• Brihat Horoscope
  • Ask A Question
  • Child Report 2020
  • Raj Yoga Report
  • Career Counseling
Personalized
Horoscope

ಕನ್ಯಾ ರಾಶಿ ಭವಿಷ್ಯ 2021 - Virgo Horoscope 2021 in Kannada

Last Updated: 4/28/2020 11:49:48 AM

kanya rashi bhavishya 2021, kanya jaataka 2021

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನಿಮಗೆ ಮಿಶ್ರ ಫಲಿತಾಮಶಗಳನ್ನು ತರಲಿದೆ ಏಕಂದರೆ ಒಂದೆಡೆ ವರ್ಷದ ಆರಂಭವು ನಿಮಗೆ ಉತ್ತಮವಾಗಿದ್ದರೆ, ಮತ್ತೊಂದೆಡೆ ವರ್ಷದ ಮಧ್ಯದಲ್ಲಿ ನೀವು ಜಾಗರೂಕರಾಗಿರುವ ಅಗತ್ಯವಿದೆ. ವಿಶೇಷವಾಗಿ ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವು ನಿಮಗೆ ಕೆಲವು ಸಮಸ್ಯೆಗಳನ್ನು ತರಬಹುದು. ನೀವು ವ್ಯಾಪಾರದಲ್ಲಿದ್ದರೆ, ಈ ಸಮಯ ನಿಮಗಾಗಿ ಸಾಮಾನ್ಯವಾಗಿರುತ್ತದೆ. ಆದರೆ ಯಾವುದೇ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವ ವ್ಯಾಪಾರಸ್ಥರು ನಷ್ಟವನ್ನು ಹೊಂದುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ವರ್ಷದ ಆರಂಭವು ಮತ್ತು ಅಂತ್ಯವು ನಿಮಗಾಗಿ ಬಹಳಷ್ಟು ಉತ್ತ್ತಮವಾಗಿರುತ್ತದೆ. ಇದಲ್ಲದೆ ಮಧ್ಯದಲ್ಲಿ ನೀವು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಾಗುತ್ತದೆ. ಕನ್ಯಾ ರಾಶಿಚಕ್ರದ ವಿದ್ಯಾರ್ಥಿಗಳು ಈ ವರ್ಷದುದ್ದಕ್ಕೂ ಪರಿಶ್ರಮಿಸುವ ಅಗತ್ಯವಿದೆ. ನಿಮ್ಮ ಪರಿಶ್ರಮದ ಕಾರಣದಿಂದಲೇ ಶನಿ ದೇವರು ನಿಮಗೆ ಪರಿಣಾಮವನ್ನು ನೀಡುತ್ತಾರೆ. ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳ ಮನಸ್ಸು ಗೊಂದಲಕ್ಕೊಳಗಾಗುತ್ತದೆ, ಇದರಿಂದ ನಿಮಗೆ ಹಾನಿಯಾಗುತ್ತದೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುತ್ತಿರುವ ವಿದ್ಯಾರ್ಥಿಗಳು ಆಗಸ್ಟ್ ತಿಂಗಳಲ್ಲಿ ಶುಭ ಸುದ್ದಿಯನ್ನು ಪಡೆಯುತ್ತಾರೆ.

ರಾಜ ಯೋಗ ರಿಪೋರ್ಟ್ : ಜಾತಕದಲ್ಲಿ ರೂಪುಗೊಳ್ಳುವ ರಾಜ ಯೋಗದ ಬಗ್ಗೆ ತಿಳಿಯಿರಿ

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಕೌಟುಂಬಿಕ ಜೀವನಕ್ಕೆ ಸಮಯವೂ ಸ್ವಲ್ಪ ತೊಂದರೆಗೊಳಿಸುತ್ತದೆ. ಏಕೆಂದರೆ ವರ್ಷದ ಆರಂಭದಲ್ಲಿ ಒಂದೆಡೆ ನೀವು ಕುಟುಂಬದ ಬೆಂಬಲವನ್ನು ಪಡೆದರೆ ಮತ್ತೊಂದೆಡೆ ಏಪ್ರಿಲ್ ನಂತರ ಸೆಪ್ಟೆಂಬರ್ ವರೆಗಿನ ಸಮಯವು ಸ್ವಲ್ಪ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮನ್ನು ತೊಂದರೆಗೊಳಿಸದೆ ಕುಟುಂಬದಲ್ಲಿ ಸಹೋದರತ್ವವನ್ನು ಹೆಚ್ಚಿಸುವ ಕಡೆಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ವೈವಾಹಿಕ ಸ್ಥಳೀಯರಿಗೆ ಈ ವರ್ಷ ಅನುಕೂಲಕರವಾಗಿರುವುದಿಲ್ಲ ಏಕೆಂದರೆ ನಿಮ್ಮ ಅತ್ತೆಮನೆ ಸದ್ಸ್ಯರೊಂದಿಗೆ ನಿಮ್ಮ ವಿವಾದವಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ನಿಮ್ಮ ಧ್ವನಿಯನ್ನು ಸಂಯಮದಿಂದ ಇರಿಸಿ.ಇಲ್ಲದಿದ್ದರೆ ಸಂಬಂಧಗಳಲ್ಲಿ ಕಹಿ ಬರಬಹುದು. ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಏಕೆಂದರೆ ಅವರಿಗೆ ಯಾವುದೇ ರೀತಿಯ ದೈಹಿಕ ನೋವಾಗುವ ಸಾಧ್ಯತೆ ಇದೆ. ಪ್ರೀತಿಯಲ್ಲಿರುವ ಸ್ಥಳೀಯರು ವರ್ಷ 2021 ರ ಆರಂಭ ಮತ್ತು ಅಂತ್ಯವು ಅಂತ್ಯಂತ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನೀವು ನ್ಯೂಮ್ಮ ಪ್ರಿಯಕರರೊಂದಿಗೆ ಯಾವುದೇ ಪ್ರವಾಸಕ್ಕೆ ಹೋಗಲು ಯೋಜಿಸಬಹುದು. ಪ್ರೀತಿ ಮದುವೆಯ ಬಗ್ಗೆ ಯೋಚಿಸುತ್ತಿರುವ ಜನರು ಈ ವರ್ಷ ಯಾವುದೇ ಶುಭ ಸುದ್ಧಿಯನ್ನು ಪಡೆಯಬಹುದು.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Virgo future 2021

