• Talk To Astrologers
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

ಸಿಂಹ ರಾಶಿ ಭವಿಷ್ಯ 2021 - Leo Horoscope 2021 in Kannada

Author: -- | Last Updated: Tue 28 Apr 2020 11:41:54 AM

simha rashi bhavishya 2021, simha rashiphala 2021

ಸಿಂಹ ರಾಶಿ ಭವಿಷ್ಯ 2021 (simha rashi bhavishya 2021) ರ ಪ್ರಕಾರ, ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷವು ಏರಿಳಿತದಿಂದ ತುಂಬಿರುತ್ತದೆ. ಈ ವರ್ಷ ರಾಹುವು ನಿಮ್ಮ ರಾಶಿಚಕ್ರದ ಹತ್ತನೇ ಮನೆಯಲ್ಲಿ ನೆಲೆಗೊಂಡಿರುವ ಕಾರಣದಿಂದಾಗಿ ವರ್ಷದ ಆರಂಭದಲ್ಲಿ ಉತ್ತಮ ಫಲಿತಾಂಶಗಳು ಸಿಗಬಹುದು. ಆದರೆ ಈ ವರ್ಷ ನಿಮ್ಮ ಜಾತಕದ ಆರನೇ ಮನೆಯಲ್ಲಿ ಶನಿ ಮತ್ತು ಗುರುವಿನ ಸಂಯೋಗದದಿಂದಾಗಿ ನೀವು ನಿಮ್ಮನ್ನು ಶತ್ರುಗಳಿಂದ ಸುತ್ತುವರೆದಿರುವಂತೆ ಅನುಭವಿಸುತ್ತೀರಿ.

ಇದರೊಂದಿಗೆ ವರ್ಷದ ಆರಂಭದಲ್ಲಿ ಮಂಗಳ ನಿಮ್ಮ ಜಾತಕದ ಒಂಬತ್ತನೇ ಮನೆಯಲ್ಲಿ ಇರುತ್ತಾನೆ. ಈ ಪರಿಣಾಮದಿಂದಾಗಿ ಅದೃಷ್ಟದ ಬೆಂಬಲದೊಂದಿಗೆ ಕೆಲಸದ ಸ್ಥಳದಲ್ಲಿ ಸಹ ನೀವು ಉತ್ತಮ ಸಂಬಂಧವನ್ನು ಸ್ಥಾಪಿಸಲು ಯಶಸ್ಸಿವಿಯಾಗುವಿರಿ. ವ್ಯಾಪಾರಕ್ಕೆ ಸಂಬಂಧಿಸಿದ ಸ್ಥಳೀಯರು ಇಲ್ಲಿ ವಿಶೇಷವಾಗಿ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನಿಮಗೆ ಹಾನಿಯಾಗುವ ಸಾಧ್ಯತೆ ಇದೆ.

ಆಸ್ಟ್ರೋಸೇಜ್ ಬೃಹತ್ ಕುಂಡಲಿ ಯಲ್ಲಿ 250+ ಪುಟಗಳ ನಿಮ್ಮ ವರ್ಣರಂಜಿತ ಜಾತಕವನ್ನು ಪಡೆಯಿರಿ.

ಸಿಂಹ ರಾಶಿ ಭವಿಷ್ಯ 2021 ಪ್ರಕಾರ, ಸಿಂಹ ರಾಶಿಚಕ್ರದ ಸ್ಥಳೀಯರ ಆರ್ಥಿಕ ವಿಷಯಗಳ ದೃಷ್ಟಿಯಿಂದ ಈ ವರ್ಷವು ಸಾಮಾನ್ಯವಾಗಿರುತ್ತದೆ. ಈ ವರ್ಷ 2021 ರಲ್ಲಿ ನೀವು ನಿಮ್ಮ ಆದಾಯ ಮತ್ತು ಕುಟುಂಬದ ಸಹಕಾರದಿಂದ ಹಣ ಗಳಿಸುವಲ್ಲಿ ಯಶಸ್ಸು ಪಡೆಯುತ್ತೀರಿ. ಈ ವರ್ಷ ನೀವು ಯಾವುದೇ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಈ ಸಮಯದಲ್ಲಿ ನೀವು ತುಂಬಾ ಬುದ್ಧಿವಂತಿಕೆಯಿಂದ ಹೆಜ್ಜೆ ಎತ್ತುವ ಅಗತ್ಯವಿದೆ ಏಕೆಂದರೆ ಈ ಸಮಯವೂ ನಿಮಗೆ ಅನುಕೂಲಕರವಾಗಿರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಅಧ್ಯಯನದಲ್ಲಿ ಯಾವುದೇ ರೀತಿಯ ಕಿರು ಹಾದಿಯನ್ನು ತೆಗೆದುಕೊಳ್ಳಬೇಡಿ. ಇದರಿಂದ ನಿಮಗೆ ಹಾನಿಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಸಾಧ್ಯವಾದಷ್ಟು ಕಠಿಣ ಪರಿಶ್ರಮ ಮಾಡಿದಾಗ ಮಾತ್ರ ನೀವು ಅದರ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ವರ್ಷ ಸಿಂಹ ರಾಶಿಚಕ್ರದ ಸ್ಥಳೀಯರ ಜಾತಕದಲ್ಲಿ ಗುರು ದೇವರು ಅರಮನೆ ಮನೆಯಿಂದ ಎರಡನೇ ಮನೆಗೆ ಪ್ರವೇಶಿಸಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಈ ರಾಶಿಚಕ್ರದ ಅನೇಕ ಜನರು ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು.

