• AstroSage Navratri Celebration
  • Varta Astrologer
  • Brihat Horoscope
  • Raj Yoga Report
  • Year Book
Personalized
Horoscope

ಧನು ರಾಶಿ ಭವಿಷ್ಯ 2021 - Sagittarius Horoscope 2021 in Kannada

Last Updated: 4/28/2020 12:05:56 PM

dhanu rashi bhavishya 2021, dhanu jaataka 2021, dhanu rashiphala 2021

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಧನು ರಾಶಿಚಕ್ರದ ಸ್ಥಳೀಯರಿಗೆ ವರ್ಷ ೨೦೨೧ ಉತ್ತಮವಾಗಿರಲಿದೆ. ಉನ್ನತ ಶಿಕ್ಷಣದಿಂದ ವೃತ್ತಿ ಕ್ಷೇತ್ರದ ವರೆಗೆ ಧನು ರಾಶಿಚಕ್ರದ ಸ್ಥಳೀಯರ ಜಾತಕದಲ್ಲಿ ಈ ಇಡೀ ವರ್ಷ ಯಶಸ್ಸು ಪಡೆಯುವ ಪ್ರಬಲ ಸಾಧ್ಯತೆ ಇದೆ. ಧನು ರಾಶಿಚಕ್ರದ ಸ್ಥಳೀಯರ ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ವರ್ಷ 2021 ನಿಮಗೆ ಬಹಳಷ್ಟು ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ವರ್ಷ ಕೆಲಸದ ಸ್ಥಳದಲ್ಲಿ ನಿಮಗೆ ನಿಮ್ಮ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಸಿಗುತ್ತದೆ. ಈ ಅವಕಾಶದ ಲಾಭವನ್ನು ಪಡೆದುಕೊಂಡು ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಬಯಸುವ ಬಡ್ತಿ ಪಡೆಯಬಹುದು.

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನೀವು ವಿದೇಶಕ್ಕೂ ಪ್ರಯಾಣಿಸುವ ಸಾಧ್ಯತೆ ಕಂಡುಬರುತ್ತಿದೆ. ಮನಸ್ಸನ್ನು ಹೊಂದು ಕೆಲಸ ಮಾಡಿ. ಈ ವರ್ಷ ನೀವು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬಹುದು. ಧನು ರಾಶಿಚಕ್ರದ ಸ್ಥಳೀಯರ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡಿದರೆ, ವರ್ಷ 2021 ಇದಕ್ಕಾಗಿಯೂ ಬಹಳ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ. ಈ ವರ್ಷಪೂರ್ತಿ ಶನಿ ದೇವರು ಧನು ರಾಶಿಚಕ್ರದ ಎರಡನೇ ಮನೆಯಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಬಲವಾಗಿರುತ್ತದೆ.

ನಿಮ್ಮ ಮುಂಬರುವ 12 ತಿಂಗಳ ಜಾತಕವನ್ನು ಪಡೆಯಿರಿ - ಆಸ್ಟ್ರೋಸೇಜ್ ವಾರ್ಷಿಕ ಪತ್ರಿಕೆ

ಈ ಮಧ್ಯೆ ಸಣ್ಣ ಪುಟ್ಟ ವೆಚ್ಚಗಳು ಇರುತ್ತವೆ ಆದರೆ ಅಂತಿಮವಾಗಿ ನಿಮ್ಮ ವರ್ಷವು ತುಂಬಾ ಉತ್ತಮವಾಗಿರುವ ಸಾಧ್ಯತೆ ಇದೆ. ಧನು ರಾಶಿ ಭವಿಷ್ಯ 2021 ರ ಪ್ರಕಾರ, ಆರ್ಥಿಕ ವಿಷಯಗಳಲ್ಲಿ ಧನು ರಾಶಿ ಚಕ್ರದ ಸ್ಥಳೀಯರಿಗೆ 23 ಜನವರಿ, ಜೂಲೈ ರಿಂದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ತುಂಬಾ ಉತ್ತಮವಾಗಿರಲಿವೆ. ಈ ಸಮಯದಲ್ಲಿ ನಿಮ್ಮ ಬಳಿ ಆದಾಯದ ಅನೇಕ ಬಾಗಿಲು ತೆರೆಯುತ್ತವೆ. ಇವು ಖಂಡಿತವಾಗಿಯೂ ನಿಮಗೆ ಲಾಭವನ್ನು ನೀಡುತ್ತವೆ.

