• Talk To Astrologers
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

ವಾರ್ಷಿಕ ರಾಶಿ ಭವಿಷ್ಯ 2022 - Horoscope 2022 in Kannada

Author: -- | Last Updated: Mon 6 Sep 2021 11:06:35 AM

ಮುಂಬರುವ ಹೊಸ ವರ್ಷವನ್ನು ತಿಳಿದುಕೊಳ್ಳಕೆಂಬ ಬಯಕೆಯನ್ನು ನೀವು ಹೊಂದಿದ್ದೀರಾ? ಮುಂಬರುವ ಹೊಸ ವರ್ಷ 2022, ನಿಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಫಲಿತಾಂಶಗಳನ್ನು ತರುತ್ತಿದೆ ಎಂದು ನೀವು ತಿಳಿಯಬೇಕೇ? ಈ ವರ್ಷ ಕೆಲವು ವಿಷಯಗಳನ್ನು ತಿಳಿದುಕೊಳ್ಳುವ ಬಗ್ಗೆ ನಿಮಗೆ ಗೊಂದಲವಿದೆಯೇ? ಈ ವರ್ಷ ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಪ್ರೀತಿಯ ಮದುವೆಯನ್ನು ನಡೆಸುತ್ತೀರಾ? ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಗತಿ ಮತ್ತು ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆಯೇ? ನಿಮ್ಮ ಮನಸ್ಸಿನಲ್ಲೂ ಇಂತಹ ಪ್ರಶ್ನೆಗಳು ಉದ್ಭವಿಸುತ್ತಿದ್ದರೆ, ವೈದಿಕ ಜ್ಯೋತಿಷ್ಯವನ್ನು ಆಧರಿಸಿದ ಆಸ್ಟ್ರೋಕ್ಯಾಂಪ್ ನ ರಾಶಿ ಭವಿಷ್ಯ 2022, ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ. ಇದರಿಂದಾಗಿ ನಿಮ್ಮ ಮುಂಬರುವ ವರ್ಷ 2022 ಅನ್ನು ಇನ್ನಷ್ಟು ಉತ್ತಮಗೊಳಿಸುವ ಮೂಲಕ ನೀವು ಪ್ರತಿ ಸಣ್ಣ ದೊಡ್ಡ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

Horoscope 2022 In Kannada

ಆಸ್ಟ್ರೋಸೇಜ್ ವಾರ್ತಾ ಮೂಲಕ ಪ್ರಪಂಚದಾದ್ಯಂತದ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ

ರಾಶಿ ಭವಿಷ್ಯ 2022 ರ, ಭವಿಷ್ಯವಾಣಿಯನ್ನು ನೋಡಿದರೆ, ಹಿರಿಯ ಜ್ಯೋತಿಷಿಗಳು ವರ್ಷ 2022, ಎಲ್ಲಾ 12 ರಾಶಿಗಳ ಜೀವನದಲ್ಲಿ ಅನೇಕ ಪ್ರಮುಖವಾದ ಬದಲಾವಣೆಗಳನ್ನು ತರುವುದಲ್ಲದೆ, ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬುತ್ತಾರೆ. ಆದ್ದರಿಂದ ವಿಳಂಬವಿಲ್ಲದೆ ನಿಮ್ಮ ರಾಶಿಚಕ್ರದ ಪ್ರಕಾರ ವರ್ಷ 2022 ರ ರಾಶಿ ಭವಿಷ್ಯ ಹೇಗಿರುತ್ತದೆ ಎಂದು ತಿಳಿಯೋಣ:

ಶನಿ ರಿಪೋರ್ಟ್ ಮೂಲಕ ನಿಮ್ಮ ಜೀವನದ ಮೇಲೆ ಶನಿ ದೇವರ ಪರಿಣಾಮ ಏನು ಎಂದು ತಿಳಿದುಕೊಳ್ಳಿ

ಮೇಷ ರಾಶಿ ಭವಿಷ್ಯ 2022

ಮೇಷ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ನಿಮಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ಈ 2022 ವರ್ಷದಲ್ಲಿ ಹೆಚ್ಚಿನ ಸಮಯ, ಕರ್ಮದ ಫಲವನ್ನು ನೀಡುವ ಶನಿ ನಿಮ್ಮ ಹತ್ತನೇ ಮನೆಯಲ್ಲಿರುತ್ತಾರೆ. ಕಾಲಪುರುಷ ಜಾತಕದ ಪ್ರಕಾರ ಇದನ್ನು ಕರ್ಮದ ಮನೆ. ಇದರ ಪರಿಣಾಮವಾಗಿ, ಈ ವರ್ಷ ಮೇಷ ರಾಶಿಚಕ್ರದ ಸ್ಥಳೀಯರು ಯಶಸ್ಸು ಪಡೆಯಲು ಹೆಚ್ಚುವರಿ ಕಠಿಣ ಪರಿಶ್ರಮ ಮಾಡುವ ಮೂಲಕ ತಮ್ಮ ಸೋಮಾರಿತನವನ್ನು ತ್ಯಜಿಸಬೇಕಾಗುತ್ತದೆ.

ಇದಲ್ಲದೆ ಈ ವರ್ಷ ಮಂಗಳ ದೇವರು ಸಹ ನಿಮ್ಮ ಜೀವನದಲ್ಲಿ ಅನೇಕ ಪ್ರಮುಖವಾದ ಬದಲಾವಣೆಗಳನ್ನು ತರುತ್ತಾರೆ. ಏಕೆಂದರೆ ವರ್ಷದ ಆರಂಭದಲ್ಲಿ ಮಂಗಳ ದೇವರ ಸಂಚಾರವು ನಿಮ್ಮ ಅದೃಷ್ಟದ ಮನೆಯಿಂದ ಆರಂಭವಾಗುತ್ತದೆ. ಮೊದಲ ತಿಂಗಳ ದ್ವಿತೀಯಾರ್ಧದಲ್ಲಿ ಅಂದರೆ 16 ಜನವರಿ ರಂದು ಕೆಂಪು ಗ್ರಹ ಮಂಗಳ ಧನು ರಾಶಿಗೆ ಪ್ರವೇಶಿಸುತ್ತದೆ. ಈ ಕಾರಣದಿಂದಾಗಿ ಆರ್ಥಿಕವಾಗಿ ನೀವು ಅನೇಕ ಶುಭ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ ಮತ್ತು ಮೇಷ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಸಕಾರಾತ್ಮಕತೆಯನ್ನು ಕಾಣಲಾಗುತ್ತದೆ. ಆದರೆ ಈ ಸಮಯವು ಈ ರಾಶಿಚಕ್ರದ ಪ್ರೇಮಿಗಳಿಗೆ ಸ್ವಲ್ಪ ಕಷ್ಟಕರವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಪ್ರೀತಿಯ ಜೀವನದ ಮನೆಯ ಅಧಿಪತಿ ನಿಮ್ಮ ಹನ್ನೆರಡನೇ ಮನೆಯಲ್ಲಿ ನೆಲೆಗೊಂಡಿರುವುದು, ನಿಮ್ಮ ಪ್ರೇಮಿಯೊಂದಿಗೆ ಕೆಲವು ತಪ್ಪುತಿಳುವಳಿಕೆಗಳಿಂದಾಗಿ ವಿವಾದದ ಸಾಧ್ಯತೆಗಳು ಕಂಡುಬರುತ್ತವೆ.

ಆದಾಗ್ಯೂ, ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಏಪ್ರಿಲ್ ತಿಂಗಳ 13 ದಿನಾಂಕದಂದು ಗುರುವು ತನ್ನದೇ ರಾಶಿಯಾದ ಮೀನಾ ರಾಶಿಯಲ್ಲಿ ಗೋಚರಿಸಿದಾಗ, ನಿಮ್ಮ ಹನ್ನೆರಡನೇ ಅಂದರೆ ನಷ್ಟದ ಮನೆಗೆ ಪ್ರವೇಶಿಸುತ್ತದೆ. ಇದರ ಪರಿಣಾಮವಾಗಿ ಗುರುವು ಈ ರಾಶಿಚಕ್ರದ ವಿದ್ಯಾರ್ಥಿಗಳನ್ನು ಹೆಚ್ಚು ಪ್ರಭಾವಿಸುವ ಕೆಲಸ ಮಾಡುತ್ತದೆ. ಏಕೆಂದರೆ ವಿದ್ಯಾರ್ಥಿಗಳು ಪ್ರತಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ, ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಇದಲ್ಲದೆ ವರ್ಷ 2022 ರ ಆರಂಭದಿಂದ ಶನಿ ದೇವ ಮತ್ತು ಬುಧ ದೇವರ ಸಂಯೋಜನೆಯು ಮಕರ ಮಕರ ರಾಶಿಯಲ್ಲಿ ಸಂಭವಿಸುವುದರಿಂದ, ಮೇಷ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ದೇಶಿಯ ಸಂಪನ್ಮೂಲಗಳ ನಾಲ್ಕನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ.

ಈ ಸಂಯೋಜನೆಯ ಕಾರಣದಿಂದಾಗಿ, ನೀವು ಅರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಯಾವುದೇ ದೊಡ್ಡ ರೋಗ ಅಥವಾ ಕಾಯಿಲೆ ಬರುವ ಸಾಧ್ಯತೆ ನಗಣ್ಯ. ಇದರ ಹೊರತಾಗಿಯೂ, ಈ ವರ್ಷ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಆರಂಭದ ಸಮಯದ ನಂತರ ಮಧ್ಯ ಮೇ ರಿಂದ ಆಗಸ್ಟ್ ವರೆಗೆ ನಿಮ್ಮ ಹನ್ನೆರಡನೇ ಮನೆಯಲ್ಲಿ ಮಂಗಳ ದೇವರ ಸಂಚಾರದಿಂದಾಗಿ, ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಅಸ್ವಸ್ಥತೆಗಳು ನಿಮಗೆ ತೊಂದರೆ ನೀಡಬಹುದು. ಆದ್ದರಿಂದ ಸಾಧ್ಯವಾದಷ್ಟು ಉತ್ತಮ ಪದ್ದತಿಯನ್ನು ಹೆಚ್ಚು ಮಸಾಲೆಯುಕ್ತ ಆಹಾರವನ್ನು ತಪ್ಪಿಸುವುದು ಉತ್ತಮ.

