• Talk To Astrologers
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

2025 ಗೃಹ ಪ್ರವೇಶ ಮುಹೂರ್ತ ಶುಭ ದಿನ, ಸಮಯ, ಮುಹೂರ್ತ ತಿಳಿಯಿರಿ

Author: Vijay Pathak | Last Updated: Sat 31 Aug 2024 7:20:19 PM

ಆಸ್ಟ್ರೋಕ್ಯಾಂಪ್‌ನ 2025 ಗೃಹ ಪ್ರವೇಶ ಮುಹೂರ್ತ ರ ಲೇಖನವು ಮುಂಬರುವ ವರ್ಷದಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನಗಳು, ದಿನಾಂಕಗಳು ಮತ್ತು ಸಮಯದ ಕುರಿತು ಸಂಪೂರ್ಣ ಮಾಹಿತಿ ನೀಡುತ್ತದೆ. ಈ ಲೇಖನವು ಗೃಹ ಪ್ರವೇಶ ಮುಹೂರ್ತದ ಮಹತ್ವ, ಮುಹೂರ್ತವಿಲ್ಲದೆ ಗೃಹ ಪ್ರವೇಶ ಪೂಜೆ ಸಾಧ್ಯವೇ ಮತ್ತು ಅಸ್ತಿತ್ವದಲ್ಲಿರುವ ಗೃಹ ಪ್ರವೇಶದ ವೈವಿಧ್ಯತೆಯನ್ನೂ ಚರ್ಚಿಸುತ್ತದೆ.

Read About Graha Parvesh Muhurat 2025

हिंदी में पढ़ने के लिए यहां क्लिक करें: 2025 गृह प्रवेश मुहूर्त

ಶುಭ ಮುಹೂರ್ತದ ಬಗ್ಗೆ ಹೆಚ್ಚು ತಿಳಿಯಲು ಉತ್ತಮ ಜ್ಯೋತಿಷಿಗಳಿಗೆ ಕರೆ ಮಾಡಿ

ಗ್ರಹ ಪ್ರವೇಶ ಮುಹೂರ್ತ ಎಂದರೇನು?

ಹೊಸ ಮನೆಗೆ ಹೋಗುವಾಗ ಹಿಂದೂ ಧರ್ಮವು ಕೆಲವು ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಹೊಂದಿದೆ. ಜೊತೆಗೆ ಹಬ್ಬ ಅಥವಾ ಶುಭ ದಿನದಂದು ಮಾತ್ರ ಹೊಸ ಮನೆಗೆ ಪ್ರವೇಶಿಸಬೇಕು ಎಂಬ ಕ್ರಮಗಳೂ ಇವೆ. ಹೊಸ ಮನೆಯನ್ನು ಪ್ರವೇಶಿಸುವುದನ್ನು ಗ್ರಹ ಪ್ರವೇಶ ಎಂದು ಕರೆಯಲಾಗುತ್ತದೆ. ನಕಾರಾತ್ಮಕ ಶಕ್ತಿಗಳ ಪ್ರಮಾಣವು ಮಹತ್ವದ್ದಾಗಿರುವುದರಿಂದ, ಜ್ಯೋತಿಷಿಗಳು ಹೊಸ ಮನೆಗೆ ಹೋಗುವಾಗ ಮುಹೂರ್ತ ಅತಿ ಮುಖ್ಯವೆಂದು ನಂಬುತ್ತಾರೆ. ನಕ್ಷತ್ರಪುಂಜಗಳು ಮತ್ತು ಮಂಗಳಕರ ದಿನಾಂಕಗಳ ಆಧಾರದ ಮೇಲೆ ಯಾವ ದಿನ ಮತ್ತು ರಾತ್ರಿ ಹೆಚ್ಚು ಶಕ್ತಿಯನ್ನು ಹೊಂದಿದೆ ಎಂಬುದನ್ನು ನಿರ್ಧರಿಸಿ, ತದನಂತರ ಮನೆಗೆ ಪ್ರವೇಶಿಸಬೇಕು.

Read in English: 2025 Graha Pravesh Muhurat

ಗೃಹ ಪ್ರವೇಶ ಯಾವಾಗ ಮಾಡಬಾರದು?

