• Talk To Astrologers
  • Personalized Horoscope 2022
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

ಕನ್ಯಾ ರಾಶಿ ಭವಿಷ್ಯ 2022 - Virgo Yearly Horoscope 2022 in Kannada

Author: -- | Last Updated: Fri 27 Aug 2021 10:54:37 AM

ಕನ್ಯಾ ರಾಶಿ ಭವಿಷ್ಯ 2022 (kanya rashifal 2022) ಅನೇಕ ಬದಲಾವಣೆಗಳನ್ನು ತರಲಿದೆ. ಈ ರಾಶಿ ಭವಿಷ್ಯದ ಸಹಾಯದಿಂದ ಬುಧ ದೇವ ಸ್ವಾಮಿತ್ವದ ಕನ್ಯಾ ರಾಶಿಚಕ್ರದ ಸ್ಥಳೀಯರ ಹೊಸ ವರ್ಷಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಪುಟ್ಟ ಮಾಹಿತಿಯನ್ನು ನೀಡಲಾಗುತ್ತದೆ. ಆಸ್ಟ್ರೋಕ್ಯಾಂಪ್ನ ಈ ಕನ್ಯಾ ರಾಶಿ ಭವಿಷ್ಯವನ್ನು ಅನೇಕ ಹಿರಿಯ ಜ್ಯೋತಿಷಿಗಳು, ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸರಿಯಾದ ಲೆಕ್ಕಾಚಾರದೊಂದಿಗೆ ಸಿದ್ಧಪಡಿಸಿದ್ದಾರೆ. ಇದರ ಸಹಾಯದಿಂದ ನಿಮ್ಮ ಪ್ರೀತಿಯ ಜೀವನ, ವೈವಾಹಿಕ ಜೀವನ, ಕುಟುಂಬ ಜೀವನ, ಆರ್ಥಿಕ ಜೀವನ, ಅರೋಗ್ಯ ಜೀವನ ಇತ್ಯಾದಿಗಳ ಬಗ್ಗೆ ಪ್ರತಿಯೊಂದು ಮುನ್ಸೂಚನೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಕನ್ಯಾ ರಾಶಿ ಭವಿಷ್ಯ 2022 ರಲ್ಲಿ, ಕೆಲವು ಖಚಿತವಾದ ಪರಿಹಾರ ಕ್ರಮಗಳನ್ನು ಸಹ ತಿಳಿಸಲಾಗಿದೆ. ಇದು ನಿಮ್ಮ ಮುಂಬರುವ ನಾಳೆಯನ್ನು ಇನ್ನಷ್ಟು ಉತ್ತಮಗೊಳಿಸಲು ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.

Virgo Horoscope 2022 In Kannada

ವರ್ಷ 2022 ಅನ್ನು ಅರ್ಥಮಾಡಿಕೊಂಡರೆ, ಈ ವರ್ಷ ಕನ್ಯಾ ರಾಶಿಚಕ್ರದ ಜನರಿಗೆ ಸಾಮಾನ್ಯಕ್ಕಿಂತ ಉತ್ತಮವಾಗಿರಲಿದೆ ಎಂದು ಸೂಚಿಸಲಾಗುತ್ತದೆ. ಈ ವರ್ಷದ ಮಧ್ಯದಲ್ಲಿ ಅಂದರೆ 17 ಏಪ್ರಿಲ್ ನಂತರ ಗುರು ಗ್ರಹದ ಸಂಚಾರದ ಕಾರಣದಿಂದಾಗಿ ನಿಮ್ಮ ವೃತ್ತಿ, ಆರ್ಥಿಕ, ಕೌಟುಂಬಿಕ, ಅರೋಗ್ಯ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ ಇದರ ಹೊರತಾಗಿಯೂ, ಈ ವರ್ಷವಿಡೀ ಹೆಚ್ಚು ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಕನ್ಯಾ ರಾಶಿಚಕ್ರದ ಜನರ ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ಒಂದೆಡೆ 22 ಏಪ್ರಿಲ್ ನಂತರ ರಾಹುವಿನ ಸ್ಥಳಾಂತರದಿಂದ ಪ್ರೀತಿಯಲ್ಲಿರುವ ಜನರು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವ ನಿರೀಕ್ಷೆಯಿದೆ, ಮತ್ತೊಂದೆಡೆ ವಿವಾಹಿತ ಜನರಿಗೆ ಈ ವರ್ಷ ಮಿಶ್ರ ಫಲಿತಾಂಶಗಳನ್ನು ನೀಡಲಿದೆ ಎಂದು ನಿರಿಕ್ಷಿಸಲಾಗಿದೆ.