ಸಿಂಹ ರಾಶಿಚಕ್ರದ ಸ್ಥಳೀಯರು ವಿಶೇಷವಾಗಿ ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ಏಕೆಂದರೆ ಈ ವರ್ಷ ಅವರ ಆರೋಗ್ಯದಲ್ಲಿ ಏರಿಳಿತವಿರುವ ಸಾಧ್ಯತೆ ಇದೆ. ತನ್ನ ಸ್ವಂತ ಮನೆಯ ಕನಸು ಕಾಣುತ್ತಿರುವ ಜನರ ಸ್ವಪ್ನವು ಫೆಬ್ರವರಿ ರಿಂದ ಏಪ್ರಿಲ್ ತಿಂಗಳ ನಡುವೆ ನಿಜವಾಗುವ ಸಾಧ್ಯತೆ ಇದೆ. ವೈಹಿಕ ಜೀವನ ಮತ್ತು ಮಕ್ಕಳ ಲೆಕ್ಕಾಚಾರದಿಂದ ನೋಡಿದರೆ, ವರ್ಷ 2021 ರ ಆರಂಭವು ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಒತ್ತಡದಿಂದಿರುತ್ತದೆ. ಪ್ರೀತಿಯಲ್ಲಿರುವ ಸ್ಥಳೀಯರು ಈ ವರ್ಷ ಪ್ರೀತಿ ಮದುವೆಯ ಕೊಡುಗೆಯನ್ನು ಪಡೆಯಲಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಸಿಂಹ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2021 ಬಹಳ ಸವಾಲುಗಳಿಂದಿರುವ ಪ್ರಬಲ ಸಾಧ್ಯತೆ ಇದೆ. ಈ ರಾಶಿಚಕ್ರದ ಸ್ಥಳೀಯರು ಈ ವರ್ಷ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಅವರಿಗೆ ಕೈ, ಹೊಟ್ಟೆ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನೀಡಬಹುದು.

ನಡೆಯಿರಿ ಈಗ ಸಿಂಹ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2021 ಎಂಬುದರ ಬಗ್ಗೆ ವಿವರವಾಗಿ ತಿಳಿಯೋಣ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿಜೀವನ - Career life according Leo future 2021

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಇಡೀ ವರ್ಷ ರಾಹುವು ನಿಮ್ಮ ಹತ್ತನೇ ಮನೆಯಲ್ಲಿ ಇರುವುದರಿಂದ, ಇದರ ಬಹಳಷ್ಟು ಪರಿಣಾಮವು ನಿಮ್ಮ ಮೇಲೆ ಬೀರುತ್ತದೆ. ರಾಹುವಿನ ಈ ಸ್ಥಾನದ ಕಾರಣದಿಂದ ನೀವು ಇತರರ ಮೇಲೆ ಪ್ರಾಬಲ್ಯ ಸಾಧಿಸಿ ನಿಮ್ಮ ಎಲ್ಲಾ ಮಾತುಗಳನ್ನು ಮನವೊಲಿಸುವಲ್ಲಿ ಯಶಸ್ವಿಯಾಗುವಿರಿ. ನೀವು ಸಣ್ಣ ಪುಟ್ಟ ಸುಳಿವುಗಳೊಂದಿಗೆ ನಿಮ್ಮ ಕೆಲಸವನ್ನು ಪೂರೈಸುವಲ್ಲಿ ಯಶಸ್ಸು ಪಡೆಯುತ್ತೀರಿ.