ಖರ್ಮಾಸ್, ಶ್ರಾದ್ಧ ಅಥವಾ ಚರ್ತುಮಾಸದಲ್ಲಿ ಮನೆ ಪ್ರವೇಶಿಸದಂತೆ ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಗೃಹ ಪ್ರವೇಶಕ್ಕಾಗಿ ಸೂಕ್ತ ಜ್ಯೋತಿಷಿಯನ್ನು ನೋಡುವುದು ಅತ್ಯಗತ್ಯ. 

ಹೊಸ ಮನೆ ಅಥವಾ ಆಸ್ತಿಯನ್ನು ಖರೀದಿಸುವಾಗ ಅಥವಾ ಹೊಸ ನಿವಾಸಕ್ಕೆ ಹೋಗುವಾಗ, ಗೃಹ ಪ್ರವೇಶ ಮುಹೂರ್ತವನ್ನು ಅನುಸರಿಸುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಅದೃಷ್ಟದ ದಿನ ಅಥವಾ ಕ್ಷಣದಲ್ಲಿ ಮನೆಗೆ ಪ್ರವೇಶಿಸುವುದು ಮನೆಗೆ ಮತ್ತು ಅದರ ನಿವಾಸಿಗಳಿಗೆ ಸಂಪತ್ತನ್ನು ನೀಡುತ್ತದೆ ಎಂದು ನಂಬಲಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ, ಯಾರಾದರೂ ಹೊಸ ಮನೆಗೆ ಹೋದಾಗ ಅಥವಾ ಅಲ್ಲಿ ವಾಸಿಸಲು ಪ್ರಾರಂಭಿಸಿದಾಗ, ಮಂಗಳಕರ ಸಮಯದಲ್ಲಿ ಪೂಜೆ ಸಮಾರಂಭವನ್ನು ನಡೆಸಲಾಗುತ್ತದೆ.

2025ರ ಗೃಹ ಪ್ರವೇಶ ಮುಹೂರ್ತ ಪಟ್ಟಿ

ಈ ಲೇಖನವು 2025 ರಲ್ಲಿನ ಗೃಹ ಪ್ರವೇಶದ ಎಲ್ಲಾ ಶುಭ ದಿನಾಂಕಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ ನೀವು ಪ್ರತಿ ತಿಂಗಳ ಶುಭ ದಿನ, ತಿಂಗಳು ಮತ್ತು ದಿನಾಂಕದ ಕುರಿತು ವಿವರಗಳನ್ನು ಕಾಣಬಹುದು. ಆದರೂ ನಿಮ್ಮ ಗ್ರಹ ಪ್ರವೇಶಕ್ಕೆ ಶುಭ ದಿನಾಂಕವನ್ನು ನಿರ್ಧರಿಸಲು ನಿಮ್ಮ ಜ್ಯೋತಿಷಿಯನ್ನು ಸಂಪರ್ಕಿಸಿ.

ಇದನ್ನೂ ಓದಿ: ರಾಶಿ ಭವಿಷ್ಯ 2025

ಜನವರಿ 

ಈ ತಿಂಗಳು 2025 ಗೃಹ ಪ್ರವೇಶ ಮುಹೂರ್ತ ಕ್ಕೆ ಶುಭ ಸಮಯಗಳಿಲ್ಲ.