ನೀವು ವೃತ್ತಿ ಜೀವನದಲ್ಲೂ ಈ ವರ್ಷ ಅನೇಕ ಪ್ರಮುಖ ಬದಲಾವಣೆಗಳು ಸಂಭವಿಸಲಿವೆ. ವಿಶೇಷವಾಗಿ ಮಂಗಳ ದೇವರ ಸಂಚಾರದ ಸಮಯದಲ್ಲಿ ಉದ್ಯೋಗಪರರು ಮತ್ತು ವ್ಯಾಪಾರಸ್ಥರು ಇಬ್ಬರೂ, ಅಪಾರ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಆದಾಗ್ಯೂ, ಆರ್ಥಿಕ ಜೀವನದಲ್ಲಿ ವರ್ಷದ ಆರಂಭವು ಅನುಕೂಲಕರವಾಗಿರುತ್ತದೆ. ಆದರೆ ಇದರ ಹೊರತಾಗಿಯೂ, ಎಲ್ಲಾ ರೀತಿಯ ಅತಿಯಾದ ಖರ್ಚಿನಿಂದ ದೂರವಿರಲು ನಿಮಗೆ ಸೂಚಿಸಲಾಗಿದೆ.

ನೀವು ವಿಧ್ಯಾರ್ಥಿಯಾಗಿದ್ದರೆ, ಆರಂಭದ ಕೆಲವು ತಿಂಗಳುಗಳನ್ನು ಬಿಟ್ಟು, ಉಳಿದ ತಿಂಗಳುಗಳು ಈ ವರ್ಷ ನಿಮಗೆ ಯಶಸ್ಸು ನೀಡಲಿವೆ. ಕುಟುಂಬ ಜೀವನದಲ್ಲೂ ಪರಿಸ್ಥಿತಿಗಳು ಸಂನ್ಯವಾಗಿರುತ್ತವೆ. ಆದರೆ ಶನಿ ದೇವರ ವಿಶೇಷ ಪರಿಣಾಮವು ನಿಮ್ಮ ರಾಶಿಯ ಮೇಲೆ ಇರುವುದರಿಂದಾಗಿ ಈ ವರ್ಷ ನೀವು ಅನೇಕ ಕೌಟುಂಬಿಕ ಸಮಸ್ಯೆಗಳಿಂದ ಸುತ್ತುವರೆದಿರುವಿರಿ. ಇದರೊಂದಿಗೆ ಈ ವರ್ಷ ನಿಮ್ಮ ಅರೋಗ್ಯ ಸಾಮಾನ್ಯ ಫಲಿತಾಂಶಗಳನ್ನು ನೀಡುತ್ತದೆ. ವಿಶೇಷವಾಗಿ ಆರಂಭಿಕ ಮತ್ತು ಮಧ್ಯದ ಸಮಯದಲ್ಲಿ, ಕೆಲವು ಅರೋಗ್ಯ ಸಮಸ್ಯೆಗಳನ್ನು ಹೊಂದಿರುವ ಮೂಲಕ ನೀವು ತೊಂದರೆಗೊಳಗಾಗಬಹುದು.

ನಿಮ್ಮ ಜಾತಕದಲ್ಲಿ ಶುಭ ಯೋಗವಿದೆಯೇ ? ತಿಳಿಯಲು ಈಗಲೇ ಖರೀದಿಸಿ ಬೃಹತ್ ಕುಂಡಲಿ

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ ಆರ್ಥಿಕ ಜೀವನ :

ಕನ್ಯಾ ರಾಶಿಚಕ್ರದ ಸ್ಥಳೀಯರ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ವರ್ಷ 2022 ನಿಮಗೆ ಅನೇಕ ಆರ್ಥಿಕ ಬಿಕ್ಕಟ್ಟುಗಳನ್ನು ನೀಡಲಿದೆ. ವಿಶೇಷವಾಗಿ ಈ ವರ್ಷ ನೀವು ಅತಿಯಾದ ಖರ್ಚುಗಳನ್ನು ತಪ್ಪಿಸಬೇಕಾಗುತ್ತದೆ. ಆದಾಗ್ಯೂ, ವರ್ಷದ ಆರಂಭದ ತಿಂಗಳು ಅಂದರೆ ಜನವರಿ ತಿಂಗಳು ನಿಮಗೆ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಮಂಗಳ ದೇವರ ಸಂಚಾರವು ನಿಮ್ಮ ಸಂಪತ್ತು, ಹಣ ಮತ್ತು ಸಂತೋಷದ ನಾಲ್ಕನೇ ಮನೆಯಲ್ಲಿರುತ್ತದೆ. ಇದರ ಪರಿಣಾಮವಾಗಿ ನಿಮಗೆ ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ. ಇದರ ನಂತರ ಫೆಬ್ರವರಿ ತಿಂಗಳಲ್ಲಿ ಸಹ ನೀವು ವಿವಿಧ ವಿಧಾನಗಳ ಮೂಲಕ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಸಮಯದಲ್ಲಿ ಹಣಕಾಸಿನ ಎರಡನೇ ಮನೆಯ ಅಧಿಪತಿ ಶುಕ್ರ ದೇವ ಮಕರ ರಾಶಿಗೆ ಪ್ರವೇಶಿಸುತ್ತಾರೆ. ಮತ್ತು ಈ ಸಮಯದಲ್ಲಿ ಅವರು ನಿಮ್ಮ ಆದಾಯ ಮತ್ತು ಲಾಭದ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ.