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನಿಮ್ಮ ಜೀವನದಲ್ಲಿ ಅನೇಕ ಏರಿಳಿತದ ಪರಿಸ್ಥಿತಿ ಇರಲಿದೆ. ಈ ವರ್ಷದುದ್ದಕ್ಕೂ ಶನಿ ದೇವಾ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ಇರುತ್ತಾರೆ. ಈ ಕಾರಣದಿಂದಾಗಿ ನೀವು ಮಧ್ಯೆ ಮಧ್ಯೆ ನಿಮ್ಮ ಉದ್ಯೋಗವನ್ನು ಬದಲಾಯಿಸಲು ಒತ್ತಾಯಿಸುತ್ತಿರುವುದು ಕಂಡುಬರುತ್ತದೆ.

ವರ್ಷದ ಮಧ್ಯದಲ್ಲಿ ವಿಶೇಷವಾಗಿ ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯೆ ನೀವು ನಿಮ್ಮ ಹಳೆಯ ಉದ್ಯೋಗವನ್ನು ಬಿಟ್ಟು ಹೊಸ ಉದ್ಯೋಗಕ್ಕೆ ಸೇರಲು ನಿರ್ಧಾರ ತೆಗೆದುಕೊಳ್ಳಬಹುದು.

ಮತ್ತೊಂದೆಡೆ ಕೆಲವು ಜನರಿಗೆ ಸೆಪ್ಟೆಂಬರ್ ರಿಂದ ನವೆಂಬರ್ ನಡುವೆ ತಮ್ಮ ಹಳೆಯ ಉದ್ಯೋಗಕ್ಕೆ ವರಿಷ್ಠ ಅಧಿಕಾರಿಗಳ ಮೂಲಕ ಮತ್ತೆ ಕರೆಯಬಹುದು ಮತ್ತು ವರ್ಷದ ಅಂತ್ಯದಲ್ಲಿ ಅಂದರೆ 20 ನವೆಂಬರ್ ನಂತರ ಅವರು ಉದ್ಯೋಗದಲ್ಲಿ ಅನೇಕ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ವೃತ್ತಿ ಜೀವನದ ದೃಷ್ಟಿಯಿಂದ ಜನವರಿ, ಮಾರ್ಚ್ ಮತ್ತು ಮೇ ತಿಂಗಳು ನಿಮಗೆ ಅತ್ಯಂತ ಉತ್ತಮವಾಗಿರುತ್ತವೆ ಮತ್ತು ಮೇ ಆರಂಭದಲ್ಲಿ ಕೆಲವು ಜನರು ಇಷ್ಟಪಡುವ ವರ್ಗಾವಣೆಯನ್ನು ಪಡೆಯಬಹುದು.

ಆದಾಗ್ಯೂ ನೀವು ಏಪ್ರಿಲ್ ತಿಂದಗಳಲ್ಲಿ ವಿಶೇಷ ಜಾಗರೂಕರಾಗಿರುವ ಅಗತ್ಯವಿದೆ ಇಲ್ಲದಿದ್ದರೆ ನೀವು ತೊಂದರೆಕ್ಕೊಳಗಾಗಬಹುದು. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಎಲ್ಲಾ ಮಹಿಳಾ ಸಹೋದ್ಯೋಗಿಗಳೊಂದಿಗೆ ಉತ್ತಮವಾಗಿ ವರ್ತಿಸಿ ಇಲ್ಲದಿದ್ದರೆ ಕೆಲಸದ ಸ್ಥಳದಲ್ಲಿ ನೀವು ಗೊಂದಲಕ್ಕೊಳಗಾಗುವ ಸಾಧ್ಯತೆ ಇದೆ.