ಫೆಬ್ರವರಿ

ದಿನ

ಶುಭ ಮುಹೂರ್ತ 

ತಿಥಿ

ನಕ್ಷತ್ರ 

06 ಫೆಬ್ರವರಿ, ಗುರುವಾರ 

ರಾತ್ರಿ 10:52 - 07 ಫೆಬ್ರವರಿ 2025 ಬೆಳಿಗ್ಗೆ 07:07 

ದಶಮಿ

ರೋಹಿಣಿ

07 ಫೆಬ್ರವರಿ, ಶುಕ್ರವಾರ

ಬೆಳಿಗ್ಗೆ 07:07 - ಮರುದಿನ ಬೆಳಿಗ್ಗೆ 07:07

ದಶಮಿ, ಏಕಾದಶಿ 

ರೋಹಿಣಿ, ಮೃಗಶಿರಾ 

08 ಫೆಬ್ರವರಿ, ಶನಿವಾರ 

ಬೆಳಿಗ್ಗೆ 07:07 - ಸಂಜೆ 06:06

ಏಕಾದಶಿ 

ಮೃಗಶಿರಾ 

14 ಫೆಬ್ರವರಿ, ಶುಕ್ರವಾರ

ರಾತ್ರಿ 11:09 - ಮರುದಿನ ಬೆಳಿಗ್ಗೆ 07:03

ತೃತೀಯ 

ಉತ್ತರ ಫಾಲ್ಗುಣಿ 

15 ಫೆಬ್ರವರಿ, ಶನಿವಾರ 

ಬೆಳಿಗ್ಗೆ 07:03 - ರಾತ್ರಿ 11:51

ತೃತೀಯ

ಉತ್ತರ ಫಾಲ್ಗುಣಿ

17 ಫೆಬ್ರವರಿ, ಸೋಮವಾರ

ಬೆಳಿಗ್ಗೆ 07:01 - ಮರುದಿನ ಬೆಳಿಗ್ಗೆ 04:52

ಪಂಚಮಿ 

ಚೈತ್ರ

ಮಾರ್ಚ್

ದಿನ

ಶುಭ ಮುಹೂರ್ತ 

ತಿಥಿ

ನಕ್ಷತ್ರ 

01 ಮಾರ್ಚ್, ಶನಿವಾರ 

ಬೆಳಿಗ್ಗೆ 11:22 - ಮರುದಿನ ಬೆಳಿಗ್ಗೆ 06:51

ದ್ವಿತೀಯ, ತೃತೀಯ 

ಉತ್ತರ ಭಾದ್ರಪದ

05 ಮಾರ್ಚ್, ಬುಧವಾರ 

ರಾತ್ರಿ 1:08 - ಬೆಳಿಗ್ಗೆ 06:47

ಸಪ್ತಮಿ 

ರೋಹಿಣಿ

06 ಮಾರ್ಚ್, ಗುರುವಾರ 

ಬೆಳಿಗ್ಗೆ 06:47 - ಬೆಳಿಗ್ಗೆ 10:50

ಸಪ್ತಮಿ

ರೋಹಿಣಿ

14 ಮಾರ್ಚ್, ಶುಕ್ರವಾರ

ರಾತ್ರಿ 12:23 - ಮರುಸಿನ ಬೆಳಿಗ್ಗೆ 06:39

ಪ್ರತಿಪದ 

ಉತ್ತರ ಫಾಲ್ಗುಣಿ

17 ಮಾರ್ಚ್, ಸೋಮವಾರ

ಬೆಳಿಗ್ಗೆ 06:37 - ಮಧ್ಯಾಹ್ನ 02:46

ತೃತೀಯ 

ಚೈತ್ರ 

24 ಮಾರ್ಚ್, ಸೋಮವಾರ

ಬೆಳಿಗ್ಗೆ 06:30 - ಸಂಜೆ 04:26

ದಶಮಿ

ಉತ್ತರಾಷಾಢ 

ನಿಮ್ಮ ವೃತ್ತಿಜೀವನದ ಬಗ್ಗೆ ಚಿಂತೆಯೇ? ಕಾಗ್ನಿಆಸ್ಟ್ರೊ ವೃತ್ತಿ ಕೌನ್ಸೆಲಿಂಗ್ ವರದಿಯನ್ನು ಇಲ್ಲಿ ಪಡೆಯಿರಿ