ಆದರೆ ಈ ಸಮಯದಲ್ಲಿ ಅನೇಕ ವೆಚ್ಚಗಳ ಹೊರೆಯು ನಿಮಗೆ ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಬಹುದು. ಯಾವುದೇ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದ ಜನರು ಈ ಸಮಯದಲ್ಲಿ ಹಾಗೆ ಮಾಡುವುದನ್ನು ತಪ್ಪಿಸಬೇಕು. ಆದಾಗ್ಯೂ, ಹಾಗೆ ಮಾಡುವುದು ಅಗತ್ಯವಿದ್ದರೆ, ಯಾವುದೇ ತಜ್ಞರನ್ನು ಸಂಪರ್ಕಿಸಿದ ನಂತರವೇ ನಿಮ್ಮ ಹಣವನ್ನು ಹೂಡಿಕೆ ಮಾಡಿ. ಇದಲ್ಲದೆ ಮಾರ್ಚ್ ತಿಂಗಳ ಆರಂಭದಲ್ಲಿ ನಾಲ್ಕು ಗ್ರಹಗಳು ಸೇರಿ ನಿಮ್ಮ ರಾಶಿಯಲ್ಲಿ ರಾಜಯೋಗವನ್ನು ರೂಪಿಸುತ್ತವೆ. ಈ ಅವಧಿಯು ಈ ವರ್ಷ ನಿಮಗೆ ಉತ್ತಮವಾಗಲಿದೆ. ನಿಮ್ಮ ಹಣ ಎಲ್ಲಾದರೂ ಸಿಲುಕಿಕೊಂಡಿದ್ದರೆ, 17 ಏಪ್ರಿಲ್ ನಂತರ ಗುರು ಗ್ರಹವು ನಿಮ್ಮ ಸಾಲದ ಮನೆಯಿಂದ ಹೊರಬಂದು ಪಾಲುದಾರಿಕೆಯ ಏಳನೇ ಮನೆಯಲ್ಲಿ ಕುಳಿತುಕೊಳ್ಳುತ್ತದೆ. ಈ ಸಮಯದಲ್ಲಿ ನಿಮ್ಮ ಸಿಲುಕಿಕೊಂಡಿರುವ ಹಣಕಾಸು ಮರಳಿ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ಅವಧಿಯು ನಿಮ್ಮ ಹೂಡಿಕೆಗೆ ಸಹ ಅನುಕೂಲಕರವಾಗಿರುತ್ತದೆ. ವಿಶೇಷವಾಗಿ ಉದ್ಯೋಗದಲ್ಲಿರುವ ಜನರು ಈ ವರ್ಷ ತಮ್ಮ ಕಠಿಣ ಪರಿಶ್ರಮದಿಂದ ಕೆಲವು ಹೊಸ ಮೂಲಗಳಿಂದ ತಮ್ಮ ಆದಾಯವನ್ನು ಹೆಚ್ಚಿಸುವಲ್ಲಿ ಸಾಮರ್ಥ್ಯರಾಗುತ್ತಾರೆ.

ನಿಮ್ಮ ಜಾತಕದ ಆಧಾರದ ಮೇಲೆ ನಿಖರವಾದ ಶನಿ ರಿಪೋರ್ಟ್ ಅನ್ನು ಪಡೆಯಿರಿ

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ ಆರೋಗ್ಯ ಜೀವನ

ಆರೋಗ್ಯದ ಜೀವನದ ಬಗ್ಗೆ ಮಾತನಾಡಿದರೆ, ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಆರೋಗ್ಯಕ್ಕೆ ಸಂಬಂಧಿಸಿದ ಸಾಮಾನ್ಯ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಆದಾಗ್ಯೂ, ಜನವರಿ, ಏಪ್ರಿಲ್, ಜೂನ್ ಮತ್ತು ಸೆಪ್ಟೆಂಬರ್ ತಿಂಗಳುಗಳ ಸಮಯದಲ್ಲಿ, ನೀವು ಸಣ್ಣ ಪುಟ್ಟ ರೋಗಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಇದಲ್ಲದೆ ಏಪ್ರಿಲ್ ತಿಂಗಳ ಅಂತ್ಯದಲ್ಲಿ ರಾಹುವಿನ ಸಂಚಾರವು ನಿಮ್ಮ ಎಂಟನೇ ಮನೆಯಲ್ಲಿರುತ್ತದೆ, ಆ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಉತ್ತಮ ಆಹಾರವನ್ನು ಸೇವಿಸಲು ನಿಮಗೆ ಸಲಹೆ ನೀಡಲಾಗಿದೆ.

