಿಶ್ರಮದಲ್ಲಿ ಕಡಿಮೆ ಫಲಿತಾಂಶಗಳನ್ನು ಪಡೆಯುವ ದೂರು ಮೇಷ ರಾಶಿಚಕ್ರದ ಸ್ಥಳೀಯರೊಳಗೆ ಉಳಿಯಬಹುದು. ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸುತ್ತಿರುವ ವಿದ್ಯಾರ್ಥಿಗಳು ಅಥವಾ ಪ್ರಸ್ತುತ ಸಮಯದಲ್ಲಿ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಗುರುವಿನ ಈ ಸಂಚಾರದ ಲಾಭವನ್ನು ಪಡೆಯುತ್ತಾರೆ.
ಆದಾಗ್ಯೂ, ವೃತ್ತಿ ಜೀವನದ ದೃಷ್ಟಿಯಿಂದ, ಮೇಷ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ಉತ್ತಮ ಫಲಿತಾಂಶಗಳನ್ನು ನೀಡಲಿದೆ, ಆದರೆ ಆರ್ಥಿಕವಾಗಿ ಈ ವರ್ಷ ಅವರ ಪರಿಸ್ಥಿತಿಯು ಹೆಚ್ಚು ವ್ಯತ್ಯಾಸವನ್ನು ತೋರುತ್ತಿಲ್ಲ. ನಿಮ್ಮ ರಾಶಿಚಕ್ರದ ವ್ಯವಹಾರದ ಮನೆಯಲ್ಲಿ ಕರ್ಮದ ಫಲವನ್ನು ನೀಡುವ ಶನಿ ದೇವರು ಕುಳಿತುಕೊಂಡಿರುವುದನ್ನು ಕಾಣಲಾಗುತ್ತಿದೆ. ಪೂರ್ವಜರ ಆಸ್ತಿಯ ಮೂಲಕ ಈ ವರ್ಷವು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತಾಗಬಹುದು. ವಿದೇಶಿ ಹಣದ ಆಗಮನಕ್ಕಾಗಿ ಯೋಗಗಳನ್ನು ಸಹ ಮಾಡಲಾಗುತ್ತಿದೆ.
ವರ್ಷ 2022 ರಲ್ಲಿ ಮೇಷ ರಾಶಿಚಕ್ರದ ಜನರ ವೈವಾಹಿಕ ಜೀವನವು ಸಾಮಾನ್ಯವಾಗಿರುವ ಸಾಧ್ಯತೆ ಇದೆ. ಸ್ಪಷ್ಟವಾಗಿ ಹೇಳಿದರೆ, ನೀವು ಎಚ್ಚರಿಕೆ ವಹಿಸಬೇಕೆಂದು ಗ್ರಹಗಳು ಹೇಳುತ್ತಿವೆ. ಸಣ್ಣ ಪುಟ್ಟ ವಿಷಯಗಳು ಸಹ ಅವ್ಯವಸ್ಥೆಯಾಗಬಹುದು. ವಿಶೇಷವಾಗಿ ಏಪ್ರಿಲ್ ಮಧ್ಯದ ನಂತರ ಕೇತುವು ವಿವಾಹದ ಮನೆಗೆ ಗೋಚರಿಸುತ್ತಾರೆ. ಈ ಕಾರಣದಿಂದಾಗಿ ಜೀವನ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳ ಪರಿಸ್ಥಿತಿ ಉದ್ಭವಿಸಬಹುದು. ಆದ್ದರಿಂದ ಮೇಷ ರಾಶಿಚಕ್ರದ ಜನರು ಈ ವರ್ಷ ತಮ್ಮ ಜೀವನ ಸಂಗಾತಿಯ ಮಾತುಗಳನ್ನು ಕೇಳಬೇಕು, ಅರ್ಥಮಾಡಿಕೊಳ್ಳಬೇಕು ಮತ್ತು ವಿವಾದವನ್ನು ತಾಳ್ಮೆಯಿಂದ ಪರಿಹರಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವರ್ಷ 2022 ರಲ್ಲಿ, ಮೇಷ ರಾಶಿಚಕ್ರದ ಸ್ಥಳೀಯರ ಆರ್ಥಿಕ ಜೀವನವು ಹೇಗಿರಲಿ ಎಂದು ಯಾರಾದರೂ ಕೇಳಿದರೆ, ಅದರ ನೇರವಾದ ಉತ್ತರ ಉತ್ತಮ ಮತ್ತು ಅದ್ಭುತ. ಆರ್ಥಿಕ ದೃಷ್ಟಿಕೋನದಿಂದ, ಮೇಷ ರಾಶಿಚಕ್ರದ ಸ್ಥಳೀಯರ ಈ ವರ್ಷದ ಆರಂಭವು ಉತ್ತಮವಾಗಿರುತ್ತದೆ. ಜನವರಿ ತಿಂಗಳಲ್ಲಿ ಮೇಷ ರಾಶಿಚಕ್ರದ ಜನರು ಉತ್ತಮ ಲಾಭವನ್ನು ಪಡೆಯಬಹುದು. ಈ ತಿಂಗಳಲ್ಲಿ ನೀವು ಆರ್ಥಿಕ ಜೀವನದಲ್ಲಿ ಅನೇಕ ಉತ್ತಮ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಅಥವಾ ಈ ಸಮಯದಲ್ಲಿ ಯಾವುದೇ ರೀತಿಯ ಆರ್ಥಿಕ ಲಾಭವನ್ನು ಸಹ ಪಡೆಯಬಹುದು.