ನೀವು ವ್ಯಾಪಾರದಲ್ಲಿದ್ದರೆ, ಏಪ್ರಿಲ್ ಆರು ವರೆಗಿನ ಸಮಯವು ವ್ಯಾಪಾರಸ್ಥರಿಗೆ ಅತ್ಯಂತ ಅನುಕೂಲಕರವಾಗಿರುತ್ತದೆ.

ಅದರ ನಂತರ 15 ಸೆಪ್ಟೆಂಬರ್ ವರೆಗೆ ನೀವು ಬಹಳ ಚಿಂತನಶೀಲದಿಂದ ಯಾವುದೇ ನಿರ್ಧವನ್ನು ತೆಗೆದುಕೊಳ್ಳಬೇಕು.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ವ್ಯಾಪಾರಕ್ಕೆ ಸಂಬಂಧಿಸಿದ ಜನರು ಯಾವುದೇ ದೊಡ್ಡ ಹೂಕೆಯನ್ನು ತಪ್ಪಿಸಬೇಕು. ನೀವು ಈ ನಿರ್ಧಿಷ್ಟವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ, ಯಾರಾದರೂ ಹಿರಿಯರ ಸಲಹೆಯಿಂದ ಈ ವಿಷಯದ ತಗ್ಯರಿಂದ ಸೂಕ್ತ ಸಲಹೆಯೊಂದಿಗೆ ಮಾತ್ರ ಕೆಲಸ ಮಾಡಿ.

ಇದರ ನಂತರ ಪರಿಸ್ಥಿಗಳಲ್ಲಿ ಸುಧಾರಣೆ ಬರುತ್ತದೆ ಮತ್ತು 15 ಸೆಪ್ಟೆಂಬರ್ ರಿಂದ 20 ನವೆಂಬರ್ ಮಧ್ಯೆ ಯಾವುದೇ ಒಪ್ಪಂದವು ನಿಮ್ಮ ಕೈಗೆ ಬರಬಹುದು.

ವರ್ಷದ ಅಂತ್ಯದಲ್ಲಿ ವಿಶೇಷವಾಗಿ 20 ನವೆಂಬರ್ ನಂತರ ಸಾಧ್ಯವಾದರೆ ನೀವು ಏಕಾಂಗಿಯಾಗಿ ವ್ಯಾಪಾರ ಮಾಡುವುದು ನಿಮಗೆ ಚೆನ್ನಾಗಿರುತ್ತದೆ.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according Virgo future 2021

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಈ ವರ್ಷದ ಆರಂಭದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ದುರ್ಬಲವಾಗಿರುತ್ತದೆ.

ಅದರ ನಂತರ ಕ್ರಮೇಣ ಪರಿಸ್ಥಿತಿಗಳಲ್ಲಿ ಸುಧಾರಣೆ ಬರುತ್ತದೆ ಮತ್ತು ಮಂಗಳ ದೇವ ನಿಮ್ಮ ರಾಶಿಚಕ್ರದ ಎಂಟನೇ ಮನೆಯಲ್ಲಿ ಇರುವವರಿಂದ ನೀವು ಕೆಲವು ರಹಸ್ಯ ರೀತಿಗಳಿಗಿಂದ ಆದಾಯವನ್ನು ಪಡೆಯುವ ಸಾಧ್ಯತೆ ಇದೆ.

ಇದರೊಂದಿಗೆ ನೆರಳಿನ ಗ್ರಹ ರಾಹುವು ಕೂಡ ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಇರುವುದರ ಕಾರಣದಿಂದಾಗಿ ಯಾವುದಾದರು ಸಂಯೋಗದ ಮೂಲಕ ನೀವು ಹಠಾತ್ ಹಣಕಾಸು ಪಡೆಯುತ್ತಿರುತ್ತೀರಿ.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ವಿಶೇಷವಾಗಿ ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯೆ ಅನೇಕ ರೀತಿಯ ನಿಮ್ಮ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ಸಾಕಷ್ಟು ಹಣವು ಖರ್ಚಾಗಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಆದಾಗ್ಯೂ ಇದರ ನಂತರದ ಸಮಯವು ಬಹಳ ಅನುಕೂಲಕರವಾಗಿರುತ್ತದೆ ಮತ್ತು ಹಣಕಾಸಿನ ವಿಷಯಗಳಲ್ಲಿ ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.