ಅದೇ ಸಮಯದಲ್ಲಿ ಮತ್ತೊಂದೆಡೆ, ಈ ವರ್ಷ ಮೇ ರಿಂದ 10 ಆಗಸ್ಟ್ ವರೆಗಿನ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಜೀವನದಲ್ಲಿ ಅನುಕೂಲತೆ ಉಂಟಾಗುತ್ತದೆ. ಲಗ್ನ ಮನೆಯ ಅಧಿಪತಿ ಮಂಗಳ ದೇವ ನಿಮ್ಮ ದೇಶಿಯ ಸೌಕರ್ಯಗಳ ನಾಲ್ಕನೇ ಮನೆಯ ಮೇಲೆ ದೃಷ್ಠಿ ನೀಡುತ್ತಾರೆ ಮತ್ತುನ್ ಈ ಸಮಯದಲ್ಲಿ ನಿಮ್ಮ ಕುಟುಂಬದ ಎರಡನೇ ಮನೆಗೆ ಸಾಗುತ್ತಾರೆ. ಆದರೆ ಆಗಸ್ಟ್ ತಿಂಗಳಲ್ಲಿ ಶನಿ ದೇವರ ದೃಷ್ಟಿಯು ನಿಮ್ಮ ಕುಟುಂಬ ಜೀವನದಲ್ಲಿ ಅಶಾಂತಿಗೆ ಕಾರಣವಾಗಬಹುದು. ಏಕೆಂದರೆ ಈ ಸಮಯದಲ್ಲಿ ನೀವು ಬಯಸದಿದ್ದರೂ, ಕುಟುಂಬದ ಸದಸ್ಯರೊಂದಿಗೆ ನಿಮ್ಮ ವಿವಾದ ಸಾಧ್ಯ. ಇದರಿಂದಾಗಿ ನಿಮ್ಮ ಮಾನಸಿಕ ಒತ್ತಡದಲ್ಲಿ ಹೆಚ್ಚಳವಾಗುತ್ತದೆ. ಇದಲ್ಲದೆ ಸೆಪ್ಟೆಂಬರ್ ಮಧ್ಯದಿಂದ ನವೆಂಬರ್ ಮಧ್ಯದ ವರೆಗೆ, ಗ್ರಹಗಳ ಚಲನೆಯು, ನಿಮ್ಮ ತಂದೆಗೆ ಅರೋಗ್ಯ ಸಮಸ್ಯೆಗಳನ್ನು ನೀಡುತ್ತವೆ. ಆರಂಭದ ನಾಲ್ಕು ತಿಂಗಳುಗಳು ( ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ) ಒತ್ತಡದಿಂದ ತುಂಬಿರಲಿವೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ಅಹಂ ಸಂಘರ್ಷಣೆಯನ್ನು ಸ್ಪಷ್ಟವಾಗಿ ಕಾಣಲಾಗುತ್ತದೆ. ಆದರೆ ಇದರ ನಂತರ ಮೇ ತಿಂಗಳಲ್ಲಿ ನಿಮ್ಮದೇ ರಾಶಿಯಲ್ಲಿ ಶುಕ್ರ ಸಂಚರಿಸಿದಾಗ, ಪರಿಸ್ಥಿತಿಗಳು ಸುಧಾರಿಸುತ್ತವೆ. ಇದರಿಂದಾಗಿ ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸಹ ಉತ್ತಮಗೊಳ್ಳುತ್ತದೆ.

ಮೇಷ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – 2022 ಮೇಷ ರಾಶಿ ಭವಿಷ್ಯ

ವೃಷಭ ರಾಶಿ ಭವಿಷ್ಯ 2022

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ, ಹೊಸ ವರ್ಷ 2022 ನಿಮಗೆ ಸಾಮಾನ್ಯ ಫಲಿತಾಂಶಗಳನ್ನು ನೀಡಲಿದೆ. ಆರಂಭದ ತಿಂಗಳ ಮಧ್ಯ ಅಂದರೆ 16 ಜನವರಿ ರಂದು ಮಂಗಳ ದೇವ ಧನು ರಾಶಿಯಲ್ಲಿ ಗೋಚರಿಸುತ್ತಾರೆ, ಇದು ನಿಮ್ಮ ಎಂಟನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಮನೆಯನ್ನು ಆಯುಷ್ಯ ಮನೆಯೆಂದು ಸಹ ಕರೆಯಲಾಗುತ್ತದೆ. ಈ ಕಾರಣದಿಂದಾಗಿ ಮಂಗಳ ದೇವರ ಸಂಚಾರವು ನಿಮಗೆ ಅದೃಷ್ಟದ ಬೆಂಬಲವನ್ನು ನೀಡಲಿದೆ. ಇದರಿಂದ ನಿಮ್ಮ ಜೀವನದಲ್ಲಿ ನೀವು ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಈ ರಾಶಿಚಕ್ರದ ವಿದ್ಯಾರ್ಥಿಗಳು 16 ಜನವರಿ ರಿಂದ ಜೂನ್ ವರೆಗಿನ ಸಮಯದಲ್ಲಿ ತಮ್ಮ ಶಿಕ್ಷಣದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ, ಏಕೆಂದರೆ ನಿಮ್ಮ ವಿದೇಶದ ಹನ್ನೆರಡನೇ ಮನೆಯ ಅಧಿಪತಿ ಏಪ್ರಿಲ್, ಮೇ ತಿಂಗಳ ಸಮಯದಲ್ಲಿ ನಿಮ್ಮ ಶಿಕ್ಷಣದ ಮನೆಯ ಬೀರುತ್ತಾರೆ. ಮಂಗಳ ದೇವರ ಸ್ಥಾನವೂ ಅನೇಕ ಸ್ಥಳೀಯರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಅವಕಾಶವನ್ನು ನೀಡುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಸಹ ಈ ಸಮಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಅರೋಗ್ಯ ಸುಧಾರಿಸುತ್ತದೆ ಮತ್ತು ನೀವು ಉತ್ತಮ ಆರೋಗ್ಯವನ್ನು ಆನಂದಿಸುವುದನ್ನು ಕಾಣಲಾಗುತ್ತದೆ.

ನಿಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಅದರಲ್ಲೂ ಈ ವರ್ಷ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ, ಇದರಿಂದಾಗಿ ನೀವು ಬಡ್ತಿ ಪಡೆಯಲು ಸಾಧ್ಯವಾಗುತ್ತದೆ, ಇದಲ್ಲದೆ ಯೋಗಕಾರಕ ಗ್ರಹ ಶನಿಯು ನಿಮ್ಮ ರಾಶಿಯಿಂದ ಒಂಬತ್ತನೇ ಮನೆ ಅಂದರೆ ಅದೃಷ್ಟದ ಮನೆಯಲ್ಲಿ ನೆಲೆಗೊಂಡಿರುವುದು, ನಿಮ್ಮ ಆದಾಯದ ಮೂಲವನ್ನು ಹೆಚ್ಚಿಸುವಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಇದರೊಂದಿಗೆ, ಈ ವರ್ಷ ಏಪ್ರಿಲ್ ತಿಂಗಳಲ್ಲಿ ಅನೇಕ ಗ್ರಹಗಳ ಸ್ಥಳದಲ್ಲೂ ಬದಲಾವಣೆ ಕಂಡುಬರುತ್ತದೆ. ಇದರಿಂದಾಗಿ ಹಣಕಾಸು ಮತ್ತು ಆಸ್ತಿಯನ್ನು ಸಂಗ್ರಹಿಸುವಲ್ಲಿ ಬರುತ್ತಿದ್ದ ಎಲ್ಲಾ ಅಡೆತಡೆಗಳನ್ನು ತೊಡೆದುಹಾಕಲು ನಿಮಗೆ ಸಾಧ್ಯವಾಗುತ್ತದೆ. ಆಗಸ್ಟ್ ರಿಂದ ಅಕ್ಟೋಬರ್ ಮಧ್ಯೆ ಸೂರ್ಯ ಮತ್ತು ಬುಧ ಸಿಂಹ ರಾಶಿಯಲ್ಲಿ ಗೋಚರಿಸುವ ಮೂಲಕ ಸಂಯೋಜನೆ ಮಾಡುವುದು, ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ಬುಧಾದಿತ್ಯ ಯೋಗವನ್ನು ನಿರ್ಮಿಸುವುದು ನಿಮ ಆರ್ಥಿಕ ಬಿಕ್ಕಟ್ಟುಗಳನ್ನು ನಿವಾರಿಸಲು ಕಾರಣವಾಗುತ್ತದೆ. ಈ ಸಮಯದಲ್ಲಿ ಮಂಗಳ ಗ್ರಹವು ತನ್ನದೇ ರಾಶಿಯಲ್ಲಿ ಅಂದರೆ ವೃಷಭ ರಾಶಿಯಲ್ಲಿ ಗೋಚರಿಸುವ ಕೆಲಸದ ಸ್ಥಳದಲ್ಲಿ ನಿಮ್ಮ ಸಂಬಳವನ್ನು ಹೆಚ್ಚಿಸುವ ಮಾಡುತ್ತದೆ.

ಆದರೆ ಈ ವರ್ಷ ನವೆಂಬರ್ ತಿಂಗಳಲ್ಲಿ ಗುರು ಗ್ರಹವು ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಕುಳಿತಿರುವುದು, ತಮ್ಮ ಆಸೆಗಳನ್ನು ಪೂರ್ಣಗೊಳಿಸಲು ನೀವು ಹಣಕಾಸು ಖರ್ಚು ಮಾಡಲು ಪ್ರೇರೇಪಿಸುತ್ತದೆ. ವರ್ಷ 2022 ರಲ್ಲಿ ಮೇ ತಿಂಗಳ ಮಧ್ಯದಿಂದ ಮೂರು ಗ್ರಹಗಳ (ಮಂಗಳ, ಶುಕ್ರ ಮತ್ತು ಗುರು )ಸಂಯೋಜನೆ ಮಾಡುವುದು ಸಹ ನಿಮ್ಮ ಕುಟುಂಬ ಜೀವನದಲ್ಲಿ ಉತ್ತಮ ಸಾಧ್ಯತೆಗಳನ್ನು ತೋರಿಸುತ್ತಿವೆ. ಕಾರಣದಿಂದಾಗಿ ವಿಶೇಷವಾಗಿ ಆಗಸ್ಟ್ ರಿಂದ ಅಕ್ಟೋಬರ್ ವರೆಗಿನ ಸಮಯದಲ್ಲಿ, ನಿಮ್ಮ ಮನೆ - ಕುಟುಂಬದಲ್ಲಿ ಸಂತೋಷ ಮತ್ತು ಸುಖದ ಆಗಮನವಾಗುತ್ತದೆ.

