• Talk To Astrologers
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

ಕುಂಭ ರಾಶಿ ಭವಿಷ್ಯ 2022 - Aquarius Yearly Horoscope 2022 in Kannada

Author: -- | Last Updated: Fri 27 Aug 2021 11:16:32 AM

ಕುಂಭ ರಾಶಿ ಭವಿಷ್ಯ 2022 (Kumbh Rashifal 2022) ರ ಪ್ರಕಾರ, ಈ ವರ್ಷ ನಿಮಗೆ ಸಾಮಾನ್ಯಕ್ಕಿಂತ ಅದ್ಭುತವಾಗಿರಲಿದೆ. ಏಕೆಂದರೆ ಈ ವರ್ಷ ವೃತ್ತಿಪರ ಜೀವನದಲ್ಲಿ ಒಂದೆಡೆ ನೀವು ಯಶಸ್ಸು ಪಡೆದರೆ, ಮತ್ತೊಂದೆಡೆ ನಿಮ್ಮ ಕಠಿಣ ಪರಿಶ್ರಮವು ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಲಿದೆ. ಏಕೆಂದರೆ ವರ್ಷದ ಮೊದಲಾರ್ಧದಲ್ಲಿ ನಿಮ್ಮ ಲಗ್ನದ ಮನೆಯ ಅಧಿಪತಿ ಶನಿ ತನ್ನದೇ ರಾಶಿಯಲ್ಲಿ ಸಾಗುವುದು, ಹೆಚ್ಚು ಕಠಿಣ ಪರಿಶ್ರಮಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ಇದರಿಂದಾಗಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಇನ್ನಷ್ಟು ಉತ್ತಮಗೊಳ್ಳುತ್ತದೆ. ಅಲ್ಲದೆ, ಸಮಾಜದಲ್ಲೂ ನೀವು ಕೆಲವು ಪ್ರಮುಖ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇದರ ಹೊರತಾಗಿ ಕುಂಭ ರಾಶಿಚಕ್ರದ ಸ್ಥಳೀಯರಿಗೆ ಮುಂಬರುವ ಹೊಸ ವರ್ಷಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಮಾಹಿತಿಯನ್ನು ನಾವು ಈ ಲೇಖನದಲ್ಲಿ ವಿವರವಾಗಿ ತಂದಿದ್ದೇವೆ.

Aquarius Horoscope 2022 In Kannada

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಅದರಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಆದರೆ ಶನಿ ದೇವರ ಪ್ರಭಾವವು ನಿಮಗೆ ಸ್ವಲ್ಪ ಸೋಮಾರಿತನವನ್ನು ಸಹ ನೀಡುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಸೋಮಾರಿತನವನ್ನು ತ್ಯಜಿಸುವಲ್ಲಿ ನೀವು ಯಶಸ್ವಿಯಾದರೆ, ಯಾರೂ ನಿಮ್ಮನ್ನು ಅಗಾಧ ಪ್ರಗತಿಯನ್ನು ಸಾಧಿಸುವುದನ್ನು ತಡೆಯಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ ಆರ್ಥಿಕ ಜೀವನದಲ್ಲೂ ನೀವು ವರ್ಷವಿಡೀ ವಿವಿಧ ಸಂಪರ್ಕಗಳಿಂದ ಹಣ ಗಳಿಸಲು ಸಾಧ್ಯವಾಗುತ್ತದೆ. ಏಕೆಂದರೆ ನಿಮ್ಮ ಲಗ್ನದ ಮನೆಯ ಅಧಿಪತಿ ನಿಮ್ಮ ಹಣಕಾಸಿನ ಎರಡನೇ ಮನೆಯ ಮೇಲೆ ಪರಿಣಾಮ ಬೀರುವುದು, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದಲ್ಲದೆ, ನಿಮ್ಮ ಯಾವುದೇ ಸಾಲವನ್ನು ಮರುಪಾವತಿಸುವಲ್ಲೂ ನೀವು ಯಶಸ್ವಿಯಾಗಲಿದ್ದೀರಿ.

ನಿಮ್ಮ ಕುಟುಂಬ ಜೀವನವನ್ನು ನೋಡಿದರೆ, ಅದಕ್ಕಾಗಿ ಈ ವರ್ಷ ಸಾಮಾನ್ಯವಾಗಿರುತ್ತದೆ. ಆದರೆ ತಂದೆಯಿಂದ, ನೀವು ಬಹಳ ಸಮಯದಿಂದ ಬಯಸುತ್ತಿದ್ದ, ಬೆಂಬಲವನ್ನು ಪಡೆಯಲು ಸಾಧ್ಯವಾಗುತ್ತದೆ. ಆರಂಭದ ಹಂತದಲ್ಲಿ ನೀವು ಸ್ವಲ್ಪ ಹೆಚ್ಚು ಜಾಗರೂಕರಾಗಿರುವ ಮೂಲಕ, ಕುಟುಂಬದ ಸದಸ್ಯರೊಂದಿಗಿನ ಎಲ್ಲಾ ರೀತಿಯ ವಿವಾದಗಳನ್ನು ತಪ್ಪಿಸಬೇಕು. ಏಕೆಂದರೆ ನಿಮ್ಮ ದೇಶೀಯ ಸಂಪನ್ಮೂಲಗಳ ನಾಲ್ಕನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯು, ನೀವು ಹೆಚ್ಚು ಜಾಗರೂಕರಾಗಿರಬೇಕು ಎಂದು ಸೂಚಿಸುತ್ತಿದೆ. ಮತ್ತೊಂದೆಡೆ, ನೀವು ವಿಧ್ಯಾರ್ಥಿಯಾಗಿದ್ದರೆ, ಈ ಸಮಯ ನಿಮಗೆ ಉತ್ತಮವಾಗಿರುತ್ತದೆ. ಆದರೆ ನೀವು ನಿಮ್ಮ ಆಲಸ್ಯವನ್ನು ತ್ಯಜಿಸಿ, ಹೆಚ್ಚುವರಿ ಶ್ರಮವಹಿಸಲು ನಿಮ್ಮನ್ನು ಪ್ರೇರೇಪಿಸುವುದು ಈ ವರ್ಷ ನೀವು ಕಲಿಯಬೇಕು.