ಈ ವರ್ಷ ನಿಮ್ಮ ಹಠಾತ್ ಪ್ರಗತಿಯಾಗುವ ಸಾಧ್ಯತೆ ಇದೆ. ಆದರೆ ಇದು ಸಂಭವಿಸುವಂತಹ ಪರಿಸ್ಥಿತಿಯಲ್ಲಿ ಕೆಲವು ಜನರು ಈ ವಿಷಯದ ಬಗ್ಗೆ ಕೆಟ್ಟದಾಗಿ ಭಾವಿಸಬಹುದು ಮತ್ತು ಇದರಿಂದ ನಿಮ್ಮ ಶತ್ರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ.

ಈ ವರ್ಷ 2021 ರಲ್ಲಿ ನಿಮ್ಮ ಜಾತಕದ ಆರನೇ ಮನೆಯಲ್ಲಿ ಶನಿ ಮತ್ತು ಗುರುವಿನ ಸಂಯೋಗದಿಂದಾಗಿ ನೀವು ಶತ್ರುಗಳಿಂದ ಸುತ್ತುವರಿಯಲಿದ್ದೀರಿ. ಆದಾಗ್ಯೂ ಇಡೀ ವರ್ಷ ಪರಿಸ್ಥಿತಿಗಳು ಒಂದೇ ಆಗಿರುವುದಿಲ್ಲ. ಮಧ್ಯೆ ಮಧ್ಯೆ ನೀವು ಅವರಿಂದ ಗೆಲ್ಲುವಲ್ಲಿ ಸಹ ಯಶಸ್ವಿಯಾಗುತ್ತೀರಿ. ಶತ್ರುಗಳೊಡನೆ ನಡೆಯುತ್ತಿರುವ ಗಲಾಟೆಯ ಕಾರಣದಿಂದಾಗಿ ವರ್ಷದುದ್ದಕ್ಕೂ ನೀವು ಮಾನಸಿಕ ಒತ್ತಡವನ್ನು ಹೊಂದಿರುತ್ತೀರಿ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರ ಆರಂಭದಲ್ಲಿ ನಿಮ್ಮ ಜಾತಕದ ಒಂಬತ್ತನೇ ಮನೆಯಲ್ಲಿ ಮಂಗಳ ಇರುವುದರ ಪರಿಣಾಮದಿಂದಾಗಿ ಅದೃಷ್ಟದೊಂದಿಗೆ ಕೆಲಸದ ಸ್ಥಳದಲ್ಲೂ ನೀವು ಉತ್ತಮ ಸಂಬಂಧವನ್ನು ಬ್ಲೇಸುವಲ್ಲಿ ಯಶಸ್ವಿಯಾಗುತ್ತೀರಿ. ಆದಾಗ್ಯೂ ಏಪ್ರಿಲ್ ಮತ್ತು ಮೇ ತಿಂಗಳ ಸಮಯವು ನಿಮಗಾಗಿ ಕೆಲವು ಸಮಸ್ಯೆಗಳಿಂದ ತುಂಬಿರುತ್ತದೆ ಏಕೆಂದರೆ ಈ ಸಮಯದಲ್ಲಿ ಮಂಗಳ ನಿಮ್ಮ ಜಾತಕದ ಹನ್ನೊಂದನೇ ಮನೆಯಲ್ಲಿ ಇರುತ್ತಾನೆ. ಇದರ ಪರಿಣಾಮದಿಂದಾಗಿ, ಈ ಸಮಯದಲ್ಲಿ ವರಿಷ್ಠ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಸಾಧ್ಯವಾದರೆ ಇದನ್ನು ತಪ್ಪಿಸಿ.

ಏಪ್ರಿಲ್, ಜೂನ್ ಮತ್ತು ಸೆಪ್ಟೆಂಬರ್ ನಡುವೆ ಕೆಲಸಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣಿಸುವ ಪ್ರಬಲ ಯೋಗವಿದೆ. ಇದು ಪ್ರತಿಯೊಂದು ಅರ್ಥದಲ್ಲಿಯೂ ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ. ವ್ಯಾಪರ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಈ ಸಮಯದಲ್ಲಿ ವಿಶೇಷ ಜಾಗರೂಕರಾಗಿರಬೇಕು ಏಕೆಂದರೆ ವ್ಯಾಪಾರಸ್ಥರಿಗೆ ಹಾನಿಯಾಗುವ ಸಾಧ್ಯತೆ ಕಂಡುಬರುತ್ತಿದೆ.