ಶಿಕ್ಷಣದ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳೀಯರಿಗೆ ವರ್ಷ 2021 ಸಾಕಷ್ಟು ಸಂತೋಷಗಳನ್ನು ತರಲಿದೆ. ಏಕೆಂದರೆ ಈ ಇಡೀ ವರ್ಷ ರಾಹುವು ನಿಮ್ಮ ಜಾತಕದ ಆರನೇ ಮನೆಯಲ್ಲಿ ಕುಳಿತಿರುತ್ತಾರೆ, ಈ ಕಾರಣದಿಂದಾಗಿ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಬಯಸುತ್ತಿದ್ದರೆ, ಅದರಲ್ಲಿ ನೀವು ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇದಲ್ಲದೆ ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುತ್ತಿರುವ ಜನರು ಸಹ ಈ ವರ್ಷ ವಿದೇಶಕ್ಕೆ ಪ್ರಯಾಣಿಸುವ ಅವಕಾಶವನ್ನು ಪಡೆಯಲಿದ್ದಾರೆ.

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಆರೋಗ್ಯದ ದೃಷ್ಟಿಯಿಂದ ಧನು ರಾಶಿಚಕ್ರದ ಸ್ಥಳೀಯರಿಗೆ ವರ್ಷ 2021 ತುಂಬಾ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ ಈ ವರ್ಷ ಇದ್ದಕ್ಕಿದ್ದಂತೆ ಕೇತುವು ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿ ಹಾದುಹೋದಾಗ ಕೆಲವು ಸ್ಥಳೀಯರು ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ಈ ಬಿಕ್ಕಟ್ಟುಗಳನ್ನು ಆದಷ್ಟು ಬೇಗ ಪರಿಹರಿಸಲಾಗುತ್ತದೆ. ಈವಿಆರ್ಷ ನೀವು ನಿಮ್ಮ ಆರೋಗ್ಯದ ಬಗ್ಗೆ ಮೊದಲಿನಿಂದಲೇ ಎಚ್ಚರದಿಂದಿರುವ ಅಗತ್ಯವಿದೆ ಮತ್ತು ಸಾಧ್ಯವಾದಷ್ಟು ಶುದ್ಧವಾದ ಗಾಳಿ ಮತ್ತು ನೀರನ್ನು ಸೇವಿಸಿ. ಇದಲ್ಲದೆ ಪ್ರತಿಯೊಂದು ಕ್ಷೇತ್ರವು ನಿಮಗೆ ಎಂಬುದನ್ನು ಧನು ರಾಶಿ ಭವಿಷ್ಯ 2021 ರಲ್ಲಿ ವಿವರವಾಗಿ ಓದಿ.

ಧನು ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Sagittarius future 2021

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಧನು ರಾಶಿಚಕ್ರದ ಸ್ಥಳೀಯರ ವೃತ್ತಿಜೀವನದ ಕ್ಷೇತ್ರದಲ್ಲಿ ವರ್ಷ 2021 ಬಹಳ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ವರ್ಷ ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮಗೆ ಸಂಪೂರ್ಣ ಸಹಕಾರ ನೀಡುವುದಲ್ಲದೆ, ನೀವು ಮುಂದುವರಿಯಲು ಸಹ ನಿಮ್ಮನ್ನು ಸಂಪೂರ್ಣ ಪ್ರೇರೇಪಿಸುತ್ತಾರೆ. ಸಹೋದ್ಯೋಗಿಗಳ ಮೂಲಕ ಪಡೆಯಲಾಗುವ ಈ ಸಹಕಾರದಿಂದ ಈ ವರ್ಷ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಗತಿ ಖಚಿತ.

ಧನು ರಾಶಿ ಭವಿಷ್ಯ 2021 ರಪ್ರಕಾರ, ವೃತ್ತಿ ಜೀವನದ ದೃಷ್ಟಿಯಿಂದ ಜನವರಿ - ಮೇ - ಜೂನ್ - ಆಗಸ್ಟ್ - ಸೆಪ್ಟೆಂಬರ್ ಮತ್ತು ಡಿಸೆಂಬರ್ ತಿಂಗಳು ಬಹಳಷ್ಟು ಉತ್ತಮ ಮತ್ತು ಮುಖ್ಯವೆಂದು ಸಾಬೀತುಪಡಿಸುತ್ತದೆ. ಕೆಳಸದ ಸ್ಥಳದಲ್ಲಿ ಮನಸ್ಸು ಹೊಂದಿ ಶ್ರಮಿಸುತ್ತಲೇ ಇರಿ. ಖಂಡಿತವಾಗಿಯೂ ಈ ವರ್ಷ ನಿಮಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ.