ವಿಶೇಷವಾಗಿ 40 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಜನರು ರಾಹುವಿನ ಪ್ರಭಾವದಿಂದಾಗಿ ಮಧುಮೇಹ, ಮೂತ್ರದ ಕಿರಿಕಿರಿ, ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳು ಮುಂತಾದ ಸಮಸ್ಯೆಗಳಿಂದ ಬಾಳಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ ಮತ್ತು ಸಾಧ್ಯವಾದಷ್ಟು ದ್ರವಗಳನ್ನು ಸೇವಿಸಿ. ಈ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳ ಸಮಯವು ನಿಮಗೆ ಉತ್ತಮವಾಗಿರುತ್ತದೆ. ಏಕೆಂದರೆ ನಿಮ್ಮ ಲಗ್ನದ ಮನೆಯ ಅಧಿಪತಿಯು ಈ ಸಮಯದಲ್ಲಿ ನಿಮ್ಮ ರಾಶಿಯ ಅನುಕೂಲತೆಯ ಮನೆಗೆ ಗೋಚರಿಸುತ್ತಾರೆ. ವಿಶೇಷವಾಗಿ ನೀವು ಯಾವುದೇ ದೀರ್ಘಕಾಲದ ರೋಗದಿಂದ ಬಳಲುತ್ತಿದ್ದರೆ, ಈ ಸಮಯದಲ್ಲಿ ಆ ಸಮಸ್ಯೆಯನ್ನು ನೀವು ಶಾಶ್ವತವಾಗಿ ತೊಡೆದುಹಾಕಬಹುದು.

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ ವೃತ್ತಿ ಜೀವನ :

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ಈ ರಾಶಿಚಕ್ರದ ಸ್ಥಳೀಯರಿಗೆ ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ವರ್ಷದ ಮೊದಲನೇ ತಿಂಗಳು ಅಂದರೆ ಜನವರಿ ತಿಂಗಳಲ್ಲಿ ಮಂಗಳ ದೇವ ಧನು ರಾಶಿಗೆ ಪ್ರವೇಶಿಸುತ್ತಾರೆ ಮತ್ತು ಈ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದ ಹತ್ತನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಇದರ ಪರಿಣಾಮವಾಗಿ ಉದ್ಯೋಗಪರರು ಮತ್ತು ವ್ಯಾಪಾರಸ್ಥರು ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಪಡೆಯಲು ಸಾಧ್ಯವಾಗುತ್ತದೆ. ಈ ಹೊಸ ವರ್ಷದ ಜನವರಿ, ಮಾರ್ಚ್ ಮತ್ತು ಮೇ ತಿಂಗಳುಗಳು ಸಹ ಉದ್ಯೋಗ ಮತ್ತು ವ್ಯಾಪಾರಸ್ಥರಿಗೆ ಅತ್ಯಂತ ಉತ್ತಮವಾಗಿರುತ್ತವೆ ಎಂದು ಸಾಬೀತುಪಡಿಸುತ್ತವೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಅಪೂರ್ಣಗೊಂಡಿರುವ ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸುವಲ್ಲಿ ಮತ್ತು ನಿಮ್ಮ ಯೋಜನೆಗಳನ್ನು ಸರಿಯಾಗಿ ಅನುಸರಿಸುವಲ್ಲಿ ಯಶಸ್ವಿಯಾಗುತ್ತೀರಿ. ಇದರಿಂದಾಗಿ ನೀವು ಪ್ರಗತಿ ಪಡೆಯುತ್ತೀರಿ.