ನಿಮ್ಮ ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ಒಂದೆಡೆ ಈ ವರ್ಷ ಪ್ರೇಮಿಗಳ ಜೀವನದಲ್ಲಿ ಅಪಾರ ಪ್ರೀತಿ ಮತ್ತು ಪ್ರಣಯದ ಹೆಚ್ಚಳ, ಪ್ರೇಮಿಯೊಂದಿಗೆ ಪ್ರೀತಿಯ ಮದುವೆಯ ಅವಕಾಶವನ್ನು ನಿಮಗೆ ನೀಡಿದರೆ, ಅದೇ ಸಮಯದಲ್ಲಿ ಮತ್ತೊಂದೆಡೆ, ವಿವಾಹಿತ ಜನರು ಈ ವರ್ಷ ತಮ್ಮ ಜೀವನ ಸಂಗಾತಿಯೊಂದಿಗೆ ನೀವೇ ನಿಂದನೀಯವಾಗಿ ವರ್ತಿಸುವುದು ಮತ್ತು ಅವರ ಮತ್ತು ನಿಮ್ಮ ಅತ್ತೆಮನೆ ಕಡೆಯವರೊಂದಿಗೆ ಅಸಭ್ಯರಾಗಿ ವರ್ತಿಸುವುದನ್ನು ತಪ್ಪಿಸಬೇಕು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮದುವೆಯ ಮನೆಯ ಮೇಲೆ ದುರುದ್ವೇಷಪೂರಿತ ಗ್ರಹಗಳ ಪರಿಣಾಮ ಇರುವುದರಿಂದಾಗಿ ನಿಮಗೆ ಸಮಸ್ಯೆಗಳಾಗಬಹುದು. ಆದಾಗ್ಯೂ, ಕುಂಭ ರಾಶಿಚಕ್ರದ ಕೆಲವು ಜನರು ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ಸಮಸ್ಯೆ ಕಾಡುವುದಿಲ್ಲ ಆದರೆ ಇದರ ಹೊರತಾಗಿಯೂ, ನೀವು ಮಾನಸಿಕ ಒತ್ತಡದಲ್ಲಿ ಸ್ವಲ್ಪ ಹೆಚ್ಚಳವನ್ನು ಎದುರಿಸಬೇಕಾಗಬಹುದು. ಇದರ ನಕಾರಾತ್ಮಕ ಪರಿಣಾಮವು ನೇರವಾಗಿ ನಿಮ್ಮ ಸ್ವಭಾವದಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ.

ನಿಮ್ಮ ಜಾತಕದಲ್ಲಿ ಶುಭ ಯೋಗವಿದೆಯೇ ? ತಿಳಿಯಲು ಈಗಲೇ ಖರೀದಿಸಿ ಬೃಹತ್ ಕುಂಡಲಿ

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ ಆರ್ಥಿಕ ಜೀವನ :

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾಡಿದರೆ, ನೀವು ಸಾಮಾನ್ಯ ಫಲಿತಾಂಶಗಳನ್ನು ಪಡೆಯುತ್ತೀರಿ. ವಿಶೇಷವಾಗಿ ಈ ವರ್ಷದ ಆರಂಭದಲ್ಲಿ ನೀವು ವಿವಿಧ ಮೂಲಗಳಿಂದ ಉತ್ತಮ ಹಣದ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಏಕೆಂದರೆ 16 ಜನವರಿ ರಂದು ಮಂಗಳವು ಧನು ರಾಶಿಯಲ್ಲಿ ಗೋಚರಿಸುವುದು, ನಿಮ್ಮ ಆರ್ಥಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಇದರಿಂದಾಗಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮತ್ತು ನೀವು ಎಲ್ಲಾ ರೀತಿಯ ಆರ್ಥಿಕ ಬಿಕ್ಕಟ್ಟನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಮಾರ್ಚ್ ತಿಂಗಳ ನಂತರದ ಸಮಯವೂ ನಿಮಗೆ ಇನ್ನಷ್ಟು ಉತ್ಮವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಲಗ್ನದ ಮನೆಯ ಅಧಿಪತಿ ನಿಮ್ಮದೇ ರಾಶಿಯಲ್ಲಿ ಇರುವುದು, ನಿಮ್ಮ ಪರಿಸ್ಥಿತಿಯಲ್ಲಿ ಅನುಕೂಲತೆಯನ್ನು ತರುವ ಕೆಲಸ ಮಾಡುತ್ತದೆ. ಇದು ನಿಮ್ಮ ಗಳಿಕೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಹಿಂದಿನ ಜೀವನದಲ್ಲಿ ಮಾಡಿದ ಪ್ರತಿಯೊಂದು ಹೂಡಿಕೆಯಿಂದಲೂ ನೀವು ಉತ್ತಮ ಹಣವನ್ನು ಗಳಿಸಲು ನಿಮಗೆ ಸಾಧ್ಯವಾಗುತ್ತದೆ.

ಮಾರ್ಚ್ ತಿಂಗಳ ಆರಂಭದಿಂದ, ನಿಮ್ಮ ರಾಶಿಯಲ್ಲಿ ಅನುಕೂಲಕರ ಯೋಗವು ನಿರ್ಮಿಸುತ್ತದೆ. ಇದರ ಪರಿಣಾಮವಾಗಿ, ನಿಮ್ಮ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಉತ್ತಮಗೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ ನಿಮ್ಮ ಸಿಲುಕಿಕೊಂಡಿರುವ ಹಣವನ್ನು ಪಡೆಯಲು ಸಹ ನಿಮಗೆ ಸಾಧ್ಯವಾಗುತ್ತದೆ. ವಿಶೇಷವಾಗಿ ನಿಮ್ಮ ಹಣ ಎಲ್ಲಾದರೂ ಅಂಟಿಕೊಂಡಿದ್ದರೆ, ಈ ಸಮಯದಲ್ಲಿ ಅದನ್ನು ಮರಳಿ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಈ ವರ್ಷ ವಿಶೇಷವಾಗಿ ಜುಲೈ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳ ವರೆಗೆ, ನಿಮ್ಮ ಲಗ್ನದ ಮನೆಯ ಅಧಿಪತಿ ನಿಮ್ಮ ಖರ್ಚುಗಳ ಹನ್ನೆರಡನೇ ಮನೆಯಲ್ಲಿ ಕುಳಿತುಕೊಂಡಾಗ, ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಆ ಸಮಯದಲ್ಲಿ ನಿಮ್ಮ ಖರ್ಚುಗಳನ್ನು ನಿಯಂತ್ರಣದಲ್ಲಿಡುವ ಮೂಲಕ ನಿಮ್ಮ ಪ್ರತಿಯೊಂದು ಹೊಸ ಯೋಜನೆಯಲ್ಲಿ ಹಣ ಹೂಡುವ ಮೊದಲು ಮನೆಯ ಹಿರಿಯರ ಸಲಹೆಯನ್ನು ತೆಗೆದುಕೊಳ್ಳುವಂತೆ ನಿಮಗೆ ಸೂಚಿಸಲಾಗಿದೆ. ಈ ಸಮಯದಲ್ಲಿ ಅನೇಕ ಸ್ಥಳೀಯರು ಮನೆ -ಕುಟುಂಬ ಮತ್ತು ತಮ್ಮ ಕೆಲವು ಆಸೆಗಳನ್ನು ಈಡೇರಿಸಿಕೊಳ್ಳಲು ಸಂಗ್ರಹಿಸಿದ ಭಾಗವನ್ನು ಖರ್ಚು ಮಾಡಬಹುದು. ಇದಲ್ಲದೆ ಕೆಲವು ಸ್ಥಳೀಯ್ರು ವಿದೇಶಿ ಸಂಪರ್ಕಗಳು ಮತ್ತು ಮೂಲಗಳಿಂದಲೂ ಹಣ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ.