ಮೇ ಮತ್ತು ಆಗಸ್ಟ್ ತಿಂಗಳಲ್ಲಿ ನಿಮ್ಮ ವರ್ಗಾವಣೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಈ ವರ್ಷದ ಅಂತ್ಯದಲ್ಲಿ ಅಂದರೆ ನವೆಂಬರ್ ತಿಂಗಳಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ನೀವು ವಿದೇಶಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ. ಧನು ರಾಶಿಚಕ್ರದ ಸ್ಥಳೀಯರು ಈ ವರ್ಷ ತಮ್ಮ ಕೆಲಸದಲ್ಲಿ ಬಡ್ತಿ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಅವರು ಈ ಸಂತೋಷವನ್ನು ಮೇ ರಿಂದ ಜೂನ್ ತಿಂಗಳಲ್ಲಿ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ನಿಮ್ಮ ಕೆಲಸದ ಬಲದ ಮೇಲೆ ಈ ಇಡೀ ವರ್ಷ ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಇದಲ್ಲದೆ ವ್ಯಾಪಾರದಲ್ಲಿ ತೊಡಗಿರುವ ಧನು ರಾಶಿಚಕ್ರದ ಸ್ಥಳೀಯಯರು ಈ ವರ್ಷ ಸಾಕಷ್ಟು ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.

ಧನು ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according Sagittarius future 2021

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಈ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2021 ಆರ್ಥಿಕ ದೃಷ್ಟಿಯಿಂದ ಬಹಳ ಅನುಕೂಲಕರ ಫಲಿತಾಂಶಗಳನ್ನು ತರಲಿದೆ. ಏಕೆಂದರೆ ಈ ಇಡೀ ವರ್ಷ ಶನಿ ದೇವರು ನಿಮ್ಮ ರಾಶಿಚಕ್ರದ ಎರಡನೇ ಮನೆಯಲ್ಲಿರುತ್ತಾರೆ. ಈ ಕಾರಣದಿಂದಾಗಿ ವರ್ಷದುದ್ದಕ್ಕೂ ನಿಮ್ಮ ಆರ್ಥಿಕ ಪರಿಸ್ಥಿತಿ ಬಹಳಷ್ಟು ಬಲವಾಗಿರುತ್ತದೆ.

ಆರ್ಥಿಕ ವಿಷಯಗಳಲ್ಲಿ ಧನು ರಾಶಿಚಕ್ರದ ಸ್ಥಳೀಯರಿಗೆ 23 ಜನವರಿ, ಜೂಲೈ ರಿಂದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ತುಂಬಾ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಸಮಯದಲ್ಲಿ ಖಂಡಿತವಾಗಿ ನಿಮಗೆ ಪ್ರಯೋಜನವಾಗುವಂತಹ ಆದಾಯದ ಅನೇಕ ಅವಕಾಶಗಳನ್ನು ನೀವು ಹೊಂದಿರುತ್ತೀರಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಸಾಕಷ್ಟು ಹೆಚ್ಚಾಗಿ ಬಲವಾಗುತ್ತದೆ.

ಆದಾಗ್ಯೂ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿ ಕೇತುವಿನ ಇರುವಿಕೆಯ ಕಾರಣದಿಂದಾಗಿ ಈ ಎಲ್ಲಾ ಲಾಭಗಳ ನಡುವೆ ನಿಮ್ಮ ಕೆಲವು ಖರ್ಚುಗಳು ಇರುತ್ತವೆ. ಇದಲ್ಲದೆ ಡಿಸೆಂಬರ್ ತಿಂಗಳಲ್ಲಿ ಕೆಲವು ಆರ್ಥಿಕ ಖರ್ಚುಗಳು ನಿಮ್ಮ ಜೇಬನ್ನು ಹಗುರಗೊಳಿಸಬಹುದು. ಅಸಮಾಧಾಗೊಳ್ಳುವುದಕ್ಕಿಂತ ಖರ್ಚುಗಳ ಬಗ್ಗೆ ಸರಿಯಾಗಿ ಯೋಚಿಸುವುದು ನಿಮಗೆ ಉತ್ತಮ.