ನಿಮ್ಮ ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ನವೆಂಬರ್ ತಿಂಗಳಲ್ಲಿ ನಿಮ್ಮ ಮಕ್ಕಳ ಐದನೇ ಮನೆಯ ಅಧಿಪತಿ ನಿಮ್ಮ ಒಂಬತ್ತನೇ ಮನೆಗೆ ಸಾಗುವುದು ಒಂದೆಡೆ, ದಾಂಪತ್ಯ ಸ್ಥಳೀಯರಿಗೆ ಕೊನೆಯ ಮೂರು ತಿಂಗಳಲ್ಲಿ ಅಂದರೆ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಮಕ್ಕಳ ಸಂತೋಷವನ್ನು ನೀಡುವ ಕೆಲಸ ಮಾಡುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವರ್ಷದ ಆರಂಭದಲ್ಲಿ ಐದನೇ ಮನೆ ಅಂದರೆ ಮಕ್ಕಳು ಮತ್ತು ಶಿಕ್ಷಣದ ಮನೆಯ ಅಧಿಪತಿಯು ನಿಮ್ಮ ಒಂಬತ್ತನೇ ಮನೆ ಅಂದರೆ ಅದೃಷ್ಟದ ಮನೆಗೆ ಗೋಚರಿಸುತ್ತದೆ . ಇದು ನಿಮ್ಮ ಸಂಬಂಧಗಳಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಹೆಚ್ಚಿಸಲಿದೆ.

ವೃಷಭ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – 2022 ವೃಷಭ ರಾಶಿ ಭವಿಷ್ಯ

ಮಿಥುನ ರಾಶಿ ಭವಿಷ್ಯ 2022

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ2022 ರಲ್ಲಿ ಮಿಥುನ ರಾಶಿಚಕ್ರದ ಸ್ಥಳೀಯರು ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆರಂಭದ ತಿಂಗಳು ಅಂದರೆ ಜನವರಿ ರಿಂದ ಮಾರ್ಚ್ ವರೆಗೆ ಶನಿ ದೇವ ಮಕರ ರಾಶಿಯ ಮೂಲಕ ನಿಮ್ಮ ರಾಶಿಯ ತನ್ನದೇ ಎಂಟನೇ ಮನೆಯಲ್ಲಿ ನೇಳೆಗೊಳ್ಳುತ್ತರೆ. ಇದರಿಂದಾಗಿ ನಿಮಗೆ ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ. ಇದಲ್ಲದೆ ಶನಿ ದೇವ ನಿಮ್ಮ ಆರೋಗ್ಯ ಕ್ಷೀಣಿಸುವುವದಕ್ಕೂ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವ ಮೂಲಕ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಇದಲ್ಲದೆ ಅನೇಕ ಗ್ರಹಗಳ ಪರಿಣಾಮವು ಸಹ ನಿಮಗೆ 17 ಫೆಬ್ರವರಿ ರಿಂದ ಏಪ್ರಿಲ್ ವರೆಗೆ ಆಮ್ಲೀಯತೆ, ಕೀಲುನೋವು ಶೀತ ಮುಂತಾದ ಆರೋಗ್ಯ ಸಮಸ್ಯೆಗಳನ್ನು ನೀಡುವ ಸಾಧ್ಯತೆ ಇದೆ.

ಆದಾಗ್ಯೂ ಏಪ್ರಿಲ್ ಮಧ್ಯದ ನಂತರ ರಾಹು ನಿಮ್ಮ ಹನ್ನೊಂದನೇ ಮನೆಗೆ ಗೋಚರಿಸುತ್ತದೆ. ಇದನ್ನು ಲಾಭದ ಮನೆ ಎಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ರಾಹುವು ನಿಮಗೆ ನಿವಾರಣೆ ನೀಡುವ ಮೂಲಕ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಸಾಧ್ಯತೆ ಉಂಟಾಗುತ್ತದೆ. ಇದರೊಂದಿಗೆ ಏಪ್ರಿಲ್ ರಿಂದ ಜುಲೈ ಮಧ್ಯೆ, ಗುರು ಗ್ರಹವು ತನ್ನದೇ ರಾಶಿಯ ಮನೆಯಲ್ಲಿ ಗೋಚರಿಸುವುದು ಮತ್ತು ನಿಮ್ಮ ಕರ್ಮದ ಮನೆ ಅಂದರೆ ನಿಮ್ಮ ಹತ್ತನೇ ಮನೆಯ ಮೇಲೆ ಪರಿಣಾಮ ಬೀರುವುದು, ವಿಧ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.

ಏಕೆಂದರೆ ಈ ಸಮಯದಲ್ಲಿ ಮಿಥುನ ರಾಶಿಚಕ್ರದ ವಿಧ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಹೃದಯವನ್ನು ಗೆಲ್ಲಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಅವರ ಬೌದ್ಧಿಕ ಸಾಮರ್ಥ್ಯವು ಬೆಳೆಯುತ್ತದೆ. ಇದರಿಂದಾಗಿ ಅವರು ಹಿಂದಿನ ಸಮಯದಲ್ಲಿ ಎಲ್ಲಾ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಎದುರಿಸುತ್ತಿದ್ದ ಪ್ರತಿಯೊಂದು ಸಮಸ್ಯೆಯನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.

ರಾಶಿ ಭವಿಷ್ಯ 2022 ರ ಪ್ರಕಾರ, ಏಪ್ರಿಲ್ ನಂತರ ಶನಿ ದೇವ ನಿಮ್ಮ ರಾಶಿಚಕ್ರದ ಎಂಟನೇ ಮನೆಯಿಂದ ಒಂಬತ್ತನೇ ಮನೆಗೆ ಪ್ರವೇಶಿಸುತ್ತಾರೆ. ಇದರ ಪರಿಣಾಮವಾಗಿ, ವಿಧ್ಯಾರ್ಥಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿಶೇಷವಾಗಿ ನೀವು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ನಿರತರಾಗಿದ್ದಾರೆ, ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಆದರೆ ಶನಿ ದೇವರ ಸ್ಥಾನವು ಆರ್ಥಿಕ ಜೀವನಕ್ಕೆ ಪ್ರಯೋಜನಕಾರಿಯಾಗಿದೆ. ನಿಮ್ಮ ವೆಚ್ಚಗಳನ್ನು ನಿಯಂತ್ರಣದಲ್ಲಿಡುವ ಮೂಲಕ ನಿಮ್ಮ ಹಣಕಾಸು ಸಂಗ್ರಹಿಸುವ ಸಮಯ ಇದು.

ಅದೇ ಸಮಯದಲ್ಲಿ ಮತ್ತೊಂದೆಡೆ, ಉದ್ಯೋಗವನ್ನು ಹುಡುಕುತ್ತಿದ್ದರೆ, ಮೇ ಮಧ್ಯದಿಂದ ಆಗಸ್ಟ್ ಮಧ್ಯದ ವರೆಗಿನ ಸಮಯದ ನಡುವೆ ಮಂಗಳ ಗ್ರಹವು ನಿಮ್ಮ ರಾಶಿಯಿಂದ ಕರ್ಮದ ಮನೆ, ಲಾಭದ ಮನೆ ಮತ್ತು ಹನ್ನೆರಡನೇ ಮನೆಯಲ್ಲಿ ಗೋಚರಿಸುವ ಮೂಲಕ ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತವೆ. ಆದಾಗ್ಯೂ, ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಶತ್ರು ಮತ್ತು ವಿರೋಧಿಗಳು ಸಕ್ರಿಯರಾಗಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಅವರ ಬಗ್ಗೆಯೂ ನೀವು ಹೆಚ್ಚು ಜಾಗರೂಕರಾಗಿರಬೇಕು. ನಿಮ್ಮ ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ಪ್ರೇಮಿಗಳು ಈ ವರ್ಷ ಗುರುವಿನ ಅನುಗ್ರಹದಿಂದ ಪ್ರೀತಿಯ ಮದುವೆಯಾಗಲು ಅವಕಾಶವನ್ನು ಪಡೆಯುತ್ತಾರೆ. ವಿಶೇಷವಾಗಿ ಆರಂಭದ ಸಮಯದಿಂದ ಸೆಪ್ಟೆಂಬರ್ ವರೆಗಿನ ಸಮಯದಲ್ಲಿ ನಿಮ್ಮ ಪ್ರೀತಿಯ ಜೀವನಕ್ಕೆ ಅನುಕೂಲಕರವಾಗಿರುತ್ತದೆ. ಆದರೆ ಅಂತ್ಯದ ಮೂರು ತಿಂಗಳಲ್ಲಿ ( ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪ್ರೀತಿಪಾತ್ರರೊಂದಿಗೆ ಮಾತನಾಡುವಾಗ ನೀವು ನಿಮ್ಮ ಪದಗಳನ್ನು ಬಹಳ ಚಿಂತನಶೀಲವಾಗಿ ಬಳಸಲು ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ಮಂಗಳ ದೇವರ ಮೂಲಕ ನಿಮ್ಮ ಲಗ್ನ ಮತ್ತು ಎರಡನೇ ಮನೆಯ ಮೇಲೆ ಪರಿಣಾಮ ಬೀರುವುದು ನಿಮ್ಮನ್ನು ಆಕ್ರಮಣಕಾರಿ ಮಾಡಲು ಕೆಲಸ ಮಾಡುತ್ತದೆ.

ವೈವಾಹಿಕ ರಾಶಿ ಭವಿಷ್ಯ 2022 ರ ಪ್ರಕಾರ, ಮುಂಬರುವ ವರ್ಷ ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಮಿಶ್ರವಾಗಿರಲಿದೆ. ಏಕೆಂದರೆ ಒಂದೆಡೆ ಶುಭ ಗ್ರಹಗಳ ಪರಿಣಾಮವು ವರ್ಷದ ಆರಂಭದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಅನುಕೂಲತೆಯನ್ನು ತಂದರೆ ಅದೇ ಸಮಯದಲ್ಲಿ ಮತ್ತೊಂದೆಡೆ, 17 ಏಪ್ರಿಲ್ ರಿಂದ ಜೂನ್ ತಿಂಗಳ ಮಧ್ಯದಲ್ಲಿ ಮೂರು ಗ್ರಹಗಳ ( ಮಂಗಳ, ಶುಕ್ರ ಮತ್ತು ಗುರು ) ಸಂಯೋಜನೆಯು ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ನೀಡುವ ಕಾರಣವಾಗಬಹುದು.