ಇದಲ್ಲದೆ, ವರ್ಷದ ಆರಂಭದಿಂದ ಏಪ್ರಿಲ್ ವರೆಗೆ ಶನಿ ದೇವ ನಿಮ್ಮ ಐದನೇ ಮನೆಯಲ್ಲಿ ಮತ್ತು ಏಪ್ರಿಲ್ ಅಂತ್ಯದಿಂದ ನಿಮ್ಮ ಆರನೇ ಮನೆಯಲ್ಲಿ ಇರುತ್ತಾರೆ. ಇದರ ಪರಿಣಾಮವಾಗಿ ಉದ್ಯೋಗವನ್ನು ಬದಲಾಯಿಸುವ ಕಲ್ಪನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು. ಆದಾಗ್ಯೂ, ಇದಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ, ವಿಶೇಷ ಪರಿಗಣನೆ ಮಾಡುವಂತೆ ನಿಮಗೆ ಸಲಹೆ ನೀಡಲಾಗಿದೆ. ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯೆ ಉದ್ಯೋಗದಲ್ಲಿ ಯಾವುದೇ ದೊಡ್ಡ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ಏಕೆಂದರೆ ಈ ಸಮಯದ್ಲಲಿ ಕರ್ಮದ ಫಲವನ್ನು ನೀಡುವ ಶನಿ ದೇವ ಕುಂಭ ರಾಶಿಯಲ್ಲಿ ಗೋಚರಿಸುವ ಕಾರಣದಿಂದಾಗಿ ಅಲ್ಲಿಂದ ಜೂಲೈ ತಿಂಗಳ ವರೆಗೆ ನಿಮ್ಮ ಪ್ರಯಾಣಗಳ ಮೂರನೇ ಮನೆಯ ಮೇಲೆ ದೃಷ್ಠಿ ನೀಡುತ್ತಾರೆ ಮತ್ತು ಅವರ ಈ ಪರಿಣಾಮವು ಸೆಪ್ಟೆಂಬರ್ ವರೆಗೆ ಇರುತ್ತದೆ. ಇದರೊಂದಿಗೆ ವಿಶೇಷವಾಗಿ ಸೆಪ್ಟೆಂಬರ್ ರಿಂದ ನವೆಂಬರ್ ಮಧ್ಯೆ ನಿಮ್ಮ ಕೆಲಸದ ಸ್ಥಳದ ಮನೆಯ ಅಧಿಪತಿ ಬುಧ ದೇವ ಈ ಸಮಯದಲ್ಲಿ ತನ್ನ ಸ್ನೇಹ ಗ್ರಹ ರಾಶಿಯಲ್ಲಿರುವುದು., ಉದ್ಯೋಗಪರ ಜನರಿಗೆ ಬಾಸ್ ಮತ್ತು ಮೇಲಧಿಕಾರಿಗಳೊಂದಿಗಿನ ಸಂಬಂಧವನ್ನು ಸುಧಾರಿಸುವ ಮೂಲಕ, ಕೆಲಸದ ಸ್ಥಳದಲ್ಲಿ ಗೌರವವನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಅವರು ಉನ್ನತ ಪ್ರಗತಿಯನ್ನು ಪಡೆಯಲು ಸಹ ಸಾಧ್ಯವಾಗುತ್ತದೆ. ಇದರೊಂದಿಗೆ ವರ್ಷದ ಅಂತ್ಯದ ತಿಂಗಳು ನಿಮ್ಮ ವೃತ್ತಿ ಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳನ್ನು ತರುತ್ತದೆ.

ವೃತ್ತಿ ಜೀವನ ತೊಂದರೆಗೀಡಾಗಿದೆಯೇ! ಈಗಲೇ ಆದೇಶಿಸಿ ಕಾಗ್ನಿ ಆಸ್ಟ್ರೋ ರಿಪೋರ್ಟ್

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ ಶಿಕ್ಷಣ :

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ, ಶಿಕ್ಷಣದಲ್ಲಿ ಈ ವರ್ಷ ನೀವು ಸಾಮಾನ್ಯಕ್ಕಿಂತ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಆದಾಗ್ಯೂ ಆರಂಭದ ಸಮಾಯ್ದಲ್ಲಿ ನೀವು ಕಠಿಣ ಪರಿಶ್ರಮ ಮಾಡುವ ಮೂಲಕ ನಿಮ್ಮ ಶಿಕ್ಷಣದತ್ತ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಇದಲ್ಲದೆ 26 ಫೆಬ್ರವರಿ ರಂದು, ಮಕರ ರಾಶಿಯಲ್ಲಿ ಮಂಗಳ ದೇವರ ಸಂಚಾರವು ನಿಮ್ಮ ಐದನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಅತ್ಯಂತ ಸಕಾರಾತ್ಮಕ ಪರಿಣಾಮವನ್ನು , ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಪಡೆಯುತ್ತಾರೆ.

