• Talk To Astrologers
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

ತುಲಾ ರಾಶಿ ಭವಿಷ್ಯ 2021 - Libra Horoscope 2021 in Kannada

Author: -- | Last Updated: Tue 28 Apr 2020 11:56:29 AM

tula rashi bhavishya 2021, tula jaataka 2021, tula rashiphala 2021

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ತುಲಾ ರಾಶಿಚಕ್ರದ ಜನರಿಗೆ ಈ ವರ್ಷ ಬಹಳಷ್ಟು ಸವಾಲುಗಳಿಂದ ತುಂಬಿರುತ್ತದೆ. ಜೂನ್ ರಿಂದ ಜೂಲೈ ಮಧ್ಯದ ಸಮಯ್ದಲ್ಲಿ ಮಂಗಳನ ಗೋಚರ ನಿಮ್ಮ ಜಾತಕದ ಹತ್ತನೇ ಮನೆಯಲ್ಲಿ ಕುಳಿತಿರುತ್ತಾರೆ. ಈ ಕಾರಣದಿಂದಾಗಿ ನೀವು ನಿಮ್ಮ ಕೆಲಸದ ಸ್ಥಳದಿಂದ ಸಾಕಷ್ಟು ಪಡೆಯುತ್ತೀರಿ ಎಂದು ನಿರೀಕ್ಷಿಸಲಾಗಿದೆ. ಈ ವರ್ಷ ಶನಿಯ ದೃಷ್ಟಿಯು ನಿಮ್ಮ ಜಾತಕದ ಹತ್ತನೇ ಮನೆಯಲ್ಲಿರುವ ಕಾರರಣದಿಂದಾಗಿ ನೀವು ವರ್ಷಪೂರ್ತಿ ಕಠಿಣ ಪರಿಶ್ರಮ ಮಾಡುವ ಸಾಧ್ಯತೆ ಇದೆ. ಈ ವರ್ಷ ನಿಮ್ಮ ಜಾತಕದಲ್ಲಿ ಗುರುವಿನ ಸಾಗಣೆಯು ಇದೆ. ಇದರ ಪರಿಣಾಮದಿಂದಾಗಿ, ನೀವು ನಿಮ್ಮ ಉದ್ಯೋಗವನ್ನು ಬದಲಾಯಿಸಲು ಬಯಸುತ್ತಿದ್ದರೆ, ಈ ಕ್ಷೇತ್ರದಲ್ಲಿ ನೀವು ಯಶಸ್ವಿಯಾಗುವಿರಿ.

ವರ್ಷ 2021 ರಾಹುವು ಎಂಟನೇ ಮನೆಯಲ್ಲಿರುವ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಕೆಲವು ಅನಗತ್ಯ ವೆಚ್ಚಗಳು ನಿಮ್ಮನ್ನು ಸ್ವಲ್ಪ ಕಾಡಬಹುದು. ಈ ವರ್ಷ ನಿಮ್ಮ ತಾಯಿಯಿಂದಲೂ ನೀವು ಲಾಭವನ್ನು ಪಡೆಯುವ ಸಾಧ್ಯತೆ ಇದೆ. ವರ್ಷ 2021 ತುಲಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವೂ ತುಲಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಬಹಳಷ್ಟು ಉತ್ತಮವಾಗಲಿದೆ. ಆದರೆ ನೀವು ಯಾವುದೇ ಸ್ಪರ್ಧೆಯ ತಯಾರಿಯಲ್ಲಿ ತೊಡಗಿದ್ದರೆ, ನೀವು ತುಂಬಾ ಹೆಚ್ಚು ಪರಿಶ್ರಮಿಸಬೇಕು.ಆಗ ಮಾತ್ರ ನೀವು ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.