ಒಟ್ಟಾರೆಯಾಗಿ ಹೇಳಿದರೆ ವಿಶೇಷವಾಗಿ ಜನವರಿ ಮತ್ತು ಡಿಸೆಂಬರ್ ತಿಂಗಳು ಬಹಳಷ್ಟು ಅನುಕೂಲಕರವಾಗಿರುತ್ತವೆ. ಇದರ ಹೊರೆತಾಗಿಯೂ ಮೇ ತಿಂಗಳಲ್ಲಿ ನೀವು ಹಣಕಾಸಿಗೆ ಸಂಬಂಧಿಸಿದ ಕೆಲವು ಶುಭ ಅವಕಾಶಗಳನ್ನು ಒದಗಿಸಲಾಗುತ್ತದೆ.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ಶಿಕ್ಷಣ - Education life according Virgo future 2021

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಕನ್ಯಾ ರಾಶಿಚಕ್ರದ ಸ್ಥಳೀಯರ ಬಗ್ಗೆ ಮಾತನಾಡಿದರೆ ಈ ವರ್ಷ ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಸ್ವಲ್ಪ ಸೂಕ್ಷ್ಮವಾಗಿರುತ್ತದೆ ಎಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮಾಡುವುದು ಮಾತ್ರ ಒಂದೇ ಒಂದು ಪರಿಹಾರವಾಗಿದೆ.

ಈ ವರ್ಷದುದ್ದಕ್ಕೂ ಶನಿಯು ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ಇರುವುದರಿಂದಾಗಿ, ವಿದ್ಯಾರ್ಥಿಗಳಿಗೆ ಸಮಸ್ಯೆಗಳನ್ನು ನೀಡುತ್ತಲೇ ಇರುತ್ತದೆ. ಈ ಕಾರಣದಿಂದಾಗಿ ನೀವು ಮೊದಲಿನಿಂದಲೇ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಆಗ ಮಾತ್ರ ನೀವು ಪರಿಶ್ರಮದ ಫಲಿತಾಂಶಗಳನ್ನು ಪಡೆಯಲಾಗುತ್ತದೆ ಇಲ್ಲದಿದ್ದರೆ ನಿಮಗೆ ಸಮಸ್ಯೆಗಳಿರಬಹುದು.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ವಿದ್ಯಾರ್ಥಿಗಳು ಅಧ್ಯಯನದಲ್ಲಿ ಕಡಿಮೆ ಮನಸ್ಸು ಹೊಂದಿರುತ್ತಾರೆ. ಈ ಕಾರಣದಿಂದಾಗಿ ನಿಮ್ಮ ಏಕಾಗ್ರತೆ ಕಡಿಮೆಯಾಗುತ್ತದೆ ಮತ್ತು ಇದರ ಪರಿಣಾಮದಿಂದಾಗಿ ನಿಮ್ಮ ಅಧ್ಯಯನದಲ್ಲಿ ಗೊಂದಲಕ್ಕೊಳಗಾಗಬಹುದು.

ದೀರ್ಘಕಾಲದಿಂದ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಫಲಿತಾಂಶಗಳಲ್ಲಿ ಉತ್ತಮ ಯಶಸ್ಸು ಪಡೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಆಗ ಮಾತ್ರ ಕೆಲವು ಭಾಗಶಃ ಯಶಸ್ಸನ್ನು ಸಾಧಿಸಬಹುದು.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಉನ್ನತ ಶಿಕ್ಷಣ ಗಳಿಸಲು ಬಯಸುತ್ತಿರುವ ಜನರಿಗೆ ಅನೇಕ ಉತ್ತಮ ಅವಕಾಶಗಳು ಸಸಿಗುತ್ತವೆ. ಎಷ್ಟು ಸುಲಭವಾಗಿ ನಿಮ್ಮ ಕೆಲಸಗಳಾಗುತ್ತವೆ ಅಥವಾ ಫಲಿತಾಂಶಗಳು ನಿಮಗೆ ಅನುಕೂಲಕರವಾಗಿವೆ ಎಂದು ಸಹ ನಿಮಗೆ ತಿಳಿಯುವುದಿಲ್ಲ. ವಿದೇಶದಲ್ಲಿ ಅಧ್ಯನ ಮಾಡಲು ಬಯಸುತ್ತಿರುವ ಜನರಿಗೆ ವಿಶೇಷವಾಗಿ ಆಗಸ್ಟ್ ತಿಂಗಳಲ್ಲಿ ಹೊರಗಡೆ ಹೊಡಿ ಅಧ್ಯಯನ ಗಳಿಸುವ ಅವಕಾಶ ಸಿಗುತ್ತದೆ.

ಇದಲ್ಲದೆ ಮೇ ತಿಂಗಳು ಕೂಡ ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ. ಆದ್ದರಿಂದ ನೀವು ಸಮಯದ ಸಾಧ್ಯವಾದಷ್ಟು ಹೆಚ್ಚು ಪ್ರಯೋಜನವನ್ನು ಪಡೆಯುವ ಅಗತ್ಯವಿದೆ.