22 ಏಪ್ರಿಲ್ ರಿಂದ ರಾಹುವು ಮೇಷ ರಾಶಿಯಲ್ಲಿ ಇರುವುದರಿಂದಾಗಿ, ನಿಮ್ಮ ರಾಶಿಯ ಮೂರನೇ ಸಕ್ರಿಯವಾಗುತ್ತದೆ. ಆದರೆ ಈ ಸಮಯದಲ್ಲಿ ನೀವು ಹಣಕಾಸಿನ ದುರಾಸೆಯನ್ನು ತಪ್ಪಿಸಬೇಕು ಎಂಬುದು ಗಮನಾರ್ಹ ವಿಷಯ. ಏಕೆಂದರೆ ಈ ಸಮಯದಲ್ಲಿ ನೀವು ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆತುರವನ್ನು ತೋರಿಸಬಹುದು. ಈ ಕಾರಣದಿಂದಾಗಿ ಭವಿಷ್ಯದಲ್ಲಿ ನೀವು ಭಾರೀ ನಷ್ಟವನ್ನು ಸಹ ಅನುಭವಿಸಬೇಕಾಗಬಹುದು. ನವೆಂಬರ್ ಮತ್ತು ಡಿಸೆಂಬರ್ ತಿಂಗಳು, ಅಂದರೆ ವರ್ಷದ ಕೊನೆಯ ಭಾಗದಲ್ಲಿ ನಿಮ್ಮ ಹನ್ನೊಂದನೇ ಮನೆಯ ಅಧಿಅಪ್ಟಿ ಗುರುವಿನ ಅಪಾರ ಅನುಗ್ರಹದಿಂದಾಗಿ, ನೀವು ಎಲ್ಲಾ ರೀತಿಯಿಂದಲೂ ಆರ್ಥಿಕ ಪಭಾವನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಉದ್ಯೋಗ ಮಾಡುತ್ತಿರಲಿ ಅಥವಾ ವ್ಯಾಪಾರ ಮಾಡುತ್ತಿರಲಿ, ಎರಡೂ ಸಂದರ್ಭಗಳಲ್ಲಿ ನಿಮ್ಮ ಸಿಲುಕಿಕೊಂಡಿರುವ ಹಣವನ್ನು ಮರುಪಡೆಯಲು ನಿಮಗೆ ಸಾಧ್ಯವಾಗುತ್ತದೆ. ಎಂಕ ಸ್ಥಳೀಯರು ಈ ವರ್ಷ ಅನೇಕ ಪ್ರವಾಸಗಳನ್ನು ಮಾಡಬೇಕಾಗಬಹುದು. ಈ ಪ್ರಯಾಣಗಳು ನಿಮಗೆ ಹೆಚ್ಚಾಗಿ ಮಂಗಲಕಾರವಾಗಿರುತ್ತವೆ.

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ ಅರೋಗ್ಯ ಜೀವನ :

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ, ಮುಂಬರುವ ವರ್ಷವು ನಿಮ್ಮ ರಾಶಿಚಕ್ರದ ಜನರಿಗೆ ಸಾಮಾನ್ಯವಾಗಿರಲಿದೆ. ಆದಾಗ್ಯೂ, ವರ್ಷದ ಆರಂಭದ ತಿಂಗಳು ಅಂದರೆ ಜನವರಿ ಮಧ್ಯದಿಂದ ನೀವು ಕೆಲವು ಮಾನಸಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಇದು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಏಕೆಂದ್ರೆ ಈ ಸಮಯದಲ್ಲಿ ನಿಮ್ಮ ಹಾನಿಯ ಹನ್ನೆರಡನೇ ಮನೆಯಲ್ಲಿ ಅನೇಕ ಗ್ರಹಗಳ ಸಂಚಾರವಾಗಲಿದೆ. ಇದರ ನಂತರ ಫೆಬ್ರವರಿ ರಿಂದ ಮೇ ವರೆಗೆ, ನೀವು ಅನೇಕ ರೀತಿಯ ಹೊರಗಿನ ಎದುರಿಸಬೇಕಾಗಬಹುದು. ಆದಾಗ್ಯೂ, ನೀವು ಆರೋಗ್ಯವಾಗಿರಲು, ಸಾಧ್ಯವಾದಷ್ಟು ಹೊರಗಿನ ವಸ್ತುಗಳ ಬಗ್ಗೆ ಚಿಂತಿಸುವುದನ್ನು ತಪ್ಪಿಸಬೇಕು ಎಂದು ನೀವು ಅರ್ಥಮಾಡಿಕೊಳ್ಳಬೇಕು.