ಏಪ್ರಿಲ್

ದಿನ

ಶುಭ ಮುಹೂರ್ತ 

ತಿಥಿ

ನಕ್ಷತ್ರ 

30 ಏಪ್ರಿಲ್, ಬುಧವಾರ 

ಬೆಳಿಗ್ಗೆ 05:58 - ಮಧ್ಯಾಹ್ನ 02:11

ತೃತೀಯ

ರೋಹಿಣಿ 

ಮೇ

ದಿನ 

ಶುಭ ಮುಹೂರ್ತ 

ತಿಥಿ 

ನಕ್ಷತ್ರ 

07 ಮೇ, ಬುಧವಾರ 

ಬೆಳಿಗ್ಗೆ 06:16 - ಮರುದಿನ ಬೆಳಿಗ್ಗೆ 05:53

ಏಕಾದಶಿ 

ಉತ್ತರ ಫಾಲ್ಗುಣಿ 

08 ಮೇ, ಗುರುವಾರ 

ಬೆಳಿಗ್ಗೆ 05:53 - ಮಧ್ಯಾಹ್ನ 12:28

ಏಕಾದಶಿ 

ಉತ್ತರ ಫಾಲ್ಗುಣಿ

09 ಮೇ, ಶುಕ್ರವಾರ 

ರಾತ್ರಿ 12:08 - ಬೆಳಿಗ್ಗೆ 05:52

ತ್ರಯೋದಶಿ 

ಚೈತ್ರ

10 ಮೇ, ಶನಿವಾರ 

ಬೆಳಿಗ್ಗೆ 05:52 - ಸಂಜೆ 05:29

ತ್ರಯೋದಶಿ 

ಚೈತ್ರ

14 ಮೇ, ಬುಧವಾರ 

ಬೆಳಿಗ್ಗೆ 05:50 - ಬೆಳಿಗ್ಗೆ 11:46

ದ್ವಿತೀಯ 

ಅನುರಾಧ 

17 ಮೇ, ಶನಿವಾರ 

ಸಂಜೆ 05:43 - ಮರುದಿನ ಬೆಳಿಗ್ಗೆ 05:48

ಪಂಚಮಿ 

ಉತ್ತರಾಷಾಢ 

22 ಮೇ, ಗುರುವಾರ 

ಸಂಜೆ 05:47 - ಮರುದಿನ ಬೆಳಿಗ್ಗೆ 05:46

ದಶಮಿ, ಏಕಾದಶಿ 

ಉತ್ತರ ಭಾದ್ರಪದ 

23 ಮೇ, ಶುಕ್ರವಾರ 

ಬೆಳಿಗ್ಗೆ 05:46 - ರಾತ್ರಿ 10:29

ಏಕಾದಶಿ 

ಉತ್ತರ ಭಾದ್ರಪದ, ರೇವತಿ 

28 ಮೇ, ಬುಧವಾರ 

ಬೆಳಿಗ್ಗೆ 05:45 - ಮಧ್ಯಾಹ್ನ 12:28

ದ್ವಿತೀಯ 

ಮೃಗಶಿರಾ 

ಜೂನ್

ದಿನ

ಶುಭ ಮುಹೂರ್ತ 

ತಿಥಿ

ನಕ್ಷತ್ರ 

06 ಜೂನ್, ಶುಕ್ರವಾರ 

ಸಂಜೆ 06:33 - ಮರುದಿನ ಬೆಳಿಗ್ಗೆ 04:47

ಏಕಾದಶಿ 

ಚೈತ್ರ

ಜುಲೈ 

ಈ ತಿಂಗಳು ಗೃಹ ಪ್ರವೇಶ ಮುಹೂರ್ತಕ್ಕೆ ಶುಭ ಸಮಯಗಳಿಲ್ಲ. 

ಆಗಸ್ಟ್ 

ಈ ತಿಂಗಳು ಗೃಹ ಪ್ರವೇಶ ಮುಹೂರ್ತಕ್ಕೆ ಶುಭ ಸಮಯಗಳಿಲ್ಲ. 

ಸಪ್ಟೆಂಬರ್ 

ಈ ತಿಂಗಳು ಗೃಹ ಪ್ರವೇಶ ಮುಹೂರ್ತಕ್ಕೆ ಶುಭ ಸಮಯಗಳಿಲ್ಲ. 