ಈ ಸಮಯದಲ್ಲಿ, ಮನೆಯ ವೆಚ್ಚಗಳು ಅಥವಾ ಅಗತ್ಯಗಳನ್ನು ಪೂರೈಸಲು ವಿದೇಶದಿಂದ ಹಣಕಾಸಿನ ಆಗಮನವು ಕಂಡುಬರುತ್ತಿದೆ. ಏಕೆಂದರೆ ನಿಮ್ಮ ವೆಚ್ಚ ಮತ್ತು ವಿದೇಶದ ಹನ್ನೆರಡನೇ ಮನೆಯ ಅಧಿಪತಿ ಗುರುವು ನಿಮ್ಮ ಆದಾಯದ ಮನೆಯಲ್ಲಿ ನೆಲೆಗೊಂಡಿರುತ್ತಾರೆ. ಆದರೆ ಆರಂಭದ ಮೂರು ತಿಂಗಳುಗಳಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಎಂದು ನಿರೀಕ್ಷಿಸಲಾಗಿದೆ. ಈ ಕಾರಣದಿಂದಾಗಿ ಆರ್ಥಿಕ ಪರಿಸ್ಥಿತಿ ಮಿಶ್ರವಾಗಿ ಉಳಿಯಬಹುದು. .
ಏಪ್ರಿಲ್ ನಂತರ ಜೀವನದ ಆರ್ಥಿಕ ಪರಿಸ್ಥಿತಿಯು ಅದೃಷ್ಟದ ಬೆಂಬಲವನ್ನು ಪಡೆಯುತ್ತದೆ. ಮೇ ತಿಂಗಳು ನಿಮಗೆ ಆಹ್ಲಾದಕರ ಆಶ್ಚರ್ಯದ ತಿಂಗಳು ಎಂದು ಸಾಬೀತುಪಡಿಸಬಹುದು. ಏಕೆಂದರೆ ನಿಮ್ಮ ಆದಾಯದ ಮನೆಯ ಅಧಿಪತಿ ಶನಿ ದೇವ ತನ್ನದೇ ಮನೆಯಲ್ಲಿ ಇರುತ್ತಾರೆ. ಈ ಸಮಯದಲ್ಲಿ ಅಂದರೆ ಮೇ ತಿಂಗಳ ಮಧ್ಯದಿಂದ ಜೂನ್ ಮಧ್ಯದ ನಡುವೆ ಇದ್ದಕ್ಕಿದ್ದಂತೆ ನಿಮಗೆ ಯಾವುದೇ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಏಪ್ರಿಲ್ ತಿಂಗಳ ನಂತರ ಗುರುವಿನ ಸಂಚಾರದಿಂದ ಮನೆಯಲ್ಲಿ ಯಾವುದೇ ರೀತಿಯ ಮಂಗಲಿಕ ಅಥವಾ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಬಹುದು.
ಈ ವರ್ಷ ನಿಮಗೆ ಆರ್ಥಿಕವಾಗಿ ಶುಭ ಫಲಿತಾಂಶಗಳನ್ನು ನೀಡುವುದನ್ನು ಕಾಣಲಾಗುತ್ತಿದೆ, ಅಂದರೆ ವರ್ಷದ ಅಂತ್ಯದಲ್ಲಿ ಆರ್ಥಿಕವಾಗಿ ನೀವು ನಿಮ್ಮನ್ನು ಬಲವಾಗಿ ಪಡೆಯುವಿರಿ. ಪೋಷಕರ ಕಡೆಯಿಂದಲೂ ನಿಮಗೆ ಒಳ್ಳೆಯ ಸುದ್ಧಿ ಬರಬಹುದು. ಈ ವರ್ಷ ಪೂರ್ವಜರ ಆಸ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಅದು ನಿಮಗೆ ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ.