ರಾಜಕೀಯ ಅಥವಾ ಸಾಮಾಜಿಕ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮವಾಗಿರುತ್ತದೆ ಮತ್ತು ಮಾಹಿತಿ ತಂತ್ರಜ್ಞಾನದ ವಿದ್ಯಾರ್ಥಿಗಳು ಸಹ ಉತ್ತಮ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ಕೌಟುಂಬಿಕ ಜೀವನ - Family life according Virgo future 2021

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಕನ್ಯಾ ರಾಶಿಚಕ್ರದ ಸ್ಥಳೀಯರ ಕೌಟುಂಬಿಕ ಜೀವನಕ್ಕೆ ಈ ವರ್ಷವು ಮಿಶ್ರ ಫಲಿತಾಂಶಗಳನ್ನು ತರಲಿದೆ. ಏಕೆಂದರೆ ಒಂದೆಡೆ ವರ್ಷದ ಆರಂಭವು ನಿಮಗೆ ಸ್ವಲ್ಪ ದುರ್ಬಲವಾಗಿದ್ದರೆ ಅದೇ ಸಮಯದಲ್ಲಿ ಮತ್ತೊಂದೆಡೆ ವರ್ಷದ ಮಧ್ಯ ಭಾಗವು ಸಾಮಾನ್ಯವಾಗಿರುತ್ತದೆ ಮತ್ತು ವರ್ಷದ ದ್ವಿತೀಯಾರ್ಧವು ನಿಮಗೆ ಉತ್ತಮ ಫಲಿತಾಂಶಗಳನ್ನು ತರುತ್ತದೆ.

ವಿಶೇಷವಾಗಿ ವರ್ಷದ ಮಧ್ಯೆ ಆಗಸ್ಟ್ ರಿಂದ ಏಪ್ರಿಲ್ ನಡುವೆ ನೀವು ಯಾವುದೇ ಕೌಟುಂಬಿಕ ಜಗಳವನ್ನು ಎದುರಿಸಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಯಾವುದೇ ಜಗಳದಲ್ಲಿ ಬೀಳುವುದನ್ನು ತಪ್ಪಿಸಬೇಕೆಂದು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನಿಮ್ಮ ಚಿತ್ರವು ಭಾರೀ ನಷ್ಟವನ್ನು ಎದುರಿಸಬೇಕಾಗಬಹುದು.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ಸಮಯದಲ್ಲಿ ನಿಮ್ಮ ಕೌಟುಂಬಿಕ ಆಸ್ತಿಗೆ ಸಂಬಂಧಿಸಿದ ಯಾವುದೇ ವಿವಾದವು ಉದ್ಭವಿಸುವ ಸಾಧ್ಯತೆಯೂ ಇದೆ. ಇದರಿಂದ ದೂರವಿರುವುದು ನಿಮಗೆ ಉತ್ತಮ ಆಯ್ಕೆಯೆಂದು ಸಾಬೀತುಪಡಿಸಲಿದೆ.

ವರ್ಷದ ಆರಂಭದಲ್ಲಿ ಜನವರಿ ರಿಂದ ಏಪ್ರಿಲ್ ಮತ್ತು ವರ್ಷದ ಮಧ್ಯದಿಂದ ಅಂತ್ಯದಲ್ಲಿ ಅಂದರೆ ಸೆಪ್ಟೆಂಬರ್ ರಿಂದ ನವೆಂಬರ್ ಮಧ್ಯೆಯ ಸಮಯವು ನಿಮಗೆ ಅನುಕೂಲಜರವೆಂದು ಸಾಬೀತುಪಡಿಸುತ್ತದೆ.

ಈ ಸಮಯದಲ್ಲಿ ನೀವು ಕೌಟುಂಬಿಕ ಸಂತೋಷವನ್ನು ಪಡೆಯುತ್ತೀರಿ ಏಕೆಂದರೆಕುಟುಂಬದಲ್ಲಿ ಸಂತೋಷ ಬರುವುದರಿಂದ ಕುಟುಂಬದಲ್ಲಿ ಹರ್ಷಚಿತ್ತ ವಾತಾವರಣ ಉಳಿದಿರುತ್ತದೆ.

ಈ ಸಮಯದಲ್ಲಿ ಮನೆಯಲ್ಲಿ ಮದುವೆ ಅಥವಾ ಹೊಸ ಅತಿಥಿ ಬರುವುದರಿಂದ ಮನೆಯಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆ.

ಇದಲ್ಲದೆ ಜನವರಿ, ಫೆಬ್ರವರಿ, ಮೇ, ಜೂನ್ ಮತ್ತು ಡಿಸೆಂಬರ್ ತಿಂಗಳು ನಿಮ್ಮ ಕೌಟುಂಬಿಕ ಜೀವನಕ್ಕೆ ಅತ್ಯಂತ ಅನುಕೂಲಕರವಾಗಲಿದೆ.

ಕನ್ಯಾ ರಾಶಿ ಭವಿಷ್ಯ 2021 ಪ್ರಕಾರ ವೈವಾಹಿಕ ಜೀವನ ಮತ್ತು ಮಕ್ಕಳು - Children & Marriage life according Virgo future 2021

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ವೈವಾಹಿಕ ಜೀವನದ ಬಗ್ಗೆ ಮಾತನಾಡಿದರೆ, ಇನ್ನೂ ಒಂಟಿಯಾಗಿರುವವರಿಗೆ ಈ ವರ್ಷದ ಆರಂಭದಲ್ಲಿ ಜನವರಿ ರಿಂದ ಏಪ್ರಿಲ್ ವರೆಗಿನ ಸಮಯವು ಅತ್ಯಂತ ಅನುಕೂಲಕರವಾಗಿರುತ್ತದೆ. ನೀವು ನಿಮ್ಮ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ ಪಡೆಯುವಿರಿ. ಇದರ ನಂತರ ಸೆಪ್ಟೆಂಬರ್ ರಿಂದ ನವೆಂಬರ್ ಮಧ್ಯೆ ನಿಮ್ಮ ಮದುವೆಯಾಗುವ ಸಾಧ್ಯತೆ ಇದೆ.