ಮಿಥುನ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರಾಗವಾಗಿ ಓದಿ – 2022 ಮಿಥುನ ರಾಶಿ ಭವಿಷ್ಯ

ನಮ್ಮ ಪರಿಣತ ಜ್ಯೋತಿಷಿಗಳ ಮೂಲಕ ನಿಮ್ಮ ಯಾವುದೇ ಸಮಸ್ಯೆಗೆ ತ್ವರಿತ ಪರಿಹಾರವನ್ನು ಪಡೆಯಿರಿ ಪ್ರಶ್ನೆ ಕೇಳಿ

ಕರ್ಕ ರಾಶಿ ಭವಿಷ್ಯ 2022

ಕರ್ಕ ರಾಶಿ ಭವಿಷ್ಯ 2022 ರ ಮುನ್ಸೂಚನೆಯ ಪ್ರಕಾರ, ಹೊಸ ವರ್ಷ 2022 ರ ಆರಂಭದಲ್ಲಿ ನಿಮ್ಮ ರಾಶಿಚಕ್ರದ ಪಾಲುದಾರಿಕೆಯ ಏಳನೇ ಮನೆಯಲ್ಲಿ ಶನಿ ದೇವರ ಪರಿಣಾಮವು, ನಿಮಗೆ ಕೆಲವು ಕಷ್ಟಗಳನ್ನು ನೀಡಲಿದೆ. ವಿಶೇಷವಾಗಿ ಈ ಸಮಯದಲ್ಲಿ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ ಶನಿ ದೇವರ ಈ ಸ್ಥಾನವು ನಿಮ್ಮ ದಾಂಪತ್ಯ ಜೀವನದಲ್ಲಿ ಪ್ರತಿಕೂಲ ಫಲತಾಂಶಗಳನ್ನು ನೀಡುವ ಕೆಲಸ ಮಾಡುತ್ತದೆ. ಇದರಿಂದಾಗಿ ನಿಮ್ಮ ಮಾನಸಿಕ ಒತ್ತಡದಲ್ಲೂ ಹೆಚ್ಚಳವನ್ನು ಕಾಣಲಾಗುತ್ತದೆ. ಇದರೊಂದಿಗೆ ಈ ಸಮಯವು ಸಹಭಾಗಿತ್ವದಲ್ಲಿ ವ್ಯಾಪಾರ ಮಾಡುತ್ತಿರುವ ಜನರಿಗೂ ಸಮಸ್ಯೆ ನೀಡುವ ಸಾಧ್ಯತೆಯನ್ನು ತೋರಿಸುತ್ತಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮತ್ತು ಪಾಲುದಾರರ ಸಂಬಂಧದಲ್ಲಿ ಕಹಿ ಉಂಟಾಗುತ್ತದೆ, ಇದರ ನಕಾರಾತ್ಮಕ ಪರಿಣಾಮವು ನಿಮ್ಮ ವ್ಯಾಪಾರದಲ್ಲಿ ಇಳಿಕೆಯನ್ನು ತರುತ್ತದೆ.

ಏಪ್ರಿಲ್ ಅಂತ್ಯದಿಂದ ಶನಿ ದೇವ ಮತ್ತೆ ಗೋಚರಿಸುವ ಮೂಲಕ ಕುಂಭ ರಾಶಿಯಲ್ಲಿ ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ನಿಮ್ಮ ಎಂಟನೇ ಮನೆ ಪ್ರಭಾವಿತವಾಗುತ್ತದೆ. ಈ ಸಮಯದಲ್ಲಿ ನೀವು ಕೆಲವು ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಏಲ್ಲಕ್ಕಿತ ಹೆಚ್ಚಾಗಿ, ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಜೀವನವು ಸುಧಾರಿಸುತ್ತದೆ ಮತ್ತು ನೀವು ವಿವಿಧ ವಿಧಾನಗಳ ಮೂಲಕ ಹಣವನ್ನು ಸಂಪಾದಿಸಲು ಸಾಧ್ಯವಾಗುತ್ತದೆ. ಆದರೆ 16 ಜನವರಿ ರಂದು ಮಂಗಳ ದೇವ ಧನು ರಾಶಿಗೆ ಪ್ರವೇಶಿಸುವುದು ಮತ್ತು ನಿಮ್ಮ ರೋಗ ಮತ್ತು ಅಡೆತಡೆಗಳ ಎಂಟನೇ ಮನೆಯ ಮೇಲೆ ಪರಿಣಾಮ ಬೀರುವುದು, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ನಿಮ್ಮ ಅನೇಕ ಸಮಸ್ಯೆಗಳನ್ನು ತೊಡೆದುಹಾಕುವ ಕೆಲಸ ಮಾಡುತ್ತದೆ. ಆದಾಗ್ಯೂ, ಈ ಸಮಯದಲ್ಲಿ ಮಂಗಳ ದೇವ ನಿಮ್ಮ ಪೋಷಕರಿಗೆ ಕೆಲವು ಅರೋಗ್ಯ ಸಮಸ್ಯೆಗಳನ್ನು ಸಹ ನೀಡುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ, ಅಗತ್ಯವಿದ್ದಾಗ ಯಾವುದೇ ಉತ್ತಮ ವೈದ್ಯರ ಬಳಿ ಕರೆದೊಯ್ಯಿರಿ.

ಇದಲ್ಲದೆ 13 ಏಪ್ರಿಲ್ ನಂತರ ಗುರುವು ಮೀನಾ ರಾಶಿಯಲ್ಲಿ ಗೋಚರಿಸುತ್ತದೆ, ನಿಮ್ಮ ರಾಶಿಚಕ್ರದ ನಿಮ್ಮಗೆ ಒಂಬತ್ತನೇ ರಾಶಿಯಲ್ಲಿ ಕುಳಿತುಕೊಳ್ಳುತ್ತದೆ ಮತ್ತು ವರ್ಷದ ಅಂತ್ಯದ ವರೆಗೆ ಆ ಸ್ಥಾನದಲ್ಲೇ ಉಳಿದಿರುತ್ತದೆ. ಈ ಮನೆಯನ್ನು ಅದೃಷ್ಟದ ಮನೆಯೆಂದು ಕರೆಯಲಾಗುತ್ತದೆ. ವಿಶೇಷವಾಗಿ ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದಲಿ ಶಾಂತಿ ಉಂಟಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಸಹ ಅಪಾರ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಮನೆ - ಕುಟುಂಬದ ಸದಸ್ಯರ ಬೆಂಬಲವನ್ನು ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಇದಲ್ಲದೆ ಏಪ್ರಿಲ್ ತಿಂಗಳಲ್ಲಿ ಅನೇಕ ಇತರ ಪ್ರಮುಖ ಗ್ರಹಗಳ ಸಂಚಾರವು ಸಂಭವಿಸುತ್ತದೆ, ಇದರಿಂದಾಗಿ ನಿಮ್ಮ ಜೀವನದಲ್ಲಿ ಅನೇಕ ಮುಖ್ಯ ಬದಲಾವಣೆಗಳು ಉಂಟಾಗುತ್ತವೆ.

ವರ್ಷ 2022 ರಾಶಿ ಭವಿಷ್ಯದ ಪ್ರಕಾರ, ಏಪ್ರಿಲ್ ರಿಂದ ಆಗಸ್ಟ್ ವರೆಗಿನ ಸಮಯವೂ ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಪ್ರಯೋಜನಕಾರಿಯಾಗಲಿದೆ. ಈ ವರ್ಷ ರಾಹುವು ಮೇಷ ರಾಶಿಯಲ್ಲಿ ಪ್ರವೇಶಿಸುವ ಮೂಲಕ ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತಾರೆ. ವಿಶೇಷವಾಗಿ ರಾಹುವಿನ ಅನುಗ್ರಹದಿಂದ ಕರ್ಕ ರಾಶಿಚಕ್ರದ ಸ್ಥಳೀಯರು ಅನೇಕ ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಜೂನ್ - ಜೂಲೈ ನಡುವೆ, ಮಂಗಳ ಗ್ರಹವು ಮೇಷ ರಾಶಿಗೆ ಪ್ರವೇಶಿಸುವ ಮೂಲಕ, ನೀಮ್ಮ ಹತ್ತನೇ ಮನೆಯ ಮೇಲೆ ಪರಿಣಾಮ ಬೀರುವುದು ಮತ್ತು ನಿಮ್ಮ ರಾಶಿಚಕ್ರದ ಮೊದಲನೇ ಮನೆಯನ್ನು ಸಂಪೂರ್ಣವಾಗಿ ದೃಷ್ಟಿ ನೀಡುವುದು, ವಿವಾಹಿತರಿಗೆ ಶುಭವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಅವರು ತಮ್ಮ ಜೀವನದಲ್ಲಿ ಬರುತ್ತಿದ್ದ ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳನ್ನು ಪರಿಹರಿಸಿ, ತಮ್ಮ ಸಂಬಂಧದಲ್ಲಿ ಮಾಧುರ್ಯವನ್ನು ತರಲು ಸಾಧ್ಯವಾಗುತ್ತದೆ.

ನಿಮ್ಮ ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ವರ್ಷ 2022 ರ ರಾಶಿ ಭವಿಷ್ಯವನ್ನು ನೋಡಿದರೆ, ಕರ್ಕ ರಾಶಿಚಕ್ರದ ಜನರು ಪ್ರೀತಿಯ ಜೀವನದಲ್ಲಿ ಈ ವರ್ಷ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ಇನ್ನೂ ಒಂಟಿಯಾಗಿರುವ ಜನರು ಮತ್ತು ಯಾವುದೇ ವಿಶೇಷ ವ್ಯಕ್ತಿಯನ್ನು ಹುಡುಕುತ್ತಿರುವವರು ಈ ವರ್ಷ ಏಪ್ರಿಲ್ ಮಧ್ಯದಿಂದ ಸೆಪ್ಟೆಂಬರ್ ವರೆಗೆ ಗುರುವಿನ ಶುಭ ಸ್ಥಾನದಿಂದಾಗಿ ಯಾವುದೇ ಹೊಸ ಸಂಗಾತಿಯನ್ನು ಭೇಟಿ ಮಾಡಲು ಅವಕಾಶವನ್ನು ಪಡೆಯುತ್ತಾರೆ. ಇದರೊಂದಿಗೆ ಏಪ್ರಿಲ್ ತಿಂಗಳಲ್ಲಿ ರಾಹುವು ಸ್ಥಾನವನ್ನು ಬದಲಾಯಿಸುವ ಮೂಲಕ, ನಿಮ್ಮ ಸಂಬಂಧದಲ್ಲಿ ಪ್ರಣಯವನ್ನು ಹೆಚ್ಚಿಸುತ್ತಾರೆ.