ಮೇಷ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022 ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಮಿಶ್ರವಾಗಿರಲಿದೆ. ಶನಿ ಗ್ರಹವು ಬುಧನೊಂದಿಗೆ ಸಂಯೋಜನೆ ಮಾಡುವುದು ಮತ್ತು ನಿಮ್ಮ ಐದನೇ ಮನೆಯ ಮೇಲೆ ದೃಷ್ಟಿ ಹಾಕುವುದು, ನಿಮಗೆ ದೈಹಿಕ ನೋವನ್ನುಂಟು ಮಾಡುತ್ತದೆ. ಇದರಿಂದಾಗಿ ಸಣ್ಣ-ಪುಟ್ಟ ದೈಹಿಕ ಸಮಸ್ಯೆಗಳು ಮತ್ತು ಜೀರ್ಣಾಂಗ ವ್ಯಸ್ಥೆಗೆ ಸಂಬಂಧಿಸಿದ ಕೆಲವು ರೋಗಗಳು ಉದ್ಭವಿಸಬಹುದು. ಇದರೊಂದಿಗೆ ಮೇ ತಿಂಗಳ ಮಧ್ಯದಿಂದ ಆಗಸ್ಟ್ ವರೆಗೆ ನಿಮಗೆ ಹೊಟ್ಟೆಯ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಈ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ರೋಗವನ್ನು ನಿರ್ಕಲಕ್ಷಿಸಬೇಡಿ. ಈ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯು ನಿಮ್ಮನ್ನು ತೊಂದರೆಗೊಳಿಸದರೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ. ಆಹಾರ ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಸಾಧ್ಯವಾದಷ್ಟು ಪೌಷ್ಟಿಕ ಆಹಾರವನ್ನು ಸೇವಿಸಲು ಪ್ರಯತ್ನಿಸಿ ಮತ್ತು ಯೋಗ ಮತ್ತು ಧ್ಯಾನವನ್ನು ಆಶ್ರಯಿಸಿದರೆ ನಿಮಗೆ ಉತ್ತಮವಾಗಿರುತ್ತದೆ.
ಮೇಷ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ತಂದೆಯ ಆರಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಎಂದು ಸಾಬೀತುಪಡಿಸಬಹುದು. ತಂದೆಯ ಅರೋಗ್ಯ ಸುಧಾರಿಸುವ ನಿರೀಕ್ಷೆಯಿದೆ. ಈ ಸಮಯದಲ್ಲಿ ನೀವು ನಿಮ್ಮನ್ನು ಮೊದಲಿಗಿಂತ ಹೆಚ್ಚು ಆರೋಗ್ಯವಾಗಿ ಅನುಭವಿಸುವಿರಿ ಮತ್ತು ನಿಮ್ಮ ಆರೋಗ್ಯವು ಉತ್ತಮವಾಗಿ ಉಳಿದಿರುತ್ತದೆ.
ವರ್ಷ 2022, ವೃತ್ತಿ ಜೀವನದ ದೃಷ್ಟಿಯಿಂದ ಹೆಚ್ಚಿನ ಜನರಿಗೆ ವಿಶೇಷವಲ್ಲ. ಅಂತಹ ಪರಿಸ್ಥಿತಿಯಲ್ಲಿ ಮೇಷ ರೇಶ್ಚಕ್ರದ ಸ್ಥಳೀಯರ ಮನಸ್ಸಿನಲ್ಲಿ ಖಂಡಿತವಾಗಿಯೂ ಒಂದು ಕಾಳಜಿ ಇರುತ್ತದೆ, ವರ್ಷ 2022 ರಲ್ಲಿ ಮೇಷ ರಾಶಿಚಕ್ರದ ಸ್ಥಳೀಯರ ವೃತ್ತಿ ಜೀವನವು ಹೇಗಿರುತ್ತದೆ? ಅಂತಹ ಪರಿಸ್ಥಿತಿಯಲ್ಲಿ ವರ್ಷ 2022, ಮೇಷ ರಾಶಿಚಕ್ರದ ಸ್ಥಳೀಯರಿಗೆ ವೃತ್ತಿ ಜೀವನದ ದೃಷ್ಟಿಕೋನದಿಂದ ಮಿಶ್ರ ಫಲಿತಾಂಶಗಳನ್ನು ನೀಡಲಿದೆ.