ಇದರ ನಂತರ ಏಪ್ರಿಲ್ ತಿಂಗಳ ಮಧ್ಯದಲ್ಲಿ, ಮೇಷ ರಾಶಿಯಲ್ಲಿ ರಾಹುವು ಗೋಚರಿಸುತ್ತದೆ. ಇದರ ಪರಿಣಾಮವಾಗಿ ಅದು ನಿಮ್ಮ ಮೂರನೇ ಮನೆಯಲ್ಲಿ ಕುಳಿತುಕೊಳ್ಳುತ್ತದೆ. ಈ ಕಾರಣದಿಂದಾಗಿ ಏಪ್ರಿಲ್ ಮಧ್ಯದಿಂದ ಜೂನ್ ತಿಂಗಳ ವರೆಗೆ, ನಿಮ್ಮ ಸಹೋದರ - ಸಹೋದರಿಯರಿಗೆ ಕೆಲವು ಅರೋಗ್ಯ ಕಷ್ಟಗಳು ಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಸಣ್ಣ ಪುಟ್ಟ ಸಮಸ್ಯೆಗಳಾದಾಗ ಅವರನ್ನು ವೈದ್ಯರ ಬಳಿ ಕರೆದೊಯ್ಯಿರಿ. ಇಲ್ಲದಿದ್ದರೆ ಸಣ್ಣದಾಗಿ ಕಂಡುಬರುವ ಸಮಸ್ಯೆಗಳು ಯಾವುದೇ ಗಂಭೀರ ರೋಗದ ರೂಪವನ್ನು ತೆಗೆದುಕೊಳ್ಳಬಹುದು. ನಂತರ ಮೇ ರಿಂದ ಅಕ್ಟೋಬರ್ ವರೆಗೆ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಉಂಟಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಜೀವನಕ್ಕೆ ಶಕ್ತಿ ಮತ್ತು ಬಲವನ್ನು ನೀಡುವ ಮಂಗಳ ಗ್ರಹವು ಬಹುಶಃ ನಿಮ್ಮ ರಾಶಿಯ ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಮನೆಯಿಂದ ಹಾದುಹೋಗುತ್ತದೆ. ಪರಿಣಾಮವಾಗಿ ನೀವು ಶಕ್ತಿಯನ್ನು ಪಡೆಯುವುದರೊಂದಿಗೆ ನಿಮ್ಮ ತ್ರಾಣವೂ ಸುಧಾರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಯಾವುದೇ ಹಿಂದಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮಗೆ ಅದನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಇದರೊಂದಿಗೆ ಜೂಲೈ ಮತ್ತು ಆಗಸ್ಟ್ ತಿಂಗಳ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯವೂ ಸುಧಾರಿಸುತ್ತದೆ. ಏಕೆಂದರೆ ಜೂಲೈ ಆರಂಭದಿಂದಲೇ ನಿಮ್ಮ ನಾಲ್ಕನೇ ಮನೆಯ ಅಧಿಪತಿ ತನ್ನದೇ ಮನೆಯಲ್ಲಿ ಅನುಕೂಲಕರ ಸ್ಥಿತಿಯಲ್ಲಿರುತ್ತಾರೆ.

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ ವೃತ್ತಿ ಜೀವನ

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ, ಕುಂಭ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ಅನುಕೂಲಕರವಾಗಿರಲಿದೆ. ವರ್ಷದ ಮೊದಲ ತಿಂಗಳಲ್ಲಿ ಧನು ರಾಶಿಯಲ್ಲಿ ಮಂಗಳನ ಸಂಚಾರವು, ನಿಮ್ಮ ಲಾಭದ ಹನ್ನೊಂದನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ವೃತ್ತಿ ಜೀವನದ ದೃಷ್ಟಿಕೋನದಿಂದ ನೀವು ಅಪಾರ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ನೀವು ವ್ಯಾಪಾರಿಯಾಗಿದ್ದರೆ, ಈ ಸಮಯದಲ್ಲಿ ಹೆಚ್ಚು ಲಾಭವನ್ನು ಪಡೆಯುವ ಸಾಧ್ಯತೆ ಕಂಡುಬರುತ್ತಿದೆ. ಉದ್ಯೋಗದಲ್ಲಿರುವ ಜನರು ಸಹ ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಇದಲ್ಲದೆ ಏಪ್ರಿಲ್ ತಿಂಗಳಿನಿಂದ ಶನಿ ದೇವ ನಿಮ್ಮದೇ ರಾಶಿಯಲ್ಲಿ ಗೋಚರಿಸುತ್ತಾರೆ. ಇದರಿಂದಾಗಿ ನಿಮ್ಮ ಲಗ್ನದ ಮನೆ ಸಕ್ರಿಯವಾಗುತ್ತದೆ. ಈ ಹಿಂದೆ ನಿಮ್ಮ ಮೂಲಕ ಮಾಡಲಾದ ಎಲ್ಲಾ ಕೆಲಸಗಳಿಗೆ ಉತ್ತಮ ಮತ್ತು ಅನುಕೂಲಕರ ಫಲಿತಾಂಶಗಳನ್ನು ನೀಡುವಲ್ಲಿ ಶನಿ ದೇವ ಸಂಪೂರ್ಣವಾಗಿ ಸಹಕಾರ ನೀಡುತ್ತಾರೆ. ಆದಾಗ್ಯೂ ಈ ಸಮಯದಲ್ಲಿ ನಿಮ್ಮ ಸೋಮಾರಿತನವು ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ಆಲಸ್ಯವನ್ನು ತ್ಯಜಿಸಿ ಮತ್ತು ನಿಮ್ಮ ಗುರಿಗಳತ್ತ ಮಾತ್ರ ಕೇಂದ್ರೀಕರಿಸಿ ಎಂದು ಸೂಚಿಸಲಾಗಿದೆ.

ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ವಿಶೇಷವಾಗಿ ತಮ್ಮ ಪಾಲುದಾರರೊಂದಿಗಿನ ಸಂಬಂಧವನ್ನು ಸುಧಾರಿಸಲು ಸಲಹೆ ನೀಡಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ನಡುವಿನ ಸಾಮರಸ್ಯವನ್ನು ಉತ್ತಮಗೊಳಿಸಿ ಮತ್ತು ಅವರೊಂದಿಗೆ ಸುಳ್ಳು ಹೇಳುವುದನ್ನು ತಪ್ಪಿಸಿ. ಇದರ ನಂತರ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳ ಸಮಯದಲ್ಲಿ ನಿಮ್ಮ ಹತ್ತನೇ ಮನೆಯ ಅಧಿಪತಿ ಕ್ರಮವಾಗಿ ನಿಮ್ಮ ನಾಲ್ಕನೇ ಮತ್ತು ಗೋಚರಿಸುತ್ತಾರೆ. ಈ ಸಮಯದಲ್ಲಿ ಅವರು ನಿಮ್ಮ ಕೆಲಸದ ಸ್ಥಳ ಮತ್ತು ಆದಾಯದ ಮನೆಯ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಇದರಿಂದಾಗಿ ಉದ್ಯೋಗದಲ್ಲಿರುವ ಜನರ ಜೀವನದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಏಕೆಂದರೆ ಯಾವುದೇ ಕಾರಣದಿಂದಾಗಿ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಅಧಿಕಾರಿಗಳು ಮತ್ತು ಬಾಸ್ ನಿಂದಿಗೆ ಸಣ್ಣ ಪುಟ್ಟ ವಿವಾದದ ಸಾಧ್ಯತೆ ಇದೆ, ಇದು ನಿಮಗೆ ಹಾನಿಯನ್ನುಂಟು ಮಾಡಬಹುದು.