ಕರ್ಕ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – 2022 ಕರ್ಕ ರಾಶಿ ಭವಿಷ್ಯ

ಸಿಂಹ ರಾಶಿ ಭವಿಷ್ಯ 2022

ಸಿಂಹ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ಸಿಂಹ ರಾಶಿಚಕ್ರದ ಜನರಿಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ಆರಂಭದ ತಿಂಗಳು ಜನವರಿ ರಿಂದ ಏಪ್ರಿಲ್ ಮಧ್ಯದ ವರೆಗೆ ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯು, ನಿಮ್ಮ ಆರ್ಥಿಕ ಜೀವನದಲ್ಲಿ ಅನುಕೂಲತೆಯನ್ನು ನೀಡುವ ಸಾಧ್ಯತೆ ಇದೆ. ಇದರ ಪರಿಣಾಮದಿಂದಾಗಿ ನೀವು ಹಿಂದೆ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಈ ಸಮಯದಲ್ಲಿ ಅದನ್ನು ತೊಡೆದುಹಾಕಲು ನಿಮಗೆ ಸಾಧ್ಯವಾಗುತ್ತದೆ. ಇದರೊಂದಿಗೆ ಜನವರಿ ಅಂತ್ಯ ಅಂದರೆ 26 ಜನವರಿ ರಿಂದ ಮಾರ್ಚ್ ವರೆಗೆ, ಮಂಗಳ ದೇವ ನಿಮ್ಮ ರಾಶಿಯಿಂದ ಆರನೇ ಮನೆ ಅಂದರೆ ಅದೃಷ್ಟದ ಮನೆಯಲ್ಲಿ ಇರುತ್ತಾರೆ. ವಿಶೇಷವಾಗಿ ಈ ಸಮಯದಲ್ಲಿ ನಿಮ್ಮ ಮಕ್ಕಳ ಕಳಪೆ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ. ಇದರೊಂದಿಗೆ ಮಂಗಳನ ಈ ಸ್ಥಾನವು ಕೆಲಸದ ಸ್ಥಳದಲ್ಲೂ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು ನಿಮ್ಮ ಸಂಬಳವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತೀರಿ.

ಆದಾಗ್ಯೂ, ವರ್ಷ 2022 ರ ಭವಿಷ್ಯವಾಣಿಯನ್ನು ನೋಡಿದರೆ, ಈ ವರ್ಷ ಫೆಬ್ರವರಿ ಮತ್ತು ಏಪ್ರಿಲ್ ತಿಂಗಳಲ್ಲಿ ಅನೇಕ ಗ್ರಹಗಳ ಸಯೋಜನೆ ಮತ್ತು ಬದಲಾವಣೆಗಳು, ನೀವು ಸ್ವಲ್ಪ ಜಾಗರೂಕರಾಗಿರಬೇಕು ಎಂದು ಸೂಚಿಸುತ್ತಿವೆ. ಏಪ್ರಿಲ್ ತಿಂಗಳಲ್ಲಿ ಕೆಲವು ಸ್ಥಳೀಯರು ಅನೇಕ ಅನೇಕ ಅಪ್ರಕಟಿತ ಘಟನೆಗಳನ್ನು ಎದುರಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, 12 ಏಪ್ರಿಲ್ ರಂದು ರಾಹುವು ಮೇಷ ರಾಶಿಯಲ್ಲಿ ಗೋಚರಿಸಲಿದೆ, ಇದು ನಿಮ್ಮ ಒಂಬತ್ತನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಸಿಂಹ ರಾಶಿಚಕ್ರದ ಸ್ಥಳೀಯರ ಆರೋಗ್ಯವು ಕುಸಿಯುತ್ತದೆ. ಇದಲ್ಲದೆ ಏಪ್ರಿಲ್ ರಿಂದ ಆಗಸ್ಟ್ ವರೆಗೆ ಗುರು ತನ್ನದೇ ಮೀನಾ ರಾಶಿಯಲ್ಲಿ ಪ್ರವೇಶಿಸಿ, ಬದಲಾವಣೆ ಮತ್ತು ಅನಿಶ್ಚಿತತೆಯ ಎಂಟನೇ ಮನೆಯಲ್ಲಿ ಇರುವುದು, ನಿಮಗೆ ಅದೃಷ್ಟದ ಬೆಂಬಲವನ್ನು ನೀಡುತ್ತದೆ. ಇದರ ಪರಿಣಾಮವಾಗಿ ಮಾಧ್ಯಮಿಕ ಶಿಕ್ಷಣವನ್ನು ಪಡೆಯುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.

22 ಏಪ್ರಿಲ್ ನಂತರ, ಮೇಷ ರಾಶಿಯಲ್ಲಿ ರಾಹುವಿನ ಉಪಸ್ಥಿತಿಯು ಕೆಲಸದ ಸ್ಥಳದಲ್ಲಿ ನಿಮ್ಮ ಬಾಸ್, ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ನಿಮ್ಮ ಸಂಬಂಧವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ನೀವು ಅವರ ಬೆಂಬಲವನ್ನು ಪಡೆಯುವ ಮೂಲಕ ನಿಮ್ಮ ಹುದ್ದೆ ಮತ್ತು ಸಂಭವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ನಿಮ್ಮ ಏಳನೇ ಮನೆಯ ಅಧಿಪತಿ ಶನಿಯು ನಿಮ್ಮ ರೋಗಗಳ ಆರನೇ ಮನೆಯಲ್ಲಿರುವುದು, ವರ್ಷದ ಆರಂಭದಲ್ಲಿ ನಿಮ್ಮ ಸಂಗಾತಿಗೆ ಕೆಲವು ಅರೋಗ್ಯ ಸಮಸ್ಯೆಗಳನ್ನು ನೀಡುತ್ತದೆ. ಆದರೆ ಏಪ್ರಿಲ್ ರಿಂದ ಸೆಪ್ಟೆಂಬರ್ ತಿಂಗಳಲ್ಲಿ ಗುರು ದೇವರ ಅನುಗ್ರಹದಿಂದ ನಿಮ್ಮಿಬ್ಬರ ಸಂಬಂಧದಲ್ಲಿ ಹೊಸತನ ಮತ್ತೆ ಮರಳುತ್ತದೆ. ಹೊಸದಾಗಿ ಮದುವೆಯಾಗಿರುವ ಜನರು ತಮ್ಮ ದಾಂಪತ್ಯ ಜೇವನವನ್ನು ವಿಸ್ತರಿಸಲು ನಿರ್ಧರಿಸಲು ಸಾಧ್ಯವಾಗುತ್ತದೆ. ಜೆಯ್ನ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ವೈವಾಹಿಕ ಜೀವನವನ್ನು ಸಮನ್ವಯಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಇದರ ನಂತರ 10 ಆಗಸ್ಟ್ ರಿಂದ ಅಕ್ಟೋಬರ್ ಮಧ್ಯೆ ಮಂಗಳ ದೇವರ ವೃಷಭ ರಾಶಿಯಲ್ಲಿ ಸಂಚಾರವು, ಮತ್ತೆ ನಿಮ್ಮ ಸಂಬಂಧದಲ್ಲಿ ಮಾಧುರ್ಯವನ್ನು ತರುತ್ತದೆ. ಏಕೆಂದರೆ ಈ ಸಮಯದಲ್ಲಿ ಮಂಗಳ ದೇವ ನಿಮ್ಮ ಪ್ರೀತಿಯ ಸಂಬಂಧದ ಐದನೇ ಮನೆಯ ಮೇಲೆ ಸಂಪೂರ್ಣ ದೃಷ್ಟಿ ನೀಡುತ್ತಾರೆ.

ಪ್ರೀತಿಯ ಜೀವನ 2022 ಅನ್ನು ನೋಡಿದರೆ, ಈ ವರ್ಷ ರಾಶಿಚಕ್ರದ ಸ್ಥಳೀಯರು ತಮ್ಮ ಪ್ರೀತಿಯ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ವರ್ಷದ ಆರಂಭದಲ್ಲಿ ಒಂದೆಡೆ, ಮಗಳ ಗ್ರಹವು ನಿಮ್ಮ ಐದನೇ ಮನೆಯಲ್ಲಿ ನೆಲೆಗೊಂಡಿರುವುದು, ನಿಮ್ಮ ಕೋಪದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅದೇ ಸಮಯದಲ್ಲಿ ಏಪ್ರಿಲ್ ರಿಂದ ಮೇ ಮಧ್ಯೆ, ಅನೇಕ ಗ್ರಹಗಳ ಬದಲಾವಣೆಯು ಈ ಸಮಯದಲ್ಲಿ ನಿಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವು, ಅನೇಕ ಸಮಸ್ಯೆಗಳು ಮತ್ತು ತಪ್ಪು ಗ್ರಹಿಕೆಗಳನ್ನು ಜನಿಸಬಹುದು.

ಸಿಂಹ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – 2022 ಸಿಂಹ ರಾಶಿ ಭವಿಷ್ಯ

ಕನ್ಯಾ ರಾಶಿ ಭವಿಷ್ಯ 2022

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಆರಂಭ ಅಂದರೆ ಜನವರಿ ತಿಂಗಳಲ್ಲಿ, ಧನು ರಾಶಿಯಲ್ಲಿ ಮಂಗಳ ದೇವರ ಸಾಗಣೆಯು, ನಿಮ್ಮ ದೇಶೀಯ ಸೌಕರ್ಯಗಳ ಮನೆ ಅಂದರೆ ನಾಲ್ಕನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನೀವು ಹಣ ಮತ್ತು ಆರ್ಥಿಕ ಸಮೃದ್ಧಿಯನ್ನು ಪಡೆಯಬಹುದು, ಜೀವನದಲ್ಲಿ ಎದುರಿಸುತ್ತಿದ್ದ ಎಲ್ಲ ರೀತಿಯ ಆರ್ಥಿಕ ಬಿಕ್ಕಟ್ಟುಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ವರ್ಷದ ಆರಂಭದಲ್ಲಿ ನಿಮ್ಮ ರಾಶಿಯಲ್ಲಿ ರಾಜ ಯೋಗವೂ ರೂಪುಗೊಳ್ಳುತ್ತದೆ. ಇದರಿಂದಾಗಿ ನೀವು ವಿವಿಧ ಕ್ಷೇತ್ರಗಳಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯಲು ಮತ್ತು ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ.

