• Talk To Astrologers
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

ವೃಶ್ಚಿಕ ರಾಶಿ ಭವಿಷ್ಯ 2022 - Scorpio Yearly Horoscope 2022 in Kannada

Author: -- | Last Updated: Fri 27 Aug 2021 11:09:03 AM

ವೃಶ್ಚಿಕ ರಾಶಿ ಭವಿಷ್ಯ 2022 (Vrishchik Rashifal 2022) ಅನ್ನು ಅರ್ಥಮಾಡಿಕೊಂಡರೆ, ಮುಂಬರುವ ವರ್ಷವು ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಹಲವು ವಿಧಗಳಲ್ಲಿ ಮಹತ್ವದ್ದಾಗಿದೆ. ಏಕೆಂದರೆ ಈ ವರ್ಷ 2022 ರಲ್ಲಿ ನೀವು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ವರ್ಷದುದ್ದಕ್ಕೂ ನಿಮ್ಮ ರಾಶಿಚಕ್ರದ ವಿವಿಧ ಮನೆಗಳಲ್ಲಿ ಅನೇಕ ಗ್ರಹಗಳ ಸಾಗಣೆಯು, ಅದಕ್ಕೆ ಸಂಬಂಧಿಸಿದ್ ಅನೇಕ ಫಲಿತಾಂಶಗಳನ್ನು ನಿಮಗೆ ನೀಡಲಿದೆ. ಹೊಸ ವರ್ಷ ಬಂದ ತಕ್ಷಣ, ಹೊಸ ವರ್ಷಕ್ಕೆ ಸಂಬಂಧಿಸಿದ ಜೀವನದ ವಿವಿಧ ಕ್ಷೇತ್ರಗಳ ಮುನ್ಸೂಚನೆಗಳನ್ನು ತಿಳ್ಯಳು ಪ್ರತಿಯೊಬ್ಬರೂ ಉತ್ಸುಕರಾಗುವುದನ್ನು ನಾವು ಸಾಮಾನ್ಯವಾಗಿ ನೋಡಿದ್ದೇವೆ. ಆದ್ದರಿದ ಆಸ್ಟ್ರೋಕ್ಯಾಂಪ್ನ ಪರಿಣಿತ ಜ್ಯೋತಿಷಿಗಳು ಗ್ರಹಗಳು ಮತ್ತು ನಕ್ಷತ್ರಪುಂಜಗಳನ್ನು ಲೆಕ್ಕಹಾಕುವ ಮೂಲಕ ನಿಮಗಾಗಿ ವಿಶೇಷವಾಗಿ ಸಿದ್ಧಪಡಿಸಿದ್ದಾರೆ. “ವೃಶ್ಚಿಕ ರಾಶಿ ಭವಿಷ್ಯ 2022” ರ ಸಹಾಯದಿಂದ ನೀವು ನಿಮ್ಮ ಪ್ರೀತಿಯ ಸಂಬಂಧ, ವೈವಾಹಿಕ ಜೀವನ, ವೃತ್ತಿ ಮತ್ತು ಆರ್ಥಿಕ ಜೀವನ, ಕುಟುಂಬ, ಶಿಕ್ಷಣ ಮತ್ತು ಅರೋಗ್ಯ ಜೀವನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನಮ್ಮ ಈ ರಾಶಿ ಭವಿಷ್ಯದಲ್ಲಿ ಕೆಲವು ಪರಿಹಾರ ಕ್ರಮಗಳನ್ನು ಸಹ ನಿಮಗೆ ಸೂಚಿಸಲಾಗಿದೆ. ಅವುಗಳ ಸಹಾಯದಿಂದ ವೃಶ್ಚಿಕ ರಾಶಿಚಕ್ರದ ಜನರು ತಮ್ಮ ಮುಂಬರುವ ಸಮಯವನ್ನು ಇನ್ನಷ್ಟು ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ.

Scorpio Horoscope 2022 In Kannada

ರಾಶಿ ಭವಿಷ್ಯ 2022 ರ ಪ್ರಕಾರ, ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಅರೋಗ್ಯಕ್ಕಾಗಿ ಈ ವರ್ಷ ಮಿಶ್ರವಾಗಲಿದೆ. ವಿಶೇಷವಾಗಿ ಈ ವರ್ಷ ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ಗುರು ಗ್ರಹದ ಅನಂತ ಅನುಗ್ರಹವು, ನಿಮ್ಮ ಎಲ್ಲಾ ದೀರ್ಘಕಾಲದ ಕಾಯಿಲೆಗಳನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿಮಗೆ ಈ ವರ್ಷವು ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ವಿಶೇಷವಾಗಿ ಆರಂಭದ ಹಂತದಲ್ಲಿ ನಿಮ್ಮ ಸಾಲದ ಆರನೇ ಮನೆಯ ಅಧಿಪತಿ ನಿಮ್ಮ ಹಣದ ಎರಡನೇ ಮನೆಗೆ ಸಾಗುತ್ತಾರೆ. ಈ ಕಾರಣದಿಂದಾಗಿ ಈ ಸಮಯದಲ್ಲಿ ನಿಮ್ಮ ವೆಚ್ಚಗಳ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಆದರೆ ಈ ಸಮಯದ್ಲಲೂ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೀವು ನಿರಂತರವಾಗಿ ಪ್ರಯತ್ನಿಸುವುದು ಕಾಣುದುಬರುತ್ತದೆ. ಅದೇ ಸಮಯದಲ್ಲಿ ವೃತ್ತಿ ಜೀವನದಲ್ಲಿ ವೃಶ್ಚಿಕ ರಾಶಿಚಕ್ರದ ಜನರು ಸಾಮಾನ್ಯ ಫಲಿತಾಂಶವನ್ನು ಪಡೆಯುತ್ತಾರೆ. ಆದಾಗ್ಯೂ, ಕೆಲವು ಸ್ಥಳೀಯರು ಸ್ಟಳ ಬದಲಾವಣೆಯಿಂದಾಗಿ ಅನೇಕ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೀವು ಯಾವುದೇ ವಿದೇಶಕ್ಕೆ ಸಂಬಂಧಿಸಿದ್ ಪ್ರಯಾಣ ಮಾಡಲು ಬಯಸುತ್ತಿದ್ದರೆ, ಈ ವರ್ಷ ಅದಕ್ಕಾಗಿ ಅನುಕೂಲಕರವಾಗಿರಲಿದೆ.