ವೃತ್ತಿ ಜೀವನದಲ್ಲಿ ಕೆಲವು ಏರಿಳಿತಗಳೊಂದಿಗೆ ವರ್ಷವು ಪ್ರಾರಂಭವಾಗುವ ನಿರೀಕ್ಷೆಯಿದೆ. ಏಕೆಂದರೆ ನಿಮ್ಮ ರಾಶಿಚಕ್ರದ ಹತ್ತನೇ ಮನೆಯಲ್ಲಿ ಎರಡು ಪಾಪ ಗ್ರಹಗಳ (ಶನಿ ಮತ್ತು ಸೂರ್ಯ ) ಸಂಯೋಜನೆಯಾಗುತ್ತದೆ. ಈ ವರ್ಷವಿಡೀ ಶನಿ ದೇವ ಹೆಚ್ಚಿನ ಸಮಯ ನಿಮ್ಮ ಹತ್ತನೇ ಮನೆಯಲ್ಲಿ ಕುಳಿತುಕೊಳ್ಳಲಿದ್ದಾರೆ. ಹತ್ತನೇ ಮನೆಯನ್ನು ಕರ್ಮದ ಮನೆಯೆಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಈ ವರ್ಷವಿಡೀ ವೃತ್ತಿ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಶನಿ ದೇವರ ಈ ಸ್ಥಾನದಿಂದಾಗಿ, ನಿಮ್ಮ ವೃತ್ತಿ ಜೀವನದ ಕ್ಷೇತ್ರದಲ್ಲಿ ವರ್ಷವಿಡೀ ಹೆಚ್ಚು ಕಠಿಣ ಪರಿಶ್ರಮದ ಕಡಿಮೆ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇರುತ್ತದೆ. ಈ ಪರಿಶ್ರಮವು ಮೇಷ ರಾಶಿಚಕ್ರದ ಸ್ಥಳೀಯರಿಗೆ ಮಾನಸಿಕ ಒತ್ತಡವನ್ನ್ನು ಉಂಟುಮಾಡುತ್ತದೆ. ಈ ಸಮಯದಲ್ಲಿ ಜೀವನದಲ್ಲಿ ಸೋಮಾರಿತನದ ಸಾಧ್ಯತೆ ಇದೆ. ಈ ಕಾರಣದಿಂದಾಗಿ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳು ನಿಮ್ಮೊಂದಿಗೆ ಕೋಪಾಗೊಳ್ಳಬಹುದು. ಒಂದು ಚಿಕ್ಕ ಕೆಲಸದಲ್ಲೂ ಅಡೆತಡೆಗಳು ಮತ್ತು ಬಿಕ್ಕಟ್ಟುಗಳು ಉಂಟಾಗಬಹುದು. ಈ ವರ್ಷ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಸಾಕಷ್ಟು ಆಲೋಚಿಸಿ ಎಂಬುದನ್ನು ನೆನಪಿನಲ್ಲಿಡಿ. ಹೊಸ ಕಾರ್ಯವನ್ನು ಪ್ರಾರಂಭಿಸುವ ಮೊದಲು ಒಂದು ಉತ್ತಮ ತಂತ್ರವನ್ನು ತಯಾರಿಸುವುದು ನಿಮಗೆ ಸಹಾಯಕರ ಎಂದು ಸಾಬೀತುಪಡಿಸುತ್ತದೆ.
ಆದಾಗ್ಯೂ, 10 ಸೆಪ್ಟೆಂಬರ್ ನಂತರ ಪರಿಸ್ಥಿತಿ ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ನಿಮ್ಮ ವೃತ್ತಿ ಜೀವನದ ಹತ್ತನೇ ಮನೆಯ ಮೇಲೆ ಎರಡು ಶುಭ ಗ್ರಹಗಳ (ಬುಧ ಮತ್ತು ಶುಕ್ರ ) ದೃಷ್ಟಿ ಇರುತ್ತದೆ. ಈ ಸಮಯದಲ್ಲಿ ನೀವು. ಸಣ್ಣ ಪ್ರಮಾಣದಲ್ಲಿ ಸರಿಯಾದ ಆದರೆ ಉತ್ತಮ ಯಶಸ್ಸನ್ನು ಪಡೆಯಬಹುದು.
ನಿಮ್ಮ ಕೆಲಸದಿಂದ, ಈ ಸಮಯದಲ್ಲಿ ನೀವು ಸಮಾಜದಲ್ಲಿ ಗೌರವವನ್ನು ಗಳಿಸಬಹುದು. ಉದ್ಯೋಗವನ್ನು ಹುಡುಕುತ್ತಿರುವ ಈ ರಾಶಿಚಕ್ರದ ಜನರು 17 ಮೇ ರಿಂದ ಆಗಸ್ಟ್ ಮಧ್ಯದ ವರೆಗೆ ಉತ್ತಮ ಸಮಯವಾಗಿರುತ್ತದೆ. ಈ ಸಮಯದಲ್ಲಿ ಹೊಸ ಉದ್ಯೋಗದ ಸಾಧ್ಯತೆ ಕಂಡುಬರುತ್ತಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಆದಾಯದ ಮನೆ ಸಕ್ರಿಯವಾಗುತ್ತದೆ. ವಿದೇಶದಲ್ಲಿ ವ್ಯಾಪಾರದಲ್ಲಿ ತೊಡಗಿರುವ ಜನರಿಗೂ ಸಮಯ ಉತ್ತಮವಾಗಿರಲಿದೆ.