ಈ ರಾಶಿಚಕ್ರದ ಸ್ಥಳೀಯರುಈ ವರ್ಷ ಹಣಕಾಸಿನ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅವರು ಕೂಡ ಸಾಕಷ್ಟು ಜಾಗರೂಕರಿಗುವ ಅಗತ್ಯವಿದೆ. ಚೆನ್ನಾಗಿ ಯೋಚಿಸಿ ಬುದ್ಧಿವಂತಿಕೆಯಿಂದ ಎಲ್ಲಾದರೂ ಹೂಡಿಕೆ ಮಾಡಿ ಇಲ್ಲದಿದ್ದರೆ ನಿಮ್ಮ ಕೆಲಸವೂ ಹದಗೆಡಬಹುದು.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according Leo future 2021

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಸಿಂಹ ರಾಶಿಚಕ್ರದಸ್ಥಳೀಯರ ಆರ್ಥಿಕ ವಿಷಯಗಳಲ್ಲಿ ಏರಿಳಿತವಿರುತ್ತದೆ. ಒಂದೆಡೆ ಈ ರಾಶಿಚಕ್ರದ ಸ್ಥಳೀಯರ ಆರ್ಥಿಕ ಜೀವನವು ಸಾಮಾನ್ಯವಾಗಿದ್ದರೆ, ಆದರೆ ಮತ್ತೊಂದೆಡೆ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಈ ವರ್ಷ ನೀವು ನಿಮ್ಮ ಆದಾಯವನ್ನು ಹೆಚ್ಚಿಸುವ ಬಗ್ಗೆ ಗಮನ ಹರಿಸಬೇಕು.

ಈ ವಿಷಯದಲ್ಲಿ ವರ್ಷದ ಆರಂಭವು ಸಾಮಾನ್ಯವಾಗಿರುತ್ತದೆ. ಏಪ್ರಿಲ್ ತಿಂಗಳು ಇನ್ನಷ್ಟು ಉತ್ತಮವಾಗಿರುತ್ತದೆ. ಈ ತಿಂಗಳು ನಿಮ್ಮ ಆದಾಯವು ಹೆಚ್ಚಾಗುತ್ತದೆ ಮತ್ತು ಆದಾಯದ ಕೆಲವು ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ಸರಿಯಾಗಿ ಮಾಡಲಾದರೆ, ಆಗಸ್ಟ್ ರಿಂದ ಅಕ್ಟೋಬರ್ ನಡುವೆ ನೀವು ಹಣಕಾಸು ಸಂಗ್ರಹಿಸುವಲ್ಲಿ ಸಹ ಯಶಸ್ವಿಯಾಗುವಿರಿ. ಈ ವರ್ಷ ನೀವು ನಿಮ್ಮ ಆದಾಯ ಅಮ್ತ್ತು ನಿಮ್ಮ ಕುಟುಂಬದ ಸಹಕಾರದಿಂದ ಹಣಕಾಸು ಗಳಿಸುವಲ್ಲಿ ಯಶಸ್ಸು ಪಡೆಯುವಿರಿ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ, ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯದ ವರೆಗೆ ದಾಂಪತ್ಯ ಜೀವನ ಅಥವಾ ವೈವಾಹಿಕ ಸಂಬಂಧದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ವ್ಯಾಪಾರದಲ್ಲಿರುವ ಸ್ಥಳೀಯರಿಗೆ ಈ ವರ್ಷ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ, ಇಲ್ಲದಿದ್ದರೆ ನಷ್ಟವಾಗಬಹುದು.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನೀವು ಯಾವುದೇ ದೊಡ್ಡ ಹಣಕಾಸಿನ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಇಲ್ಲಿ ನೀವು ಸಾಕಷ್ಟು ಚಿಂತನಶೀಲ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಏಕೆಂದರೆ ಬಹುಶಃ ಈ ಸಮಯವೂ ನಿಮಗೆ ಅನುಕೂಲಕರವಾಗಿಲ್ಲದಿರಬಹುದು. ಈ ಸಮಯದಲ್ಲಿ ನೀವು ಯಾವುದೇ ಹೊಸ ವ್ಯಾಪಾರವನ್ನು ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಸಾಧ್ಯವಾದಷ್ಟು ಕಡಿಮೆ ಹಣದ ಹೂಡಿಕೆ ಮಾಡಿ ವ್ಯಾಪಾರವನ್ನು ಪ್ರಾರಂಭಿಸಿ. ಸಾಧ್ಯವಾದರೆ ಏಕಾಂಗಿಯಾಗಿ ವ್ಯವಹಾರ ಮಾಡಿ. ಇದು ಮಾತ್ರ ನಿಮಗೆ ಹೆಚ್ಚು ಲಾಭದಾಯಕವಾಗಿರುತ್ತದೆ.