ಇದನ್ನು ಹೊರತುಪಡಿಸಿ, ನಿಮ್ಮ ವೃತ್ತಿ ಜೀವನದ ದೃಷ್ಟಿಕೋನದಿಂದ ವರ್ಷದ ಅಂತ್ಯವು ಹೆಚ್ಚು ಉತ್ತಮವೆಂದು ಸಬೀತುಪಡಿಸುತ್ತದೆ. ಈ ಸಮಯದಲ್ಲಿ ನೀವು ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿದ್ದರೆ ಅಥವಾ ಯಾವುದೇ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನವೆಂಬರ್ ತಿಂಗಳು ನಿಮಗೆ ಅನುಕೂಲಕರವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಅಧಿಪತಿ ಶನಿ ದೇವ ನಿಮ್ಮ ವಿದೇಶದ ಮನೆಯಲ್ಲಿರುವುದು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ವಿದೇಶಕ್ಕೆ ಹೋಗಲು ಬಯಸುತ್ತಿರುವ ಜನರು ಸಹ ಈ ಸಮಯದಲ್ಲಿ ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ವಿದೇಶಿ ಪ್ರವಾಸದಲ್ಲಿ ಯಶಸ್ವಿಯಾಗಬಹುದು.

ವೃತ್ತಿ ಜೀವನ ತೊಂದರೆಗೀಡಾಗಿದೆಯೇ! ಈಗಲೇ ಆದೇಶಿಸಿ ಕಾಗ್ನಿ ಆಸ್ಟ್ರೋ ರಿಪೋರ್ಟ್

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ ಶೈಕ್ಷಣಿಕ ಜೀವನ :

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ, ಶಿಕ್ಷಣದ ದೃಷ್ಟಿಕೋನದಿಂದ ವರ್ಷ 2022 ನಿಮಗೆ ಉತ್ತಮವಾಗಿರುತ್ತದೆ. ಏಕೆಂದರೆ ವರ್ಷದ ಆರಂಭದಿಂದಲೇ ಮಂಗಳ ದೇವ ನಿಮ್ಮ ರಾಶಿಯ ಶಿಕ್ಷಣದ ಐದನೇ ಮನೆಯ ಮೇಲೆ ದೃಷ್ಟಿ ನೀಡುತ್ತಾರೆ, ಇದರಿಂದಾಗಿ ವಿದ್ಯಾರ್ಥಿಗಳ ಚಲನಶೀಲತೆ ಮತ್ತು ಸ್ಪರ್ಧಾತ್ಮಕ ಭಾವನೆ ಹೆಚ್ಚಾಗುತ್ತದೆ. ಆದಾಗ್ಯೂ ಆರಂಭದ ಸಮಯದಲ್ಲಿ ಅಧ್ಯಯನದಲ್ಲಿ ನೀವು ಹೆಚ್ಚು ಪ್ರಶ್ರಮಿಸುವ ಮೂಲಕ, ಅದರ ಬಗ್ಗೆ ಹೆಚ್ಚುವರಿ ಗಮನ ಹರಿಸಬೇಕಾಗುತ್ತದೆ. ಏಕೆಂದರೆ ಆಗ ಮಾತ್ರ ನೀವು ಮುಂಬರುವ ಪರೀಕ್ಷೆಯಲ್ಲಿ ಯಶಸ್ವಿಯಾಗುವಿರಿ. ಇದರ ಹೊರತಾಗಿ, 26 ಫೆಬ್ರವರಿ ರಿಂದ ನಿಮ್ಮ ಹನ್ನೆರಡನೇ ಮನೆಯಲ್ಲಿ ಮಂಗಳನ ಸಾಗಣೆಯು, ಖಂಡಿತವಾಗಿಯೂ ನಿಮ್ಮನ್ನು ಶಿಕ್ಷಣದಲ್ಲಿ ಹೆಚ್ಚು ಶ್ರಮಿಸುವಂತೆ ಮಾಡುತ್ತದೆ.

ಅದೇ ಸಮಯದಲ್ಲಿ ಮತ್ತೊಂದೆಡೆ, ಏಪ್ರಿಲ್ ಮಧ್ಯದಿಂದ ಶನಿಯು ಸಹ ನಿಮ್ಮ ರಾಶಿಯಲ್ಲಿ ಕುಳ್ತುಕೊಳ್ಳುವುದು, ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗೆ ನೀವು ಹೆಚ್ಚು ಶ್ರಮವಹಿಸುವಿರಿ. ಏಕೆಂದರೆ ಈ ಸಮಯದಲ್ಲಿ ಕರ್ಮಫಲವನ್ನು ನೀಡುವ ಶನಿ, ವಿದ್ಯಾರ್ಥಿಗಳಿಗೆ ಹೆಚ್ಚು ಸಮಸ್ಯೆಗಳನ್ನು ನೀಡುವ ಕೆಲಸ ಮಾಡುತ್ತಾರೆ. ಈ ಕಾರಣದಿಂದಾಗಿ ಅವರು ಶಿಕ್ಷಣದತ್ತ ಹೆಚ್ಚು ಮನಸ್ಸು ಹೊಂದಿರುವುದಿಲ್ಲ. ಅಂತಹ ಸನ್ನಿವೇಶದಲ್ಲಿ ಅವರು ತಮ್ಮ ಪರಿಶ್ರಮ ಮತ್ತು ತಮ್ಮ ಶಿಕ್ಷಣದ ಮೇಲೆ ಸಂಪೂರ್ಣ ನಂಬಿಕೆಯನ್ನಿಟ್ಟು, ತಮ್ಮನ್ನು ಏಕಾಗ್ರತೆಯೊಂದಿಗೆ ಅಧ್ಯಯನದತ್ತ ಕೇಂದ್ರೀಕರಿಸುವ ಅಗತ್ಯವಿದೆ.