ನಿಮ್ಮ ಸಮಸ್ಯೆಯ ಸಂಪೂರ್ಣ ಪರಿಹಾರ - ಪ್ರಶ್ನೆಗೆ ವಿವರವಾದ ಉತ್ತರ ಪಡೆಯಿರಿ

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ ತುಲಾ ರಾಶಿಚಕ್ರದ ಸ್ಥಳೀಯರ ಐದನೇ ಮನೆಯಲ್ಲಿ ಶನಿ ದೇವರು ಇರುತ್ತಾರೆ. ಇದರಿಂದ ನೀವು ನಿಮ್ಮ ಮನೆಯಿಂದ ದೂರ ಹೋಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ವರ್ಷವು ನಿಮ್ಮ ತಾಯಿಯ ಆರೋಗ್ಯದ ದೃಷಿಯಿಂದ ಸವಾಲಾಗಿರುವ ಸಾಧ್ಯತೆ ಇದೆ. ತುಲಾ ರಾಶಿಚಕ್ರದ ಸ್ಥಳೀಯರ ವೈವಾಹಿಕ ಜೀವನ ಮತ್ತು ಮಕ್ಕಳ ವಿಷಯದಲ್ಲಿ ವರ್ಷ 2021 ಅಷ್ಟು ಉತ್ತಮವಾಗಿರುವುದಿಲ್ಲ, ಏಕೆಂದರೆ ವರ್ಷದ ಆರಂಭದಲ್ಲಿ ಮಂಗಳ ನಿಮ್ಮ ರಾಶಿಯ ಏಳನೇ ಮನೆಯಲ್ಲಿರುವ ಕಾರಣದಿಂದ ನಿಮ್ಮ ನಿಮ್ಮ ಜೀವನ ಸಂಗಾತಿಯ ಸಂಬಂಧದಲ್ಲಿ ಸ್ವಲ್ಪ ಕಹಿಯನ್ನು ತರುವ ಸಾಧ್ಯತೆ ಇದೆ.

ಏಪ್ರಿಲ್ ತಿಂಗಳಲ್ಲಿ ನಿಮ್ಮ ಮಕ್ಕಳು ತಮ್ಮ ಕೆಲಸದ ಕ್ಷೇತ್ರದಲ್ಲಿ ಯಶಸ್ಸು ಪಡೆಯುವ ಸಾಧ್ಯತೆಗಳಿವೆ. ತುಲಾ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2021, ಅವರ ಪ್ರೀತಿ ಜೀವನಕ್ಕೆ ಸಂಬಂಧಿಸಿದಂತೆ ಬಹಳಷ್ಟು ಅನುಕೂಲಕರವಾಗಿರುತ್ತದೆ. ಅನೇಕ ಜನರು ತಮ್ಮ ಪ್ರೀತಿಯಲ್ಲಿ ಈ ವರ್ಷ ಯಶಸ್ಸು ಪಡೆದರೆ, ಮತ್ತೊಂದೆಡೆ ಅನೇಕ ಜನರು ಪ್ರೀತಿ ಮದುವೆಯ ಕೊಡುಗೆಯನ್ನು ಪಡೆಯುವ ಸಾಧ್ಯತೆ ಇದೆ. ತುಲಾ ರಾಶಿಚಕ್ರದ ಸ್ಟಲೀಯರು ವರ್ಷ 2021 ರಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ವರ್ಷ ಯಾವುದೇ ದೊಡ್ಡ ರಾಗವಾಗುವ ಸಾಧ್ಯತೆ ಇಲ್ಲ ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ನಡೆಯಿರಿ ಈಗ ತುಲಾ ರಾಶಿಚಕ್ರದ ಜನರ ವರ್ಷ 2021 ಹೇಗೆ ಇರಲಿದೆ ಎಂಬುದನ್ನು ವಿವರವಾಗಿ ತಿಳಿಯೋಣ.

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Libra future 2021

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷವು ತುಲಾ ರಾಶಿಚಕ್ರದ ಸ್ಥಳೀಯರಿಗೆ ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಬಹುದು. ಜೂನ್ ರಿಂದ ಜೂಲೈ ಮಧ್ಯೆಯ ಸಮಯದಲ್ಲಿ ಮಂಗಳನ ಸಾಗಣೆ ನಿಮ್ಮ ಜಾತಕದ ಹತ್ತನೇ ಮನೆಯಲ್ಲಿರುತ್ತದೆ. ಈ ಕಾರಣದಿಂದಾಗಿ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸಾಕಷ್ಟು ಲಾಭವಾಗುತ್ತದೆ.

ಆದಾಗ್ಯೂ ಈ ಸಮಯದಲ್ಲಿ ಯಾರೊಂದಿಗಾದರೂ ನಿಮ ಜಗಳವಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲಿ ನೀವು ಜಾಗರೂಕರಾಗಿರುವ ಅಗತ್ಯವಿದೆ. ಈ ವರ್ಷ ಶನಿಯ ದೃಷ್ಟಿಯು ನಿಮ್ಮ ಜಾತಕದ ಹತ್ತನೇ ಮನೆಯಲ್ಲಿರುವ ಕಾರಣದಿಂದಾಗಿ ನೀವು ಹೆಚ್ಚು ಪರಿಶ್ರಮಿಸುವ ಸಾಧ್ಯತೆ ಇದೆ.