ಕುಟುಂಬ ದೃಷ್ಟಿಕೋನದಿಂದ, ಈ ವರ್ಷ ಪ್ರತಿಕೂಲವಾಗಿರಲಿದೆ. ಈ ಸಮಯದಲ್ಲಿ ಮನೆಯ ಹಿರಿಯರ ಬೆಂಬಲವನ್ನು ಪಡೆಯಲು ಮತ್ತು ಕುಟುಂಬ ಸದಸ್ಯರೊಂದಿಗೆ ಒಂದುಗೂಡಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನೀವು ವಿಧ್ಯಾರ್ಥಿಯಾಗಿದ್ದರೆ, ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ, ಶಿಕ್ಷಣದ ಕ್ಷೇತ್ರದಲ್ಲಿ, ವರ್ಷದ ಆರಂಭದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ ಮಧ್ಯ ಸಮಯದ ನಂತರ ನೀವು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಶಿಕ್ಷಣದ ಬಗ್ಗೆ ನಿಮ್ಮ ಗಮನವು ಸ್ವಲ್ಪ ಗೊಂದಲಕ್ಕೊಳಗಾಗಬಹುದು.

ನಿಮ್ಮ ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ಪ್ರೀತಿಯಲ್ಲಿರುವ ಸ್ಥಳೀಯರ ಪ್ರೀತಿ ಜೀವನವು ಈ ವರ್ಷ ಪ್ರೀತಿ ಮತ್ತು ಪ್ರಣಯದಿಂದ ತುಂಬಿರಲಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ನೀವು ವಿವಾಹಿತರಾಗಿದ್ದರೆ, ಈ ವರ್ಷ ನಿಮ್ಮ ದಾಂಪತ್ಯ ಜೀವನದಲ್ಲಿ ನೀವು ಸಾಮಾನ್ಯಕ್ಕಿಂತ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ, ನೀವು ಇಬ್ಬರೂ ನಿಮ್ಮ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಸುಂದರವಾದ ಕ್ಷಣಗಳನ್ನು ಆನಂದಿಸುವುದನ್ನು ಕಾಣಲಾಗುತ್ತದೆ.

ನಿಮ್ಮ ಜಾತಕದ ಆಧಾರದ ಮೇಲೆ ನಿಖರವಾದ ಶನಿ ರಿಪೋರ್ಟ್ ಅನ್ನು ಪಡೆಯಿರಿ

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ ಆರ್ಥಿಕ ಜೀವನ :

ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಹನಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಈ ವರ್ಷ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ವಿಶೇಷವಾಗಿ ವರ್ಷದ ಆರಂಭವು ನಿಮ್ಮ ವೆಚ್ಚಗಳಲ್ಲಿ ಹೆಚ್ಚಳವನ್ನು ತರುತ್ತದೆ. ಏಕೆಂದರೆ ನಿಮ್ಮ ಆರನೇ ಮನೆಯ ಅಧಿಪತಿ ಈ ಸಮಯದಲ್ಲಿ ಹಣದ ಮನೆಯಲ್ಲಿ ಇರುತ್ತಾರೆ. ಇದರ ಪರಿಣಾಮವಾಗಿ ನೀವು ಜನವರಿ ರಿಂದ ಏಪ್ರಿಲ್ ವರೆಗೆ ನಿಷ್ಪ್ರಯೋಜಕ ಖರ್ಚು ಮಾಡುವ ಮೂಲಕ ನಿಮ್ಮ ಆರ್ಥಿಕ ಬಿಕ್ಕಟ್ಟನ್ನು ಹೆಚ್ಚಿಸಬಹುದು. ಆದಾಗ್ಯೂ, ಮಾರ್ಚ್ ತಿಂಗಳಲ್ಲಿ ಮೀನ ರಾಶಿಯಲ್ಲಿ ಬುಧ ಸಂಚಾರವು, ಆರ್ಥಿಕ ಜೀವನದಲ್ಲಿ ನಿಮಗೆ ಕೆಲವು ಸಕಾರಾತ್ಮಕತೆಯನ್ನು ನೀಡಲಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಇದರ ನಂತರ ಮೇ ರಿಂದ ಸೆಪ್ಟೆಂಬರ್ ವರೆಗೆ, ನೀವು ಬೇರೆ ಬೇರೆ ವಿಧಾನಗಳ ಮೂಲಕ ಹಣ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಏಕೆಂದರೆ ಈ ಸಮಯದಲ್ಲಿ ಗುರು ಗ್ರಹವು ನಿಮ್ಮ ಆದಾಯದ ಮನೆಯ ಮೇಲೆ ದೃಷ್ಟಿ ಹಾಕುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಹಣ ಎಲ್ಲಾದರೂ ಸಿಲುಕಿಕೊಡಿದ್ದರೆ, ಅದನ್ನು ಸಹ ನೀವು ಮರಳಿ ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಸೆಪ್ಟೆಂಬರ್ ತಿಂಗಳಲ್ಲಿ ನೀವು ಕೆಲವು ರಹಸ್ಯ ಮೂಲಗಳಿಂದಲೂ ಹಣ ಪಡೆಯುವಲ್ಲಿ ಯಶಸ್ಸು ಪಡೆಯುತ್ತೀರಿ. ಇದರಿಂದಾಗಿ ಧಾರ್ಮಿಕ ಚಟುವಟಿಕೆಗಳಲ್ಲೂ ನೀವು ಮುಂದುವರಿದು ಭಾಗವಹಿಸುವ ಮೂಲಕ ಆರ್ಥಿಕ ಬೆಂಬಲ ನೀಡಲು ಸಹ ಹಿಂಜರಿಯುವುದಿಲ್ಲ. ಇದರೊಂದಿಗೆ ಈ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಿಮ್ಮ ಲಗ್ನದ ಮನೆಯ ಅಧಿಪತಿ ಮಂಗಳ ದೇವ ನಿಮ್ಮ ಮದುವೆಯ ಮನೆಗೆ ಗೋಚರಿಸುತ್ತಾರೆ. ಆ ಸಮಯದಲ್ಲಿ ಸಹ ನೀವು ನಿಮ್ಮ ಜೀವನ ಸಂಗಾತಿಯ ಮೂಲಕ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ ಅರೋಗ್ಯ ಜೀವನ

ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಆರೋಗ್ಯಕ್ಕೆ ಸಂಬಂದಿಸಿದ ಮಿಶ್ರ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಏಕೆಂದರೆ ಈ ಸಮಯದಲ್ಲಿ ಶನಿ ಮತ್ತು ಗರುವಿನ ಸ್ಥಾನ ಬದಲಾವಣೆಯು ನಿಮ್ಮ ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ವಿಶೇಷವಾಗಿ ಏಪ್ರಿಲ್ ಮಧ್ಯದಲ್ಲಿ ಗುರುವಿನ ಸಂಚಾರವು ಒಂದೆಡೆ, ನಿಮ್ಮ ಹಳೆಯ ಗಂಭೀರ ರೋಗಗಳನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡಿದರೆ, ಅದೇ ಸಮಯದಲ್ಲಿ ಮತ್ತೊಂದೆಡೆ, ಏಪ್ರಿಲ್ ಅಂತ್ಯದಲ್ಲಿ ಶನಿ ಸಂಚಾರವು ರಾಶಿಯಲ್ಲಿರುವುದರಿಂದಾಗಿ ನಿಮ್ಮ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಲಾಗುತ್ತದೆ. ಈ ಕಾರಣದಿಂದಾಗಿ ನೀವು ದೀರ್ಘಕಾಲದಿಂದ ನಡೆಯುತ್ತಿರುವ ರೋಗದಿಂದ ಬಳಲುತ್ತಿದ್ದರೆ, ಆದ್ದರಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ.

ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಈ ಸಮಯವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ನಿಮಗೆ ಪರಿಹಾರ ನೀಡಲಿದೆ. ಆದಾಗ್ಯೂ, 13 ಆಗಸ್ಟ್ ಮಧ್ಯದ ವರೆಗೆ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಲಾಗಿದೆ. ಏಕೆಂದರೆ ಆಗಸ್ಟ್ ತಿಂಗಳಲ್ಲಿ ನಿಮ್ಮ ಅನಿಶ್ಚಿತತೆಯ ಎಂಟನೇ ಮನೆಯ ಅಧಿಪತಿ, ನಿಮ್ಮ ತಾಯಿಯ ನಾಲ್ಕನೇ ಮನೆಗೆ ದೃಷ್ಟಿ ನೀಡುತ್ತಾರೆ. ಈ ಕಾರಣದಿಂದಾಗಿ ಅವರಿಗೆ ಆರೋಗ್ಯ ಕಷ್ಟವಾಗುವ ನಿರೀಕ್ಷೆಯಿದೆ ಮತ್ತು ಇದರಿಂದಾಗಿ ನಿಮ್ಮ ಮಾನಸಿಕ ಒತ್ತಡ ಸಹ ಹೆಚ್ಚಾಗುತ್ತದೆ. ಇದಲ್ಲದೆ ಸೆಪ್ಟೆಂಬರ್ ರಿಂದ ವರ್ಷದ ಅಂತ್ಯದ ವರೆಗೆ ನೀವು ಯಾವುದೇ ದಹಿಕ ಗಾಯ ಅಥವಾ ಅಪಘಾತಕ್ಕೆ ಬಲಿಯಾಗಬಹುದು. ಆದ್ದರಿಂದ ವಿಶೇಷವಾಗಿ ವಾಹನ ಚಲಾಯಿಸುವಾಗ ಜಾಗರೂಕರಾಗಿರುವ ಅಗತ್ಯವಿದೆ.

ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ ವೃತ್ತಿ ಜೀವನ :

ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ಈ ರಾಶಿಚಕ್ರದ ಸ್ಥಳೀಯರಿಗೆ ಸಾಮಾನ್ಯವಾಗಿರಲಿದೆ. ಏಕೆಂದರೆ ಈ ವರ್ಷ ನೆರಳಿನ ಗ್ರಹ ರಾಹುವು ನಿಮ್ಮ ರಾಶಿಯ ಆರನೇ ಮನೆಗೆ ಸಾಗುತ್ತದೆ. ಇದು ನಿಮಗೆ ಅನೇಕ ರೀತಿಯ ಮಾನಸಿಕ ಸಮಸ್ಯೆಗಳನ್ನು ನೀಡಬಹುದು. ಇದರ ನಂತರ ಮೇ ಅಂತ್ಯದಿಂದ ಸೆಪ್ಟೆಂಬರ್ ಅಂತ್ಯದ ವರೆಗೆ ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳನ್ನು ಕಾಣಲಾಗುತ್ತದೆ. ಏಕೆಂದರೆ ಸಮಯದಲ್ಲಿ ಶನಿ ದೇವರ ಸಂಚಾರವು ನಿಮ್ಮ ನಾಲ್ಕನೇ ಮನೆಯಲ್ಲಿರುತ್ತದೆ. ಅಲ್ಲಿಂದ ಅವರು ನಿಮ್ಮ ಕೆಲಸದ ಸ್ಥಳದ ಮೇಲೆ ದೃಷ್ಟಿ ಹಾಕುತ್ತಾರೆ. ಆದಾಗ್ಯೂ ಈ ಕಾರಣದಿಂದಾಗಿ ಈ ಬದಲಾವಣೆಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವ ಜನರು ಅಥವಾ ಯಾವುದೇ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವರುವ ಜನರು ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಏಕೆಂದರೆ ಉದ್ಯೋಗದಲ್ಲಿರುವ ಜನರು ಒಂದೆಡೆ ಪ್ರಚಾರ ಪಡೆದರೆ ಮತ್ತೊಂದೆಡೆ, ವ್ಯಾಪಾರಸ್ಥರು ಹೊಸ ಸಂಪರ್ಕಗಳನ್ನು ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

ನವೆಂಬರ್ ವರೆಗೆ ನಿಮ್ಮ ವೃತ್ತಿ ಜೀವನದ ಬಗ್ಗೆ ಸ್ವಲ್ಪ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ನಿಮ್ಮ ಅನಿರೀಕ್ಷಿತ ಮತ್ತು ಆಕಸ್ಮಿಕತೆಯ ಎಂಟನೇ ಮನೆಯ ಅಧಿಪತಿ ಈ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದ ಹತ್ತನೇ ಮನೆಗೆ ಪ್ರವೇಶಿಸುತ್ತಾರೆ. ಅಂತಹ ಸಂದರ್ಭದಲ್ಲಿ ಈ ಅವಧಿಯು ಹೆಚ್ಚು ಶ್ರಮವಹಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಆಗ ಮಾತ್ರ ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಸಮಯವು ನಿಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುವ ಮೂಲಕ, ನಿಮಗೆ ಪ್ರಯೋಜನಕಾರಿಯಾಗಿದೆ ಎಂದು ಸನೀತುಪಡಿಸುತ್ತದೆ. ಇದರ ನಂತರ ಅಕ್ಟೋಬರ್ ನಿಂದ ವರ್ಷದ ಅಂತ್ಯದವರೆಗೆ ವಿಶೇಷವಾಗಿ ನಿಮಗೆ ಉತ್ತಮವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ, ಇದರಿಂದ ನೀವು ಬಡ್ತಿ ಪಡೆಯುವ ಸಾಧ್ಯತೆಯೂ ಇದೆ. ಇದರ ಹೊರತಾಗಿಯೂ, ಈ ಅವಧಿಯಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಲು ನಿಮಗೆ ವಿಶೇಷ ಸಲಹೆ ನೀಡಲಾಗಿದೆ. ಸರ್ಕಾರಿ ಸಂಬಂಧಿಸಿದ ಜನರಿಗೆ ವರ್ಷದ ಆರಂಭದ ಸಮಯವು ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದಾಗ್ಯೂ, ಮಧ್ಯದ ನಂತರ ಜೂಲೈ ತಿಂಗಳಲ್ಲಿ ಸೂರ್ಯ ದೇವ ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಗೆ ಸಾಗುತ್ತಾರೆ. ಆಗ ಪರಿಸ್ಥಿತಿಗಳು ಸಾಕಷ್ಟು ಸುಧಾರಿಸುತ್ತವೆ. ವ್ಯಾಪಾರಸ್ಥರ ದೃಷ್ಟಿಕೋನದಿಂದ ನೋಡಿದರೆ, ಈ ವರ್ಷ ನಿಮಗೆ ಉತ್ತಮವಾಗಿರುತ್ತದೆ. ವಿಶೇಷವಾಗಿ ಮೇ ಮಧ್ಯದಿಂದ ನಿಮ್ಮ ವ್ಯವಹಾರದಲ್ಲಿ ವಿಸ್ತರಣೆಗಾಗಿ ಹೊಸ ಯೋಜನೆಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ.