ಅಕ್ಟೋಬರ್

ದಿನ 

ಶುಭ ಮುಹೂರ್ತ 

ತಿಥಿ

ನಕ್ಷತ್ರ 

24 ಅಕ್ಟೋಬರ್, ಶುಕ್ರವಾರ

ಬೆಳಿಗ್ಗೆ 06:31 - ರಾತ್ರಿ 01:18

ತೃತೀಯ 

ಅನುರಾಧ 

ನವೆಂಬರ್ 

ದಿನ 

ಶುಭ ಮುಹೂರ್ತ 

ತಿಥಿ

ನಕ್ಷತ್ರ 

03 ನವೆಂಬರ್, ಸೋಮವಾರ 

ಬೆಳಿಗ್ಗೆ 06:36 - ರಾತ್ರಿ 02:05

ತ್ರಯೋದಶಿ 

ಉತ್ತರ ಭಾದ್ರಪದ, ರೇವತಿ

07 ನವೆಂಬರ್, ಶುಕ್ರವಾರ 

ಬೆಳಿಗ್ಗೆ 06:39 - ಮರುದಿನ ಬೆಳಿಗ್ಗೆ 06:39

ದ್ವಿತೀಯ, ತೃತೀಯ 

ರೋಹಿಣಿ, ಮೃಗಶಿರಾ

14 ನವೆಂಬರ್, ಶುಕ್ರವಾರ 

ರಾತ್ರಿ 09:20 - ಬೆಳಿಗ್ಗೆ 06:44

ದಶಮಿ, ಏಕಾದಶಿ 

ಉತ್ತರ ಫಾಲ್ಗುಣಿ 

15 ನವೆಂಬರ್, ಶನಿವಾರ 

ಬೆಳಿಗ್ಗೆ 06:44 - ಬೆಳಿಗ್ಗೆ 11:34

ಏಕಾದಶಿ 

ಉತ್ತರ ಫಾಲ್ಗುಣಿ 

24 ನವೆಂಬರ್, ಸೋಮವಾರ 

ರಾತ್ರಿ 09:53 - ಮರುದಿನ ಬೆಳಿಗ್ಗೆ 06:51

ಪಂಚಮಿ

ಉತ್ತರಾಷಾಢ 

ಡಿಸೆಂಬರ್

ಈ ತಿಂಗಳು 2025 ಗೃಹ ಪ್ರವೇಶ ಮುಹೂರ್ತ ಕ್ಕೆ ಶುಭ ಸಮಯಗಳಿಲ್ಲ. 

ರಾಜಯೋಗ ವರದಿ: ಸಂಪತ್ತು ಮತ್ತು ಸಮೃದ್ಧಿಯು ನಿಮ್ಮನ್ನು ಯಾವಾಗ ಅನುಗ್ರಹಿಸುತ್ತದೆ ಎಂಬುದನ್ನು ತಿಳಿಯಿರಿ!

ಗೃಹ ಪ್ರವೇಶದ ವಿಧಗಳು

ಪುರಾತನ ಹಿಂದೂ ನಾಗರಿಕತೆಯು ಗೃಹ ಪ್ರವೇಶದ ಮೂರು ವಿಧಾನಗಳನ್ನು ವ್ಯಾಖ್ಯಾನಿಸಿದೆ. ಇವುಗಳಲ್ಲಿ ಕೆಲವು ದ್ವಂದ್ವ ಗೃಹ ಪ್ರವೇಶ, ಸಪೂರ್ವ ಗೃಹ ಪ್ರವೇಶ, ಮತ್ತು ಅಪೂರ್ವ ಗೃಹ ಪ್ರವೇಶ ಸೇರಿವೆ..

ಅಪೂರ್ವ ಗೃಹ ಪ್ರವೇಶವು ಸ್ವತಃ ವಿಶೇಷವಾದದ್ದನ್ನು ಉಲ್ಲೇಖಿಸುತ್ತದೆ. ದ್ವಂದ್ವ ಗೃಹ ಪ್ರವೇಶವು ಎರಡನೇ ಬಾರಿಯನ್ನು ಸೂಚಿಸುತ್ತದೆ, ಆದರೆ ಸಪೂರ್ವ ಗೃಹ ಪ್ರವೇಶವು ಈಗಾಗಲೇ ಮನೆಯನ್ನು ಹೊಂದಿರುವುದನ್ನು ಸೂಚಿಸುತ್ತದೆ. ಈ ಲೇಖನದಲ್ಲಿ ಇವುಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೋಣ.