ವರ್ಷ 2021 ರಲ್ಲಿ, ನಿಮ್ಮ ಜಾತಕದಲ್ಲಿ 6 ಏಪ್ರಿಲ್ ರಿಂದ ಗುರುವು ಕುಂಭ ರಾಶಿಚಕ್ರದ ಸಾಗಣಿಸಲಾಗಿದೆ. ಇದರ ಪರಿಣಾಮವಾಗಿ ನೀವು ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ, ನಿಮ್ಮ ಈ ಪ್ರಯತ್ನಗಳಲ್ಲಿ ನೀವು ನಿರ್ದಿಷ್ಟ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಈ ಎರಡನೇ ಉದ್ಯೋಗವು ನಿಮ್ಮ ಹಳೆಯ ಉದ್ಯೋಗಕ್ಕಿಂತ ಉತ್ತಮವಾಗಿರುವ ಸಾಧ್ಯತೆ ಇದೆ. ತುಲಾ ರಾಶಿಚಕ್ರದ ಸ್ಥಳೀಯರು ವ್ಯಪಾರದ ಕ್ಷೇತ್ರಕ್ಕೆ ಸೇರಿದ್ದರೆ, ಸಾಮಾಜಿಕ ಕಾಳಜಿಯನ್ನು ಒಳಗೊಂಡಿರುವಂತಹ ಕೃತಿಗಳಿಗೆ ಅವರು ತಮ್ಮ ವ್ಯವಹಾರದಲ್ಲಿ ಆಧ್ಯತೆ ನೀಡಬೇಕು. ಇದನ್ನು ಮಾಡಿದರೆ ನೀವು ನಿಮ್ಮ ವ್ಯಾಪಾರದಲ್ಲಿ ಸಾಕಷ್ಟು ಪ್ರಗತಿಯನ್ನು ಪಡೆಯಬಹುದು.

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ವ್ಯಾಪರವನ್ನು ಪಾಲುದಾರಿಕೆಯಲ್ಲಿ ಮಾಡಲು ಯೋಚಿಸುತ್ತಿದ್ದರೆ, ಈ ವರ್ಷ ನೀವು ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ ಏಕೆಂದರೆ ಫೆಬ್ರವರಿ ರಿಂದ ಏಪ್ರಿಲ್ ವರೆಗಿನ ಸಮಯವೂ ನಿಮಗೆ ಸಮಸ್ಯೆಗಳನ್ನು ನೀಡಬಹುದು. ಪಾಲುದಾರಿಕೆಯಲ್ಲಿ ಹಾನಿಯಾಗುವ ಬಲವಾದ ಸಾಧ್ಯತೆ ಕಂಡುಬರುತ್ತಿದೆ. ಆದ್ದರಿಂದ ಸಾಧ್ಯವಾದರೆ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವುದನ್ನು ತಪ್ಪಿಸಿ. ವರ್ಷದ ಅಂತ್ಯದ ವರೆಗೆ ನಿಮಗೆ ಸ್ವಲ್ಪ ಪರಿಹಾರ ಸಿಗುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ನೀವು ವಿದೇಶ ಪ್ರವಾಸವನ್ನು ಸಹ ಮಾಡಬೇಕಾಗಬಹುದು.

ಸರಿಯಾದ ಕಾಳಜಿ ವಹಿಸಿದರೆ, ಏಪ್ರಿಲ್ ರಿಂದ ಮೇ ತಿಂಗಳ ಸಮಯವೂ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಬಹುದು ಏಕೆಂದರೆ ಈ ಸಮಯದಲ್ಲಿ ನಿಮ್ಮ ನಕ್ಷತ್ರಗಳು ಉತ್ತಮ ಮಟ್ಟದಲ್ಲಿರುತ್ತವೆ. ಇದರ ನಂತರ ಮತ್ತೊಮ್ಮೆ ಕೆಲವು ಏರಿಳಿತಗಳ ನಂತರ ಜೂನ್ ರಿಂದ ಜುಯ್ ಮಧ್ಯದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ವೃತ್ತಿ ಜೀವನವು ಮತ್ತೊಮ್ಮೆ ವೇಗವನ್ನು ಹಿಡಿಯುತ್ತದೆ. ಮೇ ತಿಂಗಳ ಮಧ್ಯೆ ನೀವು ವರ್ಗಾವಣೆ ಪಡೆಯುವ ಸಾಧ್ಯತೆ ಇದೆ.