ಏಪ್ರಿಲ್ ಅಂತ್ಯದ ವೇಳೆಗೆ ನಿಮ್ಮ ಐದನೇ ಮನೆಯಲ್ಲಿ ಶನಿ ದೇವ ಇರುವುದು ಮತ್ತು ಆದರ ನಂತರ ನಿಮ್ಮ ಆರನೇ ಮನೆಯಲ್ಲಿ ಕುಳಿತುಕೊಳ್ಳುವುದರಿಂದ ನೀವು ಹೆಚ್ಚುವರಿ ಶ್ರಮಿಸುವಿರಿ. ಈ ಪ್ರಕಾರ ನಿಮ್ಮ ಪರಿಶ್ರಮಕ್ಕೆ ಅನುಗುಣವಾಗಿ ನೀವು ಫಲಿತಾಂಶಗಳನ್ನು ಪಡೆಯುತ್ತೀರಿ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಶಿಕ್ಷಣದತ್ತ ಮಾತ್ರ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ಅಗತ್ಯವಿದ್ದಾಗ ನಿಮ್ಮ ಶಿಕ್ಷಕರು ಮತ್ತು ಮನೆಯ ಹಿರಿಯ ಸದಸ್ಯರ ಸಹಾಯವನ್ನು ನೀವು ಪಡೆದುಕೊಳ್ಳಬಹುದು. ಏಕೆಂದರೆ ಈ ಸಮಯದಲ್ಲಿ ಮಂಗಳ ದೇವ ನಿಮ್ಮ ಶಿಕ್ಷಣದ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಇದಲ್ಲದೆ ಸೆಪ್ಟೆಂಬರ್ ಅಂತ್ಯದ ವರೆಗೆ, ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ ವೈವಾಹಿಕ ಜೀವನ :

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ, ಕನ್ಯಾ ರಾಶಿಚಕ್ರದ ವಿವಾಹಿತ ಜನರು ಈ ವರ್ಷ ತಮ್ಮ ದಾಂಪತ್ಯ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ವರ್ಷದ ಆರಂಭದ ಸಮಯವು ನಿಮಗೆ ಒತ್ತಡದಿಂದ ತುಂಬಿರುತ್ತದೆ, ಏಕೆಂದರೆ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗಿನ ಸಾಮರಸ್ಯವನ್ನು ಕಾಪಾಡಿಕೊಳ್ಳುವಲ್ಲಿ ನೀವು ವಿಫಲರಾಗುತ್ತೀರಿ. ನಿಮ್ಮ ಮದುವೆಯ ಮನೆಯ ಅಧಿಪತಿ ಗುರು ದೇವ ನಿಮ್ಮ ವಿವಾದಗಳ ಆರನೇ ಮನೆಯಲ್ಲಿ ಇರುವುದು ಇದರ ಹಿಂದಿನ ಕಾರಣವಾಗಿರಬಹುದು. ಈ ಸಮಯದಲ್ಲಿ ನಿಮ್ಮ ಅತ್ತೆಮನೆ ಕಡೆಯಿಂದಲೂ ನೀವು ಸ್ವಲ್ಪ ಮಾನಸಿಕ ಒತ್ತಡವನ್ನು ಪಡೆಯುವ ಸಾಧ್ಯತೆಯೂ ಇದೆ. ವಿಶೇಷವಾಗಿ ಜನವರಿ ರಿಂದ ಏಪ್ರಿಲ್ ನಡುವೆ ಅತ್ತೆಮನೆ ಕಡೆಯವರೊಂದಿಗೆ ವಿವಾದಗಳು ಸಾಧ್ಯ.

ಇದಲ್ಲದೆ 11 ಸೆಪ್ಟೆಂಬರ್ ರಿಂದ ಡಿಸೆಂಬರ್ ಮಧ್ಯದ ಸಮಯದಲ್ಲಿ ವಿವಾಹಿತ ಜನರಿಗೆ ಸಮಯ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಜೀವನ ಸಂಗಾತಿಯ ಸಹಾಯದಿಂದ ನೀವು ಯಾವುದೇ ದೊಡ್ಡ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಇದರಿಂದಾಗಿ ನಿಮ್ಮಿಬ್ಬರ ದಾಂಪತ್ಯ ಜೀವನವು ಉತ್ತಮವಾಗಲು ಸಾಧ್ಯವಾಗುತ್ತದೆ. ಇದರೊಂದಿಗೆ ಯಾವುದೇ ವಿವಾದ ನಡೆಯುತ್ತಿದ್ದರೆ, ನೀವು ಇಬ್ಬರೂ ಒಟ್ಟಾಗಿ ಅದನ್ನು ನಿವಾರಿಸಲು ಸಹ ಸಾಧ್ಯವಾಗುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಯಾವುದೇ ಧಾರ್ಮಿಕ ಸ್ಟಳಕ್ಕೆ ಹೋಗಲು ಸಹ ಯೋಜಿಸಬಹುದು. ಅಲ್ಲಿ ನೀವಿಬ್ಬರೂ ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ.