ಇದರ ಹೊರತಾಗಿ, ಗುರು ಗ್ರಹವು ನಿಮ್ಮ ಸ್ಪರ್ಧಾತ್ಮಕ ಮನೆಯ ಮೇಲೆ ದೃಷ್ಟಿ ಹಾಕುವುದು, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ವರ್ಷ ವಿಶೇಷವಾಗಿ ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿರುವ ಜನರು ಸೆಪ್ಟೆಂಬರ್ ತಿಂಗಳಿನಿಂದ ನವೆಂಬರ್ ತಿಂಗಳ ವರೆಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಪಡೆಯುವುದರೊಂದಿಗೆ, ಉತ್ತಮ ಸ್ಥಳ ಅಥವಾ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇದರೊಂದಿಗೆ ವರ್ಷದ ಅಂತ್ಯವು ಸಹ ನಿಮ್ಮ ಶಿಕ್ಷಣಕ್ಕೆ ಉತ್ತಮವಾಗಿರಲಿದೆ.

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ ವೈಗಾಹಿಕ ಜೀವನ :

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ, ಕುಂಭ ರಾಶಿಚಕ್ರದ ವಿವಾಹಿತ ಸ್ಥಳೀಯರಿಗೆ ಈ ಸಮಯವು ಮಿಶ್ರ ಫಲಿತಾಂಶಗಳನ್ನು ತರಲಿದೆ. ಏಕೆಂದರೆ ಆರಂಭದ ಭಾಗದಲ್ಲಿ ಶನಿ ದೇವ ನಿಮ್ಮ ಮದುವೆಯ ಮನೆಯ ಮೇಲೆ ದೃಷ್ಟಿ ಹಾಕಿದಾಗ, ನೀವು ಕೆಲವು ಕಷ್ಟಗಳನ್ನು ಎದುರಿಸಬೇಕಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ ವರ್ಷದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿಗಳು ಉತ್ತಮಗೊಳ್ಳುವುದನ್ನು ಕಾಣಲಾಗುತ್ತದೆ ಮತ್ತು ಜೀವನ ಸಂಗಾತಿಯು ಪ್ರೀತಿ ಮತ್ತು ಬೆಂಬಲದ ಮನಸ್ಥಿತಿಯಲ್ಲಿರುವುದರಿಂದಾಗಿ ನಿಮ್ಮ ಸಂಬಂಧದಲ್ಲಿ ಮತ್ತೊಮ್ಮೆ ಹೊಸತನವನ್ನು ಅನುಭವಿಸಲು ನಿಮಗೆ ಸಾಧ್ಯವಾಗುತ್ತದೆ. ಹಿಂದಿನ ಯಾವುದೇ ವಿವಾದ ನಡೆಯುತ್ತಿದ್ದರೆ, ನೀವು ಅದನ್ನು ಪರಿಹರಿಸುವಲ್ಲಿ ಜನವರಿ ತಿಂಗಳನ್ನು ಕಳೆಯಬಹುದು. ಇದರ ಹೊರತಾಗಿ, ಜನವರಿಯಿಂದ ಏಪ್ರಿಲ್ ವರೆಗೆ, ನಿಮ್ಮ ಜೀವನ ಸಂಗಾತಿ ಮತ್ತು ಅತ್ತೆಮನೆ ಕಡೆಯಿಂದ ನೀವು ನಿರಂತರ ಒತ್ತಡವನ್ನು ಪಡೆಯುತ್ತಲೇ ಇರುತ್ತೀರಿ. ವಿಶೇಷವಾಗಿ ಮಾರ್ಚ್ ತಿಂಗಳಲ್ಲಿ ನಿಮ್ಮ ಎಂಟನೇ ಮನೆಯ ಅಧಿಪತಿ ಬುಧವು ನಿಮ್ಮ ಮದುವೆಯ ಮನೆಯ ಮೇಲೆ ದೃಷ್ಟಿ ಹಾಕುವುದು ನಿಮ್ಮ ಸಂಬಂಧದಲ್ಲಿ ತಪ್ಪು ಗ್ರಹಿಕೆಗಳನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ನೀವು ನಿಮ್ಮನ್ನು ಅನೇಕ ಮಾನಸಿಕ ಒತ್ತಡಗಳಿಂದ ಸುತ್ತುವರೆದಿರುವಿರಿ.

ಆದಾಗ್ಯೂ, ಮಧ್ಯಾರ್ಧದಲ್ಲಿ ಅಂದರೆ ಜೂನ್ ಮತ್ತು ಜೂಲೈ ತಿಂಗಳಲ್ಲಿ ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಕಂಡುಬರುತ್ತದೆ. ಇದರ ನಂತರ ವಿಶೇಷವಾಗಿ ಸೆಪ್ಟೆಂಬರ್ ತಿಂಗಳಲ್ಲಿ, ನಿಮ್ಮಿಬ್ಬರ ನಡುವೆ ಪುನಃ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ. ಇದು ನಿಮ್ಮಿಬ್ಬರ ಪರಸ್ಪರ ಪ್ರೀತಿ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ. ಈ ವರ್ಷ ಗ್ರಹಗಳ ಚಲನೆಯು, ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ನೀವಿಬ್ಬರೂ ಒಟ್ಟಾಗಿ ಧಾರ್ಮಿಕ ಪ್ರಯಾಣ ಅಥವಾ ಯಾವುದೇ ಉತ್ತಮ ಸ್ಥಳಕ್ಕೆ ಹೋಗಲು ಯೋಜಿಸಬಹುದು. ಈ ಪ್ರಯಾಣದಿಂದ ನಿಮ್ಮಿಬ್ಬರ ನಡುವೆ ಪ್ರೀತಿಯ ಭಾವನೆ ಇನ್ನಷ್ಟು ಹೆಚ್ಚಾಗಲು ಸಾಧ್ಯವಾಗುತ್ತದೆ. ಕೆಲವು ನವವಿವಾಹಿತ ಜನರು ತಮ್ಮ ದಾಂಪತ್ಯ ಜೀವನದಲ್ಲಿ ವಿಸ್ತರಣೆಯ ಬಗ್ಗೆ ಯೋಚಿಸುವುದನ್ನು ಕಾಣಲಾಗುತ್ತದೆ.