ಅಪೂರ್ವ ಗೃಹ ಪ್ರವೇಶ: "ಅಪೂರ್ವ" ಎಂಬ ಪದವು ವಿಶೇಷವಾದ ಅಥವಾ ಹಿಂದೆಂದೂ ಮಾಡದ ಯಾವುದನ್ನಾದರೂ ಸೂಚಿಸುತ್ತದೆ. ಹೊಸ ಗೃಹ ಪ್ರವೇಶ ಎಂಬುದು ಅಪೂರ್ವ ಗೃಹ ಪ್ರವೇಶಕ್ಕೆ ಮತ್ತೊಂದು ಹೆಸರು. ಇಲ್ಲಿ, ಕುಟುಂಬ ಸದಸ್ಯರು ಮೊದಲ ಬಾರಿಗೆ ಹಳೆಯ ಮನೆಯಿಂದ ಹೊಸ ಮನೆಗೆ ತೆರಳುತ್ತಾರೆ.

ಸಪೂರ್ವ ಗೃಹ ಪ್ರವೇಶ: ಬಾಡಿಗೆ ಆಸ್ತಿ, ಮರುಮಾರಾಟಕ್ಕಾಗಿ ನೀಡಿದ ಮನೆ ಅಥವಾ ಇತರ ಮನೆಗಳು ಹಿಂದೆಯೇ ನಿರ್ಮಿಸಲಾಗಿದ್ದು ಮತ್ತು ಬಾಡಿಗೆಗೆ ಕೊಟ್ಟಿದ್ದು ಇದ್ದರೆ ಆಗ ನಡೆಸುವ ಗೃಹ ಪ್ರವೇಶವನ್ನು ಸಪೂರ್ವ ಗೃಹ ಪ್ರವೇಶ ಎನ್ನಲಾಗುತ್ತದೆ.

ದ್ವಂದ್ವ ಗೃಹ ಪ್ರವೇಶ: ಭೂಕಂಪ ಅಥವಾ ಇತರ ನೈಸರ್ಗಿಕ ವಿಕೋಪಗಳು ಮನೆಗೆ ಸಮಸ್ಯೆಗಳನ್ನು ಉಂಟುಮಾಡಿದಾಗ, ದ್ವಂದ್ವ ಗೃಹ ಪ್ರವೇಶವನ್ನು ಕೈಗೊಳ್ಳಲಾಗುತ್ತದೆ. ಈ ಪೂಜೆಗಳು ಸ್ಥಳೀಯರನ್ನು ಧನಾತ್ಮಕವಾಗಿ ಯೋಚಿಸಲು, ಕ್ರಮ ತೆಗೆದುಕೊಳ್ಳಲು ಮತ್ತು ಸಂತೋಷದ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ.

ನಿಮ್ಮ ಕುಂಡಲಿ ಪ್ರಕಾರ ಕಸ್ಟಮೈಸ್ ಮಾಡಿದ ಮತ್ತು ನಿಖರವಾದ ಶನಿ ವರದಿಯನ್ನು ಪಡೆಯಿರಿ!

ಹೊಸ ಮನೆಗೆ ಹೋಗುವ ಮೊದಲು ಈ ಕೆಳಗಿನವುಗಳನ್ನು ನೆನಪಿಡಿ:

  • ಕುಟುಂಬದ ಸಂಪತ್ತು, ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ಶುಭ ದಿನದಂದು ಮಾತ್ರ ಮನೆಗೆ ಪ್ರವೇಶಿಸಬೇಕು.
  • ಪೂಜೆಯ ಮೊದಲು ಮನೆಯನ್ನು ಶುದ್ಧೀಕರಿಸಲು ಮತ್ತು ಸ್ವಚ್ಛಗೊಳಿಸಲು ಉಪ್ಪು ನೀರಿನಿಂದ ಸ್ವಚ್ಛಗೊಳಿಸಿ. ನೀವು ಮನೆಯನ್ನು ಒರೆಸುವ ಮೊದಲು ನೀರಿಗೆ ವಿನೆಗರ್ ಅಥವಾ ಉಪ್ಪನ್ನು ಸೇರಿಸಬೇಕು ಎಂದು ವೇದದ ಶಾಸ್ತ್ರಗಳು ಹೇಳುತ್ತವೆ. ಆದ್ದರಿಂದಲೇ ಮನೆಯ ಪ್ರತಿಯೊಂದು ಭಾಗದಲ್ಲೂ ಸಕಾರಾತ್ಮಕತೆ ಇರುತ್ತದೆ.
  • ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ನೀವು ಮನೆಯಾದ್ಯಂತ ಗಂಗಾಜಲವನ್ನು ಸಿಂಪಡಿಸಬಹುದು. ಮಾವಿನ ಎಲೆಗಳೊಂದಿಗೆ ಗಂಗಾಜಲವನ್ನು ಚಿಮುಕಿಸುವುದು ಇನ್ನೂ ಹೆಚ್ಚು ಮಂಗಳಕರವಾಗಿದೆ.
  • ಮನೆಗೆ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯನ್ನು ತರಲು, ಮುಂಭಾಗ ಅಥವಾ ಮುಖ್ಯ ದ್ವಾರದಲ್ಲಿ ತೋರಣವನ್ನು ಸ್ಥಾಪಿಸುವುದು ಮಂಗಳಕರವಾಗಿದೆ. ಜೊತೆಗೆ, ಬಾಗಿಲಿನ ಮೇಲೆ ಸ್ವಸ್ತಿಕವನ್ನು ಬಿಡಿಸಿ.
  • ವಾಸ್ತು ಪೂಜೆಯನ್ನು ಮಾಡಿ ಮತ್ತು ಮುಖ್ಯ ಬಾಗಿಲನ್ನು ಮಾವಿನ ಎಲೆಗಳು ಮತ್ತು ತಾಜಾ ಹೂವುಗಳಿಂದ ಅಲಂಕರಿಸಿ. ಅದರ ನಂತರ ಹವನ ಮಾಡಿ. ಇದರಿಂದ ಇಡೀ ಮನೆ ಶುದ್ಧವಾಗುತ್ತದೆ.

ಗ್ರಹ ಪ್ರವೇಶ ಪೂಜೆಯನ್ನು ಪುರೋಹಿತರಿಲ್ಲದೆ ಮಾಡಬಹುದೇ?

ವೈದಿಕ ಪಠ್ಯಗಳು ಗೃಹ ಪ್ರವೇಶ ಪೂಜೆಯ ಸಂಕೀರ್ಣವಾದ ಕಾರ್ಯಕ್ಷಮತೆಯನ್ನು ವಿವರಿಸುತ್ತದೆ. ತಜ್ಞ ಪಂಡಿತರು ಅಥವಾ ಜ್ಯೋತಿಷಿಗಳು ಪೂಜೆಯನ್ನು ನಡೆಸುವುದು ಸೂಕ್ತವಾಗಿದ್ದರೂ, ಪಂಡಿತರು ಲಭ್ಯವಿಲ್ಲದಿದ್ದಲ್ಲಿ ಖಂಡಿತವಾಗಿಯೂ ಹೊಸ ಮನೆಯ ಪೂಜೆಯನ್ನು ನೀವೇ ಮಾಡಬಹುದು.

ಇದಕ್ಕಾಗಿ ಮೊದಲು ಹಿಂದೂ ಕ್ಯಾಲೆಂಡರ್‌ನಲ್ಲಿ ಪೂಜೆಗೆ ಶುಭ ದಿನಾಂಕವನ್ನು ತಿಳಿದುಕೊಳ್ಳಿ. ಗೃಹ ಪ್ರವೇಶ ಪೂಜೆಯನ್ನು ಪ್ರಾರಂಭಿಸಲು ಪೂಜಾ ಸಾಮಗ್ರಿಗಳನ್ನು ತನ್ನಿ.

ಗ್ರಹ ಪ್ರವೇಶ ಪೂಜೆಯನ್ನು ಶುಭ ಮುಹೂರ್ತವಿಲ್ಲದೆ ಮಾಡಬಹುದೇ?