ಧನು ರಾಶಿ ಭವಿಷ್ಯ 2021 ರ ಪ್ರಕಾರ ಶಿಕ್ಷಣ - Education life according Sagittarius future 2021

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಶಿಕ್ಷಣದ ವಿಷಯದಲ್ಲಿ ಧನು ರಾಶಿಚಕ್ರದ ಸ್ಥಳೀಯರು ಬಹಳ ಅದೃಷ್ಟವಂತರು. ಈ ವರ್ಷದ ಆರಂಭವು ಬಹಳ ಉತ್ತಮವಾಗಲಿದೆ. ಇದಲ್ಲದೆ ಈ ವರ್ಷ ರಾಹುವು ನಿಮ್ಮ ಜಾತಕದ ಆರನೇ ಮನೆಯಲ್ಲಿ ಕುಳಿತಿರುತ್ತಾರೆ, ಈ ಕಾರಣದಿಂದಾಗಿ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಈ ಕಡೆಗೆ ನೀವು ಸಾಗಬಹುದು ಏಕೆಂದರೆ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀವು ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಇದಲ್ಲದೆ ಈ ವರ್ಷ ಶನಿಯು ಎರಡನೇ ಮನೆಯಲ್ಲಿ ಗುರುವಿನೊಂದಿಗೆ ತಮ್ಮ ರಾಶಿಚಕ್ರದಲ್ಲಿ ಇರುವುದರಿಂದಾಗಿ, ಧನು ರಾಶಿಚಕ್ರದ ಸ್ಥಳೀಯರು ಯಾವುದೇ ಪರೀಕ್ಷೆಯಲ್ಲಿ ಭಾಗವಹಿಸಿದರೆ, ಅದರಲ್ಲಿ ಕೂಡ ಅವರು ಉತ್ತಮ ಅಂಕಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಉನ್ನತ ಶಿಕ್ಷಣ ಪಡೆಯಲು ಬಯಸುತ್ತಿದ್ದರೆ, ಜನವರಿ ಮತ್ತು ಏಪ್ರಿಲ್, 16 ಮೇ ಮತ್ತು ಸೆಪ್ಟೆಂಬರ್ ತಿಂಗಳು ಬಹಳ ಸೂಕ್ತವಾದ ಸಮಯವೆಂದು ಸಾಬೀತುಪಡಿಸಬಹುದು. ವಿದೇಶಕ್ಕೆ ಹೋಗಿ ಹೆಚ್ಚಿನ ಅಧ್ಯಯನವನ್ನು ಪೂರ್ಣಗೊಳಿಸಲು ಬಯಸುವವರಿಗೆ 2021 ರ ಡಿಸೆಂಬರ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಬಹಳ ಅದೃಷ್ಟವೆಂದು ಸಾಬೀತುಪಡಿಸಬಹುದು. ಈ ವರ್ಷ ನೀವು ವಿದೇಶಕ್ಕೆ ಹೋಗಿ ತಮ್ಮ ಅಧ್ಯಯನದ ಕನಸನ್ನು ಪೂರ್ಣಗೊಳಿಸಬಹುದು.

ಧನು ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷದ ಬಹುಪಾಲು ನೀವು ಅಧ್ಯಯನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಇದಲ್ಲದೆ ಇದಕ್ಕೆ ವಿರುದ್ಧವಾಗಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳು ಸ್ವಲ್ಪ ಕಠಿಣವಾಗಿರಬಹುದು. ಈ ತಿಂಗಳಲ್ಲಿ ನೀವು ನಿಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ.

ಈ ವರ್ಷ, ಯಾವುದೇ ಅರೋಗ್ಯ ಸಂಬಂಧಿತ ಸಮಸ್ಯೆಯ ಕಾರಣದಿಂಗಾಗಿ ನಿಮ್ಮ ಏಕಾಗ್ರತೆ ಹದಗೆಡುವಂತಹ ಸಮಯವೂ ಬರಬಹುದು. ಇದರಿಂದ ನಿಮ್ಮ ಅಧ್ಯಯನದಲ್ಲಿ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಜಾಗರೂಕರಾಗಿರುವ ಅಗತ್ಯವಿದೆ ಮತ್ತು ಅಧ್ಯಯನದಲ್ಲಿ ಮನಸ್ಸನ್ನು ಹೊಂದಿ.