ಆದಾಗ್ಯೂ, ಆರೋಗ್ಯದ ದೃಷ್ಟಿಯಿಂದ, ಏಪ್ರಿಲ್, ಜೂನ್ ಮತ್ತು ಸೆಪ್ಟೆಂಬರ್ ತಿಂಗಳುಗಳು ನಿಮಗೆ ಪ್ರತಿಕೂಲ ಫಲಿತಾಂಶಗಳನ್ನು ನೀಡುತ್ತವೆ. ಏಕೆಂದರೆ ನಿಮ್ಮ ರೋಗದ ಆರನೇ ಮನೆಯ ಅಧಿಪತಿ ಶನಿ, ವರ್ಷದ ಆರಂಭದಲ್ಲಿ ತನ್ನದೇ ಆರನೇ ಮನೆಗೆ ಗೋಚರಿಸುತ್ತಾರೆ ಮತ್ತು ನಂತರ ಅವರು ಮತ್ತೆ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಸಣ್ಣ ಸಮಸ್ಯೆ ಇದ್ದರೂ ಸಹ ನೀವು ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗುತ್ತಿದೆ. ಅದೇ ಅಮಾಯದಲ್ಲಿ ಮತ್ತೊಂದೆಡೆ, 26 ಫೆಬ್ರವರಿ ರಂದು ಮಂಗಳ ದೇವ ಧನು ರಾಶಿಯಿಂದ ಹೊರಬಂದು, ಶನಿ ದೇವ ಮಕರ ರಾಶಿಯಲ್ಲಿ ಪ್ರವೇಶಿಸುತ್ತಾರೆ ಮತ್ತು ಇದು ನಿಮ್ಮ ರಾಶಿಯ ಐದನೇ ಮನೆಯ ಮೇಲೆ ಪರಿಣಾಮ ಬೀರುತ್ತಾರೆ. ಕನ್ಯಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಸಮಯ ಅತ್ಯಂತ ಶುಭ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗುತ್ತಾರೆ.

ಕನ್ಯಾ ರಾಶಿ ಭವಿಷ್ಯ 2022 ರ ಪ್ರಕಾರ, ಮಾರ್ಚ್ ತಿಂಗಳ ಆರಂಭದಲ್ಲಿ ನಾಲ್ಕು ಪ್ರಮುಖ ಗ್ರಹಗಳ ( ಶನಿ, ಮಂಗಳ, ಬುಧ ಮತ್ತು ಶುಕ್ರ ) ಮೂಲಕ ಸಂಯೋಜನೆಯಿಂದಾಗಿ, “ಚತುರ್ ಗ್ರಹ ಯೋಗವು ರೂಪುಗೊಳ್ಳುತ್ತದೆ. ಇದರಿಂದಾಗಿ ಕನ್ಯಾ ರಾಶಿಚಕ್ರದ ಸ್ಥಳೀಯರು ಆರ್ಥಿಕ ಲಾಭವನ್ನು ಪಡೆಯುವುದರೊಂದಿಗೆ, ಆದಾಯದ ಹೊಸ ಮೂಲಗಳು ಮತ್ತು ಸಂಪರ್ಕಗಳಿಂದಲೂ ಲಾಭವನ್ನು ಪಡೆಯುವ ಸಾಧ್ಯತೆ ಇದೆ, ಇದರ ನಂತರ ಏಪ್ರಿಲ್ ಅಂತ್ಯದಲ್ಲಿ ಶನಿ ದೇವ ಮತ್ತೆ ಸಂಚರಿಸುವ ಮೂಲಕ ಮಕರ ರಾಶಿಯಿಂದ ತನ್ನದೇ ರಾಶಿಯಾದ ಕುಂಭ ರಾಶಿಗೆ ಪ್ರವೇಶಿಸುತ್ತಾರೆ. ಇದರಿಂದಾಗಿ ರೋಗ ಮತ್ತು ಸಂಘರ್ಷಗಳ ಆರನೇ ಮನೆ ಸಕ್ರಿಯವಾಗಿರುತ್ತದೆ. ಇದರ ಪರಿಣಾಮವಾಗಿ ನಿಮ್ಮ ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.

ಪ್ರೀತಿ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಬುಧ ದೇವ ತುಲಾ ರಾಶಿಯ ಮೇಲೆ ಪರಿಣಾಮ ಬೀರುವುದು ಮತ್ತು ಅವರು ನಿಮ್ಮ ಎರಡನೇ ಮನೆಯ ಮೇಲೆ ಪರಿಣಾಮ ಬೀರುವುದು ನಿಮ್ಮ ಪ್ರೀತಿಯ ಸಂಬಂಧದಲ್ಲಿ ಸಕಾರಾತ್ಮಕತೆಯನ್ನು ತರಲು ಸಹಾಯ ಮಾಡುತ್ತದೆ.

ವಿಶೇಷವಾಗಿ ಆರಂಭದ ಕೆಲವು ತಿಗಳುಗಳನ್ನು ಬಿಟ್ಟರೆ, ಉಳಿದ ವರ್ಷ ನಿಮ್ಮ ಪ್ರೀತಿಯ ಜೀವನದಲ್ಲಿ ಬಲ ಮತ್ತು ಪ್ರೀತಿ ಹೆಚ್ಚಾಗುವ ಸಂಪೂರ್ಣ ಸಾಧ್ಯತೆ ಇದೆ. ವಿವಾಹಿತ ಜನರು ಸಹ ಈ ವರ್ಷ ತಮ್ಮ ದಾಂಪತ್ಯ ಜೀವನದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಏಕೆಂದರೆ ನಿಮ್ಮ ಏಳನೇ ಮನೆಯ ಅಧಿಪತಿ ನಿಮ್ಮ ರೋಗಗಳ ಆರನೇ ಮನೆಯಲ್ಲಿ ಗೋಚರಿಸುವುದು, ಒಂದೆಡೆ ಜನವರಿ ರಿಂದ ಏಪ್ರಿಲ್ ನಡುವಿನ ಸಮಯವು ನಿಮಗೆ ಸ್ವಲ್ಪ ಕಷ್ಟಕರ ಎಂದು ಸಾಬೀತುಪಡಿಸುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, 11 ಸೆಪ್ಟೆಂಬರ್ ರಿಂದ ಡಿಸೆಂಬರ್ ಮಧ್ಯದ ಸಮಯದಲ್ಲಿ ಗ್ರಹಗಳ ಶುಭ ಸ್ಥಾನವು ನಿಮ್ಮ ದಾಂಪತ್ಯ ಜೀವನದಲ್ಲಿ ಅನುಕೂಲತೆಯನ್ನು ತರುತ್ತವೆ ಎಂದು ಸೂಚಿಸುತ್ತಿವೆ.

ಕನ್ಯಾ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – 2022 ಕನ್ಯಾ ರಾಶಿ ಭವಿಷ್ಯ

ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ನಿವಾರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

ತುಲಾ ರಾಶಿ ಭವಿಷ್ಯ 2022

ತುಲಾ ರಾಶಿ ಭವಿಷ್ಯ 2022 ಪ್ರಕಾರ, ವರ್ಷ 2022 ಆರಂಭದಲ್ಲಿ ಅಂದರೆ 9 ಜನವರಿ ರಂದು ಮಂಗಳ ದೇವ ಧನು ರಾಶಿಗೆ ಗೋಚರಿಸುವ ಮೂಲಕ ನಿಮ್ಮ ಮೂರನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಇದು ಕಿರಿಯ ಸಹೋದರ ಸಹೋದರಿಯರ ಮನೆ ಮತ್ತು ಈ ಮನೆಯಲ್ಲಿ ಮಂಗಳನ ಉಪಸ್ಥಿತಿಯು, ಅವರಿಗೆ ಕೆಲವು ಅರೋಗ್ಯ ಸಮಸ್ಯೆಗಳನ್ನು ನೀಡಬಹುದು. ಆದಾಗ್ಯೂ, ಮಂಗಳ ದೇವರ ಈ ಸ್ಥಾನವು ನಿಮಗೆ ಹಣಕಾಸಿನ ಲಾಭದ ಮೊತ್ತವನ್ನು ನೀಡುತ್ತದೆ, ಇದರ ಪರಿಣಾಮದಿಂದಾಗಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸಲು, ಸಂಬಳ ಹೆಚ್ಚಳವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರ ನಂತರ 26 ಫೆಬ್ರವರಿ, ರಂದು ಮಂಗಳ ದೇವ ಮತ್ತೊಮ್ಮೆ ಸಂಚರಿಸುವ ಮೂಲಕ ಧನು ರಾಶಿಯಿಂದ ಮಕರ ರಾಶಿಗೆ ಸಾಗುತ್ತಾರೆ ಮತ್ತು ನಿಮ್ಮ ನಾಲ್ಕನೇ ಮನೆಯ ಮೇಲೆ ಪರಿಣಾಮ ಬೀರುತ್ತಾರೆ. ಇದರ ಪರಿಣಾಮವಾಗಿ ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಮಂಗಳ ಗ್ರಹದ ಈ ಸ್ಥಾನ ಬದಲಾವಣೆಯು, ನಿಮ್ಮ ಪ್ರೀತಿಯ ಜೇವನಕ್ಕೂ ಉತ್ತಮವಾಗಿರಲಿದೆ. ಏಕೆಂದರೆ ಇದರಿಂದಾಗಿ ನಿಮ್ಮ ಮತ್ತು ಪ್ರೇಮಿಯ ನಡುವಿನ ವಿವಾದ ಕೊನೆಗೊಳ್ಳುತ್ತದೆ.

ಇದರ ನಂತರ ಮಾರ್ಚ್ ತಿಂಗಳ ಆರಂಭದಲ್ಲಿ ನಿಮ್ಮ ರಾಶಿಯಲ್ಲಿ ನಾಲ್ಕು ಗ್ರಹಗಳ (ಶನಿ, ಮಂಗಳ, ಬುಧ ಮತ್ತು ಶುಕ್ರ ) ಸಂಯೋಜನೆಯಿಂದಾಗಿ ನೀವು ಹಿಂದಿನ ಎಲ್ಲಾ ಆರ್ಥಿಕ ಬಿಕ್ಕಟ್ಟುಗಳನ್ನು ತೊಡೆದುಹಾಕಿ, ಯಾವುದೇ ರೀತಿಯ ಲೋನ್ ಅಥವಾ ಸಾಲವನ್ನು ಮರುಪಾವತಿಸುವಲ್ಲಿ ಸಾಮರ್ಥ್ಯರಗುವಿರಿ. ನಂತರ 17 ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗೆ ಒಂದೆಡೆ ಮೀನಾ ರಾಶಿಯಲ್ಲಿ ಗುರುವಿನ ಸಂಚಾರವು ಸಂಭವಿಸುವುದರಿಂದಾಗಿ ನಿಮ್ಮ ಸವಾಲುಗಳು, ಅಡೆತಡೆಗಳು ಮತ್ತು ರೋಗಗಳ ಆರನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿ ರಾಹು ಕುಳಿತಿರುವುದು, ನಿಮ್ಮ ದಾಂಪತ್ಯ ಜೀವನದಲ್ಲಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಾಹುವಿನ ಸ್ಥಾನವಿ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ, ಆದರೆ ಗುರುವಿನ ಅನುಗ್ರಹಾಡ್ನದ ವಿದ್ಯಾರ್ಥಿಗಳ ಜೀವನದಲ್ಲಿ ಯಾವುದೇ ಶುಭ ಸುದ್ಧಿಯನ್ನು ತರುವ ಸಂಪೂರ್ಣ ಸಾಧ್ಯತೆ ಇದೆ.