ವೃತ್ತಿ ಜೀವನ ತೊಂದರೆಗೀಡಾಗಿದೆಯೇ! ಈಗಲೇ ಆದೇಶಿಸಿ ಕಾಗ್ನಿ ಆಸ್ಟ್ರೋ ರಿಪೋರ್ಟ್

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ ಶಿಕ್ಷಣ :

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ನೀವು ಶಿಕ್ಷಣದಲ್ಲಿ ಸಾಮಾನ್ಯ ಫಲಿತಾಂಶಗಳನ್ನು ಪಡೆಯುತ್ತೀರಿ. ಜನವರಿ ರಿಂದ ಏಪ್ರಿಲ್ ವರೆಗಿನ ಸಮಯವು ನಿಮಗೆ ಸ್ವಲ್ಪ ಉತ್ತಮವಾಗಿರುತ್ತದೆ, ಏಕೆಂದರೆ ನಿಮ್ಮ ಲಗ್ನದ ಮನೆಯ ಅಧಿಪತಿ ಮಂಗಳ ದೇವ ವರ್ಷದ ಆರಂಭದಲ್ಲಿ ನಿಮ್ಮ ಶಿಕ್ಷಣದ ಐದನೇ ಮನೆಗೆ ದೃಷ್ಟಿ ನೀಡುತ್ತಾರೆ. ಆದಾಗ್ಯೂ, ಇದರ ನಂತರ ಮೇ ರಿಂದ ಸೆಪ್ಟೆಂಬರ್ ವರೆಗೆ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯವು ನಿಮಗೆ ಪ್ರತಿಕೂಲವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ಮೊದಲಿಗಿಂತ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ವಿರುದ್ಧ ಫಲಿತಾಂಶಗಳನ್ನು ಪಡೆಯುವುದರಿಂದ ನಿಮಗೆ ತೊಂದರೆಗೆ ಒಳಗಾಗಬಹುದು.

ಉನ್ನತ ಶಿಕ್ಷಣ ಗಳಿಸುತ್ತಿರುವ ಜನರಿಗೂ ಈ ಸಮಯವು ಸ್ವಲ್ಪ ಉದ್ವಿಗ್ನವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಠಿಣ ಪರಿಶ್ರಮವನ್ನು ಮುಂದುವರಿಸುವ ಊಲಕ ನಿಮ್ಮ ಶಿಕ್ಷಕರು ಮತ್ತು ಗುರುಗಳ ಸಹಾಯವನ್ನು ಪಡೆದುಕೊಳ್ಳಿ. ನೀವು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದರೆ, ಮೇ ರಿಂದ ಅಕ್ಟೋಬರ್ ವರೆಗಿನ ಸಮಯವೂ ನಿಮಗೆ ತುಂಬಾ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಐದನೇ ಮನೆಯ ಅಧಿಪತಿ ತನ್ನದೇ ಮನೆಯಲ್ಲಿರುತ್ತಾರೆ. ಈ ಕಾರಣದಿಂದಾಗಿ ನೀವು ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇದಲ್ಲದೆ ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ನಂತರದ ಸಮಯವು ಅಪಾರ ಯಶಸ್ಸಿನತ್ತ ಸೂಚಿಸುತ್ತಿದೆ. ಈ ಸಮಯದಲ್ಲಿ ನೀವು ಉತ್ತಮ ಅಂಕಗಳನ್ನು ಪಡೆದು, ಯಶಸ್ಸಿನ ಏಣಿಯನ್ನು ಹತ್ತುವುದನ್ನು ಕಾಣಲಾಗುತ್ತದೆ. ಇದರೊಂದಿಗೆ ಏಪ್ರಿಲ್ 2022 ರ ಅಂತ್ಯದ ಹಂತದಲ್ಲಿ ಶನಿ ದೇವ ಕುಂಭ ರಾಶಿಗೆ ಸಾಗುತ್ತಾರೆ. ಇದರ ಪರಿಣಾಮವಾಗಿ ವರ್ಷದ ಅಂತ್ಯದಲ್ಲಿ ವಿಶೇಷವಾಗಿ ಅಕ್ಟೋಬರ್ ರಿಂದ ಡಿಸೆಂಬರ್ ವರೆಗೆ, ಕೆಲವು ವಿದ್ಯಾರ್ಥಿಗಳ ಸ್ಥಳ ಬದಲಾವಣೆಯ ಸಾಧ್ಯತೆಗಳು ಆಗಲಿವೆ.