ಧನು ರಾಶಿ ಭವಿಷ್ಯ 2021 ರ ಪ್ರಕಾರ ಕೌಟುಂಬಿಕ ಜೀವನ - Family life according Sagittarius future 2021

ಧನು ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ಧನು ರಾಶಿಚಕ್ರದ ಸ್ಥಳೀಯರಿಗೆ ಬಹಳ ಉತ್ತಮವಾಗಿರಲಿದೆ. ಈ ವರ್ಷ ಯಾವುದೇ ರೀತಿಯ ಸಮಸ್ಯೆಯಿಂದ ದೂರ ನಿಮ್ಮ ಮನೆಯಲ್ಲಿ ಶಾಂತಿ ಇರುತ್ತದೆ.

ವರ್ಷ 2021 ರಲ್ಲಿ ಧನು ರಾಶಿಚಕ್ರದ ಸ್ಥಳೀಯರ ಜಾತಕದಲ್ಲಿ ಶನಿ ದೇವರ ದೃಷ್ಟಿಯು ನಾಲ್ಕನೇ ಮನೆಯಲ್ಲಿ ಇರುತ್ತದೆ. ಈ ಕಾರಣದಿಂದಾಗಿ ಮಾಯಲ್ಲಿನ ಎಲ್ಲಾ ಸದಸ್ಯರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮನೆಯ ಸದಸ್ಯರು ನಿಮ್ಮ ಪ್ರಾಮುಖ್ಯತೆಯನ್ನು ನಂಬುತ್ತಾರೆ.

ಇದಲ್ಲದೆ ಈ ವರ್ಷ ಧನು ರಾಶಿಚಕ್ರದ ಸ್ಥಳೀಯರ ಜಾತಕದ ಎರಡನೇ ಮನೆಯಲ್ಲಿ ಶನಿ ಮತ್ತು ಗುರುವಿನ ಸಂಯೋಗವು ಸಹ ಕಂಡುಬರುತ್ತಿದೆ. ಈ ವರ್ಷ ಪುರಾತನ ವಿಚಾರಗಳನ್ನು ಪರಿಗಣಿಸಿ, ನೀವು ನಿಮ್ಮ ಮನೆಯಲ್ಲಿ ನೀವು ನಿಮ್ಮ ಮನೆಯಲ್ಲಿ ಸಂತೋಷವನ್ನು ನೀಡುವ ಯಾವುದೇ ಕೆಲಸ ಮಾಡುವ ಬಗ್ಗೆ ಯೋಚಿಸಬಹುದು.

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಇಡೀ ವರ್ಷ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಕುಟುಂಬದಲ್ಲಿ ಮದುವೆ ಅಥವಾ ಮಗುವಿನ ಜನನವು ತುಂಬಾ ಸಂತೋಷವನ್ನು ತರಲಿದೆ. ವಿಶೇಷವಾಗಿ ಜನವರಿ ರಿಂದ ಏಪ್ರಿಲ್ ಮತ್ತು ನಾಲ್ಕು ಡಿಸೆಂಬರ್ ರಿಂದ ನವೆಂಬರ್ ಮಧ್ಯೆ ತಾಯಿಯ ಕುಟುಂಬದ ಸದಸ್ಯರಲ್ಲಿ ಯಾರಾದರೂ ದೂರಸ್ಥ ಪ್ರವಾಸಕ್ಕೆ ಹೋಗಬಹುದು.

ಧನು ರಾಶಿ ಭವಿಷ್ಯ 2021 ರ ಪ್ರಕಾರ, ನಿಮ್ಮ ಸಹೋದರ-ಸಹೋದರಿಯರು ಕೂಡ ನಿಮ್ಮನ್ನು ಸಂಪೂರ್ಣ ಬೆಂಬಲಿಸುತ್ತಾರೆ. ಅವರು ಪ್ರತಿಯೊಂದು ವಿಷಯದಲ್ಲಿ ಈ ಇಡೀ ವರ್ಷ ನಿಮ್ಮೊಂದಿಗೆ ನಿಲ್ಲುತ್ತಾರೆ,

ಧನು ರಾಶಿ ಭವಿಷ್ಯ 2021 ರ ಪ್ರಕಾರ ಮಕ್ಕಳು ಮತ್ತು ವೈವಾಹಿಕ ಜೀವನ - Children & Marriage life according Sagittarius future 2021