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ ಕುಟುಂಬ ಜೀವನ :

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ ಈ ವರ್ಷ ಕುಂಭ ರಾಶಿಚಕ್ರದ ಜನರು ಸಾಮಾನ್ಯ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಏಕೆಂದರೆ ಈ ವರ್ಷ ನಿಮ್ಮ ಕುಟುಂಬ ಜೀವನದಲ್ಲಿ ಯಾವುದೇ ವಿಶೇಷ ಬದಲಾವಣೆ ಉಂಟಾಗುವುದಿಲ್ಲ. ಆದಾಗ್ಯೂ, ಜನವರಿ ರಿಂದ ಮಾರ್ಚ್ ಮಧ್ಯದ ವರೆಗೆ ನೀವು ಕೆಲವು ಕೌಟುಂಬಿಕ ಸಮಸ್ಯೆಗಳು ಅಥವಾ ಕುಟುಂಬ ವಿವಾದವನ್ನು ಎದುರಿಸಬೇಕಾಗಬಹುದು. ಏಕೆಂದರೆ ಈ ವರ್ಷದ ಆರಂಭದಲ್ಲೇ ಕೆಂಪು ಗ್ರಹ ಮಂಗಳ ನಿಮ್ಮ ಕುಟುಂಬದ ಎರಡನೇ ಮನೆಯ ಮೇಲೆ ದೃಷ್ಟಿ ಹಾಕುವುದು, ನಿಮ್ಮ ಮಾನಸಿಕ ಒತ್ತಡದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದರೆ ನಿಮ್ಮ ತಂದೆಯ ಬೆಂಬಲ ಮತ್ತು ಸಹಾಯವನ್ನು ಪಡೆಯುತ್ತಲೇ ಇರುವ ಸಮಯ ಇದು. ಇದರ ಸಹಾಯದಿಂದ ನೀವು ಸಾಕಷ್ಟು ಮಟ್ಟಿಗೆ ನಿಮ್ಮನ್ನು ಸಾಮಾನ್ಯರನ್ನಾಗಿಡಲು ಸಾಧ್ಯವಾಗುತ್ತದೆ.

ಈ ವರ್ಷ ಮೇಷ ರಾಶಿಯಲ್ಲಿ ರಾಹು ಗ್ರಹದ ಸಂಚಾರವು ಮತ್ತು ಕರ್ಮದ ಫಲವನ್ನು ನೀಡುವ ಶನಿ ಸಂಚಾರವು ಕುಂಭ ರಾಶಿಯಲ್ಲಿ ಇದ್ದಾಗ, ಈ ಪರಿಸ್ಥಿತಿಯು ವಿಶೇಷವಾಗಿ ನಿಮ್ಮ ಕುಟುಂಬ ಜೀವನದ ಮೇಲೆ ಪರಿಣಾಮ ಬೀರುತ್ತಾರೆ. ಈ ಕಾರಣದಿಂದಾಗಿ ನಿಮ್ಮ ಕನಸ್ಸಿನಲ್ಲಿ ಹಠಮಾರಿತನ ಇರುತ್ತದೆ. ಇದಲ್ಲದೆ ಯಾವುದೇ ಕಾರಣದಿಂದಾಗಿ ಅನೇಕ ತಮ್ಮ ಮನೆ ಕುಟುಂಬದಿಂದ ದೂರ ಹೋಗಬೇಕಾಗಬಹುದು. ವರ್ಷದ ಮೊದಲಾರ್ಧದಲ್ಲಿ ನಿಮ್ಮ ಧ್ವನಿಯನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗಿದೆ, ಇಅಲಲ್ದೆ ಈ ಸಮಯದಲ್ಲಿ ಕಾನೂನು ಪ್ರಕರಣದಿಂದ ದೂರವಿರಲು ಸಹ ಸೂಚಿಸಲಾಗಿದೆ. ಇದು ನಿಮಗೆ ಮತ್ತು ಕುಟುಂಬಕ್ಕೆ ಒಳ್ಳೆಯದು.

ಇದರ ನಂತರ ಜೂನ್ ನಿಂದ ಸೆಪ್ಟೆಂಬರ್ ತಿಂಗಳ ಸಮಯವು ನೀವು ನಿಮ್ಮ ಕುಟುಂಬದಿಂದ ದೂರ ಹೋಗಬೇಕಾಗುವಂತಹ ಅನೇಕ ಸನ್ನಿವೇಶಗಳನ್ನು ಸೂಚಿಸುತ್ತಿದೆ. ವಿಶೇಷವಾಗಿ ಆಗಸ್ಟ್ ತಿಂಗಳ ಸಮಯದಲ್ಲಿ, ಕೆಂಪು ಗ್ರಹ ಮಂಗಳ ನಿಮ್ಮ ನಾಲ್ಕನೇ ಮನೆಯ ಮೇಲೆ ಪರಿಣಾಮ ಬೀರುವುದು, ನೀವು ಮನೆಯಿಂದ ದೂರ ಹೋಗಲು ಅವಕಾಶಗಳನ್ನು ಸೃಷ್ಟಿಸುತ್ತದೆ. ಆದಾಗ್ಯೂ, ಇದರಿಂದಾಗಿ ನಿಮ್ಮ ಕುಟುಂಬದೊಂದಿಗೆ ಪ್ರೀತಿ ಮತ್ತು ಬಲವಾದ ಸಂಬಂಧವನ್ನು ನಿರ್ಮಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನಂತರ ಕೊನೆಯ ಮೂರು ತಿಂಗಳುಗಳು ಅಂದರೆ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಿಮ್ಮ ಸಹೋದರ ಸಹೋರಿಯರು ಬಹಿರಂಗವಾಗಿ ನಿಮ್ಮನ್ನು ಬೆಂಬಲಿಸುತ್ತಾರೆ. ಇದರೊಂದಿಗೆ ಗುರು ಗ್ರಹದ ಅಪಾರ ಅನುಗ್ರಹ ಮತ್ತು ಆಶೀರ್ವಾದವು ನಿಮ್ಮ ಕುಟುಂಬದ ಎರಡನೇ ಮನೆಯ ಮೇಲಿರುವುದರಿಂದ ನೀವು ಮನೆಯ ಹಿರಿಯ ಸದಸ್ಯರ ಆಶೀರ್ವಾದವನ್ನು ಪಡೆಯಲು ಸಹ ಸಾಧ್ಯವಾಗುತ್ತದೆ. ವರ್ಷದ ಈ ಸಮಯ ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಕುಟುಂಬದ ಮೂಲಕ ನೀವು ಗೌರವವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ನಿಮ್ಮ ಜಾತಕದ ಆಧಾರದ ಮೇಲೆ ನಿಖರವಾದ ಶನಿ ರಿಪೋರ್ಟ್ ಅನ್ನು ಪಡೆಯಿರಿ