ವೃತ್ತಿ ಜೀವನ ತೊಂದರೆಗೀಡಾಗಿದೆಯೇ! ಈಗಲೇ ಆದೇಶಿಸಿ ಕಾಗ್ನಿ ಆಸ್ಟ್ರೋ ರಿಪೋರ್ಟ್
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2021 ವರ್ಷದಲ್ಲಿಯೂ ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ಬದಲಾವಣೆಗಳಿಗೆ ಒಳಗಾಗುತ್ತಿರುವುದನ್ನು ನಾವು ನೋಡಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ ಮೇಷ ರಾಶಿಯ ಹೆಚ್ಚಿನ ವಿದ್ಯಾರ್ಥಿಗಳು ವರ್ಷ 2022 ರಲ್ಲಿ ಮೇಷ ರಾಶಿಚಕ್ರದ ಸ್ಥಳೀಯರಿಗೆ ಶಿಕ್ಷಣ ಹೇಗೆ ಇರಲಿದೆ? ಎಂಬ ಆತಂಕದಲ್ಲಿರುತ್ತಾರೆ.
ಜನವರಿ ತಿಂಗಳ ಮಧ್ಯದಲ್ಲಿ ಮಂಗಳ ದೇವ ಧನು ಪ್ರವೇಶಿಸುತ್ತಾರೆ, ಈ ಕಾರಣದಿಂದಾಗಿ ಈ ವರ್ಷದ ಆರಂಭದಲ್ಲಿ ನೀವು ಸ್ವಲ್ಪ ಹೆಚ್ಚು ಪರಿಶ್ರಮ ಮಾಡಬೇಕಾಗಬಹುದು. ಏಪ್ರಿಲ್ ನಂತರ ರಾಶಿಚಕ್ರದ ಪ್ರಕಾರ ಗುರು ಗ್ರಹವು ನಿಮ್ಮ ರಾಶಿಯ ಹನ್ನೆರಡನೇ ಮನೆಯಲ್ಲಿ ಕುಳಿತುಕೊಳ್ಳುವ ಮೂಲಕ ನಿಮ್ಮ ಹನ್ನೆರಡನೇ ಮನೆಯ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರುತ್ತಾರೆ ನಿಮ್ಮ ಸ್ಪರ್ಧೆಯ ಆರನೇ ಮನೆಗೆ ದೃಷ್ಟಿ ಹಾಕುತ್ತಾರೆ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಶಿಕ್ಷಣದ ಪರಿಸ್ಥಿತಿ ಸುಧಾರಿಸುತ್ತದೆ. ಈ ಸಮಾಯ್ದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಶಿಕ್ಷಣದ ಕ್ಷೇತ್ರದಲ್ಲಿ ಯಾವುದೇ ಶುಭ ಸುದ್ಧಿಯನ್ನು ಸಹ ನೀವು ಪಡೆಯಬಹುದು. ಈ ಸಮಯದಲ್ಲಿ ನೀವು ಯಾವುದೇ ಕಾಲೇಜ್ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸಿದರೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದರೆ, ಅದರಲ್ಲೂ ಯಶಸ್ಸು ಕೈಗೊಳ್ಳಬಹುದು.
ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುತ್ತಿರುವವರು ಮತ್ತು ಇದರ ಬಗ್ಗೆ ನಿರಂತರವಾಗಿ ಪ್ರಯತ್ನಿಸುತ್ತಿರುವವರು ಮೇ ಮಧ್ಯದಲ್ಲಿ ಈ ಕೆಲಸದಲ್ಲಿ ಯಶಸ್ಸು ಪಡೆಯಬಹುದು. ಏಕೆಂದರೆ ನಿಮ್ಮ ಲಗ್ನದ ಮನೆಯ ಅಧಿಪತಿ ಮಂಗಳ ದೇವ ಸಂಚಾರದ ಮೂಲಕ ಈ ಸಮಯದಲ್ಲಿ ನಿಮ್ಮ ರಾಶಿಯ ವಿದೇಶ ಭೂಮಿಯ ಹನ್ನೆರಡನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಸರ್ಕಾರಿ ಉದ್ಯೋಗದ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಏಪ್ರಿಲ್ ರಿಂದ ಸೆಪ್ಟೆಂಬರ್ ನಡುವಿನ ತಿಂಗಳು ಸಾಕಷ್ಟು ಉತ್ತಮ ಸಾಧ್ಯತೆಗಳಿವೆ. ಏಕೆಂದರೆ ಜ್ಞಾನ ಮತ್ತು ಸೌಂದರ್ಯದ ಅಧಿಪತಿ ಗುರು ಗ್ರಹವು ನಿಮ್ಮ ಸೇವೆಗಳ ಮನೆಗೆ ದೃಷ್ಟಿ ನೀಡುತ್ತಾರೆ. ಇದಲ್ಲದೆ ವರ್ಷ 2022 ರ ಸೆಪ್ಟೆಂಬರ್ ತಿಂಗಳ ಸಮಯದಲ್ಲಿ ಸೂರ್ಯ ದೇವ, ನಿಮ್ಮ ಸ್ಪರ್ಧೆಯ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಆದ್ದರಿಂದ ಈ ಸಮಯದಲ್ಲಿ ನೀವು ಯಶಸ್ಸು ಪಡೆಯುವ ನಿರೀಕ್ಷೆಯಿದೆ.