ಸಿಂಹ ರಾಶಿ ಭವಿಷ್ಯ 2021 ಪ್ರಕಾರ ಶಿಕ್ಷಣ - Education life according Leo future 2021

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರು ಶಿಕ್ಷಣದ ಕ್ಷೇತ್ರದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುತ್ತಿರುವ ಸ್ಪರ್ದಿಗಳಿಗೆ ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವು ಕಷ್ಟಕರವೆಂದು ಸಾಬೀತುಪಡಿಸಬಹುದು. ಈ ಸಮಯ ಅಧ್ಯಯನದ ವಿಷಯದಲ್ಲಿ ನೀವು ಹೆಚ್ಚು ಪ್ರಯತ್ನಿಸುವ ಅಗತ್ಯವಿದೆ.

ವಿದ್ಯಾರ್ಥಿಗಳಿಗೆ ಜನವರಿ ರಿಂದ ಏಪ್ರಿಲ್ ವರೆಗಿನ ಸಮಯ ಬಹಳಷ್ಟು ಅನುಕೂಲಕರವಾಗಿರುತ್ತದೆ. ಇದರ ನಂತರ ಮೇ ರಿಂದ ಆಗಸ್ಟ್ ವರೆಗಿನ ಸಮಯವೂ ಸ್ವಲ್ಪ ಸವಾಲುಗಳಿಂದ ತುಂಬಿರುತ್ತದೆ ಮತ್ತು 15 ಸೆಪ್ಟೆಂಬರ್ ರಿಂದ 20 ನವೆಂಬರ್ ವರೆಗಿನ ಒಂದು ಬಾರಿ ಮತ್ತೆ ಸಿಂಹ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ ಪ್ರಾರಂಭವಾಗುತ್ತದೆ.

ಉನ್ನತ ಶಿಕ್ಷಣ ಗಳಿಸುತ್ತಿರುವ ವಿದ್ಯಾರ್ಥಿಗಳು ಈ ವರ್ಷ ಬಹಳ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ನೀವು ವಿದೇಶಕ್ಕೆ ಪ್ರಯಾಣಿಸಲು ಬಯಸುತ್ತಿದ್ದರೆ, ಈ ವರ್ಷ ಕೆಲವು ಸಮಸ್ಯೆಗಳನ್ನು ನೀಡಲಿದೆ. ಆದ್ದರಿಂದ ಧೈರ್ಯದಿಂದ ಕಾರ್ಯನಿರ್ವಹಿಸಿ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ವಿದೇಶಕ್ಕೆ ಹೋಗುತ್ತಿರುವ ಸ್ಥಳೀಯರ ಹಾದಿಯಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು. ಈ ವರ್ಷ ನೀವು ನಿಮ್ಮ ಮನಸ್ಸಿಗೆ ನೆಚ್ಚಿದ ಕಾಲೇಜ್ ನಲ್ಲಿ ಪ್ರವೇಶ ಪಡೆಯಲು ಬಯಸುತ್ತಿದ್ದರೆ, ಅಧ್ಯಯನದಲ್ಲಿ ಯಾವುದೇ ರೀತಿಯ ಕಿರುಹಾದಿ ತೆಗೆಕೊಳ್ಳುವುದನ್ನು ತಪ್ಪಿಸಿ. ಪರಿಶ್ರಮಿಸಿದರೆ ಖಂಡಿತವಾಗಿಯೂ ಅದರ ಫಲಿತಾಂಶವನ್ನು ನೀವು ಪಡೆಯುತ್ತೀರಿ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ಕೌಟುಂಬಿಕ ಜೀವನ - Family life according Leo future 2021

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರ ಕೌಟುಂಬಿಕ ಜೀವನದ ಬಗ್ಗೆ ಮಾತನಾಡಿದರೆ, ಕೇತುವಿನ ನಾಲ್ಕನೇ ಮನೆಯಲ್ಲಿ ನೆಲೆಗೊಂಡಿರುವ ಕಾರಣದಿಂದಾಗಿ ಪರಿಸ್ಥಿತಿ ಅನುಕೂಲಕರವಾಗದಿರುವ ಕಡೆಗೆ ಸೂಚಿಸುತ್ತಿದೆ. ಆದಾಗ್ಯೂ ಸಿಂಹ ರಾಶಿಚಕ್ರದ ಸ್ಥಳೀಯರ ಜಾತಕದಲ್ಲಿ ಗುರುವು ಆರನೇ ಮನೆಯಿಂದ ಎರಡನೇ ಮನೆಗೆ ಪ್ರವೇಶಿಸಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಸ್ಥಳೀಯರು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ.