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಧನು ರಾಶಿಚಕ್ರದ ಸ್ಥಳೀಯರ ವೈವಾಹಿಕ ಜೀವನವು ಬಹಳಷ್ಟು ಉತ್ತಮವಾಗಿರಲಿದೆ. ಆದಾಗ್ಯೂ ವರ್ಷದ ಆರಂಭವು ಉತ್ತಮವಾಗಿರುವ ಹೊರೆತಾಗಿಯೂ ನಿಮ್ಮ ಸಂಗಾತಿ ಆರೋಗ್ಯದ ವಿಷಯದಲ್ಲಿ ಸ್ವಲ್ಪ ತೊಂದರೆಕ್ಕೊಳಗಾಗಬಹುದು. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ. ಜನವರಿ ತಿಂಗಳ ಮೊದಲನೇ ವಾರ ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಆಕರ್ಷಣೆ ಹೆಚ್ಚಾಗುತ್ತದೆ. ಇದಲ್ಲದೆ ನೀವು ನಿಮ್ಮ ಸಂಗಾತಿಯೊಂದಿಗೆ ಎಲ್ಲಾದರೂ ತಿರುಗಾಡುವುದಕ್ಕೆ ಹೋಗಲು ಸಹ ನೀವು ಯೋಜಿಸಬಹುದು. ಮಾರ್ಚ್ ತಿಂಗಳಲ್ಲಿ ಮತ್ತೊಮ್ಮೆ ನೀವು ನಿಮ್ಮ ಸಂಗಾತಿಯೊಂದಿಗೆ ಯಾವುದೇ ಚಿಕ್ಕ ಪ್ರಯಾಣಕ್ಕೆ ಹೋಗಬಹುದು.

ಸಾಧ್ಯವಾದಷ್ಟು ಈ ಪ್ರವಾಸವನ್ನು ಆನಂದಿಸಿ. ಏಕೆಂದರೆ ಈ ಪ್ರವಾಸವು ನಿಮ್ಮ ಸಂಬಂಧವನ್ನು ಬಲಪಡಿಸುವ ಕೆಲಸ ಮಾಡುತ್ತದೆ. ಏಪ್ರಿಲ್ ತಿಂಗಳಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಕೆಲವು ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಏಪ್ರಿಲ್ ಮತ್ತು ಮೇ ತಿಂಗಳು ನಿಮಗೆ ಸ್ವಲ್ಪ ಕಷ್ಟಕರವಾಗಿರಬಹುದು.

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಂಗಳ ಗ್ರಹವು ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿರುತ್ತದೆ ಇದರ ಪರಿಣಾಮದಿಂದಾಗಿ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯು ಸ್ವಭಾವತಃ ಕೋಪದಿಂದಿರಬಹುದು ಇದರೊಂದಿಗೆ ಸ್ವಲ್ಪ ವಿನಾಶಕಾರಿ ರೂಪವನ್ನು ಸಹ ತೆಗೆದುಕೊಳ್ಳಬಹುದು.

ಈ ವರ್ಷ ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ಮತ್ತೊಂದೆಡೆ, ನಿಮ್ಮ ಮಗುವಿಗಾಗಿ ಯಾವುದೇ ರೀತಿಯ ಅನುಮಾನವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ. ಅವರು ತಮ್ಮ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಖಚಿತವಾಗಿರಿ.

ಈ ವರ್ಷ ನಿಮ್ಮ ಮಕ್ಕಳು ಉತ್ತಮ ಜೀವನವನ್ನು ಕಳೆಯುತ್ತಾರೆ ಮತ್ತು ಅವರು ತಮ್ಮ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಆದರೆ ಒಂದೆಡೆ ನಿಮ್ಮ ಮಕ್ಕಳು ತಮ್ಮ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಮತ್ತೊಂದೆಡೆ ಅವರು ಯಾವ ರೀತಿಯ ಸಹವಾಸದಲ್ಲಿ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಒಟ್ಟಾರೆಯಾಗಿ ಮಕ್ಕಳು ಮತ್ತು ಜೀವನ ಸಂಗಾತಿಯ ಕೆಡೆಯಿಂದ ನಿಮ್ಮ ಈ ವರ್ಷವು ಬಹಳಷ್ಟು ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಧನು ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love life according Sagittarius future 2021