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ ವೈವಾಹಿಕ ಜೀವನ :

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ, ವೃಶ್ಚಿಕ ರಾಶಿಚಕ್ರದ ವಿವಾಹಿತ ಜನರಿಗೆ ಸಮಯ ಅನುಕೂಲಕರವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ಹಿಂದಿನಿಂದ ನಡೆಯುತ್ತಿರುವ ಎಲ್ಲಾ ತಪ್ಪು ಗ್ರಹಿಕೆಗಳನ್ನು ಮತ್ತು ವಿವಾದಗಳನ್ನು ನಿವಾರಿಸಿ, ಅವುಗಳನ್ನು ತೊಡೆದುಹಾಕಲು ಸಾಧ್ಯವಾಗುತದೆ, ಏಕೆಂದರೆ ಕೆಂಪು ಗ್ರಹ ಮಂಗಳ ಈ ಸಮಯದಲ್ಲಿ ನಿಮ್ಮ ಪ್ರೀತಿಯ ಐದನೇ ಮನೆಗೆ ದೃಷ್ಟಿ ನೀಡುತ್ತಾರೆ, ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ನಂಬಿಕೆ ಮತ್ತು ಪ್ರೀತಿ ಹೆಚ್ಚಾಗುವ ಸಾಧ್ಯತೆ ಉಂಟಾಗುತ್ತದೆ. ವಿಶೇಷವಾಗಿ ವರ್ಷದ ಆರಂಭದ ಸಮಯವು ನಿಮ್ಮ ದಾಂಪತ್ಯ ಜೀವನಕ್ಕೆ ತುಂಬಾ ಉತ್ತಮವಾಗಿರುತ್ತದೆ. ಇದರ ನಂತರ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಶನಿ ದೇವ ಕುಂಭ ರಾಶಿಯಲ್ಲಿ ಗೋಚರಿಸುವುದರಿಂದ ನೀವು ಕೆಲವು ಸಮಸೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಯಾವುದೇ ಕಾರಣದಿಂದಾಗಿ ಜೀವನ ಸಂಗಾತಿಯೊಂದಿಗೆ ವಿವಾದ ಸಾಧ್ಯ. ಶನಿಯ ಪ್ರಭಾವದಿಂದಾಗಿ ನೀವು ಸಣ್ಣ ಪುಟ್ಟ ವಿಷಯಗಳ ಬಗ್ಗೆ ಪರಸ್ಪರ ವಾದಿಸುವುದನ್ನು ಕಾಣಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಪರಸ್ಪರರ ಮೇಲೆ ನಂಬಿಕೆಯನ್ನು ತೋರಿಸುವ ಮೂಲಕ, ಪ್ರತಿಯೊಂದು ವಿವಾದವನ್ನು ಒಟ್ಟಿಗೆ ನಿವಾರಿಸಲು ನಿಮಗೆ ಸಲಹೆ ನೀಡಲಾಗಿದೆ.

ಇದರ ನಂತರ ಸೆಪ್ಟೆಂಬರ್ ರಿಂದ ನವೆಂಬರ್ ತಿಂಗಳ ಅಂತ್ಯದ ವರೆಗೆ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಿಂದ ಮುಕ್ತಿ ಪಡೆಯುವಿರಿ. ಏಕೆಂದ್ರೆ ನಿಮ್ಮ ಆರನೇ ಮನೆಯ ಅಧಿಪತಿ ಈ ಸಮಯದಲ್ಲಿ ಬಹಳ ಬಲವಾದ ಸ್ಥಾನದಲ್ಲಿರುತ್ತಾರೆ, ಇದರಿಂದಾಗಿ ನೀವು ಯಶಸ್ಸು ಪಡೆಯುವ ಪ್ರಬಲ ಸಾಧ್ಯತೆ ಕಂಡುಬರುತ್ತಿದೆ. ಇದರ ಸಕಾರಾತ್ಮಕ ಪರಿಣಾಮವು ನೇರವಾಗಿ ನಿಮ್ಮ ದಾಂಪತ್ಯ ಜೀವನದ ಮೇಲೆ ಬೀಳುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ನೀವು ಜೀವನವನ್ನು ಮುಕ್ತವಾಗಿ ಆನಂದಿಸುವುದನ್ನು ಕಾಣಲಾಗುತ್ತದೆ. ನೀವು ಇನ್ನೂ ಒಂಟಿಯಾಗಿದ್ದರೆ, ಸೆಪ್ಟೆಂಬರ್ ರಿಂದ ವರ್ಷದ ಅಂತ್ಯದ ವರೆಗೆ ನಿಮಗೆ ಹೆಚ್ಚು ಶುಭವಾಗಿರುತ್ತದೆ ಏಕೆಂದರೆ ವಿವಾಹದ ಯೋಗವಿದೆ. ಏಕೆಂದರೆ ನಿಮ್ಮ ಅಪೇಕ್ಷಿತ ಸಂಗಾತಿಯನ್ನು ಪಡೆಯುವ ಸಮಯ ಇದು.