ಅನೇಕ ಸ್ಥಳೀಯರು ಮದುವೆಗಾಗಿ ಮುಂಬರುವ ವರ್ಷದ ವರೆಗೆ ಕಾಯಬೇಕಾಗಬಹುದು.

ಇದಲ್ಲದೆ ಮತ್ತೊಂದೆಡೆ, ವಿವಾಹಿತ ಸ್ಥಳೀಯರಿಗೆ ಈ ವರ್ಷವು ಸಾಮಾನ್ಯವಾಗಿರುತ್ತದೆ. ಯಾರೊಬ್ಬ ಜೀವನ ಸಂಗಾತಿಯು ಉದ್ಯೋಗದಲ್ಲಿರುತ್ತಾರೋ, ಅವರ ಜೀವನ ಸಂಗತಿಯು ವರ್ಷದ ಆರಂಭದ ಮೂರು ತಿಂಗಳಲ್ಲಿ ಮತ್ತು ಸೆಪ್ಟೆಂಬರ್ ರಿಂದ ನವೆಂಬರ್ ತಿಂಗಳ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಅದ್ಭುತ ಯಶಸ್ಸು ಪಡೆಯುತ್ತಾರೆ. ಇದರಿಂದ ನಿಮ್ಮ ಆರ್ಥಿಕ ಲಾಭವು ಸಾಧ್ಯವಾಗುತ್ತದೆ.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಜೀವನ ಸಂಗಾತಿಯ ಸಹಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಬಲಗೊಳ್ಳುತ್ತದೆ. ಆದಾಗ್ಯೂ ಇದರ ನಂತರದ ಸಮಯ ಮತ್ತು ಅದರಿಂದ ನಡುವಿನ ಸಮಯ ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ನಿಮ್ಮ ಜೀವನ ಸಂಗಾತಿಗೆ ಯಾವುದೇ ರೀತಿಯ ದೈಹಿಕ ಕಷ್ಟವಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ .

ನೀವು ವಿದೇಶಕ್ಕೆ ಹೋಗಲು ಬಯಸುತ್ತಿದ್ದರೆ, ವರ್ಷದ ಆರಂಭದಲ್ಲಿ ನೀವು ವಿದೇಶಕ್ಕೆ ಹೋಗಲು ಅವಕಾಶ ಪಡೆಯುವಿರಿ.

ಕೆಲವು ಕಾರಣಗಳಿಂದ ನಿಮ್ಮ ಅತ್ತೆಮನೆ ಸದಸ್ಯರೊಂದಿಗೆ ನಿಮ್ಮ ವಿವಾದವಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ನೀವು ಫೆಬ್ರವರಿ ರಿಂದ ಏಪ್ರಿಲ್ ಮಧ್ಯೆ ನಿಮ್ಮ ಜೀವನ ಸಂಗಾತಿಯ ಸಹೋದರ ಸಹೋದರಿಯರು ಮತ್ತು ಅವರ ತಂದೆಯೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ನೀವು ಗಮನ ಹರಿಸುವ ಆತ್ಯವಿದೆ. ಇಲ್ಲದಿದ್ದರೆ ಯಾವುದೇ ರೀತಿಯ ದೊಡ್ಡ ಜಗಳವಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ದಾಂಪತ್ಯ ಸ್ಥಳೀಯರ ಬಗ್ಗೆ ಮಾತನಾಡಿದರೆ, ನಿಮ್ಮ ಮಕ್ಕಳ ಪಕ್ಷಕ್ಕೆ ಈ ವರ್ಷ ಸಾಮಾನ್ಯವಾಗಿರುತ್ತದೆ. ನಿಮ್ಮ ಮಕ್ಕಳು ಪ್ರತಿಯೊಂದು ಕೆಲಸದಲ್ಲಿ ಮೊದಲಿಗಿಂತ ಹೆಚ್ಚು ಪರಿಶ್ರಮಿ ಮತ್ತು ವಿಧೇಯರಾಗುತ್ತಾರೆ.

ಅವರಲ್ಲಿ ನಿಮ್ಮ ಮೂಲಕ ನೀಡಲಾಗಿರುವ ಸರಿಯಾದ ಆಚರಣೆಗಳು ಸಹ ಹೆಚ್ಚಾಗುತ್ತವೆ ಮತ್ತು ಅವರು ಅಹಂಕಾರವನ್ನು ಹೊಂದದೆ ಕುಟುಂಬವನ್ನು ಮುಂದೆ ಕೊಂಡೊಯ್ಯುವ ಕಲ್ಪನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ ಮತ್ತು ಈ ಆಲೋಚನೆಗಳೊಂದಿಗೆ ಮುಂದುವರಿಯುತ್ತಾರೆ. ಇದರಿನ ನಿಮಗೂ ಸಹ ಗೌರವ ದೊರೆಯುತ್ತದೆ.