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ ಪ್ರೀತಿ ಜೀವನ :

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷವು ಕುಂಭ ರಾಶಿಚಕ್ರದ ಸ್ಥಳೀಯರ ಪ್ರೀತಿಯ ಸಂಬಂಧದಲ್ಲಿ ಅನುಕೂಲತೆಯನ್ನು ತರುತ್ತದೆ. ಏಕೆಂದರೆ ಈ ವರ್ಷ ನೀವು ಸಂಪೂರ್ಣವಾಗಿ ನಿಮ್ಮ ಪ್ರೇಮಿಯನ್ನು ಸಂತೋಷಪಡಿಸಲು ಸಾಧ್ಯವಾಗುತದೆ, ಇದು ನಿಮ್ಮ್ ಸಂಬಂಧವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಈ ವರ್ಷ ನಿಮ್ಮ ಸಂಬಂಧದಲ್ಲಿ ಪ್ರೀತಿಯ ಹೆಚ್ಚಳವನ್ನು ಸ್ಪಷ್ಟವಾಗಿ ಕಾಣಲಾಗುತ್ತದೆ. ಇದರಿಂದಾಗಿ ಅನೇಕ ಸ್ಥಳೀಯರು ತಮ್ಮ ಪ್ರೇಮಿಯನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಆರಿಸಿಕೊಂಡು ಮುಂದುವರಿಯಲು ಒಂದು ನಿರ್ಣಯವನ್ನು ತೆಗೆದುಕೊಳ್ಳಲು ಸಹ ಸಾಧ್ಯವಾಗುತ್ತದೆ.

ಆದಾಗ್ಯೂ, ಏಪ್ರಿಲ್ ತಿಂಗಳಲ್ಲಿ ಸಂಭವಿಸಲಾಗುವ ಶನಿ ಸಂಚಾರವು ಕೆಲವು ಸಮಸ್ಯೆಗಳನ್ನು ನೀಡಬಹುದು. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಪದಗಳನ್ನು ನಿಯಂತ್ರಣದಲ್ಲಿಡಲು ಮತ್ತು ಯಾವುದೇ ಕೆಲಸವನ್ನು ಆತುರದಲ್ಲಿ ಮಾಡದಿದರಲು ಸಲಹೆ ನೀಡಲಾಗಿದೆ. ಇದರ ನಂತರ ಏಪ್ರಿಲ್ ನಿಂದ ಮೀನಾ ರಾಶಿಯಲ್ಲಿ ಗುರು ಗ್ರಹದ ಸಂಚಾರದಿಂದಾಗಿ, ನಿಮ್ಮ ರಾಶಿಚಕ್ರದ ಎರಡನೇ ಮನೆ ಪ್ರಭಾವಿತವಾಗುತ್ತದೆ. ಇದರ ಪರಿಣಾಮದಿಂದಾಗಿ ಪರಿಸ್ಥಿತಿಗಳು ಮತ್ತೆ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ ಮತ್ತು ಕೆಲವು ಪ್ರೇಮಿಗಳು ಪ್ರೀತಿ ಮದುವೆಯಾಗಲು ನಿರ್ಧಾರವನ್ನು ಸಹ ತೆಗೆದುಕೊಳ್ಳಬಹುದು. ಇದರ ನಟನಾರ ಮತ್ತೆ ಜೂನ್ ನಂತರ ಐದನೇ ಮನೆಯ ಅಧಿಪತಿ ಬುಧದ ತನ್ನ ಸ್ವಂತ ಮನೆಯಲ್ಲಿ ಉಪಸ್ಥಿತಿಯು, ನಿಮ್ಮ ಸಂಬಂಧದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳನ್ನು ಉಂಟುಮಾಡುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಪ್ರೇಮಿಯ ಮಾತುಗಳನ್ನು ಅರ್ಥಮಾಡಿಕೊಳ್ಳುವತ್ತ ಹೆಚ್ಚು ಪ್ರಯತ್ನಿಸಬೇಕಾಗುತ್ತದೆ. ಏಕೆಂದರೆ ಅದನ್ನು ಮಾಡುವುದರಿಂದ ಮಾತ್ರ ನೀವು ನಿಮ್ಮಿಬ್ಬರ ನಡುವಿನ ತಪ್ಪು ಗ್ರಹಿಕೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.

ಕುಂಭ ರಾಶಿ ಭವಿಷ್ಯ 2022 ರ ಪ್ರಕಾರ ಜ್ಯೋತಿಷ್ಯ ಪರಿಹಾರ ಕರ್ಮಗಳು :

  1. ಈ ವರ್ಷ ನೀವು ನಿಯಮಿತವಾಗಿ ಶನಿ ದೇವರನ್ನು ಪೂಜಿಸಬೇಕು ವಿಧಾನದ ಪ್ರಕಾರ ಏಳು ಮುಖಿ ರುದ್ರಾಕ್ಷವನ್ನು ಧರಿಸಬೇಕು.
  2. ಪ್ರತಿ ಶನಿವಾರ ಹಸುವಿಗೆ ಬೆಲ್ಲ- ರೊಟ್ಟಿಯನ್ನು ತಿನ್ನಿಸಿನ್ ಮತ್ತು ಅದರ ಪಾದದ ಧೂಳು ನಿಮ್ಮ ಹಣೆಯ ಮೇಲೆ ಹಚ್ಚುವುದರಿಂದಲೂ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ.
  3. ಜೀವನದಲ್ಲಿ ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯಲು ಶನಿವಾರ ಕಬ್ಬಿಣದ ದಾನ ಮಾಡಿ.

ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನಮ್ಮ ಈ ಲೇಖನವು ನಿಮಗೆ ಬಹಳ ಸಹಾಯ ಮಾಡಿದೆ ಎಂದು ನಾವು ಭಾವಿಸುತ್ತೇವೆ. ಹಾಗಿದ್ದಲ್ಲಿ, ಅದನ್ನು ನಿಮ್ಮ ಇತರ ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಧನ್ಯವಾದಗಳು!

More from the section: Horoscope 3299
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2023
© Copyright 2024 AstroCAMP.com All Rights Reserved