ರಾಶಿ ಭವಿಷ್ಯ 2022 ಪ್ರಕಾರ, ಈ ವರ್ಷ ಶನಿ ದೇವ ಕೂಡ ನಿಮ್ಮನ್ನು ಹೆಚ್ಚು ಶ್ರಮಿಸುವಂತೆ ಮಾಡಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಲಸ್ಯವನ್ನು ತ್ಯಜಿಸಿ, ಆರಂಭದಿಂದಲೇ ನಿಮ್ಮ ಕಠಿಣ ಪರಿಶ್ರಮವನ್ನು ಮುಂದುವರಿಸಿ. ಶನಿ ದೇವರ ಈ ಸ್ಥಾನವು ನಿಮ್ಮ ಕುಟುಂಬ ಜೀವನದಲ್ಲಿಯೂ ಅಸಮಾಧಾನಕ್ಕೆ ಕಾರಣವಾಗುತ್ತದೆ. ಮತ್ತೊಂದೆಡೆ, ವರ್ಷದ ಕೊನೆಯ ಮೂರು ತಿಂಗಳುಗಳು (ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ) ಪ್ರೇಮಿಗಳಿಗೆ ಅತ್ಯಂತ ಉತ್ತಮವಾಗಿರುತ್ತವೆ. ಏಕೆಂದರೆ ನಿಮ್ಮ ಏಳನೇ ಮನೆಯ ಅಧಿಪತಿ ಮಂಗಳ ದೇವ ಈ ಸಮಯದಲ್ಲಿ ನಿಮ್ಮ ಅತ್ತೆಮನೆಯ ಎಂಟನೇ ಮತ್ತು ಅದೃಷ್ಟದ ಒಂಬತ್ತನೇ ಮನೆಗೆ ಸಾಗುತ್ತಾರೆ. ಪರಿಣಾಮವಾಗಿ ಈ ಸಮಯದಲ್ಲಿ ಪ್ರೇಮಿಗಳು ತಮ್ಮ ಪ್ರೇಮಿಯೊಂದಿಗೆ ಮದುವೆಯಾಗಬಹುದು. ಅದೇ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದರೆ, ಆರಂಭದಲ್ಲಿ ಅವರು ಕೆಲವು ಸಮಸ್ಯೆಗಳನ್ನು ಹೊಂದಿರುತ್ತಾರೆ. ಇದರ ಹೊರತಾಗಿಯೂ, ಜನವರಿ ರಿಂದ ಏಪ್ರಿಲ್ ತಿಂಗಳ ವರೆಗೆ ಜೀವನ ಸಂಗಾತಿಯ ಬೆಂಬಲ ಮತ್ತು ನಿಮ್ಮ ಅತ್ತೆಮನೆ ಕಡೆಯಿಂದ ಉಡುಗೊರೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದರ ನಂತರ ಜೂನ್ ಮತ್ತು ಜೂಲೈ ಮಧ್ಯ, ನಿಮ್ಮ ಏಳನೇ ಮನೆಯ ಅಧಿಪತಿ ನಿಮ್ಮ ವಿವಾದದ ಆರನೇ ಮನೆಯಲ್ಲಿ ನೆಲೆಗೊಂಡಿರುವುದು, ನಿಮ್ಮ ಮತ್ತು ಜೀವನ ಸಂಗಾತಿಯ ನಡುವೆ ಯಾವುದೇ ವಿವಾದವನ್ನು ಜನಿಸುತ್ತದೆ.

ತುಲಾ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – 2022 ತುಲಾ ರಾಶಿ ಭವಿಷ್ಯ

ವೃಶ್ಚಿಕ ರಾಶಿ ಭವಿಷ್ಯ 2022

ವೃಶ್ಚಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರ ಆರಂಭದಿಂದ ಏಪ್ರಿಲ್ ವರೆಗೆ, ಶನಿ ದೇವ ಮಕರ ರಾಶಿಯಿಂದ ಹಾದುಹೋಗುವ ಮೂಲಕ ನಿಮ್ಮ ಮೂರನೇ ಮನೆಯ ಮೇಲೆ ಪರಿಣಾಮ ಬೀರುವುದು, ಅನೇಕ ಅನಗತ್ಯ ವೆಚ್ಚಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರ ನಂತರ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಶನಿ ದೇವ ಮತ್ತೆ ಗೋಚರಿಸುತ್ತಾರೆ ಮತ್ತು ಮಕರ ರಾಶಿಯಿಂದ ಕುಂಭ ರಾಶಿಯಲ್ಲಿ ಕುಳಿತುಕೊಂಡಾಗ, ನಿಮ್ಮ ನಾಲ್ಕನೇ ಮನೆ ಸಕ್ರಿಯವಾಗುತ್ತದೆ. ಇದರ ಪರಿಣಾಮವಾಗಿ ನಿಮ್ಮ ವೃತ್ತಿ ಜೀವನ, ಆರ್ಥಿಕ ಕುಟುಂಬ ಜೀವನದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಆದಾಗ್ಯೂ, ಈ ಸಮಯದಲ್ಲೇ ಏಪ್ರಿಲ್ ಮಧ್ಯದಲ್ಲಿ ಗುರು ಗ್ರಹವು ಗೋಚರಿಸುವ ಮೂಲಕ ತನ್ನದೇ ರಾಶಿಯಾದ ಮೀನಾ ರಾಶಿಯಲ್ಲಿ ಕುಳಿತುಕೊಳ್ಳುತ್ತದೆ ಮತ್ತು ನಿಮ್ಮ ರಾಶಿಯ ಐದನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಸ್ವಲ್ಪ ಸಕಾರಾತ್ಮಕತೆ ಬರುತ್ತದೆ. ವಿಶೇಷವಾಗಿ ಆರ್ಥಿಕ ಜೀವನದಲ್ಲಿ ನೀವು ತೊಂದರೆಗೀಡಾಗಿದ್ದರೆ, ಈ ಸಮಯವು ಎಲ್ಲಾ ರೀತಿಯ ಸಮಸ್ಯೆಗಳಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತದೆ.

ಇದರೊಂದಿಗೆ ಏಪ್ರಿಲ್ 12 ರಂದು ರಾಶಿಚಕ್ರದ ಆರನೇ ಮನೆಯಲ್ಲಿ ರಾಹುವಿನ ಸಾಗುವಿಕೆಯು, ನಿಮ್ಮ ದೈಹಿಕ ಸಮಸ್ಯೆಯನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಆದಾಗ್ಯೂ, ಇದರ ಹೊರತಾಗಿಯೂ, ಶನಿ ದೇವರ ಸ್ಥಾನವು ನಿಮಗೆ ಮಾನಸಿಕ ಒತ್ತಡವನ್ನು ನೀಡುತ್ತಿರುತ್ತದೆ. ಇದು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ ವರ್ಷ 2022 ರಲ್ಲಿ ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳ ನಡುವೆಯೂ, ಅನೇಕ ಶುಭ ಗ್ರಹಗಳ ಗೋಚರವನ್ನು ಕಾಣಲಾಗುತ್ತದೆ. ಇದು ನಿಮ್ಮ ಜೇವನದಲ್ಲಿ ಅನುಕೂಲತೆಯನ್ನು ತರುತ್ತದೆ ಮತ್ತು ಹಣ ಗಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಂತರ ಆಗಸ್ಟ್ ತಿಂಗಳ ಸಮಯದಲ್ಲಿ ಭೌತಿಕ ಸೌಕರ್ಯಗಳ ದೇವ ಶುಕ್ರ ಸಹ ಗೋಚರಿಸುವ ಮೂಲಕ ನಿಮ್ಮ ಒಂಬತ್ತನೇ ಮನೆಗೆ ನಿರ್ಗಮಿಸುತ್ತಾರೆ. ಇದರ ಪರಿಣಾಮವಾಗಿ ಈ ಸಮಯದಲ್ಲಿ ನಿಮ್ಮ ತಂದೆ ಯಾವುದೇ ರೀತಿಯ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ಅವರ ಆಹಾರ ಪದ್ದತಿ ಮತ್ತು ಜೀವನ ಶೈಲಿಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ಇದರ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಶನಿ ದೇವ ಮತ್ತೊಮ್ಮೆ ನಿಮ್ಮ ಲಾಭದ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮತ್ತು ನೀವು ಅನೇಕ ವಿಭಿನ್ನ ಮೂಲಗಳಿಂದ ಉತ್ತಮ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ.

ಪ್ರೀತಿ ರಾಶಿ ಭವಿಷ್ಯದ ಪ್ರಕಾರ, ಏಪ್ರಿಲ್ ತಿಂಗಳ ಕೊನೆಯಲ್ಲಿ ಶನಿ ದೇವ ಕುಂಭ ರಾಶಿಯಲ್ಲಿ ಕುಳಿತಿದ್ದು ನಿಮ್ಮ ನಾಲ್ಕನೇ ಮನೆಯ ಮೇಲೆ ಪರಿಣಾಮ ಬೀರುತ್ತಾರೆ. ಇದು ನಿಮ್ಮ ಮತ್ತು ಪ್ರೇಮಿಯ ನಡುವೆ ವಿವಾದ ಮತ್ತು ತಪ್ಪು ಗ್ರಹಿಕೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಪ್ರೇಮಿಯೊಂದಿಗೆ ಒಟ್ಟಿಗೆ ಪ್ರರೋಲಿಯೊಂದು ವಿವಾದವನ್ನು ಪರಿಹರಿಸಲು ಪ್ರಯತ್ನಿಸಿ. ಇದರೊಂದಿಗೆ ಸೆಪ್ಟೆಂಬರ್ ರಿಂದ ಅಕ್ಟೋಬರ್ ತಿಂಗಳ ನಡುವೆ, ಶುಕ್ರ ಗ್ರಹವು ಕನ್ಯಾ ರಾಶಿಯಲ್ಲಿ ಹಾದುಹೋಗುವ ಮೂಲಕ ನಿಮ್ಮ ಹನ್ನೊಂದನೇ ಮನೆಯಲ್ಲಿ ಕುಳಿತುಕೊಳ್ಳುವುದು, ನಿಮ್ಮ ರಾಶಿಯಲ್ಲಿ ಶುಕ್ರ ದೇವರನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಸ್ವಲ್ಪ ಸಮಯಕ್ಕೆ ನೀವಿಬ್ಬರೂ ಪರಸ್ಪರ ದೂರ ಹೋಗಬೇಕಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ ನೀವು ವಿವಹಿತರಗಿದ್ದರೆ, ವರ್ಷದ ಆರಂಭವೂ ನಿಮ್ಮ ವೈವಾಹಿಕ ಜೀವನಕ್ಕೆ ಅತ್ಯಂತ ಉತ್ತಮವಾಗಿರುತ್ತದೆ. ನಂತರ ಏಪ್ರಿಲ್ ಅಂತಿಮ ಹಂತದಲ್ಲಿ ಶನಿ ದೇವರ ಸ್ಥಳಾಂತರದಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ವೃಶ್ಚಿಕ ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – 2022 ವೃಶ್ಚಿಕ ರಾಶಿ ಭವಿಷ್ಯ