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ ಕುಟುಂಬ ಜೀವನ :

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಈ ವಾರ ಕನ್ಯಾ ರಾಶಿಚಕ್ರದ ಸ್ಥಳೀಯರು ಸಾಮಾನ್ಯ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಆದಾಗ್ಯೂ, ಏಪ್ರಿಲ್ ಅಂತ್ಯದಲ್ಲಿ ಶನಿ ಗ್ರಹದ ಸಂಚಾರವು ಕುಂಭ ರಾಶಿಯಲ್ಲಿ ಸಂಭವಿಸಿದಾಗ, ಅದು ನಿಮ್ಮ ಆರನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಪರಿಣಾಮವಾಗಿ ಯಾವುದೇ ಕಾರಣದಿಂದಾಗಿ ನೀವು ಕುಟುಂಬದಿಂದ ದೂರ ಹೋಗಬೇಕಾಗಬಹುದು. ಕೆಲವು ಸ್ಥಳೀಯರು ಕುಟುಂಬದ ಸದಸ್ಯರೊಂದಿಗೆ ಯಾವುದೇ ವಿಷಯದ ಬಗ್ಗೆ ವಿವಾದ ಮಾಡುವ ಸಾಧ್ಯತೆಗಳಿವೆ. ಅಂತಹ ಪರಿಸ್ಥಿತಿಯಲ್ಲಿ ಮಾತನಾಡುವಾಗ ನಿಂದನೀಯ ಭಾಷೆಯನ್ನು ಬಳಸಬೇಡಿ, ಇಲ್ಲದಿದ್ದರೆ ಬೇರ್ಪಡಿಸುವ ಸಾಧ್ಯತೆ ಇದೆ.

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ ಜೂನ್ ರಿಂದ ಅಕ್ಟೋಬರ್ ವರೆಗಿನ ಸಮಯವು ನಿಮಗೆ ಹೆಚ್ಚು ಉತ್ತಮವಾಗಿರಲಿದೆ. ಈ ಸಮಯದಲ್ಲಿ ನೀವು ಕುಟುಂಬದ ಸದಸ್ಯರ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಏಕೆಂದರೆ ಈ ಸಮಯದಲ್ಲಿ ದೇಶೀಯ ಸೌಕರ್ಯಗಳ ನಿಮ್ಮ ನಾಲ್ಕನೇ ಮನೆಯ ಮೇಲೆ ಶುಭ ಗಹಗಳ ಅಂದರೆ ಬುಧ ಮತ್ತು ಶುಕ್ರನ ದೃಷ್ಟಿಯಿರುತ್ತದೆ. ಇದರೊಂದಿಗೆ ಕುಟುಂಬದಲ್ಲಿ ಯಾವುದೇ ಮಂಗಲಿಕ ಕಾರ್ಯಕ್ರಮವನ್ನು ಆಯೋಜಿಸುವ ಸಾಧ್ಯತೆಯೂ ಇದೆ. ಇದರಿಂದಾಗಿ ರುಚಿಕರ ಭಕ್ಷ್ಯಗಳನ್ನು ತಿನ್ನಲು ಅವಕಾಶಗಳನ್ನು ಸಹ ನೀವು ಪಡೆಯುತ್ತೀರಿ. ಈ ವರ್ಷ ವಿಶೇಷವಾಗಿ ಏಪ್ರಿಲ್ ತಿಂಗಳಲ್ಲಿ ನಿಮ್ಮ ಕೇಂದ್ರದಲ್ಲಿ ಗುರು ಗ್ರಹವು ಗೋಚರಿಸುತ್ತದೆ. ಪರಿಣಾಮವಾಗಿ ಕುಟುಂಬದಲ್ಲಿ ಶಾಂತಿಯಿಂದ ವಾತಾವರಣವನ್ನು ಕಾಣಲಾಗುತ್ತದೆ. ಇದರ ಪರಿಣಾಮವಾಗಿ ನೀವು ಕುಟುಂಬದ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆಯುವ ಬಯಕೆಯನ್ನು ಸಹ ನೀವು ವ್ಯಕ್ತಪಡಿಸಬಹುದು. ಆದಾಗ್ಯೂ ವರ್ಷದ ಕೊನೆಯ ತಿಂಗಳುಗಳು ಅಂದರೆ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಸಮಯದಲ್ಲಿ ವಿಶೇಷವಾಗಿ ನಿಮ್ಮ ಸಹೋದರ ಸಹೋದರಿಯರಿಗೆ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರ ಮೂರನೇ ಮನೆಯ ಅಧಿಪತಿ ಗ್ರಹವು ಕ್ರಮವಾಗಿ ಕೆಲಸದ ಸ್ಥಳದ ಮನೆ ಮತ್ತು ಅದೃಷ್ಟದ ಮನೆಯಲ್ಲಿ ಇರುತ್ತದೆ. ಇದರಿಂದಾಗಿ ನೀವು ಅವರ ಬೆಂಬಲವನ್ನು ಪಡೆಯುತ್ತೀರಿ, ಅಲ್ಲದೆ ಅವರ ಸ್ಥಾನಮಾನವು ಹೆಚ್ಚಾಗುತ್ತದೆ.