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಪ್ರೀತಿಯಲ್ಲಿರುವ ಸ್ಥಳೀಯರಿಗೆ ಈ ವರ್ಷವು ಮಿಶ್ರ ಫಲಿತಾಂಶಗಳನ್ನು ತರಲಿದೆ. ಒಂದೆಡೆ ಈ ವರ್ಷದ ಆರಂಭದಲ್ಲಿ ನೀವು ನಿಮ್ಮ ಪ್ರೀತಿಪಾತ್ರರಿಗಾಗಿ ತುಂಬಾ ಭಾವುಕರಾಗಿರುತ್ತೀರಿ, ಅದೇ ಸಮಯದಲ್ಲಿ ಮತ್ತೊಂದೆಡೆ ಫೆಬ್ರವರಿ ತಿಂಗಳಲ್ಲಿ ನೀವು ತುಂಬಾ ಪ್ರಣಯವನ್ನು ಅನುಭವಿಸುತ್ತೀರಿ.

ಈ ವರ್ಷ ನೀವು ನಿಮ್ಮ ಪ್ರೀತಿಪಾತ್ರರನ್ನು ಸಂಪೂರ್ಣವಾಗಿ ಪ್ರೀತಿಸಲು ಅವಕಾಶವನ್ನು ಪಡೆಯಲಿದ್ದೀರಿ. ಇದಲ್ಲದೆ ಏಪ್ರಿಲ್ ರಿಂದ ಜೂಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ಪ್ರೀತಿ ಜೀವನಕ್ಕೆ ಹೊಸ ಜೀವನವನ್ನು ನೀಡಲಾಗುತ್ತದೆ, ಅದೇ ಸಮಯದಲ್ಲಿ ಮತ್ತೊಂದೆಡೆ, ಫೆಬ್ರವರಿ ತಿಂಗಳ ನಂತರ ಮಾರ್ಚ್ ತಿಂಗಳು ಬಂದಾಗ ನಿಮ್ಮ ಪ್ರೀತಿಪಾತ್ರರೊಂದಿಗೆ ಜಗಳವಾಗುವ ಪ್ರಬಲ ಸಾಧ್ಯತೆ ಇರುವಂತಹ ಸಮಯವು ಬರಲಿದೆ. ನೀವು ತಾಳ್ಮೆಯನ್ನು ಹೊಂದು ಕಾರ್ಯನಿರ್ವಹಿಸಬೇಕು.

ಈ ಕ್ಷಣವನ್ನು ನೀವು ಪ್ರೀತಿಯಿಂದ ಪರಿಹರಿಸಲು ಪ್ರಯತ್ನಿಸಿ ಮತ್ತು ಇದನ್ನು ದೊಡ್ಡ ಜಗಳದ ರೂಪವನ್ನು ತೆಗೆದುಕೊಳ್ಳಲು ಬಿಡಬೇಡಿ. ಪ್ರೀತಿಯಲ್ಲಿರುವ ಕೆಲವು ಸ್ಥಳೀಯರು ವರ್ಷದ ಅಂತ್ಯದಲ್ಲಿ ಪ್ರೀತಿ ಮದುವೆಯ ಅವಕಾಶವನ್ನು ಪಡೆಯಲಿದ್ದಾರೆ.

ಧನು ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ - Health life according Sagittarius future 2021

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಆರೋಗ್ಯದ ವಿಷಯದಲ್ಲಿ ಧನು ರಾಶಿಚಕ್ರದ ಸ್ಥಳೀಯರಿಗೆ ವರ್ಷ 2021 ಬಹಳ ಉತ್ತಮವಾಗಿರಲಿದೆ. ಆದಾಗ್ಯೂ ಈ ಮಧ್ಯೆ ಕೆಲವು ಸಣ್ಣ - ಪುಟ್ಟ ಸಮಸ್ಯೆಗಳನ್ನು ನಿಮ್ಮನ್ನು ಕಾಡಬಹುದು ಆದರೆ ಇವು ಹೆಚ್ಚು ಗಂಭೀರವಾಗಿರುವುದಿಲ್ಲ.