ಮೇಷ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷವು ವೈವಾಹಿಕ ಜೀವನದ ದೃಷ್ಟಿಕೋನದಿಂದ ಸಾಮಾನ್ಯ ಫಲಿತಾಂಶಗಳನ್ನು ನೀಡುವ ವರ್ಷ ಎಂದು ಸಾಬೀತಾಗಬಹುದು. ಈ ವರ್ಷ ದಾಂಪತ್ಯ ಸಂಬಂಧಗಳಲ್ಲಿ ಸ್ಥಳೀಯರು ಏರಿಳಿತಗಳನ್ನು ಕಾಣಬಹುದು. ಸಂಬಂಧಗಳ ನಡುವೆ ಸಣ್ಣ ಪುಟ್ಟ ವಿಷಯಗಳ ಮೇಲೂ ವಿವಾದವನ್ನು ಕಾಣಲಾಗುತ್ತದೆ. ಅಂದರೆ ಅರ್ಥಹೀನ ವಿಷಯಗಳ ಬಗ್ಗೆಯೂ ದೀರ್ಘ ಚರ್ಚೆ ನಡೆಯಬಹುದು. ವರ್ಷದ ಆರಂಭದ ನಾಲ್ಕು ತಿಂಗಳುಗಳಲ್ಲಿ ನಿಮ್ಮ ಒತ್ತಡದಲ್ಲಿ ಹೆಚ್ಚಳವಾಗುವ ಹೆಚ್ಚು ನಿರೀಕ್ಷೆಯಿದೆ. ಏಕೆಂದರೆ ನಿಮ್ಮ ಏಳನೇ ಮನೆಯಲ್ಲಿ ಕೇತು ಸಾಗುತ್ತಾನೆ. ಈ ಕಾರಣದಿಂದಾಗಿ ವಿಶೇಷವಾಗಿ ಜೀವನ ಸಂಗಾತಿಯೊಂದಿಗೆ ಅನಗತ್ಯ ವಿಷಯಗಳ ಬಗ್ಗೆ ವಾದ ಮಾಡದಂತೆ ನಿಮಗೆ ಸಲಹೆ ನೀಡಲಾಗಿದೆ.
ಮೇ ತಿಂಗಳಲ್ಲಿ ಶುಕ್ರ ಗ್ರಹವು ನಿಮ್ಮ ಸ್ವಂತ ಮೇಷ ರಾಶಿಯಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನವು ಸಂತೋಷವಾಗಿರುವ ನಿರೀಕ್ಷೆಯಿದೆ. ಆಗಸ್ಟ್ ತಿಂಗಳು ನಿಮ್ಮ ವೈವಾಹಿಕ ಜೀವನಕ್ಕೆ ಪ್ರತಿಯೊಂದು ವಿಷಯದಲ್ಲೂ ಒಳ್ಳೆಯದು. ಪರಸ್ಪರರತ್ತ ಆಕರ್ಷಣೆ ಕೂಡ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಎಲ್ಲಾದರೂ ಸುತ್ತಾಡಲು ಸಹ ಹೋಗಬಹುದು. ಏಕೆಂದರೆ ಈ ಸಮಯದಲ್ಲಿ ಶನಿ ದೇವ ನಿಮ್ಮ ಮದುವೆಯ ಮನೆಯ ಮೇಲೆ ಸಂಪೂರ್ಣ ದೃಷ್ಟಿ ನೀಡುತ್ತಾರೆ ಮತ್ತು ನಿಮ್ಮ ಸಂಬಂಧದಲ್ಲಿ ಸ್ಥಿರತೆ ತರಲು ಪ್ರಯತ್ನಿಸುತ್ತಾರೆ. ಹಳೆಯ ನೆನಪುಗಳು ತಾಜಾವಾಗುತ್ತವೆ. 09 ಸೆಪ್ಟೆಂಬರ್ ನಂತರ ನಿಮ್ಮ ಸಂಗಾತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪ್ರತಿ ವಿವಾದವನ್ನು ಬಗೆಹರಿಸಲು ಪ್ರಯತ್ನಿಸಿ. ಸಣ್ಣ ವಿಷಯವನ್ನು ನಿರ್ಲಕ್ಷಿಸದಿರಲು ಪ್ರಯತ್ನಿಸಿ ಇಲ್ಲದಿದ್ದರೆ, ಇದು ಜಗಳಕ್ಕೆ ಕಾರಣವಾಗಬಹುದು. ಏಕೆಂದರೆ ನಿಮ್ಮ ವಿವಾಹದ ಮನೆಯ ಮೇಲೆ ಅನೇಕ ಗ್ರಹಗಳ ಪ್ರಭಾವವಿರುತ್ತದೆ. ಇದರಿಂದಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ.