ಮಕ್ಕಳಿಗಾಗಿ ಜನವರಿ, ಫೆಬ್ರವರಿ, ಮೇ, ಜೂಲೈ ಮತ್ತು ಅಕ್ಟೋಬರ್ ತಿಂಗಳು ಅತ್ಯಂತ ಅನುಕೂಲಕರವಾಗಿರುತ್ತವೆ. ಏಕೆಂದರೆ ಈ ಸಮಯದಲ್ಲಿ ಅದೃಷ್ಟವು ಅವರನ್ನು ಬೆಂಬಲಿಸುತ್ತದೆ. ಇದರಿಂದ ಅವರು ಯಾವುದೇ ಕ್ಷೇತ್ರದಲ್ಲಿದ್ದರೂ, ಅದರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗಿತ್ತಾರೆ.

ನೀವು ಮದುವೆಯಾಗಬಹುದಾದ ಮಕ್ಕಳನ್ನು ಹೊಂದಿದ್ದರೆ, ಈ ವರ್ಷ ಅವರ ಮದುವೆಯಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love life according Virgo future 2021

ಕನ್ಯಾ ರಾಶಿ ಭವಿಷ್ಯ 2021 ರಪ್ರಕಾರ, ಈ ವರ್ಷದಲ್ಲಿ ನಿಮ್ಮ ಪ್ರೀತಿ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿಯೇ ಇರುತ್ತವೆ ಆದರೆ ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಅನೇಕ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಜೂನ್, ಜೂಲೈ ಮತ್ತು ಡಿಸೆಂಬರ್ ತಿಂಗಳಲ್ಲಿ ಈ ಏರಿಳಿತಗಳು ನಿಮ್ಮನ್ನು ಹೆಚ್ಚು ಕಾಡುತ್ತವೆ. ಅದನ್ನು ಹೊರೆತುಪಡಿಸಿ ಸಮಯವು ಸಾಮಾನ್ಯವಾಗಿರುತ್ತದೆ.

ಪ್ರೀತಿಯಲ್ಲಿರುವ ಸ್ಥಳೀಯರು ಈ ವರ್ಷ ಪ್ರೀತಿಪಾತ್ರರೊಂದಿಗೆ ಯಾವುದೇ ರೀತಿಯ ವಾದ-ವಿವಾದಿಂದ ದೂರವಿರಲು ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನಿಮ್ಮ ಸಂಬಂಧಕ್ಕಾಗಿ ಇದು ಪ್ರತಿಕೂಲವೆಂದು ಸಾಬೀತುಪಡಿಸುತ್ತದೆ.

ವಿಶೇಷವಾಗಿ ವರ್ಷದ ಜನವರಿಯ ಅಂತ್ಯದಿಂದ ಫೆಬ್ರವರಿ ಅಂತ್ಯ ಮತ್ತು ಜೂನ್ ರಿಂದ ಜೂಲೈ ತಿಂಗಳು ನಿಮಗಾಗಿ ಅತ್ಯಂತ ಉತ್ತಮವೆಂದು ಸಾಬೀತುಪಡಿಸುತ್ತವೆ, ಮತ್ತೊಂದೆಡೆ ಅಕ್ಟೋಬರ್ ರಿಂದ ಡಿಸೆಂಬರ್ ತಿಂಗಳ ಸಮಯವೂ ನಿಮ್ಮ ಪ್ರೀತಿಯಲ್ಲಿ ಆಕರ್ಷಣವನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ ಮತ್ತು ಜನವರಿ, ಮೇ ಮತ್ತು ಅಕ್ಟೋಬರ್ ನಡುವೆ ನಿಮ್ಮ ಸಂವಾದದಿಂದ ಸಂಬಂಧವು ಬಲವಾಗುತ್ತದೆ.

ಅಂತಹ ಸಂದರ್ಭದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ನೀವು ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾದ ಪ್ರಯತ್ನಗಳನ್ನು ಮಾಡುತ್ತೀರಿ.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ ಜೀವನ - Health life according Virgo future 2021

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ರಾಶಿಚಕ್ರದ ಸ್ಥಳೀಯರ ಆರೋಗ್ಯದ ಬಗ್ಗೆ ಮಾತನಾಡಿದರೆ, ನಿಮ್ಮ ಆರೋಗ್ಯವು ಸಾಮಾನ್ಯವಾಗಿ ಈ ವರ್ಷ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ನಿಮ್ಮ ರಾಶಿಚಕ್ರದ ಮೂರನೇ ಮನೆಯಲ್ಲಿ ನೆರಳಿನ ಗ್ರಹ ಕೇತುವು ನಿಮ್ಮ ಧೈರ್ಯ ಮತ್ತು ಪರಾಕ್ರಮವನ್ನು ಹೆಚ್ಚಿಸಿ ನಿಮಗೆ ಚುರುಕುತನವನ್ನು ನೀಡುತ್ತದೆ. ಇದರಿಂದ ಪ್ರಯತ್ನಿಸಿದ ನಂತರ ನೀವು ಮುಂದುವರಿಯುತ್ತಿರಿ.