ವರ್ಷ 2021 ರಲ್ಲಿ, ಜಾತಕದಲ್ಲಿ ಉಂಟಾಗುವ ಈ ಬದಲಾವಣೆಯ ಪರಿಣಾಮದಿಂದಾಗಿ ಸಿಂಹ ರಾಶಿಚಕ್ರದ ಸ್ಥಳೀಯರ ಕುಟುಂಬದಲ್ಲಿ ಕೆಲವೊಮ್ಮೆ ಸಾಮರಸ್ಯ ಉಳಿದಿದ್ದರೆ ಕೆಲವೊಮ್ಮೆ ಕುಟುಂಬದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ವರ್ಷ 2021 ರಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರು ತಮ್ಮ ತಂದೆ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ ಏಕೆಂದರೆ ಅವರ ತಂದೆ ತಾಯಿಯ ಆರೋಗ್ಯದಲ್ಲಿ ಏರಿಳಿತವಿರುವ ಸಾಧ್ಯತೆ ಇದೆ.

ಈ ಸಮಯದಲ್ಲಿ ನೀವು ನಿಮ್ಮ ವಿರೋಧಿಗಳಿಂದ ತುಂಬಾ ಜಾಗರೂಕರಾಗಿರಬೇಕು ಏಕೆಂದರೆ ಅವರು ನಿಮ್ಮ ಜೀವನದಲ್ಲಿ ಯಾವುದೇ ಯಾವುದೇ ರೀತಿಯ ಸಮಸ್ಯೆಯನ್ನು ಉಂಟುಮಾಡಬಹುದು. ಸಿಂಹ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2021 ರಲ್ಲಿ, ಅವರ ಸಂತೋಷಕ್ಕೆ ದೊಡ್ಡ ಕಾರಣ ಅವರ ಕಿರಿಯ ಸಹೋದರ- ಸಹೋದರಿಯರಾಗಿರಬಹುದು.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಸ್ವಂತ ಮನೆಯ ಕನಸು ಕಾಣುತ್ತಿರುವ ಸ್ಥಳೀಯರ ಕನಸು ಫೆಬ್ರವರಿ ರಿಂದ ಏಪ್ರಿಲ್ ಮಧ್ಯೆ ನಿಜವಾಗಬಹುದು. ಈ ಸಮಯ ಮನೆ ಮತ್ತು ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ. ಇದರ ನಂತರ 5 ಡಿಸೆಂಬರ್ ನಂತರ ಮತ್ತೆ ಈ ಯೋಗವು ರೂಪುಗೊಳ್ಳುತ್ತದೆ ಆದರೆ ಈ ಸಮಯದಲ್ಲಿ ನೀವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ ಏಕೆಂದರೆ ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯವು ದುರ್ಬಲವಾಗುವ ಸಾಧ್ಯತೆ ಇದೆ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ವೈವಾಹಿಕ ಜೀವನ ಮತ್ತು ಮಕ್ಕಳು - Children & Marriage life according Leo future 2021

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ವೈವಾಹಿಕ ಜೀವನ ಮತ್ತು ಮಕ್ಕಳ ದೃಷ್ಟಿಯಿಂದ ನೋಡಿರದರೆ ಈ ವರ್ಷದ ಆರಂಭದ ದಿನಗಳು ಒತ್ತಡದಿಂದಿರುತ್ತವೆ. ಸಿಂಹ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಉಂಟಾಗುವ ಈ ಸಮಸ್ಯೆಗಳನ್ನು ಗುರುವಿನ ಅನುಗ್ರಹದಿಂದ ಮಾತ್ರ ಪರಿಹರಿಸಲಾಗಬಹುದು.

ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗೆ ಈ ಅಂತಕವು ಹೆಚ್ಚಾಗಬಹುದು. ಏಪ್ರಿಲ್ ರಿಂದ ಸೆಪ್ಟೆಂಬರ್ ತಿಂಗಳಲ್ಲಿ ನೀವು ನಿಮ್ಮ ದಾಂಪತ್ಯ ಜೀವನಕ್ಕೆ ಹೆಚ್ಚು ಸಮಯ ನೀಡಬೇಕಾಗುತ್ತದೆ ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಂಬಂಧದಲ್ಲಿ ಪ್ರತ್ಯೆಕತೆಯ ಪರಿಸ್ಥಿತಿಯು ಬರಬಹುದು ಮತ್ತು ನಿಮ್ಮ ಸಂಬಂಧ ಮುರಿಯುವ ಸಾಧ್ಯತೆ ಇದೆ ಆದ್ದರಿಂದ ಗಮನ ಹರಿಸಿ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ನ್ಯಾಯಾಲಯದ ಕಚೇರಿಗೆ ಸಂಬಂಧಿಸಿದ ಯಾವುದೇ ಪ್ರಕರಣವಿದ್ದರೆ, ಸ್ವಲ್ಪ ಸಮಯದ ವರೆಗೆ ನಿಲ್ಲುವುದು ನಿಮಗೆ ಉತ್ತಮ. ಸರಿಯಾದ ಸಮಯ ಬಂಡ ನಂತರ ಈ ವಿಷಯಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದು ಉತ್ತಮವಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಏಕಂದರೆ ಈ ವರ್ಷ ಜೀವನ ಸಂಗಾತಿಯ ಆರೋಗ್ಯವು ದುರ್ಬಲವಾಗಬಹುದು, ಅದರಲ್ಲಿ ನಿಮ್ಮ ಹೆಚ್ಚಿನ ಹಣವು ಖರ್ಚಾಗಬಹುದು.