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ ಕುಟುಂಬ ಜೀವನ

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ವೃಶ್ಚಿಕ ರಾಶಿಚಕ್ರದ ಸ್ಥಳೀಯರು ಕುಟುಂಬ ಜೀವನದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ವರ್ಷದ ಆರಂಭವು ಅಂದರ್ರೇ ಜನವರಿ ತಿಂಗಳಿಂದ ಏಪ್ರಿಲ್ ವರೆಗೆ ನಿಮ್ಮ ಕುಟುಂಬ ಜೀವನದಲ್ಲಿ ಪ್ರತಿಕೂಲ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ತಾಯಿಯ ಕಡೆಯ ಮನೆಯಲ್ಲಿ ಅನೇಕ ಗ್ರಹಗಳ ಸಂಯೋಜನೆಯಾಗುತ್ತದೆ, ಇದರ ಪರಿಣಾಮವಾಗಿ ನಿಮ್ಮ ಮನೆ - ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇರುವುದರಿಂದ ನೀವು ತೊಂದರೆಗೆ ಒಳಗಾಗಬಹುದು. ಆದಾಗ್ಯೂ, ಇದರ ನಂತರ ಏಪ್ರಿಲ್ ಅತ್ಯದಿಂದ ಮೇ ವರೆಗೆ ಪರಿಸ್ಥಿತಿಗಳು ಸ್ವಲ್ಪ ಸುಧಾರಿಸುತ್ತವೆ. ಏಕೆಂದರೆ ದೇಶೀಯ ಸಂತೋಷಗಳು ಮತ್ತು ತಾಯಿಯ ನಾಲ್ಕನೇ ಮನೆಯ ಅಧಿಪತಿ ಈ ಸಮಯದಲ್ಲಿ ತನ್ನದೇ ಮನೆಯಲ್ಲಿ ಇರುವುದು, ನಿಮ್ಮ ತಾಯಿಯ ಬೆಂಬಲವನ್ನು ಪಡೆಯುವಲ್ಲಿ ನಿಮಗೆ ಸಹಾಯ ಮಾಡುತ್ತದೆ.

ನಂತರ ಜೂನ್ ರಿಂದ ಸೆಪ್ಟೆಂಬರ್ ವರೆಗೆ, ಮಂಗಳ ಗ್ರಹದ ಸ್ಥಾನ ಬದಲಾವಣೆಯಿಂದಾಗಿ ನಿಮ್ಮ ಕುಟುಂಬ ಜೀವನದ ಮೇಲೂ ಪರಿಣಾಮ ಬೀರುತ್ತದೆ ಮತ್ತು ಈ ಕಾರಣದಿಂದಾಗಿ ನಿಮ್ಮ ಕುಟುಂಬವನ್ನು ಒಟ್ಟುಗೂಡಿಸುವಲ್ಲಿ ನೀವು ಸಂಪೂರ್ಣವಾಗಿ ಯಶಸ್ವಿಯಾಗುತ್ತೀರಿ. ಅದೇ ಸಮಯದಲ್ಲಿ ಮತ್ತೊಂದೆಡೆ, ನಿಮ್ಮ ಹಿರಿಯರಿಂದ ಅಗತ್ಯವಾದ ಬೆಂಬಲ ಮತ್ತು ಆಶೀರ್ವಾದವನ್ನು ಪಡೆಯುವಲ್ಲೂ ನೀವು ಯಶಸ್ಸು ಪಡೆಯುತ್ತೀರಿ. ಸೆಪ್ಟೆಂಬರ್ ಮಧ್ಯದ ಸಮಯದಲ್ಲಿ, ಕರ್ಮದಾತ ಶನಿ ನಿಮ್ಮ ಮೂರನೇ ಮನೆಯಲ್ಲಿ ಕುಳಿತುಕೊಳ್ಳುವುದು, ನಿಮ್ಮ ಕಿರಿಯ ಸಹೋದರ - ಸಹೋದರಿಯರಿಗೆ ಕೆಲವು ವಿವಾದಗಳ ಪರಿಸ್ಥಿಗಳನ್ನು ಉದ್ಭವಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ಅವರೊಂದಿಗೆ ಮಾತನಾಡುವಾಗ ನಿಮ್ಮ ಧ್ವನಿಯನ್ನು ನಿಯಂತ್ರಿಸುವ ಮೂಲಕ ಸಭ್ಯರಾಗಿ ವರ್ತಿಸಲು ನಿಮಗೆ ಸಲಹೆ ನೀಡಲಾಗಿದೆ.