ಇದರೊಂದಿಗೆ ವರ್ಷದ ಮಧ್ಯೆ 6 ಏಪ್ರಿಲ್ ರಂದು ಗುರು ಗ್ರಹವು ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ಕುಳಿತುಕೊಳ್ಳುತ್ತದೆ. ಈ ಕಾರಣದಿಂದಾಗಿ ನೀವು ಆರೋಗ್ಯದ ದೃಷ್ಟಿಯಿಂದ 15 ಸೆಪ್ಟೆಂಬರ್ ವರೆಗೆ ಸ್ವಲ್ಪ ಜಾಗರೂಕರಾಗಿ ಕಾಳಜಿ ವಹಿಸುವ ಅಗತ್ಯವಿದೆ.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಕೆಲವು ಜನರು ಮಧುಮೇಹದ ಸಮಸ್ಯೆ ಮತ್ತು ಮೂತ್ರನಾಳದ ಕಿರಿಕಿರಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಾರೆ.

ಇದರೊಂದಿಗೆ ನಿಮ್ಮ ಅನ್ನನಾಳದಲ್ಲಿ ನೋವು, ಅಜೀರ್ಣ ಮತ್ತು ಆಮ್ಲೀಯತೆಯ ಸಾಧ್ಯತೆಯನ್ನು ಸಹ ನೀವು ಹೊಂದಿರಬಹುದು.

ಇದಲ್ಲದೆ ನಿಮ್ಮ ಆರೋಗ್ಯವು ಸಾಮಾನ್ಯವಾಗಿರುತ್ತದೆ ಆದರೂ ವಿಶೇಷವಾಗಿ ಏಪ್ರಿಲ್, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಮೊದಲಿಗಿಂತ ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ. ಆದ್ದರಿಂದ ಗಮನ ಹರಿಸಿ ಮತ್ತು ನಿಮಗೆ ನೀವೇ ಒತ್ತಡ ನೀಡುವುದನ್ನು ತಪ್ಪಿಸಿ.

ಕನ್ಯಾ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರ - Astrological remedies according Virgo future 2021

  • ಉತ್ತಮ ಗುಣಮಟ್ಟದ ಪಚ್ಚೆ ರತ್ನವನ್ನು ಚಿನ್ನದಲ್ಲಿ ತಯಾರಿಸಿ ಬುಧವಾರದಂದು ನಿಮ್ಮ ಕಿರಿಯ ಬೆರಳಿನಲ್ಲಿ ಧರಿಸುವುದು ಅನುಕೂಲಕರವಾಗಿರುತ್ತದೆ
  • ಮಂಗಳವಾರದಂದು ಸ್ವಲ್ಪ ಸಂಪೂರ್ಣ ಹೆಸರು ಬೇಳೆಯನ್ನು ನೆನೆಸಿ, ಬುಧವಾರದಂದು ನಿಮ್ಮ ಎರಡು ಕೈಗಳಿಂದ ಹಸುವಿಗೆ ತಿನ್ನಿಸಬೇಕು.
  • ಪ್ರತಿದಿನ ನಿಯಮಿತವಾಗಿ ದುರ್ಗಾ ಚಾಲೀಸವನ್ನು ಪಠಿಸುವುದು ಅನುಕೂಲಕರವಾಗಿರುತ್ತದೆ.
  • ಶುಕ್ರವಾರದಂದು ತಾಯಿಯ ದೇವಾಲಯದಲ್ಲಿ ಒಂದು ಕೆಂಪು ದಾಸವಾಳ ಅಥವಾ ಕೆಂಪು ಗುಲಾಬಿಯನ್ನು ಅರ್ಪಿಸಿ.
  • ಯಾವಾಗಲೂ ನಿಮ್ಮ ಚೀಲ ಅಥವಾ ಜೇಬಿನಲ್ಲಿ ಬೆಳ್ಳಿಯ ಘನ ಚದರ ತುಂಡನ್ನು ಇರಿಸಿ.
More from the section: Horoscope 2975
2020 Articles
Buy Today
Gemstones
Get gemstones Best quality gemstones with assurance of AstroSage.com More
Yantras
Get yantras Take advantage of Yantra with assurance of AstroSage.com More
Navagrah Yantras
Get Navagrah Yantras Yantra to pacify planets and have a happy life .. get from AstroSage.com More
Rudraksha
Get rudraksha Best quality Rudraksh with assurance of AstroSage.com More
Today's Horoscope

Get your personalised horoscope based on your sign.

Select your Sign
Free Personalized Horoscope 2021
© Copyright 2021 AstroCAMP.com All Rights Reserved