ಇದಲ್ಲದೆ ಮಕ್ಕಳ ಬಗ್ಗೆ ಮಾತನಾಡಿದರೆ, ವರ್ಷ 2021 ರ ಸಮಯವು ಬಹಳಷ್ಟು ಉತ್ತಮವಾಗಿರಲಿದೆ. ಸಿಂಹ ರಾಶಿಚಕ್ರದ ಸ್ಥಳೀಯರ ಈ ವರ್ಷವು ಅವರ ಪ್ರತಿಯೊಂದು ಕೆಲಸದಲ್ಲಿ ಖಂಡಿತವಾಗಿಯೂ ಯಶಸ್ಸು ಪಡೆಯಲಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಅವರು ಯಶಸ್ವಿಯಾಗುವುದನ್ನು ನೋಡಿ ನಿಮಗೂ ನೆಮ್ಮದಿ ಸಿಗುತ್ತದೆ. ಅಂದರೆ ಮಕ್ಕಳ ದೃಷಿಯಿಂದ ನಿಮ್ಮ ಈ ವರ್ಷವೂ ಸಾಕಷ್ಟು ಉತ್ತಮವಾಗಿ ಕಳೆಯುವ ಸಾಧ್ಯತೆ ಇದೆ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love life according Leo future 2021

ಸಿಂಹ ರಾಹಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಸಿಂಹ ರಾಶಿಚಕ್ರದ ಸ್ಥಳೀಯರ ಪ್ರೀತಿ ಜೀವನದಲ್ಲಿ ಮಿಶ್ರ ಫಲಿತಾಂಶಗಳನ್ನು ತರಲಿದೆ. ಈ ವರ್ಷ ಪ್ರೀತಿಯಲ್ಲಿರುವ ಕೆಲವು ಸ್ಥಳೀಯರು ಪ್ರೀತಿ ಮದುವೆಯ ಕೊಡುಗೆಯನ್ನು ಪಡೆಯುವಂತಹ ಅದೃಷ್ಟವು ಸಹ ರೂಪುಗೊಳ್ಳುತ್ತಿದೆ. ಪ್ರೀತಿ ಮದುವೆಯ ಸಂಯೋಗವನ್ನು ಏಪ್ರಿಲ್ ರಿಂದ ಸೆಪ್ಟೆಂಬರ್ ತಿಂಗಳ ಮಧ್ಯೆ ಪಡೆಯಬಹುದು.

ಇದಲ್ಲದೆ, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಮದುವೆಗೆ ಅರ್ಹರಾಗಿರುವ ಜನರ ಮದುವೆಯ ಬಲವಾದ ಸಾಧ್ಯತೆ ಇದೆ. ಈ ವರ್ಷ ಪ್ರೀತಿ ಸಂಬಂಧದ ಮೇಲೆ ನೀವು ಸೂಕ್ಷ್ಮವಾಗಿ ಗಮನಿಸಬೇಕು ಏಕೆಂದರೆ ಈ ವರ್ಷವು ನಿಮ್ಮ ಸಂಬಂಧಕ್ಕಾಗಿ ಏರಿಳಿತದಿಂದ ತುಂಬಿರುತ್ತದೆ. ಕೆಲವು ಸಮಸ್ಯೆಗಳು ಮತ್ತು ಕೆಲವು ಏರಿಳಿತಗಳೊಂದಿಗೆ ಒಟ್ಟಾರೆಯಾಗಿ ನಿಮ್ಮ ಪ್ರೀತಿ ಜೀವಾನವು ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಪ್ರೀತಿ ಸಂಬಂಧದಲ್ಲಿ ಮಾಧುರ್ಯತೆ ಉಳಿದಿರುತ್ತದೆ ಮತ್ತು ಸಮಸ್ಯೆಗಳು ಸಾಧ್ಯವಾದಷ್ಟು ಕಡಿಮೆಯಾಗಲು ನೀವು ಪರಸ್ಪರರನ್ನು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ವಿಷಯವನ್ನು ಉತ್ತಮ ರೀತಿಯಿಂದ ಇಡಲು ಸಂಪೂರ್ಣ ಸಮಯವನ್ನು ತೆಗೆದುಕೊಳ್ಳಿ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ - Health life according Leo future 2021