ತುಲಾ ರಾಶಿ ಭವಿಷ್ಯ 2021 ರಪ್ರಕಾರ ಆಥಿಕ ಜೀವನ - Financial life according Libra future 2021

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ. ತುಲಾ ರಾಶಿಚಕ್ರದ ಸ್ಥಳೀಯರ ಆರ್ಥಿಕ ಜೀವನವು ಈ ವರ್ಷದ ಆರಂಭದಲ್ಲಿ ಉತ್ತಮವಾಗಿರುತ್ತದೆ. ವಿಶೇಷವಾಗಿ ಮಾರ್ಚ್ - ಜೂನ್ ಮತ್ತು ಜೂಲೈ ರಿಂದ ಆಗಸ್ಟ್ ತಿಂಗಳು ಬಹಳಷ್ಟು ಅನುಕೂಲಕರ ಫಲಿತಾಂಶಗಳನ್ನು ನೀಡಲಿವೆ.

ಸೆಪ್ಟೆಂಬರ್ ತಿಂಗಳಲ್ಲಿ ಕೆಲವು ವೆಚ್ಚಗಳು ನಿಮ್ಮನ್ನು ಕಾಡಬಹುದು. ವರ್ಷದ ಆರಂಭದಲ್ಲಿಯೂ ಯಾವುದೇ ಶುಭ ಕೆಲಸವೂ ನಿಮ್ಮ ಹಣವನ್ನು ಚೆನ್ನಾಗಿ ಖರ್ಚು ಮಾಡಿಸುತ್ತದೆ. ಬುದ್ಧಿವಂತಿಕೆಯಿಂದ ಖರ್ಚಿಸಿ. ಈ ವರ್ಷ ನೀವು ಲೋಕೋಪಕಾರದ ಕೆಲಸಗಳಲ್ಲೂ ನಿಮ್ಮ ಹಣವನ್ನು ಖರ್ಚು ಮಾಡಬಹುದು.

ಆದಾಗ್ಯೂ ಈ ವರ್ಷ ರಾಹುವು ನಿಮ್ಮ ಎಂಟನೇ ಮನೆಯಲ್ಲಿರುವ ಕಾರಣದಿಂದ ಅನಗತ್ಯ ಖರ್ಚುಗಳಾಗುವ ಸಾಧ್ಯತೆ ಇದೆ. ಇಂದರಿಂದ ನೀವು ಸ್ವಲ್ಪ ತೊಂದರೆಕ್ಕೊಳಗಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ತಾಯಿಯಿಂದ ಲಾಭವನ್ನು ಪಡೆಯಬಹುದು.

ತುಲಾ ರಾಶಿ ಭವಿಷ್ಯ 2021 ಪ್ರಕಾರ ಶಿಕ್ಷಣ - Educacation life according Libra future 2021

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ಶಿಕ್ಷಣದ ಕ್ಷೇತ್ರದಲ್ಲಿ ವರ್ಷ 2021 ಸಾಕಷ್ಟು ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ತುಲಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಂಬಂಧದಲ್ಲಿ ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವೂ ಬಹಳಷ್ಟು ಉತ್ತಮವಾಗಿರುತ್ತದೆ.

ಈ ವರ್ಷ ನೀವು ಅಧ್ಯಯನದಲ್ಲಿ ಮನಸ್ಸನ್ನು ಹೊಂದಿ ಉತ್ತಮ ಪ್ರದರ್ಶನ ನೀಡುವಿರಿ. ಇದರಂದ ನೀವು ಬಹಳಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಕಂಡುಬರುತ್ತಿದೆ.

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ನೀವು 2021 ರಲ್ಲಿ ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಏನಾದರು ಮಾಡಲು ಯೋಚಿಸುತ್ತಿದ್ದರೆ ಖಂಡಿತವಾಗಿಯೂ ಹೆಜ್ಜೆಯನ್ನು ಎತ್ತಿ, ಇಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ ನೀವು ಯಾವುದೇ ಸ್ಪರ್ಧೆಗೆ ತಯಾರಿಯಲ್ಲಿ ತೊಡಗಿದ್ದರೆ ನೀವು ತುಂಬಾ ಪರಿಶ್ರಮಿಸಬೇಕಾಗುತ್ತದೆ ಆಗ ಮಾತ್ರ ನೀವು ಯಶಸ್ಸು ಪಡೆಯಬಹುದು. ಅಧ್ಯಯನದಲ್ಲಿ ಯಾವುದೇ ರೀತಿಯ ಪರಿಶ್ರಮದಿಂದ ಹಿಂಜರಿಯಬೇಡಿ. ಇದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲಾಗುತ್ತದೆ.

ತುಲಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಮೇ ರಿಂದ ಆಗಸ್ಟ್ ವರೆಗಿನ ಸಮಯವು ಪ್ರಮುಖವಾಗಿ ಕಳೆಯುತ್ತವೆ. ಈ ಸಮಯದಲ್ಲಿ ನೀವು ನಿಮ್ಮ ಪರಿಶ್ರಮದ ಫಲವನ್ನು ಪಡೆಯಲಿದ್ದೀರಿ ಮತ್ತು ಶಿಖರವನ್ನು ಮುಟ್ಟುತ್ತೀರಿ.

ವರ್ಷ 2021 ರಲ್ಲಿ ಯಾವುದೇ ವಿದ್ಯಾರ್ಥಿ ವಿದೇಶದಲ್ಲಿ ತಮ್ಮ ಅಧ್ಯಯನ ಮಾಡಲು ಬಯಸುತ್ತಿದ್ದರೆ, ನೀವು ಅದರಲ್ಲಿಯೂ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ವಿದೇಶಿ ಕಾಲೇಜು ಮತ್ತು ಉನ್ನತ ಶಿಕ್ಷಣದ ದೃಷ್ಟಿಯಿಂದ ಈ ಸಮಯವೂ ನಿಮಗೆ ಅತ್ಯಂತ ಸೂಕ್ತವಾಗಿದೆ.

ತುಲಾ ರಾಶಿ ಭವಿಷ್ಯ 2021 ಪ್ರಕಾರ ಕೌಟುಂಬಿಕ ಜೀವನ - Family life according Libra future

2021

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ ಶನಿ ದೇವರು ತುಲಾ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆಯಲ್ಲಿರುತ್ತಾರೆ, ಇದು ಮನೆಯಿಂದ ದೂರವಾಗುವ ಸಾಧ್ಯತೆ ಇದೆ ಎಂದು ತೋರಿಸುತ್ತಿದೆ. ಈ ಅಂತರವು ಕುಟುಂಬ ಜಗಳ ಅಥವಾ ಯಾವುದೇ ತಪ್ಪು ಕಾರಣಗಳಿಂದಾಗಿರಬೇಕಾಗಿಲ್ಲ, ಈ ದೂರವು ಕೆಲಸದಲ್ಲಿ ಹೆಚ್ಚು ಕಾರ್ಯನಿರತತೆಗೆ ಸಂಬಂಧಿಸಿರಬಹುದು ಅಥವಾ ಬೇರೆಡೆ ಕೆಲಸ ಮಾಡುವ ಕಾರಣದಿಂದಲೂ ಬರಬಹುದು.

ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ಈ ವರ್ಷ ನಿಮ್ಮ ತಾಯಿಯ ಆರೋಗ್ಯಕ್ಕೆ ಸವಾಲಾಗಿರುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಿ.

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ಮನೆ-ಕುಟುಂಬದ ಸಂಬಂಧದಲ್ಲಿ ಈ ವರ್ಷವೂ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ಏಪ್ರಿಲ್ ತಿಂಗಳು ಕುಟುಂಬದಲ್ಲಿ ಶಾಂತಿ ಉಳಿದಿರುತ್ತದೆ, ಕುಟುಂಬದಲ್ಲಿ ಯಾವುದೇ ರೀತಿಯ ಗೊಂದಲ ಇರುವುದಿಲ್ಲ.

15 ಸೆಪ್ಟೆಂಬರ್ ರಿಂದ 20 ನವೆಂಬರ್ ಮಧ್ಯೆ ನಿಮ್ಮ ಪೂರ್ವಜರ ಮನೆಯನ್ನು ರಿಪೇರಿ ಮಾಡುವ ಸಾಧ್ಯತೆ ಇದೆ. ಇದಲ್ಲದೆ ಮನೆಯ ನಿರ್ವಹಣೆಗೆ ಸಹ ಖರ್ಚು ಮಾಡುವ ಸಾಧ್ಯತೆ ಇದೆ.

ಈ ವರ್ಷ ನೀವು ಕಿರಿಯ ಸಹೋದರ ಸಹೋದರಿಯರಿಂದ ಸಂತೋಷವನ್ನು ಪಡೆಯಲಿದ್ದೀರಿ. ಕುಟುಂಬ ಮತ್ತು ಸಮಾಜದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ.