ನಿಮ್ಮ ಜಾತಕದಲ್ಲಿ ಶುಭ ಯೋಗವಿದೆಯೇ ? ತಿಳಿಯಲು ಈಗಲೇ ಖರೀದಿಸಿ ಬೃಹತ್ ಕುಂಡಲಿ
ವರ್ಷ 2022 ಮೇಷ ರಾಶಿ ಭವಿಷ್ಯದ ಪ್ರಕಾರ, ಮೇಷ ರಾಶಿಚಕ್ರದ ಸ್ಥಳೀಯರ ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯ ಸಾಮಾನ್ಯವಾಗಿರಲಿದೆ. ವರ್ಷ ಆರಂಭವು ತುಂಬಾ ಉತ್ತಮವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ, ಏಕೆಂದರೆ ನಿಮ್ಮ ಲಗ್ನದ ಮನೆಯ ಅಧಿಪತಿ ಮಂಗಳ ನಿಮ್ಮ ಅನಿಶ್ಚಿತತೆಗಳ ಎಂಟನೇ ಮನೆಗೆ ಗೋಚರಿಸುತ್ತದೆ. ಇದರಿಂದಾಗಿ ಕೆಲವು ತಪ್ಪು ಗ್ರಹಿಕೆಗಳು ಜನಿಸಬಹುದು. ಕೇತು ವೃಶ್ಚಿಕ ರಾಶಿಯಲ್ಲಿರುವ ಕಾರಣದಿಂದಾಗಿ ಕೆಳಗಿನ ಫಲಿತಾಂಶಗಳನ್ನು ಪಡೆಯಬಹುದು. ಆದ್ದರಿಂದ ವರ್ಷದ ಆರಂಭದಲ್ಲಿ ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ ಮೇ ರಿಂದ ಜೂನ್ ವರೆಗಿನ ಸಮಯದಲ್ಲಿ ಕುಟುಂಬದ ದೃಷ್ಟಿಕೋನದಿಂದ ಅನುಕೂಲಕರವಾಗಿರುವ ಸಾಧ್ಯತೆ ಇದೆ. ಏಕೆಂದರೆ ಗುರು ಕುಟುಂಬದ ನಾಲ್ಕನೇ ಮನೆಗೆ ದೃಷ್ಟಿ ನೀಡುತ್ತಾರೆ. ಈ ಸಮಯದಲ್ಲಿ ಮನೆಯಲ್ಲಿ ಶಾಂತಿಯ ವಾತಾವರಣ ಉಳಿದಿರಬಹುದು. 10 ಆಗಸ್ಟ್ ವರೆಗೆ ಆಕ್ರಮಣಕಾರಿ ಮಂಗಳನ ದೃಷ್ಟಿಯ ಕಾರಣದಿಂದಾಗಿ ನಿಮ್ಮ ಕುಟುಂಬ ಒತ್ತಡದಿಂದ ತುಂಬಿರಬಹುದು.
ಅದೇ ಸಮಯದಲ್ಲಿ ಮತ್ತೊಂದೆಡೆ, ಸೆಪ್ಟೆಂಬರ್ ಮಧ್ಯದಿಂದ ನವೆಂಬರ್ ಮಧ್ಯದ ವರೆಗೆ ನಿಮ್ಮ ತಂದೆಯ ಹದಗೆಡುತ್ತಿರುವ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ಸೂರ್ಯ ದೇವ ಪ್ರತಿಕೂಲ ಸ್ಥಾನದಲ್ಲಿರುತ್ತಾರೆ ಮತ್ತು ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯ ಅಧಿಪತಿ ಗುರುವಿನ ಮೇಲೂ ಪಾಪ ಗ್ರಹ ಶನಿ ದೇವರ ದೃಷ್ಟಿಯಿರುತ್ತದೆ. ಇದರಿಂದಾಗಿ ಈ ಸಮಯದಲ್ಲಿ ನಿಮ್ಮ ತಂದೆಯ ಸ್ವಭಾವದಲ್ಲಿ ಬದಲಾವಣೆಯನ್ನು ಕಾಣಲಾಗುತ್ತದೆ. ಅವರು ಪ್ರಕೃತಿಯಲ್ಲಿ ಉರಿಯುತ್ತಿರುವಂತೆ ಕಾಣಿಸಬಹುದು ಮತ್ತು ನಿಮ್ಮ ಬಗೆಗಿನ ಅವರ ನಡವಳಿಕೆಯು ಸ್ವಲ್ಪ ಕೋಪಗೊಂಡಂತೆ ಕಾಣಿಸಬಹುದು. ಆದರೆ ಈ ಸಮಯದಲ್ಲಿ ಕೆಲಸದ ಕ್ಷೇತ್ರದಲ್ಲಿ ಮನೆಯ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುವ ನಿರೀಕ್ಷೆಯಿದೆ. ಈ ಸಮಯದಲ್ಲಿ ಸಹೋದರ ಸಹೋದರಿಯರಿಂದಲೂ ವಿಶೇಷ ಬೆಂಬಲವನ್ನು ನೀವು ಪಡೆಯಬಹುದು.