ಧನು ರಾಶಿ ಭವಿಷ್ಯ 2022

ಧನು ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರ ಆರಂಭದಲ್ಲಿ ಅಂದರೆ ಜನವರಿ ತಿಂಗಳಲ್ಲಿ ಮಂಗಳ ಗ್ರಹವು ನಿಮ್ಮದೇ ರಾಶಿಯಲ್ಲಿ ಗೋಚರಿಸುವುದು ಮತ್ತು ನಿಮ್ಮ ಮೊದಲನೇ ಮನೆಯ ಮೇಲೆ ಪರಿಣಾಮ ಬೀರುವುದು, ಆರ್ಥಿಕ ಜೀವನದಲ್ಲಿ ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ ವಿಧ್ಯಾರ್ಥಿಗಳು ಕೂಡ ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

ವಿಶೇಷವಾಗಿ ನೀವು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ನಿರತರಾಗಿದ್ದಾರೆ, ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಉಂಟಾಗುತ್ತದೆ. ಆದಾಗ್ಯೂ ಈ ಸಮಯದಲ್ಲಿ ಮಂಗಳ ಗ್ರಹವು ನಿಮ್ಮ ಮನೆಯಲ್ಲಿ ನೆಲೆಗೊಂಡಿರುವುದು ಮತ್ತು ನಿಮ್ಮ ಏಳನೇ ಮನೆಗೆ ದೃಷ್ಟಿ ನೀಡುವುದು, ಕೆಲವು ಸ್ಥಳೀಯರಿಗೆ ಅನೇಕ ರೀತಿಯ ಮಾನಸಿಕ ಒತ್ತಡ ಮತ್ತು ಸಮಸ್ಯೆಯನ್ನು ನೀಡುತ್ತದೆ. ಈ ಒತ್ತಡವು, ನಿಮ್ಮ ಕುಟುಂಬ ಜೀವನದಲ್ಲಿ ನಡೆಯುತ್ತಿರುವ ಪರಿಸ್ಥಿತಿಗಳಿಂದಾಗಿ ಇರಬಹುದು. ಏಕೆಂದರೆ ಮಂಗಳ ಈ ಸಮಯದಲ್ಲಿ ನಿಮ್ಮ ಕುಟುಂಬ ಮತ್ತು ಸಂತೋಷದ ನಾಲ್ಕನೇ ಮನೆಯ ಮೇಲೆ ದೃಷ್ಟಿ ನೀಡುತ್ತಾರೆ.

ನಿಮ್ಮ ಪ್ರೀತಿಯ ಸಂಬಂಧವನ್ನು ನೋಡಿದರೆ, ವೈಯಕ್ತಿಕ ಜೀವನದಲ್ಲಿ ಸಂಗಾತಿಯೊಂದಿಗೆ ವಿವಾದದ ಸಾಧ್ಯತೆ ಇದೆ. ಏಕೆಂದರೆ ಜನವರಿ ತಿಂಗಳಲ್ಲಿ ಸೂರ್ಯ ದೇವ ಕರ್ಮದ ಫಲವನ್ನು ನೀಡುವ ಶನಿ ದೇವರೊಂದಿಗೆ ಮಕರ ರಾಶಿಯಲ್ಲಿ ಸಂಯೋಜನೆ ಮಾಡುವುದು, ನಿಮ್ಮ ಧ್ವನಿ ಮತ್ತು ಕುಟುಂಬದ ಎರಡನೇ ಮನೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ನಿಮ್ಮ ಮೂರನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ, ಈ ಸಮಯದಲ್ಲಿ ನಿಮ್ಮ ಧ್ವನಿಯಲ್ಲಿನ ಕಹಿಯನ್ನು ಸ್ಪಷ್ಟವಾಗಿ ಕಾಣಲಾಗುತ್ತದೆ. ಇದರಿಂದಾಗಿ ನೀವು ಬಯಸದಿದ್ದರೂ, ಅವರ ಹೃದಯವನ್ನು ನೋಯಿಸುವ ಎಲ್ಲವನ್ನೂ ಹೇಳಬಹುದು. ಆದ್ದರಿಂದ ಈ ವರ್ಷ ನಿಮ್ಮ ಪದಗಳನ್ನು ಬಹಳ ಚಿಂತನಶೀಲವಾಗಿ ಆಯ್ಕೆ ಮಾಡಲು ಮತ್ತು ಜೀವನ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಅಸಭ್ಯ ಭಾಷೆ ಬಳಸುವುದನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ.

ಇದರ ನಂತರ ಏಪ್ರಿಲ್ ರಿಂದ ಜೂನ್ ಮಧ್ಯ ಗುರು ಗ್ರಹವು ತನ್ನದೇ ಮೀನ ರಾಶಿಯಲ್ಲಿ ಗೋಚರಿಸುವುದು ಮತ್ತು ನಿಮ್ಮ ರಾಶಿಯಲ್ಲಿ ದೇಶೀಯ ಸೌಕರ್ಯಗಳು, ಭೂಮಿ ಮತ್ತು ಸಂತೋಷದ ನಾಲ್ಕನೇ ಮನೆಯಲ್ಲಿ ಕುಳಿತಿರುವುದು, ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವನ್ನು ಉತ್ತಮಗೊಳಿಸುವ ಕೆಲಸ ಮಾಡುತ್ತದೆ. ಇದರ ಹೊರತಾಗಿಯೂ, ಜೂನ್ ತಿಂಗಳಲ್ಲಿ ನಿಮ್ಮ ಏಳನೇ ಮನೆಯ ಅಧಿಪತಿ ಬುಧ ದೇವ ತನ್ನದೇ ರಾಶಿಗೆ ಗೋಚರಿಸುತ್ತಾರೆ. ಇದರ ಪರಿಣಾಮವಾಗಿ, ನಿಮ್ಮ ದಾಂಪತ್ಯ ಜೀವನವನ್ನು ನೀವು ಬಹಿರಂಗವಾಗಿ ಆನಂದಿಸಲು ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಪ್ರೀತಿಯಲ್ಲಿರುವ ಸ್ಥಳೀಯರು ಸಹ ಫೆಬ್ರವರಿ ರಿಂದ ಏಪ್ರಿಲ್ ಮಧ್ಯದಲ್ಲಿ ತಮ್ಮ ಪ್ರೀತಿಪಾತ್ರರೊಂದಿಗೆ ಯಾವುದೇ ಪ್ರಯಾಣಕ್ಕೆ ಹೋಗಬಹುದು. ಒಂದೆಡೆ ನೀವು ಪರಸ್ಪರ ನಿಕಟ ಬರುವ ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಆದಾಗ್ಯೂ, ಯಾವುದೇ ಮೂರನೇ ವ್ಯಕ್ತಿ ನಿಮ್ಮ ಸಂಬಂಧದಲ್ಲಿ ಹಸ್ತಕ್ಷೇಪ ಮಾಡದಿರುವಂತೆ ಈ ವರ್ಷ ನೀವು ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಇದರಿಂದಾಗಿ ನಿಮ್ಮಿಬ್ಬರ ನಡುವೆ ತಪ್ಪು ಗ್ರಹಿಕೆಗಳು ಉಂಟಾಗುವ ನಿರೀಕ್ಷೆ ಹೆಚ್ಚಾಗುತ್ತದೆ.

ಅದೇ ಸಮಯದಲ್ಲಿ ಮತ್ತೊಂದೆಡೆ, ವರ್ಷದ ಅಂತ್ಯದಲ್ಲಿ ನ ಮೂರು ತಿಂಗಳುಗಳು (ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್) ಪ್ರೇಮಿಗಳಿಗೆ ಅತ್ಯಂತ ಉತ್ತಮವಾಗಿರಲಿವೆ. ಏಕೆಂದರೆ ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಪ್ರೀತಿಯ ಸಂಬಂಧದ ಮನೆಯ ಅಧಿಪತಿ ನಿಮ್ಮ ಮದುವೆಯ ಏಳನೇ ಮನೆಯಲ್ಲಿ ಕುಳಿತಿರುತ್ತಾರೆ.

ನಿಮ್ಮ ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ಅದಕ್ಕಾಗಿ ನವೆಂಬರ್ ತಿಂಗಳು ವಿಶೇಷವಾಗಿ ಅನುಕೂಲಕರವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಹೊಸ ಉದ್ಯೋಗದ ಮೂಲಗಳನ್ನು ಬಹಿರಂಗಪಡಿಸಲು ನಿಮಗೆ ಸಾಧ್ಯವಾಗುತ್ತದೆ. ಏಕೆಂದರೆ ಈ ಸಮಯದಲ್ಲಿ, ಮಂಗಳ ಗ್ರಹದ ಸಂಚಾರವು ನಿಮ್ಮ ಸೇವೆಗಳ ಆರನೇ ಮನೆಯನ್ನು ಸಕ್ರಿಯಗೊಳಿಸುವ ಕೆಲಸ ಮಾಡುತ್ತದೆ.

ಧನು ರಾಶಿಚಕ್ರದ ವಾರ್ಷಿಕ ರಾಶಿ ಭವಿಷ್ಯವನ್ನು ವಿವರವಾಗಿ ಓದಿ – 2022 ಧನು ರಾಶಿ ಭವಿಷ್ಯ

ರಾಜ ಯೋಗ ರಿಪೋರ್ಟ್ ಮೂಲಕ ನಿಮ್ಮ ಅದೃಷ್ಟ ಮತ್ತು ಜೀವನದಲ್ಲಿ ಸಂತೋಷ ಯಾವಾಗ ಬರುತ್ತದೆ ಎಂದು ತಿಳಿಯಿರಿ
More from the section: Horoscope 3323
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2025
© Copyright 2025 AstroCAMP.com All Rights Reserved