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ ವೈವಾಹಿಕ ಜೀವನ ಮತ್ತು ಮಕ್ಕಳು - Children & Marriage life according Libra future 2021

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ತುಲಾ ರಾಶಿಚಕ್ರದ ಶತಾಳೀಯರ ವೈವಾಹಿಕ ಜೀವನ ಮತ್ತು ಮಕ್ಕಳ ವಿಷ್ಯದಲ್ಲಿ ಈ ವರ್ಷ ತುಂಬಾ ಉತ್ತಮವಾಗುವುದಿಲ್ಲ. ಏಕೆಂದರೆ ವರ್ಷದ ಆರಂಭದಲ್ಲೇ ಮಂಗಳ ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿರುವ ಕಾರಣದಿಂದ ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ಸಂಬಂಧದಲ್ಲಿ ಸ್ವಲ್ಪ ಕಹಿ ಬರುವ ಸಾಧ್ಯತೆ ಇದೆ.

ಇದರ ನಂತರ ಫೆಬ್ರವರಿ ರಿಂದ ಏಪ್ರಿಲ್ ಮದ್ಯದ ವರೆಗಿನ ಸಮಯವೂ ಅಷ್ಟು ಪ್ರತಿಕೂಲವಾಗಿಲ್ಲ ಏಕೆಂದರೆ ಈ ಸಮಯ ನಿಮ್ಮ ಎಂಟನೇ ಮನೆಯಲ್ಲಿ ರಾಹು ಮತ್ತು ಮಂಗಳನ ಸಂಯೋಗವಾಗುತ್ತಿದೆ. ಈ ಕಾರಣದಿಂದ ನಿಮ್ಮ ಅತ್ತೆಮನೆಯ ಸದಸ್ಯರೊಂದಿಗೆ ಜಗಳ ಮತ್ತು ವಿವಾದವಾಗುವ ಸಾಧ್ಯತೆ ಇದೆ.

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ಏಪ್ರಿಲ್ ಮಧ್ಯದಿಂದ ಮೇ ನಡುವೆ ಸಂಬಂಧದಲ್ಲಿ ಸುಧಾರಣೆ ಬರುವ ಸಾಧ್ಯತೆ ಇದೆ. ಈ ಸಮಯ ನಿಮ್ಮ ಸಂಬಂಧದಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ. ನಿಮ್ಮ ಜೀವನ ಸಂಗಾತಿಯು ತಮ್ಮ ಕೆಲಸದ ಸ್ಥಳದಲ್ಲಿ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ.

ಜೂನ್ ತಿಂಗಳಲ್ಲಿ ನಿಮ್ಮ ಗೌರವಕ್ಕೆ ಯಾವುದೇ ರೀತಿಯ ನೋವಾಗಬಹುದು. ಅತ್ತೆಮನೆ ಸದಸ್ಯರೊಂದಿಗೆ ವಿವಾದವು ಹೆಚ್ಚಾಗಬಾರದು ಅದಕ್ಕಾಗಿ ನಿಮ್ಮ ಸಂಬಂಧವು ಉತ್ತಮವಾಗಿರಲು ನೀವು ನಿರಂತರವಾಗಿ ಪ್ರಯತ್ನಿಸುತ್ತಿರಬೇಕು.

ಮತ್ತೊಂದೆಡೆ, ತುಲಾ ರಾಶಿಚಕ್ರದ ಮಕ್ಕಳ ಬಗ್ಗೆ ಮಾತನಾಡಿದರೆ, ಮಕ್ಕಳ ದೃಷ್ಟಿಯಿಂದ ಈ ವರ್ಷ ಬಹಳಷ್ಟು ಉಟಂವಾಗಿರುತ್ತದೆ. ಆದಾಗ್ಯೂ ಮಧ್ಯೆ ನಿಮ್ಮ ಮಕ್ಕಳ ಆರೋಗ್ಯವು ದುರ್ಬಲವಾಗಿರುವ ಸಾಧ್ಯತೆ ಇದೆ.ಇದರ ಬಗ್ಗೆ ನೀವು ವಿಶೇಷ ಗಮನ ಹರಿಸುವ ಅಗತ್ಯವಿದೆ.

ಏಪ್ರಿಲ್ ತಿಂಗಳಲ್ಲಿ ನಿಮ್ಮ ಮಕ್ಕಳು ತಮ್ಮ ಕೆಲಸದ ಸ್ಥಳದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಈ ವರ್ಷ ಅವರು ತಮ್ಮ ಅಧ್ಯಯನದ ಕ್ಷೇತ್ರದಲ್ಲಿಯೂ ಯಶಸ್ಸು ಪಡೆಯಲಿದ್ದಾರೆ.