ಮೇಷ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022 ರ ಪ್ರೀತಿಯ ಜೀವನದ ವಿಷಯದಲ್ಲಿ ಸಾಕಷ್ಟು ಮಿಶ್ರ ಫಲಿತಾಂಶಗಳು ಸಿಗಲಿವೆ. ವರ್ಷವಿಡೀ ಸಂಬಂಧದಲ್ಲಿ ಏರಿಳಿತಗಳನ್ನು ಕಾಣಬಹುದು. ವರ್ಷದ ಆರಂಭಾದ ಸಮಯದಲ್ಲಿ ನೀವು ವಿಶೇಷ ವಹಿಸಬೇಕು. ಈ ಸಮಯದಲ್ಲಿ ಸ್ಥಳೀಯರು ತಪ್ಪು ತಿಳುವಳಿಕೆಗಳಿಗೆ ಬಲಿಯಾಗಬಹುದು. ಈ ಕಾರಣದಿಂದಾಗಿ ಪ್ರೇಮಿ ಜೋಡಿಗಳ ನಡುವೆ ವಿಂಗಡಣೆಯ ಸಾಧ್ಯತೆಯಿದೆ. ಏಕೆಂದರೆ ನಿಮ್ಮ ರಾಶಿಚಕ್ರದ ಐದನೇ ಮನೆಯ ಅಧಿಪತಿ, ಕರ್ಮದ ಫಲವನ್ನು ನೀಡುವ ಶನಿಯೊಂದಿಗೆ ಸಂಯೋಜಿಸುತ್ತಾರೆ.
ಮೇ ರಿಂದ ಸೆಪ್ಟೆಂಬರ್ ವರೆಗಿನ ತಿಂಗಳುಗಳು ಪ್ರೇಮಿ ಜೋಡಿಗಳಿಗೆ ತೊಂದರೆಗಳಿಂದ ತುಂಬಿರುತ್ತವೆ ಎಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ಯಾವುದೇ ಕಾರಣದಿಂದಾಗಿ ಪ್ರೇಮಿ ಜೋಡಿಗಳು ದೂರ ಹೋಗಬೇಕಾಗಬಹುದು. ಅದೇ ಸಮಯದಲ್ಲಿ ಸೆಪ್ಟೆಂಬರ್ ರಿಂದ ಮುಂದಿನ ಸಮಯವು ಪ್ರೇಮಿ ಜೋಡಿಗಳಿಗೆ ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಪ್ರೀತಿಯ ಮದುವೆಯ ಸಾಧ್ಯತೆ ಕಂಡುಬರುತ್ತಿದೆ. ಅಕ್ಟೋಬರ್ ತಿಂಗಳು ಸಹ ಪ್ರೀತಿಯ ಜೀವನದ ದೃಷ್ಟಿಯಿಂದ ಬಹಳ ಸಂತೋಷವಾಗಿರುವ ಸಾಧ್ಯತೆ ಇದೆ. ಈ ಸಮಯದಲ್ಲಿ ಪ್ರೇಮಿ ಜೋಡಿಗಳು ಪರಸ್ಪರರ ನಿಕಟ ಬರುತ್ತಾರೆ ಮತ್ತು ಈ ಸಮಯದಲ್ಲಿ ಅವರ ಪರಸ್ಪರ ಸಂಬಂಧವು ಇನ್ನಷ್ಟು ಬಲವಾಗುವ ಸಾಧ್ಯತೆ ಇದೆ. ವರ್ಷದ ಅಂತ್ಯದಲ್ಲೂ ಅನೇಕ ಪ್ರೇಮಿ ಜೋಡಿಗಳು ಪ್ರೀತಿಯ ಮದುವೆಯಾಗಲು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈ ಸಮಯದಲ್ಲಿ ಅವರು ಕುಟುಂಬದ ಜನರ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ.
ನಿಮ್ಮ ಜಾತಕದ ಆಧಾರದ ಮೇಲೆ ನಿಖರವಾದ ಶನಿ ರಿಪೋರ್ಟ್ ಅನ್ನು ಪಡೆಯಿರಿ
ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿರಬೇಕು ಎಂದು ನಾವು ಭಾವಿಸುತ್ತೇವೆ. ಹಾಗಿದ್ದಲ್ಲಿ, ಅದನ್ನು ನಿಮ್ಮ ಇತರ ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಧನ್ಯವಾದಗಳು!