ಈ ವರ್ಷ ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಯಲ್ಲಿ ಇದ್ದಕ್ಕಿದ್ದಂತೆ ಕೇತು ಬರುವ ಕಾರಣದಿಂದಾಗಿ ಕೆಲವು ಜನರಿಗೆ ಜ್ವರ, ಮೊಡು ಅಥವಾ ಸಣ್ಣ ಪುಟ್ಟ ಗಾಯಗಳಾಗುವ ಸಾಧ್ಯತೆ ಇದೆ. ಆದಾಗ್ಯೂ ಇವು ಗಂಭೀರವಾಗಿರುವುದಿಲ್ಲ. ಇದನ್ನು ಹೊರೆತುಪಡಿಸಿ ಕೆಲವು ಜನರಿಗೆ ಶೀತ, ಕೆಮ್ಮು ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಾಗಬಹುದು.

ಧನು ರಾಶಿ ಭವಿಷ್ಯ 2021 ರ ಪ್ರಕಾರ, ಆರೋಗ್ಯದ ದೃಷ್ಟಿಯಿಂದ ನಿಮ್ಮ ಈ ವರ್ಷವೂ ತುಂಬಾ ಉತ್ತಮವಾಗಿ ಕಳೆಯಲಿದೆ. ನೀವು ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ. ಸಾಧ್ಯವಾದಷ್ಟು ಶುದ್ಧವಾದ ಗಾಳಿ ಮತ್ತು ಶುದ್ಧ ನೀರನ್ನು ಕುಡಿಯಿರಿ . ಹಾಗೆ ಮಾಡುವುದು ನಿಮಗೆ ಉತ್ತಮ.

ಧನು ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರ - Astrological remedies according Sagittarius future 2021

  • ಉತ್ತಮ ಗುಣಮಟ್ಟದ ನೀಲಮಣಿ ರತ್ನವನ್ನು ಚಿನ್ನದ ಉಂಗುರದಲ್ಲಿ ತಯಾರಿಸಿ ಗುರುವಾರದಂದು 12:00 ರಿಂದ 1:30 ನಡುವೆ ತೋರು ಬೆರಳಿನಲ್ಲಿ ಧರಿಸುವುದು ನಿಮಗೆ ಉತ್ತಮ
  • ಪ್ರತಿ ಗುರುವಾರ ಮತ್ತು ಶನಿವಾರದಂದು ಅರಳಿ ಮರವನ್ನು ಮುಟ್ಟದೆ ಅದಕ್ಕೆ ನೀರನ್ನು ಅರ್ಪಿಸಿ. ಅರಳಿ ಮರವನ್ನು ಪೂಜಿಸುವುದು ಮತ್ತು ಗುರುವಾರ ಬಾಳೆಹಣ್ಣಿನ ಮರವನ್ನು ಪೂಜಿಸುವುದು ಬಹಳ ಫಲಪ್ರದವಾಗಲಿದೆ.
  • ನೀವು ಬಯಸಿದರೆ ಮಾಣಿಕ್ಯ ರತ್ನವನ್ನು ತಾಮ್ರದ ಉಂಗುರದಲ್ಲಿ ತಯಾರಿಸಿ ಭಾನುವಾರ ಬೆಳಿಗ್ಗೆ 8:00 ಗಂಟೆಗಿಂತ ಮೊದಲು ಅನಾಮಿಕೆ ಬೆರಳಿನಲ್ಲಿ ಧರಿಸಬಹುದು.
  • ಮಂಗಳವಾರದಂದು ಮೂರು ಮುಖ ರುದ್ರಾಕ್ಷ ವನ್ನು ಧರಿಸುವುದು ನಿಮಗೆ ಬಹಳ ಅನುಕೂಲಕರವಾಗಿರುತ್ತದೆ.
  • ಶನಿವಾರದಂದು ಸಾಸ್ವೆ ಎಣ್ಣೆಯಲ್ಲಿ ಉದ್ದಿನ ಬೇಳೆಯ ಬಜ್ಜಿ ತಯಾರಿಸಿ ಬಡವರಿಗೆ ವಿತರಿಸುವುದು ಉತ್ತಮವಾಗಿರುತ್ತದೆ.
More from the section: Horoscope 2978
2020 Articles
Buy Today
Gemstones
Get gemstones Best quality gemstones with assurance of AstroSage.com More
Yantras
Get yantras Take advantage of Yantra with assurance of AstroSage.com More
Navagrah Yantras
Get Navagrah Yantras Yantra to pacify planets and have a happy life .. get from AstroSage.com More
Rudraksha
Get rudraksha Best quality Rudraksh with assurance of AstroSage.com More
Today's Horoscope

Get your personalised horoscope based on your sign.

Select your Sign
Free Personalized Horoscope 2021
© Copyright 2021 AstroCAMP.com All Rights Reserved