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷದಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಅರೋಗ್ಯ ಸಂಬಂಧಿತ ವಿಷಯಗಳಲ್ಲಿ ಸಮಸ್ಯೆ ಬರಬಹುದು. ಅಂತಹ ಪರಿಸ್ಥಿತಯಲ್ಲಿ ಅವರು ಮೊದಲಿಂದಲೇ ತಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರುವ ಅಗತ್ಯವಿದೆ. ಇದಲ್ಲದೆ ಜಾತಕದ ಆರನೇ ಮನೆಯಲ್ಲಿ ಉಂಟಾಗುತ್ತಿರುವ ಶನಿ ಮತ್ತು ಗುರುವಿನ ಸಂಯೋಗವು ಯಾವುದೇ ದೊಡ್ಡ ರೋಗಗಳಿಗೆ ಜನ್ಮ ನೀಡುವ ಸೂಚಕವಾಗಿವೆ. ಅಂದರೆ ಆರೋಗ್ಯದ ದೃಷ್ಟಿಯಿಂದ ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ 2021 ಅತ್ಯಂತ ಸವಾಲುಗಳಿಂದ ತುಂಬಿರುವ ಬಲವಾದ ಸಾಧ್ಯತೆ ಇದೆ.

ಸಿಂಹ ರಾಶಿ ಭವಿಷ್ಯ 2021 ರ ಪ್ರಕಾರ, ಸಿಂಹ ರಾಶಿಚಕ್ರದ ಸ್ಥಳೀಯರು ಈ ವರ್ಷ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಕೈ, ಹೊಟ್ಟೆ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳು ನಿಮಗೆ ಸಮಸ್ಯೆ ನೀಡಬಹುದು. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದಲ್ಲದೆ ವಾಯು ರೋಗ ಮತ್ತು ಜಂಟಿ ರೋಗಗಳಿಂದಲೂ ನೀವು ಜಾಗರೂಕರಾಗಿರುವ ಅಗತ್ಯವಿದೆ. ಈ ವರ್ಷ ಮಧುಮೇಹದಿಂದ ಬಳಲುತ್ತಿರುವ ಜನರು ವಿಶೇಷ ಕಾಳಜಿ ವಹಿಸಬೇಕು ಇಲ್ಲದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು.

ಸಿಂಹ ರಾಶಿ ಭವಿಷ್ಯ 2021 ಪ್ರಕಾರ ಜ್ಯೋತಿಷ್ಯ ಪರಿಹಾರ - Astrological remedies according Cancer future 2021

  • ಭಾನುವಾರದಂದು ತಾಮ್ರದ ಉಂಗುರದಲ್ಲಿ ನೀವು ಉತ್ತಮ ಗುಣಮಟ್ಟದ ಮಾಣಿಕ್ಯ ರತ್ನವನ್ನು ಧರಿಸುವುದು ನಿಮಗೆ ಉತ್ತಮ.

  • ಭಾನುವಾರದಂದು ಎತ್ತುಗಳಿಗೆ ಗೋಧಿ ಹಿಟ್ಟು ಅಥವಾ ಹಿಟ್ಟಿನ ಹುಂಡಿಗಳನ್ನು ತಿನ್ನಿಸಿ.
  • ತಂದೆ ಸೇವೆ ಮತ್ತು ಅವರನ್ನು ಗೌರವಿಸಿ.
  • ಶನಿವಾರದಂದು ಸಾಸ್ವೆ ಎಣ್ಣೆಯಲ್ಲಿ ನಿಮ್ಮ ಮುಖವನ್ನು ನೋಡಿ ಆ ಎಣ್ಣೆಯ ದಾನ ಮಾಡುವುದು ನಿಮಗೆ ಉತ್ತಮ.
  • ಗುರುವಾರದಂದು ಉಪವಾಸವನ್ನು ಅನುಸರಿಸುವುದು ಅಥವಾ ಅರಳಿ ಮರವನ್ನು ಮುಟ್ಟದೆ ಅದಕ್ಕೆ ನೀರು ಅರ್ಪಿಸುವುದು ಉತ್ತಮ.
More from the section: Horoscope 2974
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2023
© Copyright 2024 AstroCAMP.com All Rights Reserved