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love life according Libra future 2021

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ತುಲಾ ರಾಶಿ ಚಕ್ರದ ಸ್ಥಳೀಯರಿಗೆ ಈ ವರ್ಷ ಅವರ ಪ್ರೀತಿ ಜೀವನದ ವಿಷ್ಯದಲ್ಲಿ ಸಾಕಷ್ಟು ಉತ್ತಮವಾಗಿರಲಿದೆ. ಅನೇಕ ಜನರು ಈ ವರ್ಷ ತಮ್ಮ ಪ್ರೀತಿಯಲ್ಲಿ ಯಶಸ್ವಿಯಾಗಬಹುದು. ಮತ್ತೊಂದೆಡೆ ಅನೇಕ ಜನರು ಪ್ರೀತಿ ಮದುವೆಯ ಕೊಡುಗೆಯನ್ನು ಪಡೆಯುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ನಿಮ್ಮ ಪ್ರೀತಿಪಾತ್ರರು ನಿಮಗೆ ಅದೃಷ್ಟ ಎಂದು ತಿಳಿದಾಗ ಈ ವರ್ಷ ನಿಮ್ಮ ಪ್ರೀತಿಯಲ್ಲಿ ಇನ್ನಷ್ಟು ಉತ್ತಮ ಸಮಯ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯದ ವರೆಗಿನ ಸಮಯವೂ ನಿಮಗಾಗಿ ಇನ್ನಷ್ಟು ಸಂತೋಷವನ್ನು ತರಲಿದೆ ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ನಿಮ್ಮ ಪಾಲುದಾರರ ಸಂಬಂಧಕ್ಕೆ ಇನ್ನಷ್ಟು ಪ್ರಮುಖವಿಸುವಿರಿ. ಇದರಿಂದ ನಿಮ್ಮ ಸಂಬಂಧದಲ್ಲಿ ಬಲ ಮತ್ತು ಪ್ರೀತಿ ಹೆಚ್ಚಾಗುತ್ತದೆ.

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಪ್ರೀತಿಯ ದಿನ ವ್ಯಾಲೆಂಟೈನ್ ಡೇ ನಿಮಗಾಗಿ ಸ್ವಲ್ಪ ವಿಶೇಷವಾಗಲಿದೆ ಮತ್ತು ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುವ ಸಾಧ್ಯತೆ ಇದೆ. ಫೆಬ್ರವರಿ, ಮೇ, ಜೂಲೈ ಮತ್ತು ಡಿಸೆಂಬರ್ ತಿಂಗಳು ನಿಮಗೆ ತುಂಬಾ ಉತ್ತಮವಾಗಿರುತ್ತವೆ.

ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿ ಜೀವನವನ್ನು ಆನಂದಿಸಲು ಸಂಪೂರ್ಣ ಅವಕಾಶವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿ ಇಷ್ಟಪಟ್ಟ ಉದ್ಯೋಗವನ್ನು ಪಡೆದ ನಂತರ ಡಿಸೆಂಬರ್ ತಿಂಗಳಲ್ಲಿ ಮತ್ತೊಮ್ಮೆ ಸಂತೋಷಗಳು ಬರುತ್ತವೆ. ಅಂದರೆ ತುಲಾ ರಾಶಿಚಕ್ರದ ಸ್ಥಳೀಯರ ಪ್ರೀತಿ ಜೀವನವು 2021 ರಲ್ಲಿ ಬಹಳಷ್ಟು ಉತ್ತಮವಾಗಿರಲಿದೆ.

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ - Health life according Libra future 2021

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ತುಲಾ ರಾಶಿಚಕ್ರದ ಸ್ಥಳೀಯರು ಅವರ ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರುವ ಅಗತ್ಯವಿದೆ. ಯಾವುದೇ ದೊಡ್ಡ ರೋಗದ ಸಮಸ್ಯೆ ಇರುವುದಿಲ್ಲ ಆದರೆ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ಹಾರಿಸುವುದರ ಮೂಲಕ ನೀವು ನಿಮ್ಮ ಆರೋಗ್ಯದ ಸಣ್ಣ ಪುಟ್ಟ ಸಮಸ್ಯೆಗಳನ್ನು ತಪ್ಪಿಸಬಹುದು.

ಈ ವರ್ಷ ನಿಮ್ಮ ಜಾತಕದ ಎಂಟನೇ ಮನೆಯಲ್ಲಿ ರಾಹು ಮತ್ತು ಎರಡನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯು ಮತ್ತೊಂದು ಬಾರಿ ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಲು ಸೂಚಿಸುತ್ತಿವೆ. ನೀವು ಹಳೆಯ ಆಹಾರ ಅಥವಾ ಅತಿಯಾಗಿ ತಿನ್ನುವುದನ್ನು ತಪ್ಪಿಸಬೇಕು. ಇದರಿಂದ ನೀವು ತೊಂದರೆಕ್ಕೊಳಗಾಗಬಹುದು.