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ ಪ್ರೀತಿ ಜೀವನ :

ಪ್ರೀತಿ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಕನ್ಯಾ ರಾಶಿಚಕ್ರದ ಸ್ಥಳೀಯರು ತಮ್ಮ ಪ್ರೀತಿಯ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಆದಾಗ್ಯೂ ಇದರ ಹೊರತಾಗಿಯೂ, ಈ ವರ್ಷದ ಆರಂಭದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಏಕೆಂದರೆ ಜನವರಿ ತಿಂಗಳು ನಿಮ್ಮ ಪ್ರೀತಿಯ ಸಂಬಂಧಕ್ಕೆ ಸ್ವಲ್ಪ ಪ್ರತಿಕೂಲವಾಗಿರಲಿದೆ. ಮಕರ ರಾಶಿಯಲ್ಲಿ ಶನಿ ದೇವ ನೆಲೆಗೊಂಡಿರುವುದು ಇದರ ಹಿಂದಿನ ಪ್ರಮುಖ ಕಾರಣ. ಇದು ಕೆಲವು ಸಮಸ್ಯೆಗಳನ್ನು ಉದ್ಭವಿಸುವ ಕೆಲಸ ಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಯಾವುದೇ ವಿಷಯದ ಬಗ್ಗೆ ದೊಡ್ಡ ವಿವಾದದ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ಅವರೊಂದಿಗೆ ಮಾತನಾಡುವಾಗ ನಿಮ್ಮ ಪದಗಳನ್ನು ಎಚ್ಚರಿಕೆಯಿಂದ ಆರಿಸಿ.

ಇದಲ್ಲದೆ, ಫೆಬ್ರವರಿ ರಿಂದ ಜೂಲೈ ವರೆಗಿನ ಸಮಯವು ನಿಮಗೆ ವಿಶೇಷವಾಗಿ ಅನುಕೂಲಕರವಾಗಿರುತ್ತದೆ. ಇದರೊಂದಿಗೆ ಅಕ್ಟೋಬರ್ ನಿಂದ ಡಿಸೆಂಬರ್ ವರಿಗಿಂದ ಸಮಯದಲ್ಲೂ ನಿಮ್ಮ ಸಂಬಂಧದಲ್ಲಿನ ಶಕ್ತಿ ಸ್ಪಷ್ಟವಾಗಿ ಕಂಡುಬರುತ್ತದೆ. ಇದರಿಂದಾಗಿ ನೀವಿಬ್ಬರೂ ಮದುವೆಯಾಗಲು ಸಹ ನಿರ್ಧರಿಸಬಹುದು. ಈ ವರ್ಷ ನೀವು ಇಬ್ಬರು ನಿಮ್ಮ ಹಿಂದಿನ ಪ್ರತಿಯೊಂದು ವಿವಾದವನ್ನು ಪರಿಹರಿಸಲು ಸಹ ಸಾಧ್ಯವಾಗುತ್ತದೆ.

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ ಜ್ಯೋತಿಷ್ಯ ಪರಿಹಾರ ಕ್ರಮಗಳು :

  1. ನಿಯಮಿತವಾಗಿ ಹಸುವಿಗೆ ಹಸಿರು ಮೇವು ತಿನ್ನಿಸಿ.
  2. ಪ್ರತಿದಿನ ಗಣೇಶ ದೇವರನ್ನು ಆರಾಧಿಸಿ.
  3. ಬಡವರು ಮತ್ತು ಅಗತ್ಯವಿರುವವರಿಗೆ ಹೆಸರು ಬೇಳೆ ದಾನ ಮಾಡಿ.
  4. ಚಿಕ್ಕ ಹುಡುಗಿಯರಿಗೆ ಹಸಿರು ಬಳೆಗಳನ್ನು ನೀಡುವ ಮೂಳ ಅವರ ಆಶೀರ್ವಾದವನ್ನು ಸಹ ಪಡೆಯುವುದು, ಈ ವರ್ಷ ನಿಮಗೆ ಉತ್ತಮವಾಗಿರುತ್ತದೆ.

ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನಮ್ಮ ಈ ಲೇಖನವು ನಿಮಗೆ ಬಹಳ ಸಹಾಯ ಮಾಡಿದೆ ಎಂದು ನಾವು ಭಾವಿಸುತ್ತೇವೆ. ಹಾಗಿದ್ದಲ್ಲಿ, ಅದನ್ನು ನಿಮ್ಮ ಇತರ ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಧನ್ಯವಾದಗಳು!

More from the section: Horoscope 3294
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2022
© Copyright 2022 AstroCAMP.com All Rights Reserved