ನಿಮ್ಮ ಜಾತಕದಲ್ಲಿ ಶುಭ ಯೋಗವಿದೆಯೇ ? ತಿಳಿಯಲು ಈಗಲೇ ಖರೀದಿಸಿ ಬೃಹತ್ ಕುಂಡಲಿ

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ ಪ್ರೀತಿಯ ಜೀವನ :

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ, ವೃಶ್ಚಿಕ ರಾಶಿಚಕ್ರದ ಸ್ಥಳೀಯರು ಈ ವರ್ಷ ತಮ್ಮ ಪ್ರೀತಿಯಂ ಜೀವನದಲ್ಲಿ ಅನುಕೂಲತೆಯನ್ನು ಪಡೆಯುತ್ತಾರೆ. ಏಕೆಂದ್ರೆ ಈ ಸಮಯವು ಪ್ರೀತಿಯಲ್ಲಿರುವ ಸ್ಥಳೀಯರ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯದ ಬೆಳವಣಿಗೆಯನ್ನು ತರುತ್ತಿದೆ. ಆದಾಗ್ಯೂ, ವರ್ಷದ ಆರಂಭದ ಹಂತವು ಅಂದರೆ ಜನವರಿ ರಿಂದ ಫೆಬ್ರವರಿ ತಿಂಗಳ ಅಂತ್ಯದ ವರೆಗೆ, ಸ್ವಲ್ಪ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಪ್ರೀತಿಯ ಸಂಬಂಧದ ಐದನೇ ಮನೆಯ ಮೇಲೆ ಶನಿ ದೇವರ ಪರಿಣಾಮವು, ಕೆಲವು ಕಾರಣಗಳಿಂದಾಗಿ ನಿಮ್ಮ ಪ್ರೀತಿಪಾತ್ರರೊಡನೆ ಭಿನ್ನಾಭಿಪ್ರಾಯ ಹೊಂದಲು ಕಾರಣವಾಗುತ್ತದೆ.

ಆದರೆ ಮಾರ್ಚ್ ಮಧ್ಯದಿಂದ ಸೆಪ್ಟೆಂಬರ್ ವರೆಗೆ ನೀವು ಇಬ್ಬರೂ ನಿಮ್ಮ ಪ್ರೀತಿಯ ಸಂಬಂಧವನ್ನು ಮುಂದುವರಿಸುವ ಮೂಲಕ ಪರಸ್ಪರರ ಮೇಲೆ ನಂಬಿಕೆ ತೋರಿಸುವುದನ್ನು ಕಾಣಲಾಗುತ್ತದೆ. ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ, ಇದರೊಂದಿಗೆ ಈ ಸಮಯದಲ್ಲಿ ಪರಸ್ಪರರನ್ನು ಅರ್ಥಮಾಡಿಕೊಳ್ಳಲು ನೀವು ಅನೇಕ ಉತ್ತಮ ಅವಕಾಶಗಳನ್ನು ಸಹ ಪಡೆಯುತ್ತೀರಿ. ತಮ್ಮ ಜೀವನದಲ್ಲಿ ನಿಜವಾದ ಪ್ರೀತಿಯನ್ನು ಹುಡುಕುತ್ತಿರುವವರಿಗೆ ಸೆಪ್ಟೆಂಬರ್ ರಿಂದ ನವೆಂಬರ್ ವರೆಗಿನ ಸಮಯವೂ ವಿಶೇಷವಾಗಿ ಉತ್ತಮವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ಗುರುವಿನ ಅನುಗ್ರಹದಿಂದ ನೀವು ನಿಮ್ಮ ಪ್ರೀತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಇದಲ್ಲದೆ ವರ್ಷದ ಅಂತ್ಯದ ಎರಡು ತಿಂಗಳುಗಳಲ್ಲಿ ಅಂದರೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕೆಲವು ಸ್ಥಳೀಯರು ತಮ್ಮ ಪ್ರೇಮಿಯೊಂದಿಗೆ ಪ್ರೀತಿಯ ಮದುವೆಯಾಗಲು ಸಹ ನಿರ್ಧರಿಸಬಹುದು.

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ ಜ್ಯೋತಿಷ್ಯ ಪರಿಹಾರ ಕ್ರಮಗಳು :

  1. ನಿಯಮಿತವಾಗಿ ಮಂಗಳವಾರ ಮತ್ತು ಶನಿವಾರದಂದು ಹನುಮಾನ್ ಚಾಲೀಸವನ್ನು ಪಠಿಸಿ.
  2. ಕುಟುಂಬ ಸಮೃದ್ಧಿಗಾಗಿ ಮನೆಯಲ್ಲಿ ಸುಂದರಕಾಂಡವನ್ನು ಪಠಿಸಿ.
  3. ಅರೋಗ್ಯ ಜೀವನದಲ್ಲಿ ಸಕಾರಾತ್ಮಕತೆಯನ್ನು ಪಡೆಯಲು, ನಿಯಮಿತವಾಗಿ ಮಂಗಳ ಬೀಜ ಮಂತ್ರವನ್ನು ಜಪಿಸಬೇಕು.
  4. ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯಲು, ಮಂಗಳವಾರ ಕೋತಿಗಳಿಗೆ ಬೆಲ್ಲ ಮತ್ತು ಕಡ್ಲೆಯನ್ನು ತಿನ್ನಿಸುವುದು ಸಹ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನಮ್ಮ ಈ ಲೇಖನವು ನಿಮಗೆ ಬಹಳ ಸಹಾಯ ಮಾಡಿದೆ ಎಂದು ನಾವು ಭಾವಿಸುತ್ತೇವೆ. ಹಾಗಿದ್ದಲ್ಲಿ, ಅದನ್ನು ನಿಮ್ಮ ಇತರ ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಧನ್ಯವಾದಗಳು!

More from the section: Horoscope 3297
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2025
© Copyright 2025 AstroCAMP.com All Rights Reserved