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಯಾವುದೇ ರೀತಿಯ ದೊಡ್ಡ ರೋಗವಾಗುವ ಸಾಧ್ಯತೆ ಇಲ್ಲ ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವಿಶೇಷವಾಗಿ ಮಾರ್ಚ್ ರಿಂದ ಏಪ್ರಿಲ್ ತಿಂಗಳಲ್ಲಿ ವಿಶೇಷ ಗಮನ ಹರಿಸುವುದರಿಂದ ಭವಿಷ್ಯದಲ್ಲಿನ ಯಾವುದೇ ರೀತಿಯ ಸಮಸ್ಯೆಯನ್ನು ನೀವು ತಪ್ಪಿಸಬಹುದು. ಆಗಸ್ಟ್ ತಿಂಗಳಲ್ಲಿಯೂ ಆರೋಗ್ಯದ ಬಗ್ಗೆ ಅತ್ಯಂತ ಗಮನ ಹರಿಸಬೇಕು ಇಲ್ಲದಿದ್ದರೆ ಇದರ ಕಾರಣದಿಂದ ನೀವು ಬಿಕ್ಕಟ್ಟು ಎದುರಿಸಬೇಕಾಗಬಹುದು.

ತುಲಾ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರ - Astrological remedies according Libra future 2021

  • ನೀವು ನಿಮ್ಮ ರಾಶಿಚಕ್ರದ ಸ್ವಾಮಿಯನ್ನು ಬಲಪಡಿಸಲು ವಜ್ರ ಅಥವಾ ಓಪಲ್ ರತ್ನವನ್ನು ಧರಿಸಬೇಕು. ಇದನ್ನು ಬೆಳ್ಳಿಯ ಉಂಗುರದಲ್ಲಿ ತಯಾರಿಸಿ ಶುಕ್ರವಾರದಂದು ನಿಮ್ಮ ಅನಾಮಿಕಾ ಬೆರಳಿನಲ್ಲಿ ಧರಿಸುವುದು ಉತ್ತಮ.
  • ಸಾಧ್ಯವಾದಷ್ಟು ಹಸುವಿನ ಸೇವೆ ಮಾಡಿ ಮತ್ತು ಅದಕ್ಕೆ ಹಿಟ್ಟಿನ ಹುಂಡಿಗಳನ್ನು ತಿನ್ನಿಸಿ ಮತ್ತು ಅದರ ಬೆನ್ನಿನ ಮೇಲೆ ಮೂರು ಬಾರಿ ಕೈಯನ್ನು ತಿರುಗಿಸಿ.
  • ಇದಲ್ಲದೆ, ನೀಲಮಣಿ ರತ್ನವನ್ನು ಪಂಚಧಾತು ಅಥವಾ ಅಷ್ಟಧಾತುವಿನಲ್ಲಿ ತಯಾರಿಸಿ ಶನಿವಾರದಂದು ನಿಮ್ಮ ಮಧ್ಯದ ಬೆರಳಿನಲ್ಲಿ ಧರಿಸುವುದು ಕೂಡ ನಿಮಗೆ ಅತ್ಯಂತ ಉತ್ತಮವೆಂದು ಸಾಬೀತುಪಡಿಸುತ್ತದೆ ಮತ್ತು ನೀವು ನಿಮ್ಮ ಕೆಲಸದ ಸ್ಥಳದಲ್ಲಿಯೂ ಉತ್ತಮ ಲಾಭವನ್ನು ಪಡೆಯುತ್ತೀರಿ.
  • ಬುಧವಾರದಂದು ಪಕ್ಷಿಗಳ ಜೋಡಿಯನ್ನು ಪಂಜರದಿಂದ ಮುಕ್ತಗೊಳಿಸುವುದು ನಿಮ್ಮ ಅದೃಷ್ಟವನ್ನು ಬಲಪಡಿಸುತ್ತದೆ.
  • ಮರದ ಕಚ್ಚಾ ಕಲ್ಲಿದ್ದಲನ್ನು ತಲೆಯಿಂದ ಏಳು ಬಾರಿ ಸುತ್ತಿ ಅದನ್ನು ಹರಿಯುವ ನೀರಿನಲ್ಲಿ ಹರಿಸಿದರೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.
More from the section: Horoscope 2976
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2025
© Copyright 2025 AstroCAMP.com All Rights Reserved