ಗೃಹ ಪ್ರವೇಶ ಪೂಜೆಯನ್ನು ಮಾಡುವಾಗ, ನೀವು ಈ ವಿಷಯಗಳನ್ನು ನಂಬದಿದ್ದರೆ ಗೃಹ ಪ್ರವೇಶ ಮುಹೂರ್ತವನ್ನು ಅನುಸರಿಸಬೇಕಾಗಿಲ್ಲ. ದುಷ್ಟ ಮತ್ತು ಕೆಟ್ಟ ಶಕ್ತಿಯನ್ನು ತೊಡೆದುಹಾಕಲು ಮತ್ತು ಧನಾತ್ಮಕ ಶಕ್ತಿಯನ್ನು ನಿಮ್ಮ ಮನೆಗೆ ತರಲು, ನಿಮ್ಮ ಹೊಸ ಮನೆಯಲ್ಲಿ ನೀವು ಗೃಹ ಶಾಂತಿ ಪಥವನ್ನು ಪೂರ್ಣಗೊಳಿಸಬೇಕು. ಪೂಜೆಯ ನಂತರ ದಾನವನ್ನೂ ಮಾಡಬಹುದು ಎಂದು 2025 ಗೃಹ ಪ್ರವೇಶ ಮುಹೂರ್ತ ಹೇಳುತ್ತದೆ.

ಗುಣಮಟ್ಟದ ರತ್ನಗಳು, ಯಂತ್ರ ಮತ್ತು ಜ್ಯೋತಿಷ್ಯ ಸೇವೆಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿ: ಇಲ್ಲಿ ಕ್ಲಿಕ್ ಮಾಡಿ

2025ರ ಗೃಹ ಪ್ರವೇಶ ಮುಹೂರ್ತದ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಷ್ಟೇ. ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಮತ್ತು ಈ ಲೇಖನವು ನಿಮಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡಿದೆ ಎಂದು ಭಾವಿಸುತ್ತೇವೆ!

ಹೆಚ್ಚಾಗಿ ಕೇಳುವ ಪ್ರಶ್ನೆಗಳು

1. ಗೃಹ ಪ್ರವೇಶಕ್ಕೆ ಶುಭ ಸಮಯ ಯಾವುದು?

ಉತ್ತರ: ಗೃಹ ಪ್ರವೇಶಕ್ಕೆ ಅತ್ಯಂತ ಅನುಕೂಲಕರ ಸಮಯವೆಂದರೆ ಮಾಘ, ಫಾಲ್ಗುಣ, ವೈಶಾಖ ಮತ್ತು ಜ್ಯೇಷ್ಠ ಮಾಸಗಳು.

2. ಗೃಹ ಪ್ರವೇಶದಂದು ಹಾಲು ಉಕ್ಕಿಸುವುದರ ಹಿಂದಿನ ಕಾರಣವೇನು?

ಉತ್ತರ: ಹಾಲು ಉಕ್ಕಿಸುವುದು ಮನೆಗೆ ಸಮೃದ್ಧಿಯನ್ನು ತರುತ್ತದೆ ಎಂದು ಪರಿಗಣಿಸಲಾಗುತ್ತದೆ.

3. ಗೃಹ ಪ್ರವೇಶದ ಬಳಿಕ ನಾವು ಕಡ್ಡಾಯವಾಗಿ ಮನೆಯಲ್ಲಿ ನೆಲೆಸಬೇಕೇ?

ಉತ್ತರ: ಗೃಹ ಪ್ರವೇಶ ಪೂಜೆಯನ್ನು ಮುಗಿಸಿದ ನಂತರ ಕನಿಷ್ಠ ಒಬ್ಬ ವ್ಯಕ್ತಿ ಮೂರು ದಿನಗಳ ಕಾಲ ಮನೆಯಲ್ಲಿ ಇರಬೇಕು.

4. ಗೃಹ ಪ್ರವೇಶಕ್ಕೆ ಯಾವ ತಿಥಿ ಉತ್ತಮ?

ಉತ್ತರ: ದ್ವಿತೀಯ, ತೃತೀಯಾ, ಪಂಚಮಿ, ಷಷ್ಠಿ, ಸಪ್ತಮಿ, ದಶಮಿ, ಏಕಾದಶಿ, ದ್ವಾದಶಿ ಮತ್ತು ತ್ರಯೋದಶಿ, ಗ್ರಹ ಪ್ರವೇಶಕ್ಕೆ ಮಂಗಳಕರವಾಗಿವೆ.

More from the section: Horoscope 3894
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2025
© Copyright 2025 AstroCAMP.com All Rights Reserved